ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 19-20ರಂದು ಗುಜರಾತ್ ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಗುಜರಾತ್ ನಲ್ಲಿ ಸುಮಾರು 15,670 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಭಾರತದ ರಕ್ಷಣಾ ಉತ್ಪಾದನಾ ಶಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಡಿಫೆನ್ಸ್ ಎಕ್ಸ್ ಪೋ 22 ಅನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಇದೇ ಮೊದಲ ಬಾರಿಗೆ, ಭಾರತೀಯ ಕಂಪನಿಗಳಿಗಾಗಿ ಸಮರ್ಪಿತವಾಗಿ ಆಯೋಜಿಸಲಾದ ರಕ್ಷಣಾ ವಸ್ತುಪ್ರದರ್ಶನಕ್ಕೆ ಸಾಕ್ಷಿಯಾಗಲಿರುವ ಎಕ್ಸ್ ಪೋ
ಡೆಫ್ ಸ್ಪೇಸ್ (ರಕ್ಷಣಾ ಪ್ರದೇಶ) ಉಪಕ್ರಮಕ್ಕೆ ಚಾಲನೆ ನೀಡಿ, ದೀಸಾ ವಾಯುನೆಲೆಗೆ ಶಂಕುಸ್ಥಾಪನೆ ನೆರವೇರಿಸಿ, ದೇಶಿ ನಿರ್ಮಿತ ತರಬೇತಿ ವಿಮಾನ ಎಚ್.ಟಿಟಿ-40 ನ್ನು ಅನಾವರಣಗೊಳಿಸಲಿರುವ ಪ್ರಧಾನಮಂತ್ರಿ
ಕೆವಾಡಿಯಾದಲ್ಲಿ ಲೈಫ್ ಅಭಿಯಾನಕ್ಕೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ
ಕೆವಾಡಿಯಾದಲ್ಲಿ ನಡೆಯಲಿರುವ ರಾಯಭಾರ ಕಚೇರಿಗಳ ಮುಖ್ಯಸ್ಥರ 10ನೇ ಸಮ್ಮೇಳನದಲ್ಲಿಯೂ ಭಾಗವಹಿಸಲಿರುವ ಪ್ರಧಾನಮಂತ್ರಿ
ರಾಜ್ ಕೋಟ್ ನಲ್ಲಿ 2022ರ ಭಾರತದ ನಗರ ವಸತಿ ಸಮಾವೇಶವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ, ಸುಮಾರು 5860 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ
ಸುಮಾರು 4260 ಕೋಟಿ ರೂ.ಗಳ ವೆಚ್ಚದಲ್ಲಿ ಗುಜರಾತ್ ನಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ
ಜುನಾಗಢದಲ್ಲಿ ಸುಮಾರು 3580 ಕೋಟಿ ರೂ.ಗಳ ಮತ್ತು ವ್ಯಾರಾದಲ
Posted On:
18 OCT 2022 10:36AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 19 ಮತ್ತು 20 ರಂದು ಗುಜರಾತ್ ಗೆ ಭೇಟಿ ನೀಡಲಿದ್ದು, ಸುಮಾರು 15,670 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಅಕ್ಟೋಬರ್ 19 ರಂದು ಬೆಳಗ್ಗೆ 9:45ಕ್ಕೆ ಗಾಂಧಿನಗರದ ಮಹಾತ್ಮಾ ಮಂದಿರ ಸಮಾವೇಶ ಮತ್ತು ವಸ್ತುಪ್ರದರ್ಶನ ಕೇಂದ್ರದಲ್ಲಿ ಪ್ರಧಾನಮಂತ್ರಿಯವರು ಡಿಫೆನ್ಸ್ ಎಕ್ಸ್ ಪೋ-22ನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿಯವರು ಅದಲಾಜ್ ನಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಅವರು ಜುನಾಗಢದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತದನಂತರ ಸಂಜೆ 6 ಗಂಟೆಗೆ ಅವರು ಭಾರತದ ನಗರ ವಸತಿ ಸಮಾವೇಶ 2022 ಅನ್ನು ಉದ್ಘಾಟಿಸಲಿದ್ದಾರೆ ಮತ್ತು ರಾಜ್ ಕೋಟ್ ನಲ್ಲಿ ಅನೇಕ ಪ್ರಮುಖ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 7.20ಕ್ಕೆ ರಾಜ್ ಕೋಟ್ ನಲ್ಲಿ ನಾವೀನ್ಯಪೂರ್ಣ ನಿರ್ಮಾಣ ಪದ್ಧತಿಗಳ ಪ್ರದರ್ಶನವನ್ನು ಅವರು ಉದ್ಘಾಟಿಸಲಿದ್ದಾರೆ.
ಅಕ್ಟೋಬರ್ 20ರಂದು ಬೆಳಗ್ಗೆ 9.45ಕ್ಕೆ ಕೆವಾಡಿಯಾದಲ್ಲಿ ಪ್ರಧಾನಮಂತ್ರಿಯವರು ಮಿಷನ್ ಲೈಫ್ ಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿಯವರು ಕೆವಾಡಿಯಾದಲ್ಲಿ ನಡೆಯಲಿರುವ ರಾಯಭಾರ ಕಚೇರಿಗಳ ಮುಖ್ಯಸ್ಥರ 10ನೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ, ಮಧ್ಯಾಹ್ನ 3:45ಕ್ಕೆ, ಅವರು ವ್ಯಾರಾದಲ್ಲಿ ವಿವಿಧ ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಗಾಂಧಿನಗರದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ಡಿಫೆನ್ಸ್ ಎಕ್ಸ್ ಪೋ 22 ಅನ್ನು ಉದ್ಘಾಟಿಸಲಿದ್ದಾರೆ. 'ಹೆಮ್ಮೆಯ ಹಾದಿ' ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿರುವ ಈ ಎಕ್ಸ್ ಪೋ, ಇಲ್ಲಿಯವರೆಗೆ ನಡೆದ ಭಾರತೀಯ ರಕ್ಷಣಾ ಎಕ್ಸ್ ಪೋದಲ್ಲಿ ಅತಿ ಹೆಚ್ಚು ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ, ವಿದೇಶಿ ಒಇಎಂಗಳ ಭಾರತೀಯ ಅಂಗಸಂಸ್ಥೆಗಳು, ಭಾರತದಲ್ಲಿ ನೋಂದಾಯಿತ ಕಂಪನಿಯ ವಿಭಾಗಗಳು, ಭಾರತೀಯ ಕಂಪನಿಯೊಂದಿಗೆ ಜಂಟಿ ಉದ್ಯಮವನ್ನು ಹೊಂದಿರುವ ಪ್ರದರ್ಶಕರು ಸೇರಿದಂತೆ ಭಾರತೀಯ ಕಂಪನಿಗಳಿಗಾಗಿ ಸಮರ್ಪಿತವಾಗಿ ನಡೆಯುವ ರಕ್ಷಣಾ ಪ್ರದರ್ಶನಕ್ಕೆ ಇದು ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮವು ಭಾರತೀಯ ರಕ್ಷಣಾ ಉತ್ಪಾದನಾ ಶಕ್ತಿಯ ವಿಸ್ತಾರವಾದ ವ್ಯಾಪ್ತಿ ಮತ್ತು ಪ್ರಮಾಣವನ್ನು ಪ್ರದರ್ಶಿಸುತ್ತದೆ. ಎಕ್ಸ್ ಪೋದಲ್ಲಿ ಇಂಡಿಯಾ ಪೆವಿಲಿಯನ್ ಮತ್ತು ಹತ್ತು ರಾಜ್ಯ ಪೆವಿಲಿಯನ್ ಗಳು ಇರಲಿವೆ. ಇಂಡಿಯಾ ಪೆವಿಲಿಯನ್ ನಲ್ಲಿ ಪ್ರಧಾನಮಂತ್ರಿಯವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್.ಎಎಲ್) ವಿನ್ಯಾಸಗೊಳಿಸಿದ ದೇಶೀಯ ತರಬೇತಿ ವಿಮಾನ ಎಚ್ ಟಿಟಿ-40 ಅನ್ನು ಅನಾವರಣಗೊಳಿಸುವರು. ಈ ವಿಮಾನವು ಅತ್ಯಾಧುನಿಕ ಸಮಕಾಲೀನ ವ್ಯವಸ್ಥೆಗಳನ್ನು ಹೊಂದಿದ್ದು, ಪೈಲಟ್ ಸ್ನೇಹಿ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ಡೆಫ್ ಸ್ಪೇಸ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ - ಕೈಗಾರಿಕೆ ಮತ್ತು ನವೋದ್ಯಮಗಳ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ರಕ್ಷಣಾ ಪಡೆಗಳಿಗೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು. ಪ್ರಧಾನಮಂತ್ರಿಯವರು ಗುಜರಾತ್ ನಲ್ಲಿ ದೀಸಾ ವಾಯುನೆಲೆಗೆ ಶಂಕುಸ್ಥಾಪನೆ ನೆರವೇರಿಸುವರು. ಮುಂಪಡೆಯ ವಾಯುಪಡೆಯ ನೆಲೆಯು ದೇಶದ ಭದ್ರತಾ ವಿನ್ಯಾಸವನ್ನು ಹೆಚ್ಚಿಸುತ್ತದೆ.
'ಭಾರತ-ಆಫ್ರಿಕಾ: ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಒಗ್ಗೂಡಿಸಲು ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು' ಎಂಬ ವಿಷಯದ ಅಡಿಯಲ್ಲಿ 2 ನೇ ಭಾರತ-ಆಫ್ರಿಕಾ ರಕ್ಷಣಾ ಸಂವಾದಕ್ಕೂ ಈ ಎಕ್ಸ್ ಪೋ ಸಾಕ್ಷಿಯಾಗಲಿದೆ. ಹಿಂದೂ ಮಹಾಸಾಗರ ಪ್ರದೇಶ + (ಐಒಆರ್ +) 2ನೇ ಸಮಾವೇಶವು ಎಕ್ಸ್ ಪೋದಲ್ಲಿ ನಡೆಯಲಿದ್ದು, ಇದು ಈ ವಲಯದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಪ್ರಗತಿಗಾಗಿ ಪ್ರಧಾನಮಂತ್ರಿಯವರ ದೃಷ್ಟಿಕೋನ(ಸಾಗರ್). ಕ್ಕೆ ಅನುಗುಣವಾಗಿ ಐಒಆರ್ + ರಾಷ್ಟ್ರಗಳ ನಡುವೆ ಶಾಂತಿ, ಪ್ರಗತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ರಕ್ಷಣಾ ಸಹಕಾರವನ್ನು ಉತ್ತೇಜಿಸಲು ಸಮಗ್ರ ಸಂವಾದಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಎಕ್ಸ್ ಪೋದಲ್ಲಿ, ರಕ್ಷಣೆಗಾಗಿ ಮೊಟ್ಟಮೊದಲ ಹೂಡಿಕೆದಾರರ ಸಮಾವೇಶವೂ ನಡೆಯಲಿದೆ. ಐಡೆಕ್ಸ್ (ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್)ನ ರಕ್ಷಣಾ ನಾವೀನ್ಯತಾ ಕಾರ್ಯಕ್ರಮವಾದ ಮಂಥನ್ 2022 ರಲ್ಲಿ ನೂರಕ್ಕೂ ಹೆಚ್ಚು ನವೋದ್ಯಮದಳು ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯುತ್ತವೆ. ಈ ಕಾರ್ಯಕ್ರಮವು 'ಬಂಧನ್' ಕಾರ್ಯಕ್ರಮದ ಮೂಲಕ 451 ಪಾಲುದಾರಿಕೆಗಳು / ಚಾಲನೆ ರೂಪಿಸುತ್ತದೆ.
ಪ್ರಧಾನಮಂತ್ರಿಯವರು ಅದಲಾಜ್ ನ ತ್ರಿಮಂದಿರದಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಗೆ ಚಾಲನೆ ನೀಡಲಿದ್ದಾರೆ. ಈ ಮಿಷನ್ ಅನ್ನು ಒಟ್ಟು 10,000 ಕೋಟಿ ರೂ.ಗಳ ವೆಚ್ಚದಲ್ಲಿ ರೂಪಿಸಲಾಗಿದೆ. ತ್ರಿಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸುಮಾರು 4260 ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಅಭಿಯಾನ ಗುಜರಾತ್ ನಲ್ಲಿ ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ಕ್ಲಾಸ್ ತರಗತಿಗಳು, ಕಂಪ್ಯೂಟರ್ ಲ್ಯಾಬ್ ಗಳು ಮತ್ತು ರಾಜ್ಯದ ಶಾಲೆಗಳ ಮೂಲಸೌಕರ್ಯಗಳ ಒಟ್ಟಾರೆ ಉನ್ನತೀಕರಣದ ಮೂಲಕ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಜುನಾಗಢದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ಸುಮಾರು 3580 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿಯವರು ಸಂಪರ್ಕ ಜೋಡಣೆಯಾಗದ ರಸ್ತೆಗಳೂ ಸೇರಿದಂತೆ ಕರಾವಳಿ ಹೆದ್ದಾರಿಗಳ ಸುಧಾರಣೆಗೆ ಶಂಕುಸ್ಥಾಪನೆ ನೆರವೇರಿಸುವರು. ಈ ಯೋಜನೆಯ ಮೊದಲ ಹಂತದಲ್ಲಿ, 13 ಜಿಲ್ಲೆಗಳಲ್ಲಿ ಒಟ್ಟು 270 ಕಿ.ಮೀ ಉದ್ದದ ಹೆದ್ದಾರಿಯನ್ನು ಮಾಡಲಾಗುವುದು.
ಪ್ರಧಾನಮಂತ್ರಿಯವರು ಜುನಾಗಢದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಣೆಗಾಗಿ ಎರಡು ನೀರು ಸರಬರಾಜು ಯೋಜನೆಗಳಿಗೆ ಮತ್ತು ಗೋದಾಮು ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪೋರ್ ಬಂದರ್ ನಲ್ಲಿ ಪ್ರಧಾನಮಂತ್ರಿಯವರು ಮಾಧವಪುರದ ಶ್ರೀ ಕೃಷ್ಣ ರುಕ್ಮಿಣಿ ಮಂದಿರದ ಸಮಗ್ರ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಪೋರ್ ಬಂದರ್ ಮೀನುಗಾರಿಕಾ ಬಂದರಿನಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಯೋಜನೆಗಳಿಗೆ ಮತ್ತು ನಿರ್ವಹಣೆಗಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗಿರ್ ಸೋಮನಾಥದಲ್ಲಿ ಅವರು ಮಧ್ವಾಡ್ ನಲ್ಲಿ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಸೇರಿದಂತೆ ಎರಡು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ರಾಜ್ ಕೋಟ್ ನಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ರಾಜ್ ಕೋಟ್ ನಲ್ಲಿ ಸುಮಾರು 5860 ಕೋಟಿ ರೂ.ಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು. ಅವರು ಭಾರತದ ನಗರ ವಸತಿ ಸಮಾವೇಶ 2022 ಅನ್ನು ಉದ್ಘಾಟಿಸಲಿದ್ದು, ಇದು ಯೋಜನೆ, ವಿನ್ಯಾಸ, ನೀತಿ, ನಿಬಂಧನೆಗಳು, ಅನುಷ್ಠಾನ, ಹೆಚ್ಚಿನ ಸುಸ್ಥಿರತೆ ಮತ್ತು ಒಳಗೊಳ್ಳುವಿಕೆ ಸೇರಿದಂತೆ ಭಾರತದಲ್ಲಿ ವಸತಿಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಒಳಗೊಂಡ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಸಾರ್ವಜನಿಕ ಸಮಾರಂಭದ ನಂತರ, ಪ್ರಧಾನಮಂತ್ರಿಯವರು ನಾವೀನ್ಯಪೂರ್ಣ ನಿರ್ಮಾಣ ಪದ್ಧತಿಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಲೈಟ್ ಹೌಸ್ ಯೋಜನೆಯಡಿ ನಿರ್ಮಿಸಲಾದ 1100 ಕ್ಕೂ ಹೆಚ್ಚು ಮನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಮನೆಗಳ ಕೀಲಿಕೈಗಳನ್ನು ಸಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಅವರು ಬ್ರಹ್ಮಣಿ-2 ಅಣೆಕಟ್ಟಿನಿಂದ ನರ್ಮದಾ ಕಾಲುವೆ ಪಂಪಿಂಗ್ ಕೇಂದ್ರದವರೆಗೆ ಮೊರ್ಬಿ-ಬಲ್ಕ್ ಕೊಳವೆಮಾರ್ಗ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಅವರು ಲೋಕಾರ್ಪಣೆ ಮಾಡುತ್ತಿರುವ ಇತರ ಯೋಜನೆಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮೇಲ್ಸೇತುವೆ ಮತ್ತು ರಸ್ತೆ ವಲಯಕ್ಕೆ ಸಂಬಂಧಿಸಿದ ಇತರ ಯೋಜನೆಗಳು ಸೇರಿವೆ.
ಪ್ರಧಾನಮಂತ್ರಿಯವರು ಗುಜರಾತಿನ ರಾಷ್ಟ್ರೀಯ ಹೆದ್ದಾರಿ 27ರ ರಾಜ್ ಕೋಟ್-ಗೊಂಡಾಲ್-ಜೆಟ್ ಪುರ್ ವಿಭಾಗದ ಪ್ರಸ್ತುತ ಚತುಷ್ಪಥ ರಸ್ತೆಯನ್ನು ಷಟ್ಪಥಗಳ ರಸ್ತೆಯಾಗಿ ನಿರ್ಮಾಣ ಮಾಡುವುದಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಅವರು ಮೊರ್ಬಿ, ರಾಜ್ಕೋಟ್, ಬೊಟಾಡ್, ಜಾಮ್ ನಗರ್ ಮತ್ತು ಕಚ್ ನ ವಿವಿಧ ಸ್ಥಳಗಳಲ್ಲಿ ಸುಮಾರು 2950 ಕೋಟಿ ರೂ.ಗಳ ಮೌಲ್ಯದ ಜಿಐಡಿಸಿ ಕೈಗಾರಿಕಾ ಎಸ್ಟೇಟ್ ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗಡ್ಕಾದಲ್ಲಿ ಅಮುಲ್-ಫೆಡ್ ಡೈರಿ ಘಟಕ, ರಾಜ್ಕೋಟ್ ನಲ್ಲಿ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಾಣ, ಎರಡು ನೀರು ಸರಬರಾಜು ಯೋಜನೆಗಳು ಮತ್ತು ರಸ್ತೆ ಮತ್ತು ರೈಲ್ವೆ ವಲಯದ ಇತರ ಯೋಜನೆಗಳು ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಾರೆ.
ಕೆವಾಡಿಯಾದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ವಿಶ್ವಸಂಸ್ಥೆಯ ಮಹಾ ಪ್ರಧಾನಕಾರ್ಯದರ್ಶಿ ಘನತೆವೆತ್ತ ಶ್ರೀ ಆಂಟೋನಿಯೊ ಗುಟೆರಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ತದನಂತರ, ಕೆವಾಡಿಯಾದ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಯಲ್ಲಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯವರ ಉಪಸ್ಥಿತಿಯಲ್ಲಿ ಮಿಷನ್ ಲೈಫ್ ಗೆ ಪ್ರಧಾನಮಂತ್ರಿ ಅವರು ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿಯವರು ಅಂದುಕೊಂಡಂತೆ, ಇದು ಭಾರತ ನೇತೃತ್ವದ ಜಾಗತಿಕ ಜನಾಂದೋಲನವಾಗಿದ್ದು, ಇದು ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಂಘಟಿತ ಕ್ರಮವನ್ನು ಒತ್ತಾಯಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಸುಸ್ಥಿರತೆಯ ಕಡೆಗೆ ನಮ್ಮ ಸಾಮೂಹಿಕ ವಿಧಾನವನ್ನು ಬದಲಾಯಿಸಲು ಮೂರು ಆಯಾಮದ ಕಾರ್ಯತಂತ್ರವನ್ನು ಅನುಸರಿಸುವ ಗುರಿಯನ್ನು ಮಿಷನ್ ಲೈಫ್ ಹೊಂದಿದೆ. ಮೊದಲನೆಯದು, ತಮ್ಮ ದೈನಂದಿನ ಜೀವನದಲ್ಲಿ (ಬೇಡಿಕೆ) ಸರಳವಾದ ಆದರೆ ಪರಿಣಾಮಕಾರಿಯಾದ ಪರಿಸರ-ಸ್ನೇಹಿ ಕ್ರಿಯೆಗಳನ್ನು ಅಭ್ಯಾಸ ಮಾಡಲು ವ್ಯಕ್ತಿಗಳನ್ನು ಪ್ರೇರೇಪಿಸುವುದು; ಎರಡನೆಯದು, ಬದಲಾಗುತ್ತಿರುವ ಬೇಡಿಕೆಗೆ (ಪೂರೈಕೆ) ಕೈಗಾರಿಕೆಗಳು ಮತ್ತು ಮಾರುಕಟ್ಟೆಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವುದು ಮತ್ತು; ಮೂರನೆಯದು, ಸುಸ್ಥಿರ ಬಳಕೆ ಮತ್ತು ಉತ್ಪಾದನೆ (ನೀತಿ) ಎರಡನ್ನೂ ಬೆಂಬಲಿಸಲು ಸರ್ಕಾರ ಮತ್ತು ಕೈಗಾರಿಕಾ ನೀತಿಯ ಮೇಲೆ ಪ್ರಭಾವ ಬೀರುವುದು.
2022ರ ಅಕ್ಟೋಬರ್ 20ರಿಂದ 22ರವರೆಗೆ ಕೆವಾಡಿಯಾದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ರಾಯಭಾರ ಕಚೇರಿಗಳ ಮುಖ್ಯಸ್ಥರ 10ನೇ ಸಮ್ಮೇಳನದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಈ ಸಮ್ಮೇಳನವು ವಿಶ್ವದಾದ್ಯಂತದ 118 ಭಾರತೀಯ ರಾಯಭಾರ ಕಚೇರಿಗಳ ಮುಖ್ಯಸ್ಥರನ್ನು (ರಾಯಭಾರಿಗಳು ಮತ್ತು ಹೈಕಮಿಷನರ್ ಗಳು) ಒಗ್ಗೂಡಿಸಲಿದೆ. ಮೂರು ದಿನಗಳ ಕಾಲ ನಡೆಯಲಿರುವ 23 ಅಧಿವೇಶನಗಳ ಮೂಲಕ, ಸಮಕಾಲೀನ ಭೌಗೋಳಿಕ-ರಾಜಕೀಯ ಮತ್ತು ಭೌಗೋಳಿಕ-ಆರ್ಥಿಕ ಪರಿಸರ, ಸಂಪರ್ಕ, ಭಾರತದ ವಿದೇಶಾಂಗ ನೀತಿಯ ಆದ್ಯತೆಗಳು ಮುಂತಾದ ವಿಷಯಗಳ ಬಗ್ಗೆ ವಿವರವಾದ ಆಂತರಿಕ ಚರ್ಚೆಗಳನ್ನು ನಡೆಸಲು ಸಮ್ಮೇಳನವು ಅವಕಾಶವನ್ನು ಒದಗಿಸುತ್ತದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಒಂದು ಜಿಲ್ಲೆ ಒಂದು ಉತ್ಪನ್ನ, ಅಮೃತ ಸರೋವರ್ ಅಭಿಯಾನ ಮುಂತಾದವುಗಳಿಗೆ ಸಂಬಂಧಿಸಿದ ಭಾರತದ ಮಹತ್ವಾಕಾಂಕ್ಷೆಯ ಅಭಿಯಾನಗಳ ಬಗ್ಗೆ ತಿಳಿದುಕೊಳ್ಳಲು ರಾಯಭಾರ ಕಚೇರಿಗಳ ಮುಖ್ಯಸ್ಥರು ಪ್ರಸ್ತುತ ತಮ್ಮ ತಮ್ಮ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ವ್ಯಾರಾದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿಯವರು ತಾಪಿಯ ವ್ಯಾರಾದಲ್ಲಿ 1970 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಉಪಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಅವರು ಸಪುತಾರಾದಿಂದ ಏಕತಾ ಪ್ರತಿಮೆಯವರೆಗಿನ ರಸ್ತೆ ಸುಧಾರಣೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಸಂಪರ್ಕರಹಿತ ರಸ್ತೆಗಳೂ ಸೇರಿದಂತೆ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತಾಪಿ ಮತ್ತು ನರ್ಮದಾ ಜಿಲ್ಲೆಗಳಲ್ಲಿ 3೦೦ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ನೀರು ಸರಬರಾಜು ಯೋಜನೆಗಳು ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
****
(Release ID: 1869625)
Visitor Counter : 182
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam