ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯ ಅಂಗವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿಗಳು 


ಇ-ಕೋರ್ಟ್ ಯೋಜನೆಯಡಿ ವಿವಿಧ ಹೊಸ ಉಪಕ್ರಮಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿಗಳು

Posted On: 25 NOV 2022 2:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2022 ರ ನವೆಂಬರ್ 26 ರಂದು ಬೆಳಗ್ಗೆ 10 ಗಂಟೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನ ದಿನಾಚರಣಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 1949 ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಲ್ಪಟ್ಟ ನೆನಪಿಗಾಗಿ ಈ ದಿನವನ್ನು 2015 ರಿಂದ ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಇ-ಕೋರ್ಟ್ ಯೋಜನೆಯ ಅಡಿಯಲ್ಲಿ ವಿವಿಧ ಹೊಸ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯು ನ್ಯಾಯಾಲಯಗಳ ಐ ಸಿ ಟಿ- ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವನ್ನು ಸಕ್ರಿಯಗೊಳಿಸುವಿಕೆಯ ಮೂಲಕ ಕಕ್ಷಿದಾರರು, ವಕೀಲರು ಮತ್ತು ನ್ಯಾಯಾಂಗಕ್ಕೆ ಉತ್ತಮ ಸೇವೆಯನ್ನು ಒದಗಿಸುವ ಪ್ರಯತ್ನವಾಗಿದೆ.

ಪ್ರಧಾನ ಮಂತ್ರಿಯವರು ಪ್ರಾರಂಭಿಸುತ್ತಿರುವ ಉಪಕ್ರಮಗಳಲ್ಲಿ ವರ್ಚುವಲ್ ಜಸ್ಟೀಸ್ ಕ್ಲಾಕ್, ಜಸ್ಟ್ಐಎಸ್ ಮೊಬೈಲ್ ಆಪ್ 2.0, ಡಿಜಿಟಲ್ ಕೋರ್ಟ್, ಮತ್ತು ಎಸ್3 ವಾಸ್ ವೆಬ್ ಸೈಟ್ ಗಳು ಸೇರಿವೆ.

ವರ್ಚುವಲ್ ಜಸ್ಟೀಸ್ ಕ್ಲಾಕ್ ಎಂಬುದು ನ್ಯಾಯಾಲಯ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯ ಪ್ರಮುಖ ಅಂಕಿಅಂಶಗಳನ್ನು ಪ್ರದರ್ಶಿಸುವ ಒಂದು ಉಪಕ್ರಮವಾಗಿದೆ. ಇದು ನ್ಯಾಯಾಲಯ ಮಟ್ಟದಲ್ಲಿ ಸ್ಥಾಪಿಸಲಾದ ಪ್ರಕರಣಗಳು, ವಿಲೇವಾರಿ ಮಾಡಲಾದ ಪ್ರಕರಣಗಳು ಮತ್ತು ದಿನ/ವಾರ/ತಿಂಗಳ ಆಧಾರದ ಮೇಲೆ ಬಾಕಿ ಉಳಿದಿರುವ ಪ್ರಕರಣಗಳ ವಿವರಗಳನ್ನು ಆಯಾ ನ್ಯಾಯಾಲಯದ ಮಟ್ಟದಲ್ಲಿ ಒದಗಿಸುತ್ತದೆ. ನ್ಯಾಯಾಲಯವು ತನ್ನ ಪ್ರಕರಣಗಳ ವಿಲೇವಾರಿಯ ಸ್ಥಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿಸುವ ಪ್ರಯತ್ನ ಇದಾಗಿದೆ. ಸಾರ್ವಜನಿಕರು ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಯಾವುದೇ ನ್ಯಾಯಾಲಯದ ವರ್ಚುವಲ್ ಜಸ್ಟೀಸ್ ಕ್ಲಾಕ್ಅನ್ನು ಸುಲಭವಾಗಿ ಪ್ರವೇಶಿಸಬಹುದು.

ಜಸ್ಟಿಸ್ ಮೊಬೈಲ್ ಅಪ್ಲಿಕೇಶನ್ 2.0 ನ್ಯಾಯಾಂಗ ಅಧಿಕಾರಿಗಳಿಗೆ ಅವರ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಮತ್ತು ವಿಲೇವಾರಿಯಾದ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಪರಿಣಾಮಕಾರಿ ನ್ಯಾಯಾಲಯ ಮತ್ತು ಪ್ರಕರಣ ನಿರ್ವಹಣೆಯ ಬಗ್ಗೆ ತಿಳಿಸಲು ಲಭ್ಯವಿರುವ ಒಂದು ಸಾಧನವಾಗಿದೆ. ಈ ಆ್ಯಪ್ ಅನ್ನು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೂ ಸಹ ಲಭ್ಯವಾಗುವಂತೆ ಮಾಡಲಾಗಿದೆ. ಅವರು ಈಗ ತಮ್ಮ ವ್ಯಾಪ್ತಿಯಲ್ಲಿರುವ ಹಾಗೂ ಎಲ್ಲ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಬಾಕಿ ಇರುವ ಮತ್ತು ವಿಲೇವಾರಿ ಮಾಡಲಾದ ಪ್ರಕರಣಗಳ ಮೇಲ್ವಿಚಾರಣೆಯನ್ನು ಮಾಡಬಹುದು.

ಡಿಜಿಟಲ್ ಕೋರ್ಟ್ ನ್ಯಾಯಾಲಯಗಳನ್ನು ಕಾಗದರಹಿತ ಪರಿವರ್ತನೆಯ ಹಾದಿಯಲ್ಲಿ, ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲೀಕೃತ ರೂಪದಲ್ಲಿ ನ್ಯಾಯಾಧೀಶರಿಗೆ ಲಭ್ಯವಾಗುವಂತೆ ಮಾಡುವ ಒಂದು ಉಪಕ್ರಮವಾಗಿದೆ.

ಎಸ್3 ವಾಸ್ ವೆಬ್ ಸೈಟ್ ಗಳು ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿ ಮತ್ತು ಸೇವೆಗಳನ್ನು ಪ್ರಕಟಿಸಲು ವೆಬ್ ಸೈಟ್ ಗಳನ್ನು ರಚಿಸಿ, ಕಾನ್ಫಿಗರ್ ಮಾಡಿ, ನಿಯೋಜಿಸಿ, ನಿರ್ವಹಿಸುವ ಒಂದು ಚೌಕಟ್ಟಾಗಿದೆ. ಸೆಕ್ಯೂರ್, ಸ್ಕೇಲಬಲ್ ಮತ್ತು ಸುಗಮ್ಯ (ಸುಲಭಲಭ್ಯ) ವೆಬ್ ಸೈಟ್ ಗಳನ್ನು ರಚಿಸಲು ಸರ್ಕಾರಿ ಘಟಕಗಳಿಗಾಗಿ ಅಭಿವೃದ್ಧಿಪಡಿಸಲಾದ ಕ್ಲೌಡ್ ಸೇವೆಯೇ ಎಸ್3 ವಾಸ್. ಇದು ಬಹುಭಾಷಾ, ಜನಸ್ನೇಹಿ ಮತ್ತು ದಿವ್ಯಾಂಗ ಸ್ನೇಹಿಯಾಗಿದೆ.

****

 


(Release ID: 1878869) Visitor Counter : 234