ಇಂಧನ ಸಚಿವಾಲಯ

ಈಶಾನ್ಯ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್(NEEPCO Ltd) ಜಾರಿಗೆ ತಂದ 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಮಿನಿ ರತ್ನ ವಿದ್ಯುತ್ ಸಾರ್ವಜನಿಕ ವಲಯ ಘಟಕ(PSU)

Posted On: 19 NOV 2022 12:59PM by PIB Bengaluru
•    ಅರುಣಾಚಲ ಪ್ರದೇಶದ 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯನ್ನು (NDC) ಪೂರೈಸುವ ಪ್ರಮುಖ ಹೆಜ್ಜೆಯಾಗಿದೆ. 
●ಯೋಜನೆಯು 2030 ರ ವೇಳೆಗೆ 30,000 ಮೆಗಾವ್ಯಾಟ್ ಯೋಜಿತ ಜಲ ಸಾಮರ್ಥ್ಯದ ಸೇರ್ಪಡೆಯ ಭಾಗವಾಗಿದೆ
●ಈ ಯೋಜನೆಯು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಸುಮಾರು 80 ಕಿಲೋಮೀಟರ್‌ಗಿಂತಲೂ ಹೆಚ್ಚು ವೆಚ್ಚದಲ್ಲಿ ವ್ಯಾಪಿಸಿದೆ. ಯೋಜನೆಯ ಅಂದಾಜು ವೆಚ್ಚ 8,200 ಕೋಟಿ ರೂಪಾಯಿಗಳು
●ಇದು ಗ್ರಿಡ್ ಸ್ಥಿರತೆ ಮತ್ತು ಗ್ರಿಡ್‌ನಲ್ಲಿ ಸೌರ ಮತ್ತು ಪವನ ಶಕ್ತಿ ಮೂಲಗಳ ಏಕೀಕರಣ ಮತ್ತು ಸಮತೋಲನದ ವಿಷಯದಲ್ಲಿ ರಾಷ್ಟ್ರೀಯ ಗ್ರಿಡ್‌ಗೆ ಪ್ರಯೋಜನಗಳನ್ನು ಹೊಂದಿರುವ ಅರುಣಾಚಲ ಪ್ರದೇಶವನ್ನು ಸಮೃದ್ಧಿಯ ಉತ್ತುಂಗಕ್ಕೆ ಒಯ್ಯಲಿದ್ದು, ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ರಾಜ್ಯವೆನಿಸಲಿದೆ. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ವಿದ್ಯುತ್ ಸಚಿವಾಲಯದ ಅಡಿಯಲ್ಲಿ ಒಂದು ಮಿನಿ ರತ್ನ ಪವರ್ ಸಾರ್ವಜನಿಕ ವಲಯ ಘಟಕವಾಗಿದ್ದು, ಈಶಾನ್ಯ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NEEPCO Ltd) ಮೂಲಕ ಜಾರಿಗೊಳಿಸಲಾದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾಗಿದೆ. 

Aerial shots of Kameng Dam and Hydro Power Station , Arunachal Pradesh"

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಡಿಯಲ್ಲಿ ಕೇಂದ್ರ ಇಂಧನ ಖಾತೆ ಸಚಿವ ಶ್ರೀ ಆರ್ ಕೆ ಸಿಂಗ್, ನಿಯಮಿತವಾಗಿ ಯೋಜನೆಯ ಉಸ್ತುವಾರಿ ಮಾಡಿಕೊಂಡು ಬಂದಿದ್ದರು. ಇದರಿಂದ ಹಲವು ಸವಾಲುಗಳ ನಡುವೆಯೂ ಕಮೆಂಗ್ ಜಲವಿದ್ಯುತ್ ಯೋಜನೆ ಆರಂಭಿಸಿ ದೇಶಕ್ಕೆ ಸಮರ್ಪಿಸಲಾಗಿದೆ. ಸ್ವಚ್ಛ, ಶುದ್ಧ ಇಂಧನವನ್ನು ಉತ್ಪಾದಿಸಿ.

ಅರುಣಾಚಲ ಪ್ರದೇಶದಲ್ಲಿ 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರ ಈಶಾನ್ಯ ಭಾಗದ ರಾಜ್ಯದಲ್ಲಿ 6ನೇ ಜಲವಿದ್ಯುತ್ ಘಟಕವಾಗಿದ್ದು, 2015ರ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಮಾಡಿಕೊಂಡ ಪ್ರತಿಜ್ಞೆಯ ಅನುಗುಣವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕೊಡುಗೆ ನಿರ್ಧಾರ(NDC)ವನ್ನು ಈಡೇರಿಸುವಲ್ಲಿ ಪ್ರಮುಖ ಹೆಜ್ಜೆಯನ್ನಿರಿಸಲಿದೆ. ಯೋಜನೆಯು 2030 ರ ವೇಳೆಗೆ 30,000 ಮೆಗಾವ್ಯಾಟ್ ಯೋಜಿತ ಜಲ ಸಾಮರ್ಥ್ಯದ ಸೇರ್ಪಡೆಯ ಭಾಗವಾಗಿದೆ.

ಅಂದಾಜು 8,200 ಕೋಟಿ ರೂಪಾಯಿ ವೆಚ್ಚದಲ್ಲಿ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಈ ಯೋಜನೆಯು 80 ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪಿಸಿದೆ.

ಯೋಜನೆಯು ಎರಡು ಅಣೆಕಟ್ಟುಗಳನ್ನು ಮತ್ತು 3,353 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲು 150 ಮೆಗಾವ್ಯಾಟ್ ನ 4 ಘಟಕಗಳನ್ನು ಹೊಂದಿದೆ. ಯೋಜನೆಯಿಂದ ವಾರ್ಷಿಕವಾಗಿ 3,353 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯು ಅರುಣಾಚಲ ಪ್ರದೇಶವನ್ನು ಸಾಕಷ್ಟು ವಿದ್ಯುತ್ ಉತ್ಪಾದನೆಯ ರಾಜ್ಯವನ್ನಾಗಿ ಪರಿವರ್ತಿಸಲಿದ್ದು, ಏಕೀಕರಣ ಮತ್ತು ಗ್ರಿಡ್‌ನಲ್ಲಿನ ಸೌರ ಮತ್ತು ಪವನ ಶಕ್ತಿ ಮೂಲಗಳ ಸಮತೋಲನದ ದೃಷ್ಟಿಯಿಂದ ರಾಷ್ಟ್ರೀಯ ಗ್ರಿಡ್‌ಗೆ ಸಾಕಷ್ಟು ಪ್ರಯೋಜನವನ್ನು ತರಲಿದೆ, 

ಕೋವಿಡ್-19 ಸಾಂಕ್ರಾಮಿಕ ಬಂದ ಮೇಲೆ ವಿಶ್ವದ ಬಹುತೇಕ ರಾಷ್ಟ್ರಗಳ ಮೂಲಭೂತ ಸೌಕರ್ಯ ಯೋಜನೆಗಳ ಮೇಲೆ ಪರಿಣಾಮ ತಟ್ಟಿದೆ. ಆದರೂ ಈ ಮೆಗಾ ಯೋಜನೆಯನ್ನು NEEPCO ಲಿಮಿಟೆಡ್ ಎಲ್ಲಾ ಅಡ್ಡಿ-ಸಮಸ್ಯೆಗಳ ನಡುವೆ ಜೂನ್ 2020ರಲ್ಲಿ ಆರಂಭ ಮಾಡಿ 2021ರ ಫೆಬ್ರವರಿಯವರೆಗೆ ಯಶಸ್ವಿಯಾಗಿ ಕೆಲಸ ಮುಂದುವರಿಸಿಕೊಂಡು ಹೋಗಿತ್ತು. 

ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ, ಶ್ರೀ ಕಿರಣ್ ರಿಜಿಜು, ಅರುಣಾಚಲ ಪ್ರದೇಶದ ರಾಜ್ಯಪಾಲ ಬ್ರಿಗ್. (ಡಾ.) ಬಿ.ಡಿ. ಮಿಶ್ರಾ (ನಿವೃತ್ತ), ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೇಮಾ ಖಂಡು, ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಶ್ರೀ ಚೌನಾ ಮೇ ಮತ್ತು ಸಂಸತ್ ಸದಸ್ಯರಾದ ಶ್ರೀ ನಬಮ್ ರೆಬಿಯಾ ಇಂದಿನ ಸಮಾರಂಭದಲ್ಲಿ ಭಾಗವಹಿಸಿದ್ದರು.

NEEPCO Ltd, ಭಾರತ ಸರ್ಕಾರದ ಮಿನಿ ರತ್ನ ಶೆಡ್ಯೂಲ್-ಎ ಸಾರ್ವಜನಿಕ ವಲಯ ಘಟಕವಾಗಿದ್ದು, ವಿದ್ಯುತ್ ಸಚಿವಾಲಯದ ಅಡಿಯಲ್ಲಿ 2,057 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಉತ್ಪಾದಿಸುವ ಯೋಜನೆಯಾಗಿದೆ. ಪ್ರಮುಖ ವಿದ್ಯುತ್ ಉತ್ಪಾದಿಸುವ ಉದ್ಯಮಗಳಲ್ಲಿ ಒಂದಾಗಿದೆ. ಇದು ಜಲ, ನೈಸರ್ಗಿಕ ಅನಿಲ ಆಧಾರಿತ / ಉಷ್ಣ ವಿದ್ಯುತ್ ಕೇಂದ್ರಗಳು ಮತ್ತು ಸೌರಶಕ್ತಿಯನ್ನು ಒಳಗೊಂಡಿರುತ್ತದೆ, ಈಶಾನ್ಯ ಭಾರತ ಪ್ರದೇಶದ ಸುಧಾರಣೆಗೆ ಗಣನೀಯ ಕೊಡುಗೆ ನೀಡುತ್ತದೆ. ಕಂಪನಿಯು ಈಗ ಸೋಲಾರ್ ಮತ್ತು ವಿವಿಧೋದ್ದೇಶ ಯೋಜನೆಗಳಿಗಾಗಿ ಜಮ್ಮು-ಕಾಶ್ಮೀರದೊಳಗೆ ಪ್ರವೇಶಿಸುತ್ತದೆ.

  

" Aerial shots of Kameng Dam and Hydro Power Station , Arunachal Pradesh"

 

*****



(Release ID: 1877352) Visitor Counter : 161