ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

​​​​​​​ವಿದ್ಯಾರ್ಥಿನಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ಜಾಗೃತಿ ಮೂಡಿಸಲು ಮತ್ತು ಕ್ರಮ ಕೈಗೊಳ್ಳುವಂತೆ  ರಾಜ್ಯಗಳಿಗೆ ಕೇಂದ್ರದ ಕರೆ

Posted On: 22 DEC 2022 9:24AM by PIB Bengaluru

ಪ್ರಮುಖ ಮುಖ್ಯಾಂಶಗಳು:

* ಸೋಂಕು ತಡೆಗಟ್ಟುವಿಕೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ), ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ(ಯುಐಪಿ)ದಡಿ 9-14 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರಿಗೆ ಒಂದು ಬಾರಿಯ ಲಸಿಕೆಯೊಂದಿಗೆ ಎಚ್ ಪಿವಿ ಲಸಿಕೆಯನ್ನು ನೀಡಲು ಶಿಫಾರಸು ಮಾಡಿದೆ, ನಿಯಮಿತವಾಗಿ 9ನೇ ವರ್ಷದಲ್ಲಿ ಅದನ್ನು ನೀಡಲಾರಂಭಿಸಬೇಕೆಂದು ಹೇಳಿದೆ.

* ಲಸಿಕೆಯನ್ನು ಪ್ರಾಥಮಿಕವಾಗಿ ಶಾಲೆಗಳ ಮೂಲಕ ಒದಗಿಸಬೇಕು (ತರಗತಿ ಆಧಾರಿತ ವಿಧಾನ: 5ನೇ ತರಗತಿಯಿಂದ 10ನೇ ತರಗತಿವರೆಗೆ). ಅಭಿಯಾನದ ದಿನದಂದು ಶಾಲೆಗೆ ಹಾಜರಾಗಲು ಸಾಧ್ಯವಾಗದ ಬಾಲಕಿಯರನ್ನು ತಲುಪಲು, ಲಸಿಕೆಯನ್ನು ಆರೋಗ್ಯ ಸೌಕರ್ಯಗಳಲ್ಲಿ ಒದಗಿಸಬೇಕು ಮತ್ತು ಶಾಲೆಯಿಂದ ಹೊರಗುಳಿದಿರುವ ಹುಡುಗಿಯರಿಗೆ ಸಮುದಾಯ ಜನಸಂಪರ್ಕ ಮತ್ತು ಸಂಚಾರಿ ತಂಡಗಳ ಮೂಲಕ ಅಭಿಯಾನ ತಲುಪಿಸಬೇಕು. 

ದೇಶಾದ್ಯಂತ ಬಾಲಕಿಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಎಚ್ ಪಿವಿ ಲಸಿಕೆ ಪ್ರಾಮುಖ್ಯತೆಯ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರವನ್ನು ಬರೆದಿದೆ.

ಕೇಂದ್ರ ಶಿಕ್ಷಣ ಕಾರ್ಯದರ್ಶಿ ಶ್ರೀ ಸಂಜಯ್ ಕುಮಾರ್ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ಜಂಟಿಯಾಗಿ ಬರೆದಿರುವ ಪತ್ರದಲ್ಲಿ ಜಾಗತಿಕವಾಗಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ೪ನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದು ಪ್ರಮುಖವಾಗಿ ದೃಢಪಟ್ಟಿದೆ. ಭಾರತದಲ್ಲಿ, ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ ಮತ್ತು ಜಾಗತಿಕ ಗರ್ಭಕಂಠದ ಕ್ಯಾನ್ಸರ್ ಹೊರೆಗೆ ಭಾರತವು ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡುತ್ತದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಅದನ್ನು ಮೊದಲೇ ಪತ್ತೆಹಚ್ಚಿ ಮತ್ತು ದೋಷವಿಲದದೆ ನಿರ್ವಹಿಸಿದರೆ ಅದನ್ನು ತಡೆಬಹುದಾಗಿದೆ. ಹೆಚ್ಚಿನ ಗರ್ಭಕಂಠದ ಕ್ಯಾನ್ಸರ್‌ಗಳು ಹ್ಯೂಮನ್ ಪ್ಯಾಪಿಲೋಮಾ ವೈರಸ್‌ಗೆ (ಎಚ್‌ಪಿವಿ) ಸಂಬಂಧಿಸಿವೆ ಮತ್ತು ಹುಡುಗಿಯರು ಅಥವಾ ಮಹಿಳೆಯರು ವೈರಸ್‌ಗೆ  ತೆರೆದುಕೊಳ್ಳುವ ಮೊದಲು ಲಸಿಕೆಯನ್ನು ನೀಡಿದರೆ ಎಚ್‌ಪಿವಿ ಲಸಿಕೆ ಗರ್ಭಕಂಠದ ಕ್ಯಾನ್ಸರ್ ಪ್ರಕರಣ ತಡೆಗಟ್ಟಬಹುದಾಗಿದೆ. ಲಸಿಕೆ (ವ್ಯಾಕ್ಸಿನೇಷನ್) ಮೂಲಕ ತಡೆಗಟ್ಟುವುದು  ಗರ್ಭಕಂಠದ ಕ್ಯಾನ್ಸರ್ ಅನ್ನು ತೊಡೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆ ಅಳವಡಿಸಿಕೊಂಡ ಜಾಗತಿಕ ಕಾರ್ಯತಂತ್ರದ ಆಧಾರಸ್ತಂಭಗಳಲ್ಲಿ ಒಂದಾಗಿದೆ.

ಸೋಂಕು ರಕ್ಷಣೆ ಕುರಿತಾದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ)  ಸಾರ್ವತ್ರಿ ಲಸಿಕಾ ಕಾರ್ಯಕ್ರಮ(ಯುಐಪಿ)ದಲ್ಲಿ 9ರಿಂದ 14 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರಿಗೆ ಒಂದು ಬಾರಿ ಎಚ್‌ಪಿವಿ ಲಸಿಕೆಯನ್ನು ನೀಡಲು ಶಿಫಾರಸು ಮಾಡಿದೆ, ಜತೆಗೆ 9 ವರ್ಷವಾದಾಗ ಮಾಮೂಲಿಯಂತೆ ಲಸಿಕೆ ನೀಡಬೇಕೆಂದು ಉಲ್ಲೇಖಿಸಲಾಗಿದೆ.

ಲಸಿಕೆಯನ್ನು ಪ್ರಾಥಮಿಕವಾಗಿ ಶಾಲೆಗಳ ಮೂಲಕ ನೀಡಲಾಗುವುದು (ತರಗತಿ ಆಧಾರಿತ ವಿಧಾನ: 5 ನೇ ತರಗತಿಯಿಂದ-10 ನೇ ತರಗತಿವರೆಗೆ) ಹುಡುಗಿಯರ ಶಾಲೆಗೆ ದಾಖಲಾತಿ ಹೆಚ್ಚಾಗಿರುತ್ತದೆ. ಅಭಿಯಾನದ ದಿನದಂದು ಶಾಲೆಗೆ ಹಾಜರಾಗಲು ಸಾಧ್ಯವಾಗದ ಹುಡುಗಿಯರನ್ನು ತಲುಪಲು, ಲಸಿಕೆಯನ್ನು ಆರೋಗ್ಯ ಸೌಕರ್ಯದಲ್ಲಿ ಒದಗಿಸಲಾಗುವುದು ಮತ್ತು ಶಾಲೆಯಿಂದ ಹೊರಗುಳಿದ ಹುಡುಗಿಯರಿಗೆ ವಯಸ್ಸಿನ ಆಧಾರದ ಮೇಲೆ ಸಮುದಾಯ ಜನಸಂಪರ್ಕ ಮತ್ತು ಸಂಚಾರಿ ತಂಡಗಳ ಮೂಲಕ ಅಭಿಯಾನ ನಡೆಸಲಾಗುತ್ತದೆ (9-14 ವರ್ಷಗಳು). ಲಸಿಕೆಗಾಗಿ ನೋಂದಣಿ, ದಾಖಲಾತಿ ಮತ್ತು ವರದಿಗಾಗಿ, ಯು-ವಿನ್ ಅಪ್ಲಿಕೇಶನ್ ಅನ್ನು ಬಳಸಲಾಗುವುದು.

ಅಭಿಯಾನವನ್ನು ಯಶಸ್ವಿಗೊಳಿಸಲು ಪತ್ರದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಕೈಗೊಳ್ಳಲು ಸೂಕ್ತ ಮಟ್ಟದಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಲಾಗಿದೆ:

* ಲಸಿಕೆಗಾಗಿ ಶಾಲೆಗಳಲ್ಲಿ ಎಚ್‌ಪಿವಿ ಲಸಿಕಾ ಕೇಂದ್ರಗಳನ್ನು ತೆರೆಯುವುದು.

* ಜಿಲ್ಲಾ ಲಸಿಕಾ ಅಧಿಕಾರಿಯನ್ನು ಬೆಂಬಲಿಸಲು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಡಿಯಲ್ಲಿ ಜಿಲ್ಲಾ ಲಸಿಕಾ ಕಾರ್ಯಪಡೆಯ (ಡಿಟಿಎಫ್‌ಐ) ಪ್ರಯತ್ನಗಳ ಭಾಗವಾಗಲು ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಿರ್ದೇಶನ ನೀಡುವುದು.

* ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಯೊಂದಿಗೆ ಸಮನ್ವಯ ಸಾಧಿಸುವುದು.

* ಲಸಿಕಾ ಚಟುವಟಿಕೆಗಳನ್ನು ಸಂಘಟಿಸಲು ಪ್ರತಿ ಶಾಲೆಯಲ್ಲಿ ನೋಡಲ್ ವ್ಯಕ್ತಿಯನ್ನು ಗುರುತಿಸುವುದು ಮತ್ತು ಶಾಲೆಯಲ್ಲಿ 9-14 ವರ್ಷ ವಯಸ್ಸಿನ ಹುಡುಗಿಯರ ಸಂಖ್ಯೆಯನ್ನು ಒಟ್ಟುಗೂಡಿಸುವುದು ಮತ್ತು ಯು-ವಿನ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಪ್‌ಲೋಡ್ ಮಾಡುವುದು.

* ವಿಶೇಷ ಪೋಷಕರು-ಶಿಕ್ಷಕರ ಸಭೆ (ಪಿಟಿಎ) ಸಮಯದಲ್ಲಿ ಎಲ್ಲಾ ಪೋಷಕರಿಗೆ ಶಾಲಾ ಶಿಕ್ಷಕರ ಮೂಲಕ ಜಾಗೃತಿ ಮೂಡಿಸುವುದು.

* ಸಣ್ಣ ಪ್ರಮಾಣದಲ್ಲಿ ಯೋಜನೆಗಳನ್ನು ರೂಪಿಸಲು ಪ್ರತಿ ವಲಯದಲ್ಲಿ ಎಲ್ಲಾ ರೀತಿಯ ಶಾಲೆಗಳ (ಯುಡಿಐಎಸ್‌ಇ+) ಅಪ್-ಟು-ಡೇಟ್ ಪಟ್ಟಿಯನ್ನು ರಚಿಸುವಲ್ಲಿ ಬೆಂಬಲ ಪಡೆಯುವುದು ಮತ್ತು ಶಾಲೆಗಳ ಜಿಐಎಸ್ ಮ್ಯಾಪಿಂಗ್‌ಗೆ ಪಡೆದುಕೊಂಡು ಜಿಲ್ಲೆಗಳ ಲಸಿಕಾ ಅಧಿಕಾರಿಗಳು ಲಸಿಕಾ ಅಭಿಯಾನಕ್ಕಾಗಿ ಸಣ್ಣ ಪ್ರಮಾಣದ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು.

* ಪರೀಕ್ಷೆ ಮತ್ತು ರಜೆಯ ತಿಂಗಳುಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಲಸಿಕಾ ಅಭಿಯಾನವನ್ನು ಯೋಜಿಸಲು ಆರೋಗ್ಯ ತಂಡಗಳಿಗೆ ಬೆಂಬಲ ನೀಡುವುದು. 

*****
 



(Release ID: 1885756) Visitor Counter : 172