ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು ಪುಣೆಯ ಎನ್.ಎಫ್.ಎ.ಐ.ಗೆ ಭೇಟಿ ನೀಡಿದರು ಮತ್ತು ಎನ್.ಎಫ್.ಹೆಚ್.‌ಎಂ.ನ ಪ್ರಗತಿಯನ್ನು ಪರಿಶೀಲಿಸಿದರು


ಭಾರತೀಯ ಚಿತ್ರರಂಗದ ಪರಂಪರೆಗೆ ಫಿಲ್ಮ್ ಹೆರಿಟೇಜ್ ಮಿಷನ್ ಹೊಸ ಜೀವಸೆಲೆಯನ್ನು ನೀಡುತ್ತದೆ – ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 12 MAR 2023 11:04AM by PIB Bengaluru

ಪುಣೆ, 12 ಮಾರ್ಚ್ 2023

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ತಮ್ಮ ಪುಣೆ ಭೇಟಿಯ ಸಂದರ್ಭದಲ್ಲಿ 11 ನೇ ಮಾರ್ಚ್, 2023 ರಂದು ಎನ್. ಎಫ್.‌ ಡಿ. ಸಿ - ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಕ್ಕೂ ಕೂಡಾ ಭೇಟಿ ನೀಡಿದರು. ರಾಷ್ಟ್ರೀಯ ಚಲನಚಿತ್ರ ಪರಂಪರೆ ಯೋಜನೆಯಡಿಯಲ್ಲಿ ಮಾಡಿದ ಪ್ರಗತಿಯನ್ನು ಪರಿಶೀಲಿಸಿದರು. ಭಾರತೀಯ ಚಿತ್ರರಂಗದ ಪರಂಪರೆಗೆ ಎನ್.ಎಫ್.ಹೆಚ್.‌ಎಂ. ಹೊಸ ಜೀವಸೆಲೆಯನ್ನು ನೀಡುತ್ತಿದೆ, ಈ ಹಿಂದೆ ಲಭ್ಯವಾಗದ ಅನೇಕ ಚಲನಚಿತ್ರಗಳನ್ನು ವಿಶ್ವದಾದ್ಯಂತದ ಪ್ರೇಕ್ಷಕರಿಗೆ ಅತ್ಯುತ್ತಮ ಗುಣಮಟ್ಟದಲ್ಲಿ ಇಲ್ಲಿ ಲಭ್ಯವಾಗುವಂತೆ ಮಾಡಲಾಗುವುದು, ಅದೇ ಸಮಯದಲ್ಲಿ ಭಾರತೀಯ ಚಿತ್ರರಂಗದ  ಚಲನಚಿತ್ರಗಳನ್ನು ಮುಂದಿನ 100 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಕಾಲ ದೀರ್ಘಾವಧಿಯ ಸಂರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹೇಳಿದರು  

ಎನ್. ಎಫ್.‌ ಡಿ. ಸಿ - ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯ (ಎನ್.ಎಫ್.ಎ.ಐ.) ಗೆ ಪುಣೆಯ  ನ್ಯಾಷನಲ್ ಫಿಲ್ಮ್ ಹೆರಿಟೇಜ್ ಮಿಷನ್  ವೇಗಗತಿ ನೀಡಿ ಪೂರ್ಣ ಪ್ರಮಾಣದಲ್ಲಿ ಮುನ್ನಡೆಯುತ್ತಿದೆ. ನ್ಯಾಷನಲ್ ಫಿಲ್ಮ್ ಹೆರಿಟೇಜ್ ಮಿಷನ್  ಇದರ ಭಾಗವಾಗಿ, ಎನ್. ಎಫ್.‌ ಡಿ. ಸಿ - ಎನ್.ಎಫ್.ಎ.ಐ. ನಲ್ಲಿ ಚಲನಚಿತ್ರಗಳ ಡಿಜಿಟಲೀಕರಣ, ಫಿಲ್ಮ್ ರೀಲ್‌ ಗಳ ಸಂರಕ್ಷಣೆ ಮತ್ತು ಚಲನಚಿತ್ರಗಳ ಮರುಸ್ಥಾಪನೆ. – ಎಂಬ 3 ಪ್ರಮುಖ ಉಪಕ್ರಮಗಳು ನಡೆಯಲಿವೆ. ಈ ಎಲ್ಲ ಯೋಜನೆಗಳು ಚಲನಚಿತ್ರ ಸಂರಕ್ಷಣೆಯ ಕ್ಷೇತ್ರದಲ್ಲಿ ಬೃಹತ್ ಸ್ವರೂಪದ್ದಾಗಿವೆ ಮತ್ತು ಜಾಗತಿಕವಾಗಿ ಈ ಪ್ರಮಾಣದಲ್ಲಿ ಎಂದಿಗೂ ಪ್ರಯತ್ನಿಸಲಾಗಿಲ್ಲ ಎಂದು ಸಚಿವರು ಹೇಳಿದರು.

ಇಲ್ಲಿಯವರೆಗೆ, 1293 ಫೀಚರ್‌ ಚಲನಚಿತ್ರಗಳು ಮತ್ತು 1062 ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು 4ಕೆ ಮತ್ತು 2ಕೆ ರೆಸಲ್ಯೂಶನ್‌ನಲ್ಲಿ ಡಿಜಿಟೈಸ್ ಮಾಡಲಾಗಿ ಸಂರಕ್ಷಿಸಲಾಗಿದೆ. ಹೆಚ್ಚುವರಿ 2500 ಫೀಚರ್‌ ಚಲನಚಿತ್ರಗಳು ಮತ್ತು ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಡಿಜಿಟಲೀಕರಣಗೊಳ್ಳಲು ಸರದಿ ಸಾಲಲ್ಲಿವೆ. ಏತನ್ಮಧ್ಯೆ, 1433 ಸೆಲ್ಯುಲಾಯ್ಡ್ ರೀಲ್‌ಗಳ ಸಂರಕ್ಷಣೆ ಕಾರ್ಯಗಳು ಪೂರ್ಣಗೊಂಡಿವೆ. ಚಲನಚಿತ್ರ ಸಂರಕ್ಷಣೆಯಲ್ಲಿ ವಿಶ್ವದ ಅಗ್ರಗಣ್ಯ ಪರಿಣಿತರಾದ ಎಲ್ ಇಮ್ಯಾಜಿನ್ ರಿಟ್ರೋವಾಟಾ ಎಂಬ ಅಂತರರಾಷ್ಟ್ರೀಯ ಏಜೆನ್ಸಿಯ ಸಹಯೋಗದೊಂದಿಗೆ ಇದನ್ನು ಅತ್ಯಂತ ಕಾಳಜಿಯಿಂದ ಮಾಡಲಾಗಿದೆ. ಆವರಣದಲ್ಲಿ ಹೊಸದಾಗಿ ಸ್ಥಾಪಿಸಲಾದ ಫಿಲ್ಮ್ ಕನ್ಸರ್ವೇಶನ್ ಲ್ಯಾಬ್‌ಗೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭೇಟಿ ನೀಡಿದರು, ಅಲ್ಲಿ ಸೆಲ್ಯುಲಾಯ್ಡ್ ರೀಲ್‌ಗಳ ಸಂರಕ್ಷಣೆ ಕಾರ್ಯಗಳು ನಡೆಯುತ್ತಿವೆ. ಮುಂಬರುವ ತಿಂಗಳುಗಳಲ್ಲಿ ಇನ್ನೂ ನೂರಾರು ಚಲನಚಿತ್ರಗಳನ್ನು ಸಂರಕ್ಷಿಸಲಾಗುವುದು ಮತ್ತು ಈ ರೀಲ್‌ಗಳಲ್ಲಿ ಕೆಲವು ಅಪರೂಪದ ಭಾರತೀಯ ಚಲನಚಿತ್ರಗಳ ಉಳಿದಿರುವ ಏಕೈಕ ಪ್ರತಿಗಳಾಗಿರಬಹುದು. ಇದಕ್ಕಾಗಿ, ಇತ್ತೀಚೆಗೆ ಪುನಃಸ್ಥಾಪನೆ ಯೋಜನೆಯನ್ನು ಪ್ರಾರಂಭಿಸಲಾಯಿತು, ಏಕೆಂದರೆ 21 ಅಪರೂಪದ ಚಲನಚಿತ್ರಗಳು ಡಿಜಿಟಲ್ ಮರುಸ್ಥಾಪನೆಗೆ ಒಳಗಾಗುತ್ತಿವೆ. ಮುಂದಿನ 3 ವರ್ಷಗಳಲ್ಲಿ, ಹಲವಾರು ಫೀಚರ್‌ ಚಲನಚಿತ್ರಗಳು, ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಡಿಜಿಟಲ್ ಆಗಿ ಮರುಸ್ಥಾಪಿಸಿ ಸಂರಕ್ಷಿಸಲಾಗುವುದು.  

 

* *



(Release ID: 1906151) Visitor Counter : 122