ಹಣಕಾಸು ಸಚಿವಾಲಯ
azadi ka amrit mahotsav g20-india-2023

 ಆರ್ಥಿಕ ಸಮೀಕ್ಷೆ 2022-23 ಇದು ಕೋವಿಡ್ ಸಮಯದಲ್ಲಿ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಸ್ವಸಹಾಯ ಸಂಘಗಳ ಕೊಡುಗೆಯನ್ನು ಗಮನಾರ್ಹವಾಗಿ ಗುರುತಿಸಿದೆ‌.


ಸ್ವಸಹಾಯ ಸಂಘಗಳ ಮೂಲಕ (ಮುಖಗವಸು) ಮಾಸ್ಕ್‌ಗಳ ಉತ್ಪಾದನೆಯು ದೂರದ ಗ್ರಾಮೀಣ ಪ್ರದೇಶಗಳಲ್ಲಿನ ಸಮುದಾಯಗಳಲ್ಲಿ   ಬಳಕೆಯನ್ನು ಸಕ್ರಿಯಗೊಳಿಸುತ್ತದೆ

ಬಿಕ್ಕಟ್ಟುಗಳ ಸಮಯದಲ್ಲಿ ಸ್ವಸಹಾಯ ಸಂಘಗಳ ಮೂಲಕ ಸ್ಥಿತಿಸ್ಥಾಪಕತ್ವ ಮತ್ತು ನಮ್ಯತೆಯ ಪ್ರದರ್ಶನವು ದೀರ್ಘಾವಧಿಯ ಗ್ರಾಮೀಣ ಪರಿವರ್ತನೆಗಾಗಿ ಕ್ರಮಬದ್ಧಗೊಳಿಸಬೇಕಾದ ಅಗತ್ಯವಿದೆ ಎಂದು  ಸಮೀಕ್ಷೆ ಶಿಫಾರಸು ಮಾಡುತ್ತದೆ.

Posted On: 31 JAN 2023 1:25PM by PIB Bengaluru

ಸಾಂಕ್ರಾಮಿಕ ಪಿಡುಗಿನ ವರ್ಷಗಳು ಸ್ವಸಹಾಯ ಗುಂಪು (ಎಸ್‌ಹೆಚ್‌ಜಿ)ಗಳ ಮೂಲಕ ಮಹಿಳೆಯರನ್ನು ಒಗ್ಗೂಡಿಸಲು, ಅವರ ಗುಂಪಿನ ಗುರುತನ್ನು ಹೆಚ್ಚಿಸಲು ಹಾಗೂ ಸಾಂಕ್ರಾಮಿಕ ಬಿಕ್ಕಟ್ಟು ನಿರ್ವಹಣೆಗೆ ಸಾಮೂಹಿಕವಾಗಿ ಕೊಡುಗೆ ನೀಡಲು ಸಜ್ಜುಗೊಳಿಸುವ ಅವಕಾಶ ನೀಡಿದವು.ಅದರಂತೆ ಅವು  ಕಾರ್ಯನಿರ್ವಹಿಸಿದವು.  ಮಹಿಳಾ ಸ್ವ ಸಹಾಯ ಸಂಘಗಳು ಸಾಂಕ್ರಾಮಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ಪ್ರಮುಖ ಪಾಲುದಾರರಾಗಿ ಹೊರಹೊಮ್ಮಿದರಮವು. ಮುಖಗವಸು(ಅಸ್ಸಾಂನ ಗಮುಸಾ ಮಾಸ್ಕ್‌ಗಳಂತಹ ಸಾಂಸ್ಕೃತಿಕ ರೂಪಾಂತರಗಳೊಂದಿಗೆ), ಸ್ಯಾನಿಟೈಸರ್‌ಗಳು ಮತ್ತು ರಕ್ಷಣಾತ್ಮಕವಾಗಿ ಆರೋಗ್ಯವನ್ನು ಕಾಪಾಡುವಲ್ಲಿ  ಇವುಗಳನ್ನಜ ಉತ್ಪಾದಿಸುವಲ್ಲಿ ಮುಂದಾಳತ್ವ ವಹಿಸಿದವು. ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಸಮಾಜದಲ್ಲಿ  ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಿದರು (ಉದಾ. ಜಾರ್ಖಂಡ್‌ನ ಪತ್ರಕರ್ ದೀದಿಸ್), ಜನರಿಗೆ ಅಗತ್ಯ ಸರಕು ಸೇವೆಗಳನ್ನು ತಲುಪಿಸಿದರು‌  ಸರಕುಗಳು (ಉದಾ. ಕೇರಳದಲ್ಲಿ ತೇಲುವ ಸೂಪರ್‌ಮಾರ್ಕೆಟ್‌ಗಳು), ಸಮುದಾಯ ಅಡುಗೆಮನೆಗಳನ್ನು ನಡೆಸುವುದು (ಉದಾ. ಉತ್ತರ ಪ್ರದೇಶದ ಪ್ರೇರಣಾ ಕ್ಯಾಂಟೀನ್‌ಗಳು), ಕೃಷಿ ಜೀವನೋಪಾಯವನ್ನು ಬೆಂಬಲಿಸುವುದು (ಉದಾ. ಪ್ರಾಣಿಗಳ ಆರೋಗ್ಯ ಸೇವೆಗಳಿಗಾಗಿ ಪಶು ಸಖಿಗಳು, ಜಾರ್ಖಂಡ್‌ನಲ್ಲಿ ಆಜೀವಿಕಾ ಫಾರ್ಮ್ ಫ್ರೆಶ್ ಆನ್‌ಲೈನ್ ಮಾರಾಟ ಮತ್ತು ವಿತರಣಾ ಕಾರ್ಯವಿಧಾನ), ಒಮ್ಮುಖ  ಎಂ‌ಜಿಎನ್‌ಆರ್‌ಇಜಿಎಸ್  (ಯುಪಿ, ಬಿಹಾರ, ಛತ್ತೀಸ್‌ಗಢದಲ್ಲಿ), ಮತ್ತು ಹಣಕಾಸು ಸೇವೆಗಳ ವಿತರಣೆಯಲ್ಲಿ (ಉದಾ. ಕೋವಿಡ್-ರಿಲೀಫ್ ಡಿಬಿಟಿ ನಗದು ವರ್ಗಾವಣೆಯನ್ನು ಪಡೆಯಲು ಬ್ಯಾಂಕ್ ಸಖಿಗಳು ಬ್ಯಾಂಕ್ ರಶ್ ಅನ್ನು  ಕಡಿಮೆ ನಾಲು ನಿರ್ವಹಿಸಿರುವುದು), ಇವೆಲ್ಲವನ್ನು ಆರ್ಥಿಕ ಸಮೀಕ್ಷೆ 2022-23 ಅ ಗಮನಿಸಿಧ.  ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಎಸ್‌ಎಚ್‌ಜಿಗಳಿಂದ ಮಾಸ್ಕ್‌ಗಳ ಉತ್ಪಾದನೆಯು ಗಮನಾರ್ಹ ಕೊಡುಗೆಯಾಗಿದೆ ಎಂದು ಸಮೀಕ್ಷೆಯು ಗಮನಿಸಿದೆ.ದೂರದ ಗ್ರಾಮೀಣ ಪ್ರದೇಶಗಳಲ್ಲಿನ ಸಮುದಾಯಗಳಿಗೆ ಮಾಸ್ಕ್‌ಗಳ ಲಭ್ಯತೆ ಮತ್ತು ಅವುಗಳ ಬಳಕೆಯನ್ನು ಸಕ್ರಿಯಗೊಳಿಸಿರುವುದು ಮತ್ತು ಕೋವಿಡ್ -19 ವೈರಸ್‌ನ ವಿರುದ್ಧ ಪ್ರಮುಖ ರಕ್ಷಣೆ ನೀಡಿರುವುದು ತಿಳಿದು ಬಂದಿದೆ. 4 ಜನವರಿ 2023 ರಂತೆ, ಡಿ‌ಎವೈ-ಎನ್‌ಆರ್‌ಡಲ್‌ಎಂ  ಅಡಿಯಲ್ಲಿ 16.9 ಕೋಟಿಗೂ ಹೆಚ್ಚು ಮಾಸ್ಕ್‌ಗಳನ್ನು ಸ್ವಸಹಾಯ ಗುಂಪುಗಳು ಉತ್ಪಾದಿಸಿವೆ ಎಂದು ಸಮೀಕ್ಷೆ ಹೇಳಿದೆ.

ಎಸ್‌ಹೆಚ್‌ಜಿಗಳಿಗೆ ಸರ್ಕಾರದ ಕೋವಿಡ್-19 ಪ್ಯಾಕೇಜ್ :-

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂ‌ಜಿಕೆ‌ವೈ) ಅಡಿಯಲ್ಲಿ, ಮಹಿಳಾ ಸ್ವಸಹಾಯ ಗುಂಪುಗಳಿಗೆ ಮೇಲಾಧಾರ-ಮುಕ್ತ ಸಾಲಗಳ ಮಿತಿಯನ್ನು ರೂ.10 ಲಕ್ಷದಿಂದ  ರೂ.20 ಲಕ್ಷಕ್ಕೆ ದ್ವಿಗುಣಗೊಳಿಸಲಾಗಿದೆ.  ಇದರಿಂದ 63 ಲಕ್ಷ ಮಹಿಳಾ ಸ್ವಸಹಾಯ ಸಂಘಗಳು ಮತ್ತು 6.85 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ.

* ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಹೆಚ್ಚುವರಿ ದುರ್ಬಲತೆ ಕಡಿತ ನಿಧಿಗೆ ಕೋವಿಡ್ ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಮತ್ತು ದುರ್ಬಲ ಗುಂಪುಗಳಿಗೆ ಗ್ರಾಮ ಸಂಸ್ಥೆಗಳಿಗೆ (ವಿಓಎಸ್) 1.5 ಲಕ್ಷ  ರೂ. ವಿಸ್ತರಿಸಲಾಗುವುದು.

 ಮುಂದಿನ  ದಾರಿ:- 

 ಸ್ವಸಹಾಯ ಸಂಘಗಳು ತಮ್ಮ ಕೊನೆಯ ಗುರಿಯೆಡೆಗೆ ಪ್ರವೇಶ ಹೊಂದಲು, ಸಮುದಾಯಗಳ ನಂಬಿಕೆ ಮತ್ತು ಒಗ್ಗಟ್ಟಿನ ಮೇಲೆ ತಮ್ಮ ಸಾಮರ್ಥ್ಯ ತೋರ್ಪಡಿಸಲು ಸ್ಥಳೀಯ ಡೈನಾಮಿಕ್ಸ್‌ನ ಜ್ಞಾನ ಮತ್ತು ಸದಸ್ಯರ ಆರ್ಥಿಕತೆಯ ಒಟ್ಟುಗೂಡಿಸುವಿಕೆಯ ಮೂಲಕ ಸರಳವಾದ ಉತ್ಪನ್ನಗಳು ಮತ್ತು ಸೇವೆಗಳನ್ನು ತ್ವರಿತವಾಗಿ ತಯಾರಿಸುವ ಸಾಮರ್ಥ್ಯದಿಂದಾಗಿ ಒಟ್ಟಾರೆ ಗ್ರಾಮೀಣ ಅಭಿವೃದ್ಧಿಯನ್ನು ಚಟುವಟಿಕೆಗಳನ್ನು ಸುಗಮಗೊಳಿಸಲೆಂದೇ  ಉತ್ತಮ ಪರಿಸ್ಥಿತಿಯನ್ನು ಇರಿಸಲಾಗಿದೆ.  ಕೋವಿಡ್ ಸಾಂಕ್ರಾಮಿಕ  ಸೇರಿದಂತೆ ಇತರೆ ಬಿಕ್ಕಟ್ಟುಗಳ ಸಮಯದಲ್ಲಿ ಅವರ ಸ್ಥಿತಿಸ್ಥಾಪಕತ್ವ ಮತ್ತು ನಮ್ಯತೆಯ ಪ್ರದರ್ಶನವನ್ನು ದೀರ್ಘಾವಧಿಯ ಗ್ರಾಮೀಣ ಪರಿವರ್ತನೆಗಾಗಿ ಕ್ರಮಬದ್ಧಗೊಳಿಸಬೇಕಾಗಿದೆ ಎಂದು ಆಯವ್ಯಯ ಪೂರ್ವ ಸಮೀಕ್ಷೆಯು ಶಿಫಾರಸು ಮಾಡುತ್ತದೆ.  ಇದು ಇತರ ವಿಷಯಗಳ ಜೊತೆಗೆ, ಎಸ್‌ಹೆಚ್‌ಜಿ ಆಂದೋಲನದ ಆಳದಲ್ಲಿರುವಂತೆ  ಅಂತರ-ಪ್ರಾದೇಶಿಕ ಅಸಮಾನತೆಯನ್ನು ಪರಿಹರಿಸುವುದು, ಎಸ್‌ಹೆಚ್‌ಜಿ ಸದಸ್ಯರನ್ನು ಸೂಕ್ಷ್ಮ-ಉದ್ಯಮಿಗಳಾಗಿ ಪದವಿ ನೀಡುವುದು, ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಮೌಲ್ಯ ಸರಪಳಿಯನ್ನು ಹೆಚ್ಚಿಸಲು ಸಾಂಸ್ಕೃತಿಕವಾಗಿ ಸಂದರ್ಭೋಚಿತ ಕೌಶಲ್ಯ ಅಭಿವೃದ್ಧಿ, ಮತ್ತು ಕಡಿಮೆ ಸವಲತ್ತುಗಳನ್ನು ಒಳಗೊಂಡಂತೆ  ಎಸ್‌ಹೆಚ್‌ಜಿ ಛತ್ರಿ ಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ.

*****(Release ID: 1895061) Visitor Counter : 84