ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವಬ್ಯಾಂಕ್‌ ಸಮೂಹದ ಅಧ್ಯಕ್ಷ  ಶ್ರೀ ಡೇವಿಡ್‌ ಮಾಲ್ಪಾಸ್‌ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

Posted On: 23 FEB 2023 1:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ವಿಶ್ವಬ್ಯಾಂಕ್‌ ಸಮೂಹದ ಅಧ್ಯಕ್ಷ  ಶ್ರೀ ಡೇವಿಡ್‌ ಮಾಲ್ಪಾಸ್‌ ಅವರೊಂದಿಗೆ ಸಂವಾದ ನಡೆಸಿದರು. ಇಬ್ಬರೂ ಗಣ್ಯರು ವೈವಿಧ್ಯಮಯ ವಿಷಯಗಳ ಬಗ್ಗೆ, ವಿಶೇಷವಾಗಿ, ಬೆಳವಣಿಗೆ ಮತ್ತು ನಾವೀನ್ಯತೆಯ ಭವಿಷ್ಯದ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು. ಹೆಚ್ಚಿನ ಬೆಳವಣಿಗೆಯ ದರಗಳನ್ನು ಸಾಧಿಸಲು ಮತ್ತು ಉಳಿಸಿಕೊಳ್ಳಲು ಅಮೃತ್‌ ಕಾಲ್‌ನಲ್ಲಿ ಭಾರತಕ್ಕೆ ವಿಶ್ವಬ್ಯಾಂಕ್‌ ಸಮೂಹದ ಬೆಂಬಲವನ್ನು ಶ್ರೀ ಮಾಲ್ಪಾಸ್‌ ಪುನರುಚ್ಚರಿಸಿದರು.

ಶ್ರೀ ಡೇವಿಡ್‌ ಮಾಲ್ಪಾಸ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ;

‘‘ವೈವಿಧ್ಯಮಯ ವಿಷಯಗಳ ಬಗ್ಗೆ, ವಿಶೇಷವಾಗಿ ಬೆಳವಣಿಗೆ ಮತ್ತು ನಾವೀನ್ಯತೆಯ ಭವಿಷ್ಯದ ಕ್ಷೇತ್ರಗಳ ಬಗ್ಗೆ ನಿಮ್ಮೊಂದಿಗೆ ಉತ್ತಮ ಚರ್ಚೆ ನಡೆಸಿದ್ದೇನೆ.   @DavidMalpassWBG,”   ಎಂದು ಹೇಳಿದ್ದಾರೆ.

***


(Release ID: 1902431)