ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನಲ್ಲಿ ಪಿಎಂಜೆಎವೈ-ಎಂಎ ಯೋಜನಾ ಆಯುಷ್ಮಾನ್ ಕಾರ್ಡ್ ವಿತರಣೆಗೆ ಚಾಲನೆ ನೀಡಲಿರುವ ಪ್ರಧಾನಿ
Posted On:
16 OCT 2022 12:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 17ರಂದು ಸಂಜೆ 4 ಗಂಟೆಗೆ ಗುಜರಾತ್ ನಲ್ಲಿ ಪಿಎಂಜೆಎವೈ-ಎಂಎ ಯೋಜನಾ ಆಯುಷ್ಮಾನ್ ಕಾರ್ಡ್ ವಿತರಣೆಗೆ ಚಾಲನೆ ನೀಡಲಿದ್ದಾರೆ.
ಹಿಂದೆ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ, ಪ್ರಧಾನಮಂತ್ರಿ ಅವರು 2012ರಲ್ಲಿ ಅನಾರೋಗ್ಯ ಮತ್ತು ದುಬಾರಿ ವೈದ್ಯಕೀಯ ಚಿಕಿತ್ಸೆಗಳಿಂದ ಬಡಜನರನ್ನು ರಕ್ಷಿಸಲು "ಮುಖ್ಯಮಂತ್ರಿ ಅಮೃತಂ” (ಎಂಎ) ಯೋಜನೆಯನ್ನು ಆರಂಭಿಸಿದ್ದರು. 2014ರಲ್ಲಿ ಆ "ಎಂಎ" ಯೋಜನೆಯನ್ನು ನಾಲ್ಕು ಲಕ್ಷದವರೆಗಿನ ಆದಾಯ ಮಿತಿ ಇರುವ ಎಲ್ಲ ಕುಟುಂಬಗಳಿಗೂ ವಿಸ್ತರಿಸಲಾಯಿತು. ನಂತರ ಆ ಯೋಜನೆಯನ್ನು ಇತರೆ ಗುಂಪುಗಳಿಗೂ ವಿಸ್ತರಣೆ ಮಾಡಲಾಯಿತು. ಯೋಜನೆಯನ್ನು ಮುಖ್ಯಮಂತ್ರಿ ಅಮೃತಂ ವಾತ್ಸಲ್ಯ (ಎಂಎವಿ) ಯೋಜನೆ ಎಂದು ಮರು ಬ್ರಾಂಡ್ ಮಾಡಲಾಯಿತು.
ಈ ಯೋಜನೆಯ ಯಶಸ್ಸಿನ ಅನುಭವದಿಂದ ಉತ್ತೇಜಿತರಾಗಿ ಪ್ರಧಾನಮಂತ್ರಿ ಅವರು 2018ರಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ (ಎಬಿ-ಪಿಎಂಜೆಎವೈ) ಗೆ ಚಾಲನೆ ನೀಡಿದರು. ಇದು ವಿಶ್ವದ ಬೃಹತ್ ಆರೋಗ್ಯ ವಿಮಾ ಯೋಜನೆಯಾಗಿದ್ದು, ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ ಐದು ಲಕ್ಷ ರೂ.ಗಳವರೆಗೆ ವಿಮಾ ವ್ಯಾಪ್ತಿ ಹೊಂದಿರುತ್ತದೆ, ಕುಟುಂಬದ ಗಾತ್ರ ಮತ್ತು ವಯಸ್ಸಿನ ಮಿತಿ ಇಲ್ಲದೆ ಪ್ರಾಥಮಿಕ, ದ್ವೀತಿಯ ಮತ್ತು ತೃತಿಯ ಹಂತದ ಆರೋಗ್ಯ ರಕ್ಷಣೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಒದಗಿಸಲಿದೆ. ಎಬಿ-ಪಿಎಂಜೆಎವೈ ಯೋಜನೆ ಆರಂಭವಾದ ನಂತರ, ಗುಜರಾತ್ 2019ರಲ್ಲಿ ತನ್ನ ಎಂಎ/ಎವಿಎ ಯೋಜನೆಯನ್ನು ಎಬಿ-ಪಿಎಂಜೆಎವೈ ಯೋಜನೆಯಲ್ಲಿ ವಿಲೀನಗೊಳಿಸಿತು ಮತ್ತು ಎಂಎ/ಎಂಎವಿ ಮತ್ತು ಎಬಿ-ಪಿಎಂಜೆಬಿವೈ ಫಲಾನುಭವಿಗಳು ಸಹ ಪಿಎಂಜೆಎವೈ-ಎಂಎ ಕಾರ್ಡ್‌ಗಳನ್ನು ಪಡೆಯಲು ಅರ್ಹರಾಗಿದ್ದಾರೆ.
ಕಾರ್‍ಯಕ್ರಮದ ವೇಳೆ ಪ್ರಧಾನಮಂತ್ರಿ ಅವರು ಈ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡುವರು, ಆನಂತರ ಫಲಾನುಭವಿಗಳ ಇ-ಕೆವೈಸಿ ಪರಿಶೀಲಿಸಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿರುವ ಸಂಸ್ಥೆಗಳು ಗುಜರಾತ್ ರಾಜ್ಯಾದ್ಯಂತ ಸಿದ್ಧಪಡಿಸಿರುವ ಸುಮಾರು 40 ಲಕ್ಷ ಆಯುಷ್ಮಾನ್ ಕಾರ್ಡ್‌ಗಳನ್ನು ಎಲ್ಲ ಫಲಾನುಭವಿಗಳಿಗೆ ಅವರ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.
***
(Release ID: 1868444)
Visitor Counter : 168
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam