ಕೃಷಿ ಸಚಿವಾಲಯ

​​​​​​​ಕರ್ನಾಟಕದ ಬೆಳಗಾವಿಯಲ್ಲಿ ನಾಳೆ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನಲ್ಲಿ 8 ಕೋಟಿ ಫಲಾನುಭವಿಗಳಿಗೆ 16,800 ಕೋಟಿ ರೂಪಾಯಿ ಬಿಡುಗಡೆ ಮಾಡಲಿರುವ ಪ್ರಧಾನಿಮಂತ್ರಿ

Posted On: 26 FEB 2023 4:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ [ಪಿಎಂ-ಕಿಸಾನ್] ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿಯೊಬ್ಬ ರೈತರಿಗೆ 2000 ರೂಪಾಯಿ ನೆರವು ಬಿಡುಗಡೆ ಮಾಡಲಿದ್ದಾರೆ. 8 ಕೋಟಿ ರೈತರಿಗೆ ಈ ಯೋಜನೆಯಡಿ ಒಟ್ಟು 16,800 ಕೋಟಿ ರೂಪಾಯಿ ಮೊತ್ತವನ್ನು ವರ್ಗಾಯಿಸಲಿದ್ದಾರೆ.  

ಕರ್ನಾಟಕದ ಬೆಳಗಾವಿಯಲ್ಲಿ ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಬಹು ನಿರೀಕ್ಷಿತ ಪಿಎಂ ಕಿಸಾನ್ ಯೋಜನೆಯ 13 ನೇ ಕಂತಿನ ಹಣ ಬಿಡುಗಡೆ ಜೊತೆಗೆ ಭಾರತೀಯ ರೈಲ್ವೆ ಮತ್ತು ಜಲ್ ಜೀವನ್ ಮಿಷನ್ ಕಾರ್ಯಕ್ರಮಗಳನ್ನು ಸಹ ಉದ್ಘಾಟಿಸಲಿದ್ದಾರೆ.  ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮ ಪಿಎಂ ಕಿಸಾನ್ ಮತ್ತು ಜಲ ಜೀವನ್ ಮಿಷನ್ ಫಲಾನುಭವಿಗಳನ್ನು ಒಳಗೊಂಡಿರುವ ಒಂದು ಲಕ್ಷಕ್ಕೂ ಹೆಚ್ಚು ಪ್ರಭಾವಶಾಲಿ ಸಮೂಹದ ಹಾಜರಾತಿಯನ್ನು ನಿರೀಕ್ಷಿಸಲಾಗಿದೆ. ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಆಸಕ್ತಿಯುಳ್ಳವರು ಈ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. https://lnkd.in/gU9NFpd ಮತ್ತು  ಈ ನೇರ ಕಾರ್ಯಕ್ರಮದ ನಡಾವಳಿಯನ್ನು ವೀಕ್ಷಿಸಲು ಈ ಜಾಲತಾಣವನ್ನು ವೀಕ್ಷಿಸುವಂತೆ ಕೋರಲಾಗಿದೆ; https://pmindiawebcast.nic.in/

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11 ಮತ್ತು 12 ನೇ ಕಂತು ಕಳೆದ ವರ್ಷದ ಮೇ ಮತ್ತು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಮೂಲಕ 13 ನೇ ಕಂತು ಬಿಡುಗಡೆಯಿಂದ ಸರ್ಕಾರ ಭಾರತೀಯ ರೈತರಿಗೆ ಬೆಂಬಲ ನೀಡುವ ತನ್ನ ಬದ್ಧತೆಯನ್ನು ಮುಂದುವರೆಸಿದಂತಾಗಿದೆ ಮತ್ತು ತಮ್ಮ ಜೀವನೋಪಾಯದ ಗುರಿಗಳನ್ನು  ಸಾಧಿಸಲು ನೆರವಾಗುತ್ತಿದೆ. ಪಿಎಂ ಕಿಸಾನ್ ಯೋಜನೆ ಈಗಾಗಲೇ ದೇಶದಾದ್ಯಂತ ರೈತರಿಗೆ ಮಹತ್ವದ ಲಾಭ ದೊರಕಿಸಿಕೊಟ್ಟಿದೆ ಮತ್ತು ಈ ಹೊಸ ಕಂತು ರೈತರ ಆದಾಯಕ್ಕೆ ಮತ್ತಷ್ಟು ಪುಷ್ಟಿ ಕೊಡಲಿದೆ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಲಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ [ಪಿಎಂ-ಕಿಸಾನ್] ಯೋಜನೆಯನ್ನು ಜಾರಿಗೊಳಿಸಿದ್ದರು. ನಿರ್ದಿಷ್ಟ ವಿನಾಯಿತಿಗಳಿಗೆ ಒಳಪಟ್ಟು ಕೃಷಿ ಯೋಗ್ಯ ಭೂಮಿ ಹೊಂದಿರುವ ದೇಶದ ಎಲ್ಲಾ ಭೂ ಮಾಲೀಕ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ಒದಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯಡಿ ಪ್ರತಿ ವರ್ಷ 6000 ರೂಪಾಯಿ ಮೊತ್ತವನ್ನು  ತಲಾ 2000 ರೂಪಾಯಿಯಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.

ದೇಶದಾದ್ಯಂತ ಭೂಮಿ ಹೊಂದಿರುವ ಎಲ್ಲಾ ರೈತರು ಪಿಎಂ-ಕಿಸಾನ್ ಯೋಜನೆಯಡಿ ಕೆಲವು ನಿರ್ದಿಷ್ಟ ವಿನಾಯಿತಿಗಳಿಗೆ ಒಳಪಟ್ಟು ಅರ್ಹತೆ ಹೊಂದಿದ್ದಾರೆ.

ಈ ವರೆಗೆ 2.25 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಪ್ರಾಥಮಿಕವಾಗಿ 11 ಕೋಟಿಗೂ ಹೆಚ್ಚು  ಸಣ್ಣ ಮತ್ತು  ಅತಿ ಸಣ್ಣ ರೈತ ಕುಟುಂಬಗಳಿಗೆ ಬಿಡುಗಡೆ ಮಾಡಲಾಗಿದೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ 1.75 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ಅಗತ್ಯವಿರುವ ಈ ಕುಟುಂಬಗಳಿಗೆ ಬೆಂಬಲವಾಗಿ ಬಹುಹಂತದ ಕಂತಿನ ಮೂಲಕ ಬಿಡುಗಡೆ ಮಾಡಲಾಗಿತ್ತು. ಈ ಯೋಜನೆಯಡಿ ಮೂರು ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳು 53,600 ಕೋಟಿ ರೂಪಾಯಿ ಮೊತ್ತವನ್ನು ಸ್ವೀಕರಿಸಿದ್ದಾರೆ.

ಈ ಉಪಕ್ರಮದ ನಿಧಿಗಳು ಗ್ರಾಮೀಣ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ್ದು, ರೈತರಿಗೆ ಸಾಲದ ನಿರ್ಬಂಧಗಳನ್ನು ಸರಾಗಗೊಳಿಸಿದೆ ಮತ್ತು ಕೃಷಿ ಹೂಡಿಕೆಗಳನ್ನು ಹೆಚ್ಚಿಸಿದೆ. ಇದರಿಂದ ರೈತರು ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿದಂತಾಗಿದ್ದು, ಇದು ಉತ್ಪಾದಕೆಯ ಹೂಡಿಕೆಗೆ ಕಾರಣವಾಗಿದೆ. ಐ.ಎಫ್.ಪಿ.ಆರ್.ಐ ಪ್ರಕಾರ ಪಿಎಂ-ಕಿಸಾನ್ ನಿಧಿಗಳನ್ನು ಸ್ವೀಕರಿಸುವರಿಗೆ ತಮ್ಮ ಕೃಷಿ ಅಗತ್ಯಗಳನ್ನು ಮತ್ತು ಶಿಕ್ಷಣ, ವೈದ್ಯಕೀಯ ಆರೈಕೆ ಹಾಗೂ ಮದುವೆಯಂತಹ ಇತರೆ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುತ್ತಿವೆ.

****



(Release ID: 1902608) Visitor Counter : 448