ಪ್ರಧಾನ ಮಂತ್ರಿಯವರ ಕಛೇರಿ

​​​​​​​ಜನವರಿ 23 ರಂದು ಅಂಡಮಾನ್ ಮತ್ತು ನಿಕೋಬಾರ್ ನ 21 ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ 21 ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ


ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ದ್ವೀಪಗಳಿಗೆ ಇಡುವುದರಿಂದ ಅವರಿಗೆ ಶಾಶ್ವತವಾಗಿ ಗೌರವ ಸಲ್ಲಿಸಿದಂತಾಗುತ್ತದೆ.
ನಿಜ ಜೀವನದ ನಾಯಕರಿಗೆ ಗೌರವ ಮತ್ತು ಮನ್ನಣೆ ನೀಡಲು ಪ್ರಯತ್ನಶೀಲರಾಗಿರುವ ಪ್ರಧಾನಮಂತ್ರಿ

ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನೇತಾಜಿ ಕುರಿತ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಮಂತ್ರಿ

Posted On: 21 JAN 2023 6:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 23 ರಂದು ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ 21 ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಳಿಗ್ಗೆ 11 ಗಂಟೆಗೆ ಭಾಗವಹಿಸಲಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನೇತಾಜಿ ಕುರಿತು ನಿರ್ಮಿಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು 2018 ರಲ್ಲಿ ಪ್ರಧಾನಮಂತ್ರಿ ಅವರು ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸಲು ರೋಸ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು. ನೇಲ್ ದ್ವೀಪ ಮತ್ತು ಹ್ಯಾವ್ಲಾಕ್ ದ್ವೀಪಗಳನ್ನು ಶಾಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿತ್ತು.

ದೇಶದ ನಿಜ ಜೀವನದ ನಾಯಕರಿಗೆ ಗೌರವ ಮತ್ತು ಮನ್ನಣೆ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಪ್ರಯತ್ನಶೀಲರಾಗಿದ್ದಾರೆ. ಇದೇ ಸ್ಫೂರ್ತಿಯೊಂದಿಗೆ ಸಾಗಿದ್ದಾರೆ. ಈ ದ್ವೀಪ ಸಮೂಹದ 21 ಅತಿ ದೊಡ್ಡ ಹೆಸರಿಲ್ಲದ ದ್ವೀಪಗಳಿಗೆ 21 ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಅತಿ ದೊಡ್ಡ ಹೆಸರಿಲ್ಲದ ದ್ವೀಪಕ್ಕೆ ಮೊದಲ ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗುತ್ತಿದ್ದು, ಎರಡನೇ ಅತಿ ದೊಡ್ಡ ದ್ವೀಪಕ್ಕೆ ಎರಡನೇ ಪರಮ್ ವೀರ್ ಚಕ್ರ ಪ್ರಶಸ್ತಿ ಪಡೆದವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ ಮತ್ತು ಇದೇ ರೀತಿಯಲ್ಲಿ ಹೆಸರು ಇಡಲಾಗುತ್ತಿದೆ. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಸರ್ವಶ್ರೇಷ್ಠ ತ್ಯಾಗ ಮಾಡಿದ ನಮ್ಮ ವೀರರಿಗೆ ಈ ಹೆಜ್ಜೆಯು ಶಾಶ್ವತ ಗೌರವವಾಗಿದೆ.  

ಈ ದ್ವೀಪಗಳಿಗೆ 21 ಪರಮ್ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತ ಹೆಸರಿಡಲಾಗುತ್ತಿದೆ. ಮೇಜರ್ ಸೋಮನಾಥ್ ಶರ್ಮಾ, ಸುಬೇದಾರ್ ಮತ್ತು ಹೊನ್ನಿ ಕ್ಯಾಪ್ಟನ್ [ನಂತರ ಲಾನ್ಸ್ ನಾಯಕ್] ಕರಂ ಸಿಂಗ್ ಎಂಎಂ; 2ನೇ ಲೆಪ್ಟಿನೆಂಟ್ ಜನರಲ್ ರಾಮ ರಾಘೋಬ ರಾಣೆ; ನಾಯಕ್ ಜಡುನಾಥ್ ಸಿಂಗ್; ಕಂಪೆನಿ ಹವಾಲ್ದಾರ್ ಮೇಜರ್ ಪಿರು ಸಿಂಗ್: ಕ್ಯಾಪ್ಟನ್ ಜಿಎಸ್ ಸಲಾರಿಯಾ; ಲೆಪ್ಟಿನೆಂಟ್ ಕರ್ನಲ್ [ನಂತರ ಮೇಜರ್] ಧಾನ್ ಸಿಂಗ್ ಥಾಪ; ಸುಬೇದಾರ್ ಜೋಗಿಂದರ್ ಸಿಂಗ್; ಮೇಜರ್ ಶೈತಾನ್ ಸಿಂಗ್; ಸಿಕ್ಯೂಎಂಎಚ್. ಅಬ್ದುಲ್ ಹಮೀದ್; ಲೆಪ್ಟಿನೆಂಟ್ ಕರ್ನಲ್ ಅರ್ದೇಶೀರ್ ಬುರ್ಜೋರ್ಜಿ ತಾರಾಪೊರೆ; ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ; ಮೇಜರ್ ಹೊಶೈರ್ ಸಿಂಗ್; 2 ನೇ ಲೆಪ್ಟಿನೆಂಟ್ ಖೇತ್ರಾಪಲ್; ಫ್ಲೇಯಿಂಗ್ ಆಫಿಸರ್ ನಿರ್ಮಲ್ಜಿತ್ ಸಿಂಗ್ ಸೆಖೋನ್; ಮೇಜರ್ ರಾಮಸ್ವಾಮಿ ಪರಮೇಶ್ವರನ್; ನೈಬ್ ಸುಬೇದರಾರ್ ಬನಾ ಸಿಂಗ್; ಕ್ಯಾಪ್ಟನ್ ವಿಕ್ರಮ್ ಬತ್ರಾ; ಲೆಪ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ; ಸುಬೇದಾರ್ ಮೇಜರ್ [ನಂತರ ರೈಫಲ್ ಮ್ಯಾನ್] ಸಂಜಯ್ ಕುಮಾರ್; ಮತ್ತು ಸುಬೇದಾರ್ ಮೇಜರ್ ನಿವೃತ್ತ [ಹೊನ್ನಿ ಕ್ಯಾಪ್ಟನ್] ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್. 

*****



(Release ID: 1892766) Visitor Counter : 178