ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹೆರಿಗೆ ಸಂದರ್ಭದ ತಾಯಂದಿರ ಮರಣ ಅನುಪಾತದಲ್ಲಾದ ಗಮನಾರ್ಹ ಕುಸಿತವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು

Posted On: 30 NOV 2022 4:36PM by PIB Bengaluru

“2014-16ರಲ್ಲಿ ಪ್ರತಿ ಲಕ್ಷ ಜೀವಂತ ಜನನಗಳಲ್ಲಿದ್ದ ಹೆರಿಗೆ ಸಂದರ್ಭದ ತಾಯಂದಿರ ಮರಣ ಸಂಖ್ಯೆಯು 130 ರಿಂದ 2018-20ರಲ್ಲಿ ಪ್ರತಿ ಲಕ್ಷ ಜೀವಂತ ಜನನಗಳಿಗೆ ಹೆರಿಗೆ ಸಂದರ್ಭದ ತಾಯಂದಿರ ಮರಣದ ಸಂಖ್ಯೆಯು 97 ಕ್ಕೆ ಇಳಿದಿದ್ದು, ಈ ಅನುಪಾತದಲ್ಲಿ ಗಣನೀಯ ಇಳಿಕೆಯಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಶ್ಲಾಘಿಸಿದ್ದಾರೆ. “ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಅತ್ಯಂತ ಬಲಿಷ್ಠವಾಗಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ಸಂದೇಶವನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;

“ಬಹಳ ಪ್ರೋತ್ಸಾಹದಾಯಕ ಟ್ರೆಂಡ್ ಇದಾಗಿದೆ. ಈ ಬದಲಾವಣೆಯನ್ನು ಕಂಡು ಸಂತೋಷವಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಮತ್ತಷ್ಟು ಬಲಪಡಿಸಿ, ಪ್ರಬಲವಾಗಿ ಹೆಚ್ಚಿಸಲು ನಾವು ಗಮನ ಹರಿಸೋಣ.”

*****


(Release ID: 1880111) Visitor Counter : 143