ಪ್ರಧಾನ ಮಂತ್ರಿಯವರ ಕಛೇರಿ
ಫೆಬ್ರವರಿ 17 ರಂದು ಎಕನಾಮಿಕ್ ಟೈಮ್ಸ್ ಜಾಗತಿಕ ವ್ಯಾಪಾರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ
Posted On:
16 FEB 2023 7:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಫೆಬ್ರವರಿ 17 ರಂದು ದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್‌ನಲ್ಲಿ ಸಂಜೆ 7:40 ರ ಸುಮಾರಿಗೆ ಎಕನಾಮಿಕ್ ಟೈಮ್ಸ್ ಜಾಗತಿಕ ವ್ಯಾಪಾರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜಾಗತಿಕ ವ್ಯಾಪಾರ ಶೃಂಗಸಭೆ 2023 ರ ಧ್ಯೇಯ ವಾಕ್ಯ "ಸ್ಥಿತಿಸ್ಥಾಪಕತ್ವ. ಪ್ರಭಾವ. ಪ್ರಾಬಲ್ಯ" ಎಂಬುದಾಗಿದೆ. ಎರಡು ದಿನಗಳ ಶೃಂಗಸಭೆಯು ಫೆಬ್ರವರಿ 17-18 ರಂದು ನಡೆಯಲಿದೆ.
ಜಾಗತಿಕ ವ್ಯಾಪಾರ ಶೃಂಗಸಭೆಯನ್ನು ಪ್ರತಿ ವರ್ಷ ಟೈಮ್ಸ್ ಸಮೂಹ ಆಯೋಜಿಸುತ್ತದೆ. ಇದು ಪ್ರಮುಖ ಆರ್ಥಿಕ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸಲು ಚಿಂತಕರು, ನೀತಿ ನಿರೂಪಕರು, ಶಿಕ್ಷಣ ತಜ್ಞರು ಮತ್ತು ಕಾರ್ಪೊರೇಟ್ ಮುಖ್ಯಸ್ಥರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಲಿದೆ. 40 ಸೆಷನ್‌ಗಳಲ್ಲಿ 200 ಕ್ಕೂ ಹೆಚ್ಚು ವ್ಯಾಪಾರೀ ನಾಯಕರು ಶೃಂಗಸಭೆಯಲ್ಲಿ ಮಾತನಾಡಲಿದ್ದಾರೆ.
****
(Release ID: 1900206)
Visitor Counter : 143
Read this release in:
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam