ಗೃಹ ವ್ಯವಹಾರಗಳ ಸಚಿವಾಲಯ

4 ವಿಶೇಷ ಕಾರ್ಯಾಚರಣೆಗಳಿಗಾಗಿ 2022 ನೇ ಸಾಲಿನ ಕೇಂದ್ರ ಗೃಹ ಸಚಿವರ "ವಿಶೇಷ ಕಾರ್ಯಾಚರಣೆ ಪದಕ" ಪುರಸ್ಕಾರ

Posted On: 31 OCT 2022 11:30AM by PIB Bengaluru

2022 ರ "ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕ" ವನ್ನು 4 ವಿಶೇಷ ಕಾರ್ಯಾಚರಣೆಗಳಿಗಾಗಿ ನೀಡಲಾಗಿದೆ. ಉನ್ನತ ಮಟ್ಟದ ಯೋಜನೆ, ದೇಶ/ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಸಮಾಜದ ಹೆಚ್ಚಿನ ಜನಸಂಖ್ಯೆಯ ಭದ್ರತೆಯ ಮೇಲೆ ಮಹತ್ವದ ಪ್ರಭಾವ ಬೀರುವ ಕಾರ್ಯಾಚರಣೆಗಳನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪುರಸ್ಕಾರವನ್ನು ಸ್ಥಾಪಿಸಲಾಗಿದೆ. ಭಯೋತ್ಪಾದನೆ ನಿಗ್ರಹ, ಗಡಿ ಕಾರ್ಯಾಚರಣೆ, ಶಸ್ತ್ರಾಸ್ತ್ರ ನಿಯಂತ್ರಣ, ಮಾದಕ ದ್ರವ್ಯ ಕಳ್ಳಸಾಗಣೆ ತಡೆ ಮತ್ತು ರಕ್ಷಣಾ ಕಾರ್ಯಾಚರಣೆಗಳಂತಹ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಾಚರಣೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಘೋಷಿಸಲಾಗುತ್ತದೆ. ಪ್ರಶಸ್ತಿಗಾಗಿ ಒಂದು ವರ್ಷದಲ್ಲಿ, ಸಾಮಾನ್ಯವಾಗಿ 3 ವಿಶೇಷ ಕಾರ್ಯಾಚರಣೆಗಳನ್ನು ಮತ್ತು ವಿಶೇಷ ಸಂದರ್ಭಗಳಲ್ಲಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರನ್ನು ಪ್ರೋತ್ಸಾಹಿಸಲು 5 ವಿಶೇಷ ಕಾರ್ಯಾಚರಣೆಗಳವರೆಗೆ ಪ್ರಶಸ್ತಿಯನ್ನು ನೀಡಬಹುದು.

(Click here for List of Awardees)

******
 



(Release ID: 1872183) Visitor Counter : 138