ಪ್ರಧಾನ ಮಂತ್ರಿಯವರ ಕಛೇರಿ
ಹೊಸ ಏರ್ ಇಂಡಿಯಾ-ಏರ್‌ಬಸ್ ಸಹಭಾಗಿತ್ವದ ಉದ್ಘಾಟನೆ ವೇಳೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ವಿಡಿಯೊ ಕರೆ ಮೂಲಕ ಮಾತುಕತೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪಾಲುದಾರಿಕೆ ಅಡಿಯಲ್ಲಿ, ಏರ್ ಇಂಡಿಯಾ ಏರ್‌ಬಸ್‌ನಿಂದ 250 ವಿಮಾನಗಳನ್ನು ಖರೀದಿಸಲಿದೆ. ಇದು ಭಾರತ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ ಶಕ್ತಿಯನ್ನು ಪ್ರತಿಫಲಿಸುತ್ತದೆ.
ಭಾರತದಲ್ಲಿ ನಾಗರಿಕ ವಿಮಾನಯಾನ ಮಾರುಕಟ್ಟೆಯ ಕ್ಷಿಪ್ರ ವಿಸ್ತರಣೆ ಮತ್ತು ಬೆಳವಣಿಗೆಯನ್ನು ಪ್ರಧಾನಮಂತ್ರಿ ಮಾತುಕತೆ ವೇಳೆ ಎತ್ತಿ ತೋರಿಸಿದರು. ಇದು ಭಾರತ ಮತ್ತು ಪ್ರಪಂಚದ ಇತರ ಭಾಗಗಳ ನಡುವೆ ಹೆಚ್ಚಿನ ಸಂಪರ್ಕಕ್ಕೆ ಉತ್ತೇಜನ ನೀಡುತ್ತದೆ.
ಭಾರತದಲ್ಲಿ ಫ್ರಾನ್ಸ್ ಕಂಪನಿಗಳ ಪ್ರಬಲ ಉಪಸ್ಥಿತಿ ಬಗ್ಗೆ ಪ್ರಧಾನಮಂತ್ರಿಗಳು ಶ್ಲಾಘಿಸಿದರು ಮತ್ತು ಫ್ರಾನ್ಸ್ ಅಂತರಿಕ್ಷಯಾನ ಎಂಜಿನ್ ತಯಾರಕ ಸಂಸ್ಥೆ SAFRAN ಭಾರತದಲ್ಲಿ ತನ್ನ ಅತಿದೊಡ್ಡ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ-MRO ಸೌಲಭ್ಯವನ್ನು ಸ್ಥಾಪಿಸಲು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಸ್ಮರಿಸಿಕೊಂಡರು.
ಭಾರತ-ಫ್ರಾನ್ಸ್ ಸಂಬಂಧವನ್ನು ಮುಂದೆ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಪಾಲುದಾರಿಕೆ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಪ್ರಧಾನ ಮಂತ್ರಿಗಳು ಧನ್ಯವಾದ ಹೇಳಿದರು. ಭಾರತದ ಜಿ20 ಅಧ್ಯಕ್ಷತೆ ಅಡಿಯಲ್ಲಿ ಫ್ರಾನ್ಸ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿಯೂ ಹೇಳಿದರು.
Posted On:
14 FEB 2023 8:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಎಮ್ಯಾನುಯೆಲ್ ಮ್ಯಾಕ್ರನ್, ಟಾಟಾ ಸನ್ಸ್, ಎಮೆರಿಟಸ್ ಅಧ್ಯಕ್ಷ ಶ್ರೀ ರತನ್ ಟಾಟಾ, ಟಾಟಾ ಸನ್ಸ್ ನ ಮಂಡಳಿಯ ಅಧ್ಯಕ್ಷ ಶ್ರೀ ಎನ್. ಚಂದ್ರಶೇಖರನ್, ಏರ್ ಇಂಡಿಯಾ ಸಿಇಒ ಶ್ರೀ ಕ್ಯಾಂಪ್ಬೆಲ್ ವಿಲ್ಸನ್ ಮತ್ತು ಏರ್ ಬಸ್ ಸಿಇಒ ಶ್ರೀ ಗುಯಿಲೌಮ್ ಫೌರಿ ಅವರೊಂದಿಗೆ ಇಂದು ವಿಡಿಯೊ ಸಂವಾದ ನಡೆಸಿದರು. ಏರ್ ಇಂಡಿಯಾ ಮತ್ತು ಏರ್‌ಬಸ್ ನಡುವಿನ ಪಾಲುದಾರಿಕೆಯ ಭಾಗವಾಗಿ ಈ ವಿಡಿಯೊ ಕರೆ ಸಂವಾದ ಏರ್ಪಟ್ಟಿತ್ತು.
ಏರ್ ಇಂಡಿಯಾಗೆ 250 ವಿಮಾನಗಳು, 210 ಸಿಂಗಲ್-ಐಸ್ಲ್ ಎ320 ಎನ್ ಇಒಎಸ್ ಮತ್ತು 40 ವೈಡ್‌ಬಾಡಿ ಎ350 ಗಳನ್ನು ಪೂರೈಸುವ ಒಪ್ಪಂದಕ್ಕೆ ಏರ್ ಇಂಡಿಯಾ ಮತ್ತು ಏರ್‌ಬಸ್ ಸಹಿ ಹಾಕಿದವು.
ವಾಯುಯಾನ ಕ್ಷೇತ್ರದ ಈ ಎರಡು ಸಂಸ್ಥೆಗಳ ನಡುವಿನ ವಾಣಿಜ್ಯ ಪಾಲುದಾರಿಕೆಯು ಈ ವರ್ಷ ತನ್ನ 25ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ ಬಲವನ್ನು ಪ್ರದರ್ಶಿಸುತ್ತದೆ.
ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ, ಭಾರತದಲ್ಲಿ ನಾಗರಿಕ ವಿಮಾನಯಾನ ಮಾರುಕಟ್ಟೆಯ ತ್ವರಿತ ವಿಸ್ತರಣೆ ಮತ್ತು ಬೆಳವಣಿಗೆಯನ್ನು ಎತ್ತಿ ತೋರಿಸಿದರು, ಇದು ಭಾರತ ಮತ್ತು ಪ್ರಪಂಚದ ಇತರ ಭಾಗಗಳ ನಡುವೆ ಹೆಚ್ಚಿನ ಸಂಪರ್ಕಕ್ಕೆ ಉತ್ತೇಜನ ನೀಡುತ್ತದೆ ಮತ್ತು ಪ್ರತಿಯಾಗಿ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಉತ್ತೇಜಿಸುತ್ತದೆ.
ಭಾರತದಲ್ಲಿ ಫ್ರಾನ್ಸ್ ಕಂಪನಿಗಳ ಪ್ರಬಲ ಉಪಸ್ಥಿತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಫ್ರಾನ್ಸ್ ಅಂತರಿಕ್ಷಯಾನ ಎಂಜಿನ್ ತಯಾರಕ ಸಂಸ್ಥೆ SAFRAN, ಭಾರತೀಯ ಮತ್ತು ಅಂತಾರಾಷ್ಟ್ರೀಯ ವಾಹಕಗಳಿಗೆ ವಿಮಾನ ಎಂಜಿನ್‌ಗಳ ಸೇವೆ ನೀಡಲು ಭಾರತದಲ್ಲಿ ತನ್ನ ಅತಿದೊಡ್ಡ ಎಂಆರ್ ಒ ಸೌಲಭ್ಯವನ್ನು ಸ್ಥಾಪಿಸಲು ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವನ್ನು ಸ್ಮರಿಸಿಕೊಂಡರು.
ಭಾರತ-ಫ್ರಾನ್ಸ್ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸುತ್ತಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಭಾರತ ಈ ವರ್ಷ ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಫ್ರಾನ್ಸ್ ಜೊತೆ ಸಹಭಾಗಿತ್ವದಲ್ಲಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿಯೂ ಹೇಳಿದರು.
*****
(Release ID: 1899355)
Visitor Counter : 146
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam