ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆನೆಟ್ ಬಹುಮತ ನಾಯಕ ಚಾರ್ಲ್ಸ್ ಶುಮರ್ ನೇತೃತ್ವದ ಒಂಬತ್ತು ಸೆನೆಟರ್ ಗಳ ಯುಎಸ್ ಕಾಂಗ್ರೆಸ್ ನ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು.


​​​​​​​ಭಾರತ-ಯುಎಸ್ ಸಂಬಂಧಗಳನ್ನು ಗಟ್ಟಿಗೊಳಿಸುವ ಯುಎಸ್ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲವನ್ನು ಪ್ರಧಾನಿ ಶ್ಲಾಘಿಸಿದರು.

ಅಧ್ಯಕ್ಷ ಬೈಡನ್ ಅವರೊಂದಿಗಿನ ತಮ್ಮ ಇತ್ತೀಚಿನ ದೂರವಾಣಿ ಕರೆ ಮತ್ತು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಉನ್ನತೀಕರಿಸಲು ಉಭಯ ನಾಯಕರ ದೃಷ್ಟಿಕೋನವನ್ನು ಪ್ರಧಾನಿ ಸ್ಮರಿಸಿದರು.

ಸಮಾನ ಪ್ರಜಾಪ್ರಭುತ್ವ ಮೌಲ್ಯಗಳು, ದೃಢವಾದ ದ್ವಿಪಕ್ಷೀಯ ಸಹಕಾರ, ಜನರ ನಡುವಿನ ಬಲವಾದ ಸಂಬಂಧ ಮತ್ತು ಯುಎಸ್ ನಲ್ಲಿ ಸ್ಪಂದಿಸುವ ಭಾರತೀಯ ಸಮುದಾಯವನ್ನು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಬಲವಾದ ಆಧಾರಸ್ತಂಭಗಳು ಎಂದು ಪ್ರಧಾನಮಂತ್ರಿ ಮತ್ತು ಯುಎಸ್ ನಿಯೋಗ ಗುರುತಿಸಿದೆ.

ಭಾರತ-ಯುಎಸ್ ಬಾಂಧವ್ಯವನ್ನು ಬಲಪಡಿಸಲು ಹೊಸ ಅವಕಾಶಗಳ ಬಗ್ಗೆ ಯುಎಸ್ ನಿಯೋಗದೊಂದಿಗೆ ಪ್ರಧಾನಿಯವರ ಚರ್ಚೆ.

प्रविष्टि तिथि: 20 FEB 2023 8:10PM by PIB Bengaluru

ಸೆನೆಟ್ ಬಹುಮತದ ನಾಯಕ ಚಾರ್ಲ್ಸ್ ಶುಮರ್ ನೇತೃತ್ವದ ಒಂಬತ್ತು ಸೆನೆಟರ್ ಗಳ ಯುಎಸ್ ಕಾಂಗ್ರೆಸ್ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತು. ಈ ನಿಯೋಗದಲ್ಲಿ ಸೆನೆಟರ್ ರಾನ್ ವೈಡೆನ್, ಸೆನೆಟರ್ ಜ್ಯಾಕ್ ರೀಡ್, ಸೆನೆಟರ್ ಮಾರಿಯಾ ಕ್ಯಾಂಟ್ವೆಲ್, ಸೆನೆಟರ್ ಆಮಿ ಕ್ಲೋಬುಚಾರ್, ಸೆನೆಟರ್ ಮಾರ್ಕ್ ವಾರ್ನರ್, ಸೆನೆಟರ್ ಗ್ಯಾರಿ ಪೀಟರ್ಸ್, ಸೆನೆಟರ್ ಕ್ಯಾಥರೀನ್ ಕಾರ್ಟೆಜ್ ಮಾಸ್ಟೊ ಮತ್ತು ಸೆನೆಟರ್ ಪೀಟರ್ ವೆಲ್ಚ್ ಇದ್ದರು.

ಪ್ರಧಾನಮಂತ್ರಿಯವರು ಭಾರತಕ್ಕೆ ಆಗಮಿಸಿದ ಕಾಂಗ್ರೆಸ್ ನಿಯೋಗವನ್ನು ಸ್ವಾಗತಿಸಿದರು. ಭಾರತ ಮತ್ತು ಯುಎಸ್ ದ್ವಿಪಕ್ಷೀಯ ಸಂಬಂಧಗಳನ್ನು ಪಕ್ವಗೊಳಿಸುವ ಯುಎಸ್ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲವನ್ನು ಶ್ಲಾಘಿಸಿದರು. ಅಧ್ಯಕ್ಷ ಜೋಸೆಫ್ ಬೈಡನ್ ಅವರೊಂದಿಗಿನ ತಮ್ಮ ಇತ್ತೀಚಿನ ದೂರವಾಣಿ ಕರೆ ಮತ್ತು ಸಮಕಾಲೀನ ಜಾಗತಿಕ ಸವಾಲುಗಳನ್ನು ಎದುರಿಸಲು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಉನ್ನತೀಕರಿಸುವ ಉಭಯ ನಾಯಕರ ದೃಷ್ಟಿಕೋನವನ್ನು ಪ್ರಧಾನಿ ಸ್ಮರಿಸಿದರು.

ಸಮಾನ ಪ್ರಜಾಪ್ರಭುತ್ವ ಮೌಲ್ಯಗಳು, ದೃಢವಾದ ದ್ವಿಪಕ್ಷೀಯ ಸಹಕಾರ, ಜನರ ನಡುವಿನ ಬಲವಾದ ಸಂಬಂಧ ಮತ್ತು ಯುಎಸ್ ನಲ್ಲಿರುವ ರೋಮಾಂಚಿತ ಭಾರತೀಯ ಸಮುದಾಯವನ್ನು ದ್ವಿಪಕ್ಷೀಯ ಕಾರ್ಯತಂತ್ರದ ಸಕ್ರಿಯ ಪಾಲುದಾರಿಕೆಯ ಆಧಾರಸ್ತಂಭಗಳು ಎಂದು ಪ್ರಧಾನಿ ಮತ್ತು ಯುಎಸ್ ನಿಯೋಗ ಗುರುತಿಸಿದೆ.

ನಿರ್ಣಾಯಕ ತಂತ್ರಜ್ಞಾನ, ಶುದ್ಧ ಇಂಧನ ಪರಿವರ್ತನೆ, ಜಂಟಿ ಅಭಿವೃದ್ಧಿ ಮತ್ತು ಉತ್ಪಾದನೆ ಹಾಗೂ ವಿಶ್ವಾಸಾರ್ಹ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳಲ್ಲಿ ಭಾರತ-ಯುಎಸ್ ಸಂಬಂಧಗಳನ್ನು ಬಲಪಡಿಸುವ ಹೊಸ ಅವಕಾಶಗಳ ಬಗ್ಗೆ ಪ್ರಧಾನಿಯವರು ಯುಎಸ್ ನಿಯೋಗದೊಂದಿಗೆ ಚರ್ಚಿಸಿದರು.


 ***


(रिलीज़ आईडी: 1901364) आगंतुक पटल : 190
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu