ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

2023 ಮಾರ್ಚ್ 06ರಂದು 'ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ' ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಕೇಂದ್ರ ಸರ್ಕಾರವು ಬಜೆಟ್ ನಂತರದ 12 ವೆಬಿನಾರ್‌ಗಳನ್ನು ಆಯೋಜಿಸಿದೆ. ಇದರ ಒಂದು ಭಾಗವಾಗಿ ನಾಳೆ ನಡೆಯಲಿರುವ ವೆಬಿನಾರ್, ಬಜೆಟ್ ಪ್ರಸ್ತಾವನೆಗಳ ಅನುಷ್ಠಾನಕ್ಕೆ ಸಲಹೆ, ಸೂಚನೆಗಳು, ಒಳನೋಟಗಳು ಮತ್ತು ಪರಿಕಲ್ಪನೆಗಳನ್ನು ಕ್ರೋಡೀಕರಿಸುತ್ತದೆ
 
ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ಐಸಿಎಂಆರ್ ಪ್ರಯೋಗಾಲಯಗಳ ಸಾರ್ವಜನಿಕ ಮತ್ತು ಖಾಸಗಿ ವಲಯದ ಬಳಕೆ ಮತ್ತು ವೈದ್ಯಕೀಯ ಸಾಧನಗಳಿಗಾಗಿ ಫಾರ್ಮಾ ನಾವೀನ್ಯತೆ ಮತ್ತು ಬಹುಶಿಸ್ತೀಯ ಕೋರ್ಸ್‌ಗಳ ಸ್ಥಾಪನೆಗೆ ಸಂಬಂಧಿಸಿದ ಬಜೆಟ್ ಪ್ರಸ್ತಾವಗಳ ವಿಸ್ತೃತ ಚರ್ಚೆ ಮತ್ತು ಸಮಾಲೋಚನೆ ನಡೆಸಲು ಏಕಕಾಲದಲ್ಲಿ 3 ಸಂವಾದ ಸಭೆಗಳು ಜರುಗಲಿವೆ

Posted On: 05 MAR 2023 10:11AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಮಾರ್ಚ್ 06ರಂದು ಬೆಳಗ್ಗೆ 10 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 'ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ' ಕುರಿತು ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಹಲವಾರು ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಒಳನೋಟಗಳು, ಆಲೋಚನೆಗಳು ಮತ್ತು ಸಲಹೆ ಸೂಚನೆಗಳನ್ನು ಕ್ರೋಡೀಕರಿಸಲು ಕೇಂದ್ರ ಸರ್ಕಾರ ಆಯೋಜಿಸುತ್ತಿರುವ ಬಜೆಟ್ ನಂತರದ 12 ವೆಬಿನಾರ್‌ಗಳ ಸರಣಿಯಲ್ಲಿ ಇದು ಒಂದು ಭಾಗವಾಗಿದೆ.

2023-24ರ ಕೇಂದ್ರ ಬಜೆಟ್ ಪ್ರಮುಖ 7 ಆದ್ಯತೆಗಳಿರುವ ಆಧಾರಸ್ತಂಭವಾಗಿದೆ, ಅದು ಪರಸ್ಪರ ಪೂರಕವಾಗಿದೆ, ಸ್ವಾತಂತ್ರ್ಯೋತ್ಸವ ಅಮೃತ ಕಾಲದ ಮೂಲಕ ಮಾರ್ಗದರ್ಶನ ನೀಡುವ 'ಸಪ್ತಋಷಿ'ಯಂತೆ ಕಾರ್ಯ ನಿರ್ವಹಿಸುತ್ತದೆ. 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ಐಸಿಎಂಆರ್ ಪ್ರಯೋಗಾಲಯಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗಳ ಉತ್ತೇಜನ, ಔಷಧಗಳ ಶೋಧ ಮತ್ತು ಬಹುಶಿಸ್ತೀಯ ಕೋರ್ಸ್‌ಗಳು ಸೇರಿದಂತೆ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯು ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ.

ಆರೋಗ್ಯ ಮತ್ತು ಔಷಧ ಕ್ಷೇತ್ರ ಎರಡನ್ನೂ ಒಳಗೊಂಡು ಏಕಕಾಲದಲ್ಲಿ 3 ಸಂವಾದ ಕಲಾಪ(ಬ್ರೇಕ್‌ಔಟ್ ಸೆಷನ್‌ಗಳು)ಗಳು ಜರುಗಲಿವೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಸಚಿವಾಲಯಗಳ ಸಚಿವರು, ಇಲಾಖೆಗಳ ಕಾರ್ಯದರ್ಶಿಗಳಲ್ಲದೆ, ರಾಜ್ಯ, ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಆರೋಗ್ಯ ಇಲಾಖೆಗಳು, ವಿಷಯ ತಜ್ಞರು, ಕೈಗಾರಿಕೆಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರೇತರ ಸಂಸ್ಥೆಗಳ ಪಾಲುದಾರರು ಮತ್ತಿತರರು ವೆಬಿನಾರ್‌ನಲ್ಲಿ ಭಾಗವಹಿಸಿ, ಬಜೆಟ್ ಪ್ರಕಟಣೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಲಹೆ ಸೂಚನೆ ನೀಡಲಿದ್ದಾರೆ.

ನರ್ಸಿಂಗ್‌ ಕ್ಷೇತ್ರದಲ್ಲಿ ಗುಣಾತ್ಮಕ ಸುಧಾರಣೆ: ಮೂಲಸೌಕರ್ಯ, ಶಿಕ್ಷಣ ಮತ್ತು ಅಭ್ಯಾಸ; ವೈದ್ಯಕೀಯ ಸಂಶೋಧನೆ ಮತ್ತು  ವೈದ್ಯಕೀಯ ಸಾಧನಗಳಿಗಾಗಿ ಔಷಧ ವಲಯದಲ್ಲಿ ನಾವೀನ್ಯತೆ ಮತ್ತು ಬಹುಶಿಸ್ತೀಯ ಕೋರ್ಸ್‌ಗಳ ಅಧ್ಯಯನಕ್ಕಾಗಿ ಐಸಿಎಂಆರ್ ಪ್ರಯೋಗಾಲಯಗಳ  ಸಾರ್ವಜನಿಕ ಮತ್ತು ಖಾಸಗಿ ವಲಯದ ಬಳಕೆ ವಿಷಯ ಕುರಿತು ಸಂವಾದ ಕಲಾಪದಲ್ಲಿ ಚರ್ಚೆ ಮತ್ತು ಸಮಾಲೋಚನೆ ನಡೆಯಲಿದೆ.


****
 


(Release ID: 1904429) Visitor Counter : 163