ಪ್ರಧಾನ ಮಂತ್ರಿಯವರ ಕಛೇರಿ
ಕನ್ನಡ ಭಾಷೆಯ ಕ್ರಿಯಾಶೀಲ ಕಲಿಕಾ ವಿಧಾನವನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು
Posted On:
06 FEB 2023 10:00PM by PIB Bengaluru
ಇತರೆ ರಾಜ್ಯಗಳ ಭಾಷೆ ಕಲಿಕೆಗೆ ಉತ್ಸಾಹ ತೋರುವ ಹಾಗೂ ಬಹುತೇಕ ತಮ್ಮ ಭಾಷಣದ ಆರಂಭದಲ್ಲಿ ಸ್ಥಳೀಯ ಭಾಷೆಯಲ್ಲೇ ಶುಭಾಶಯ ತಿಳಿಸುವ, ಆರಂಭಿಕ ನುಡಿಗಳನ್ನಾಡುವ ಅಭ್ಯಾಸವನ್ನು ರೂಢಿಸಿಕೊಂಡು ಬಂದಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಆಕರ್ಷಕ ರೀತಿಯಲ್ಲಿ ಖುಷಿಯಿಂದ ಕನ್ನಡ ಕಲಿಕಾ ವಿಧಾನವನ್ನು ಹಂಚಿಕೊಂಡಿದ್ದಾರೆ.
ಕನ್ನಡ ವರ್ಣಮಾಲೆಯನ್ನು ಚಿತ್ರಗಳ ಮೂಲಕ ಕಲಿಸುವ ಸಂಬಂಧ ಎಸ್. ಕಿರಣ್ ಕುಮಾರ್ ಎಂಬುವವರ ಟ್ವೀಟ್ ಉಲ್ಲೇಖಿಸಿರುವ ಪ್ರಧಾನ ಮಂತ್ರಿಗಳು,
"ಇದು ಆಟ ಖುಷಿಯ ಚಟುವಟಿಕೆ ಮೂಲಕ ಭಾಷೆಯನ್ನು ಕಲಿಯುವ ಕ್ರಿಯಾಶೀಲ ವಿಧಾನವಾಗಿದ್ದು, ಕನ್ನಡ ಭಾಷೆಯ ಸೌಂದರ್ಯವನ್ನು ತೋರಿಸುತ್ತದೆ," ಎಂದು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
***
(Release ID: 1896910)
Visitor Counter : 197
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam