ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗರಿಕರ 'ಸುಲಭ ಬದುಕಿಗೆ' ತಂತ್ರಜ್ಞಾನಕ್ಕೆ ಭಾರತ ದೇಶ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ: ಪ್ರಧಾನಿ ನರೇಂದ್ರ ಮೋದಿ

Posted On: 17 FEB 2023 10:34AM by PIB Bengaluru

ಜನರ ಬದುಕನ್ನು ಮತ್ತಷ್ಟು ಸುಲಭಗೊಳಿಸಲು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ರಿಷಿಕೇಶದ ಏಮ್ಸ್ ನಿಂದ ಸುಮಾರು 40 ಕಿ.ಮೀ ವಾಯುಮಾರ್ಗ ದೂರದಲ್ಲಿರುವ ಟೆಹ್ರಿ ಗರ್ವಾಲ್‌ನ ಜಿಲ್ಲಾಸ್ಪತ್ರೆಗೆ 2 ಕೆಜಿ ತೂಕದ ಟಿಬಿ ಔಷಧಿಗಳನ್ನು 30 ನಿಮಿಷಗಳಲ್ಲಿ ಸಾಗಿಸಲು ಬಳಸಲಾದ ಡ್ರೋನ್‌ಗಳ ಪ್ರಾಯೋಗಿಕ ಚಾಲನೆ ನಡೆಸಿರುವ ರಿಷಿಕೇಶದ ಏಮ್ಸ್ ನ ಬಗ್ಗೆ ಆರೋಗ್ಯ ಸಚಿವಾಲಯದ ಮಾಡಿರುವ ಟ್ವೀಟ್ ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

"ಜನರಿಗೆ ಮತ್ತಷ್ಟು 'ಜೀವನ ಸುಲಭಗೊಳಿಸಲು' ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲು ಭಾರತವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ." ಎಂದು ಹೇಳಿದ್ದಾರೆ.

****


(Release ID: 1900144) Visitor Counter : 160