ಪ್ರಧಾನ ಮಂತ್ರಿಯವರ ಕಛೇರಿ
ಅತ್ಯಂತ ಭಾರವಾದ ವಾಹನ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಎನ್‌ಎಸ್‌ಐಎಲ್, ಐಎನ್-ಸ್ಪೇಸ್ ಮತ್ತು ಇಸ್ರೋಗೆ ಪ್ರಧಾನಮಂತ್ರಿ ಅವರು ಅಭಿನಂದನೆ ಸಲ್ಲಿಸಿದರು
Posted On:
23 OCT 2022 10:10AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅತ್ಯಂತ ಭಾರವಾದ ವಾಹನವಾದ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆಗಳು/ ಸಂಸ್ಥೆಗಳಾದ ಎನ್‌ಎಸ್‌ಐಎಲ್, ಐಎನ್-ಸ್ಪೇಸ್ ಮತ್ತು ಇಸ್ರೋವನ್ನು ಅಭಿನಂದಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
‘‘ ಜಾಗತಿಕ ಸಂಪರ್ಕಕ್ಕಾಗಿ ಉದ್ದೇಶಿಸಲಾದ 36 ಒನ್‌ವೆಬ್ ಉಪಗ್ರಹಗಳೊಂದಿಗೆ ನಮ್ಮ ಭಾರವಾದ ಉಡಾವಣಾ ವಾಹನ ಎಲ್‌ವಿಎಂ 3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ http://@NSIL_India @INSPACeIND @ISRO ಗೆ ಅಭಿನಂದನೆಗಳು. ಎಲ್‌ವಿಎಂ 3 ಆತ್ಮನಿರ್ಭರವನ್ನು ಉದಾಹರಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ,’’ ಎಂದು ಹೇಳಿದ್ದಾರೆ.
****
(Release ID: 1870674)
Visitor Counter : 151
Read this release in:
Malayalam
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu