ಪ್ರಧಾನ ಮಂತ್ರಿಯವರ ಕಛೇರಿ

ಅಹಮದಾಬಾದ್-ಮಾಹೇಸಾನಾ  (64.27 ಕಿಮೀ) ಗೇಜ್ ಪರಿವರ್ತನೆ ಯೋಜನೆ ಪೂರ್ಣಗೊಂಡ ಕುರಿತು ಹರ್ಷ ವ್ಯಕ್ತಪಡಿಸಿದ ಪ್ರಧಾನಮಂತ್ರಿ 

Posted On: 06 MAR 2023 8:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್- ಮಾಹೇಸಾನಾ  (64.27 ಕಿಮೀ) ಗೇಜ್ ಪರಿವರ್ತನೆ ಯೋಜನೆ ಪೂರ್ಣಗೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಇದು ವಾಣಿಜ್ಯ ಮತ್ತು ಸಂಪರ್ಕ ವಿಷಯದಲ್ಲಿ ಅತ್ಯುತ್ತಮವೆನಿಸಲಿದೆ ಎಂದು ಶ್ರೀ ಮೋದಿ ತಿಳಿಸಿದರು.

ಈ ಯೋಜನೆಯು ರೈಲು ಕಾರ್ಯಾಚರಣೆ ಸುಗಮಗೊಳಿಸುತ್ತದೆ, ಅಹಮದಾಬಾದ್ ಮತ್ತು ಮಾಹೇಸಾನಾ  ನಡುವಿನ ಪ್ರಯಾಣದ ಸಮಯವನ್ನು ತಗ್ಗಿಸಲಿದೆ ಮತ್ತು ಪ್ರಮುಖವಾಗಿ ಅಹಮದಾಬಾದ್-ದೆಹಲಿ ಮಾರ್ಗದಲ್ಲಿ ಸರಕು ಸಾಗಿಸುವ ಸಾಮರ್ಥ್ಯವನ್ನು ವೃದ್ಧಿಸಲಿದೆ. 

ರೈಲ್ವೆ ಸಚಿವಾಲಯದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಮರುಟ್ವೀಟ್ ಮಾಡಿದ್ದಾರೆ;

"ವಾಣಿಜ್ಯ ಮತ್ತು ಸಂಪರ್ಕಕ್ಕೆ ಅತ್ಯುತ್ತಮವಾಗಿದೆ."

ವಾಣಿಜ್ಯ ಮತ್ತು ಸಂಪರ್ಕಕ್ಕೆ ಅತ್ಯುತ್ತಮವಾಗಿದೆ. https://t.co/qxV2jwKz9r
- ಶ್ರೀ ನರೇಂದ್ರ ಮೋದಿ (@narendramodi) ಮಾರ್ಚ್ 6, 2023 

****



(Release ID: 1904727) Visitor Counter : 98