ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಾಫ್ನಾ ಸಾಂಸ್ಕೃತಿಕ ಕೇಂದ್ರವು ಭಾರತ ಮತ್ತು ಶ್ರೀಲಂಕಾ ನಡುವಿನ ನಿಕಟ ಸಾಂಸ್ಕೃತಿಕ ಸಹಕಾರವನ್ನು ಸೂಚಿಸುವ ಪ್ರಮುಖ ಉಪಕ್ರಮವಾಗಿದೆ: ಪ್ರಧಾನಮಂತ್ರಿ

प्रविष्टि तिथि: 11 FEB 2023 9:43PM by PIB Bengaluru

ಇಂದು ನಡೆದ ಜಾಫ್ನಾ ಸಾಂಸ್ಕೃತಿಕ ಕೇಂದ್ರದ ಲೋಕಾರ್ಪಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಂದು ಪ್ರಮುಖ ಉಪಕ್ರಮ ಎಂದು ಬಣ್ಣಿಸಿರುವುದಲ್ಲದೆ ಈ ಸಂದರ್ಭದಲ್ಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಉಪಸ್ಥಿತಿಯನ್ನು ಶ್ಲಾಘಿಸಿದ್ದಾರೆ.  ಪ್ರಧಾನಮಂತ್ರಿಯವರು 2015 ರಲ್ಲಿ ಈ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಮತ್ತು ಆ ವಿಶೇಷ ಭೇಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ:

"ಜಾಫ್ನಾ ಸಾಂಸ್ಕೃತಿಕ ಕೇಂದ್ರವು ಭಾರತ ಮತ್ತು ಶ್ರೀಲಂಕಾ ನಡುವಿನ ನಿಕಟ ಸಾಂಸ್ಕೃತಿಕ ಸಹಕಾರವನ್ನು ಸೂಚಿಸುವ ಪ್ರಮುಖ ಉಪಕ್ರಮವಾಗಿದೆ. ಇದು ಹಲವಾರು ಜನರಿಗೆ ಪ್ರಯೋಜನವನ್ನು ಒದಗಿಸುತ್ತದೆ. ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಉಪಸ್ಥಿತಿಯು ಕಾರ್ಯಕ್ರಮವನ್ನು ಇನ್ನಷ್ಟು ವಿಶೇಷಗೊಳಿಸಿತು.

2015ರಲ್ಲಿ ಜಾಫ್ನಾ ಸಾಂಸ್ಕೃತಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ಒದಗಿಸಿದ್ದ ಜಾಫ್ನಾದ ನನ್ನ ವಿಶೇಷ ಭೇಟಿಯನ್ನು ನಾನೆಂದಿಗೂ ಮರೆಯಲಾರೆ. ಆ ಭೇಟಿಯ ಕೆಲವು ಇಣುಕುನೋಟಗಳು ಇಲ್ಲಿವೆ.” ಎಂದು ಅದರಲ್ಲಿ ಹೇಳಿದ್ದಾರೆ.

****


(रिलीज़ आईडी: 1898640) आगंतुक पटल : 174
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam