ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​2022ರಲ್ಲಿ ಅಸ್ಸಾಂನಲ್ಲಿ ವರದಿಯಾದ ಘೇಂಡಾಮೃಗಗಳ ಶೂನ್ಯ ಬೇಟೆಯ ನಂತರ ಅಸ್ಸಾಂನ ಜನರ ಘೇಂಡಾಮೃಗಗಳ ಸಂರಕ್ಷಣೆಯ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ

प्रविष्टि तिथि: 03 JAN 2023 3:15PM by PIB Bengaluru

2022ರಲ್ಲಿ ಅಸ್ಸಾಂ ರಾಜ್ಯದಲ್ಲಿ ಘೇಂಡಾಮೃಗಗಳ ಶೂನ್ಯ ಬೇಟೆ ಘಟನೆಗಳು ವರದಿಯಾದ ನಂತರ, ಆ ರಾಜ್ಯದಲ್ಲಿ ಘೇಂಡಾಮೃಗಗಳ ಸಂರಕ್ಷಣೆಗೆ ಅಸ್ಸಾಂ ಕೈಗೊಂಡಿರುವ ಪ್ರಯತ್ನಗಳಿಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಲ್ಲಿನ ಜನರನ್ನು ಶ್ಲಾಘಿಸಿದ್ದಾರೆ.

ಅಸ್ಸಾಂನ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಅವರ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು:

"ಇದು ದೊಡ್ಡ ಸುದ್ದಿ! ಘೇಂಡಾಮೃಗಗಳನ್ನು ರಕ್ಷಿಸುವ ತಮ್ಮ ಪ್ರಯತ್ನಗಳಲ್ಲಿ ಹೊಸ ಆಯಾಮವನ್ನು ತೋರಿಸಿದ ಮತ್ತು ಅದರಲ್ಲಿ ಸಕ್ರಿಯವಾಗಿರುವ ಅಸ್ಸಾಂನ ಜನರಿಗೆ ಅಭಿನಂದನೆಗಳು." ಎಂದು ಟ್ವೀಟ್ ಮಾಡಿದ್ದಾರೆ.

*****


(रिलीज़ आईडी: 1888326) आगंतुक पटल : 237
इस विज्ञप्ति को इन भाषाओं में पढ़ें: Bengali , Tamil , Assamese , Manipuri , Odia , English , Urdu , हिन्दी , Marathi , Punjabi , Gujarati , Telugu , Malayalam