ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಸ್ವಚ್ಛ ಅಮೃತ ಮಹೋತ್ಸವ


ತ್ಯಾಜ್ಯದಿಂದ ಅಟಿಕೆಗಳನ್ನು ವಿನ್ಯಾಸಗೊಳಿಸುವ “ಸ್ವಚ್ಛ ಟಾಯ್ಕಥಾನ್” ಸ್ಪರ್ಧೆಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಚಾಲನೆ

ತ್ಯಾಜ್ಯವನ್ನು ಅಟಿಕೆಗಳನ್ನಾಗಿ ಪರಿವರ್ತಿಸಲು ನಾವೀನ್ಯತೆಯ ಪರಿಹಾರಗಳೊಂದಿಗೆ ಆಗಮಿಸುವಂತೆ ಸೃಜನಶೀಲ ಮನಸ್ಸುಗಳಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಒತ್ತಾಯ

ಈ https://innovateindia.mygov.in/swachh-toycathon/ ಜಾಲತಾಣದ ಮೂಲಕ 2022 ರ ಸೆಪ್ಟೆಂಬರ್ 26 ರಿಂದ 2022 ರ ನವೆಂಬರ್ 11 ರ ವರೆಗೆ ಅರ್ಜಿದಾರರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

Posted On: 26 SEP 2022 3:33PM by PIB Bengaluru

ಅಟಿಕೆ ಕೈಗಾರಿಕೆಯನ್ನು ಪರಿಸರ ಸ್ನೇಹಿಯಾಗಿಸುವಂತೆ ಪ್ರಧಾನಮಂತ್ರಿ ಅವರು ನೀಡಿದ ಕರೆ ನೀಡಿದ ಹಿನ್ನೆಲೆಯಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ [ಎಂ.ಒ.ಎಚ್.ಯು.ಎ] ಅಟಿಕೆ ವಲಯದಲ್ಲಿ ಸ್ಪಷ್ಟತೆ ಸಾಧಿಸಲು ಹೆಜ್ಜೆ ಇಟ್ಟಿದೆ. ಅಟಿಕೆ ಕುರಿತ ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಸ್ವಚ್ಛಾ ಟಾಯ್ಕಥಾನ್ ಗೆ ಎಂ.ಒ.ಎಚ್.ಯು.ಎ ಚಾಲನೆ ನೀಡಿದ್ದು, ಇದು ಹೊಸ ಆಲೋಚನೆಗಳೊಂದಿಗೆ ತ್ಯಾಜ್ಯದಿಂದ ಅಟಿಕೆಗಳನ್ನು ತಯಾರಿಸುವ ಸ್ಪರ್ಧೆಯಾಗಿದೆ. 2022 ರ ಸೆಪ್ಟೆಂಬರ್ 17 ರಿಂದ 2022 ರ ಅಕ್ಟೋಬರ್ 2 ರ ವರೆಗೆ ಆಚರಿಸುತ್ತಿರುವ ಸ್ವಚ್ಛ ಅಮೃತ ಮಹೋತ್ಸವದ ಪಾಕ್ಷಿಕ ಚಟುವಟಿಕೆಗಳಡಿ ಈ ಸ್ಪರ್ಧೆಯನ್ನು ಆರಂಭಿಸಲಾಗಿದೆ.

 

ಎಂ.ಒ.ಎಚ್.ಯು.ಎ ಕಾರ್ಯದರ್ಶಿ ಶ್ರೀ ಮನೋಜ್ ಜೋಷಿ ಅವರು ಸ್ವಚ್ಛತಾ ಟಾಯ್ಕಾಥಾನ್ ಗೆ ಮೈಗೌ ಪೋರ್ಟಲ್ ನ ಆನ್ ಲೈನ್ ವೇದಿಕೆಯನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು ಮತ್ತು ಟೂಲ್ ಕಿಟ್ ಅನ್ನು ಬಿಡುಗಡೆ ಮಾಡಿದರು. ಅಟಿಕೆಗಳನ್ನು ಸೃಜಿಸುವ ಮತ್ತು ಉತ್ಪಾದಿಸುವಾಗ ತ್ಯಾಜ್ಯಕ್ಕೆ ಪರಿಹಾರವನ್ನು ಪರಿಶೋಧಿಸುವುದು ಸ್ಪರ್ಧೆಯ ಉದ್ದೇಶವಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಶ್ರೀ ಮನೋಜ್ ಜೋಷಿ, ಒಂದು ಕಡೆ ಅಟಿಕೆಗಳಿಗೆ ಹೆಚ್ಚಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಸೃಜನಶೀಲ ಮನಸ್ಸುಗಳು ನಾವಿನ್ಯತೆಯ ಪರಿಹಾರಗಳೊಂದಿಗೆ ಆಗಮಿಸಬೇಕು ಮತ್ತು ಮತ್ತೊಂದೆಡೆ ಘನತ್ಯಾಜ್ಯದಿಂದಾಗುವ ಪರಿಣಾಮಗಳನ್ನು ಪರಿಹರಿಸುವ ಉದ್ದೇಶ ಹೊಂದಿರಬೇಕು ಎಂದರು.

ಅಟಿಕೆ ಕೈಗಾರಿಕಾ ವಲಯದಲ್ಲಿನ ಪರಿಣಾಮಗಳು, ಅರಿವಿನ ವಿಜ್ಞಾನ, ಅಟಿಕೆ ಕ್ರೀಡೆಯ ವಿನ್ಯಾಸ ಕುರಿತು ಐಐಟಿ ಗಾಂಧಿನಗರದ ಪ್ರೊಫೆಸರ್ ಉದಯ್ ಅಥ್ವಂಕರ್, ಪ್ರೊಫೆಸರ್ ಮನೀಶ್ ಜೈನ್ ಹಾಗೂ ಟಾಯ್ ಬ್ಯಾಂಕ್ ನ ಶ್ರೀಮತಿ ವಿದ್ಯುನ್ ಗೋಯಲ್ ಮಾತನಾಡಿದರು.

ಪ್ರೊಫೆಸರ್ ಉದಯ್ ಅಥ್ವಂಕರ್ [ನಿವೃತ್ತ ಪ್ರಧ್ಯಾಪಕರು ಮತ್ತು ಐಐಟಿ ಬಾಂಬೆಯ ಕೈಗಾರಿಕಾ ವಿನ್ಯಾಸ ಕೇಂದ್ರದ ಮುಖ್ಯಸ್ಥರು] ಆಟ ಆಡಿದರೆ ಮಕ್ಕಳ ಕಲಿಕಾ ಪ್ರಕ್ರಿಯೆ ಹೆಚ್ಚಾಗುತ್ತದೆ ಎಂದು ಒತ್ತಿ ಹೇಳಿದರು. ತಂತ್ರಜ್ಞಾನದ ಪ್ರಗತಿಯೊಂದಿಗೆ ಮಕ್ಕಳಿಗೆ ಕಲಿಸುವ ವಿಧಾನವನ್ನು ಬದಲಾಯಿಸುವ ಅಗತ್ಯದ ಕುರಿತಂತೆಯೂ ಅವರು ಮಾತನಾಡಿದರು.

ಪ್ರೊಫೆಸರ್ ಮನೀಶ್ ಜೈನ್, [ಐಐಟಿ ಗಾಂಧಿನಗರದ ಸೃಜನಶೀಲ ಕಲಿಕಾ ಕೇಂದ್ರದ ಸಮನ್ವಯಕಾರರು] ಮಾತನಾಡಿ, ಅಟಿಕೆಗಳು ಅಚ್ಚರಿಯ ಮೂಲವಾಗಿಯೇ ಉಳಿಯಬೇಕು ಹಾಗೂ ಕಲ್ಪನೆಯ ಪ್ರಯಾಣದಲ್ಲಿ ಮಕ್ಕಳಿಗೆ ಸಂತೋಷ ದೊರೆಯುವಂತೆ ಮಾಡಬೇಕು. ದೃಷ್ಟಾಂತದ ಉದಾಹರಣೆ ಮೂಲಕ ಮನೆಗಳಲ್ಲಿನ ತ್ಯಾಜ್ಯವನ್ನು ಅಟಿಕೆಗಳನ್ನಾಗಿ ಪರಿವರ್ತಿಸುವ ಕುರಿತ ವಿಜ್ಞಾನದ ಮೂಲ ತತ್ವಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದರು.

ಅಂಚಿನಲ್ಲಿರುವ ಸಮುದಾಯಗಳ ಮಕ್ಕಳ ಆಟ ಆಡುವ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಹಳೆಯ ಮತ್ತು ಬಿಸಾಡಿದ ಅಟಿಕೆಗಳನ್ನು ಮರುಬಳಕೆಗಾಗಿ ಮಾಡುತ್ತಿರುವ ತಮ್ಮ  ಕಾರ್ಯವೈಖರಿ ಬಗ್ಗೆ ಟಾಯ್ ಬ್ಯಾಂಕ್ ನ ಸಂಸ್ಥಾಪಕ ಶ್ರೀಮತಿ ವಿದ್ಯುನ್ ಗೋಯಲ್ ಬೆಳಕು ಚೆಲ್ಲಿದರು.  

ಎಂ.ಒ.ಎಚ್.ಯು.ಎ ನ ಜಂಟಿ ಕಾರ್ಯದರ್ಶಿ ಶ್ರೀಮತಿ ರೂಪ ಮಿಶ್ರಾ ಅವರು ಸ್ವಚ್ಛ ಟಾಯ್ಕಥಾನ್ ಚೌಕಟ್ಟಿನ ಬಗ್ಗೆ ಮಾತನಾಡಿ, ಈ ಉಪಕ್ರಮದಲ್ಲಿ ಒಳಗೊಳ್ಳುತ್ತಿರುವ ಸಮಗ್ರ ವಿಧಾನ ಮತ್ತು ಸ್ಪರ್ಧೆಯ ಮುಂದಿನ ಮಾರ್ಗದ ಬಗ್ಗೆ ಒತ್ತಿ ಹೇಳಿದರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗಾಗಿ ವಿಸ್ತೃತ ವಿಸ್ತೃತ ವಿಧಾನಗಳ ಬಗ್ಗೆ ಅವರು ಟೂಲ್ ಕಿಟ್ ಅನ್ನು ಪ್ರಸ್ತುತಪಡಿಸಿದರು.

ಗಾಂಧಿನಗರದ ಐಐಟಿಯ ಸೃಜನಶೀಲ ಕಲಿಕಾ ಕೇಂದ್ರ ಎಂ.ಒ.ಎಚ್.ಯು.ಎ ನ ಜ್ಞಾನ ವಲಯದ ಸಹಭಾಗಿಯಾಗಿದ್ದು, ಈ ಕೇಂದ್ರ ಬೋಧನೆ ಮತ್ತು ಸೃಜನಶೀಲತೆಯ ಅಂಶಗಳಿಗೆ  ಬೆಂಬಲ ನೀಡಲಿದೆ.

ಸ್ವಚ್ಛ ಟಾಯ್ಕಥಾನ್ ವ್ಯಕ್ತಿಗಳು ಮತ್ತು ಗುಂಪುಗಳಿಗೆ ರಾಷ್ಟ್ರೀಯ ಸ್ಪರ್ಧೆಯಾಗಿದೆ. ಇದು ಮೂರು ವಿಸ್ತೃತ ವಿಷಯಗಳನ್ನು ಒಳಗೊಂಡಿದೆ. [1] ಮನೆ, ಕೆಲಸದ ಸ್ಥಳ ಮತ್ತು ಸುತ್ತಮುತ್ತಲಿನ ತ್ಯಾಜ್ಯದಿಂದ ವಿನ್ಯಾಸ ಮತ್ತು ಆಟಿಕೆಗಳ ಆರಂಭಿಕ ಮೂಲ ಮಾದರಿಯ ಕಲ್ಪನೆಗಳನ್ನು ಹುಡುಕುವ ಮೋಜು ಮತ್ತು ಕಲಿಕೆಯನ್ನು ಒಳಗೊಂಡಿದೆ. [2] ಕ್ರೀಡೆಗಳ ಮಾದರಿಗಳು ಮತ್ತು ವಿನ್ಯಾಸಗಳ ಆಲೋಚನೆಗಳು ಮತ್ತು ಉದ್ಯಾನವನಗಳು/ಮುಕ್ತ ಪ್ರದೇಶಗಳಲ್ಲಿ ಬಳಕೆ ಮತ್ತು ಅನುಭವಿಸುವ ಆಲೋಚನೆಗಳನ್ನು ಹೊಂದಿದೆ ಮತ್ತು [3] ಅಟಿಕೆ ಕೈಗಾರಿಕಾ ವಲಯಕ್ಕೆ ಹೊಸ ಮತ್ತು ಹಳೆಯ ಆಲೋಚನೆಗಳು/ಪರಿಹಾರಗಳು/ಕಾರ್ಯವಿಧಾನದ ಮಾದರಿಗಳನ್ನು ನೀಡುವ ಉದ್ದೇಶ ಹೊಂದಲಾಗಿದೆ. ಈ ಸ್ಪರ್ಧೆಯು ತ್ಯಾಜ್ಯ ಮತ್ತು ಮರುಬಳಕೆ ವಸ್ತುಗಳನ್ನು ಬಳಸಿ ಅಟಿಕೆಗಳು ಆಟ ಆಡುವ ವಲಯಗಳ ವಿನ್ಯಾಸಗಳು, ಪರಿಸರ ಸ್ನೇಹಿ ಅಟಿಕೆಗಳು ಮತ್ತು ಪ್ಯಾಕೇಜಿಂಗ್ ನ ಮೂಲ ಮಾದರಿಗಳು, ನವೀನ ಆಲೋಚನೆಗಳ ಮೂಲಕ ಅಟಿಕೆ ಉದ್ಯಮ ಮರು ಚಿಂತನೆಗೊಳಪಡುವಂತೆ ಮಾಡಬೇಕಾಗಿದೆ.

ಅರ್ಜಿದಾರರು https://innovateindia.mygov.in/swachh-toycathon/  ಈ ಜಾಲತಾಣದ ಮೂಲಕ 2022 ರ ಸೆಪ್ಟೆಂಬರ್ 26 ರಿಂದ 2022 ರ ನವೆಂಬರ್ 11 ರ ವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿದಾರರು ಈ ಮೂರು ವಿಷಯಗಳಲ್ಲಿ [1] ಮೋಜು ಮತ್ತು ಕಲಿಕೆ, [11] ಬಳಕೆ ಮತ್ತು ಅನುಭವಿಸುವ ಹಾಗೂ [111] ಹಳೆಯದರಿಂದ ಹೊಸತು. ಈ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

2022 ರ ನವೆಂಬರ್ 30 ರ ವೇಳೆಗೆ ಅರ್ಜಿಗಳನ್ನು ಪರಿಶೀಲಿಸಿ ಅರ್ಹರನ್ನು ಪಟ್ಟಿ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು 2022 ರ ಡಿಸೆಂಬರ್ ವೇಳೆಗೆ ಮೌಲ್ಯ ಮಾಪನ ಪೂರ್ಣಗೊಳ್ಳಲಿದೆ.   

ಮೌಲ್ಯ ಮಾಪನ ಮಾನದಂಡವನ್ನು ಆಧರಿಸಿರುತ್ತದೆ [1] ಆಲೋಚನೆಗಳಲ್ಲಿ ಬದಲಾವಣೆ [11] ವಿನ್ಯಾಸ. [111] ಸುರಕ್ಷತೆ, [iv] ತ್ಯಾಜ್ಯ ವಸ್ತುಗಳ ಬಳಕೆ, [v] ಅಳೆಯುವ ಮತ್ತು ಪ್ರತಿರೂಪತೆ, [vi] ಭವಿಷ್ಯದ ತ್ಯಾಜ್ಯ ಮತ್ತು ಹವಾಮಾನ ಹಾಗೂ ಸಾಮಾಜಿಕ ಪರಿಣಾಮಗಳು.

ಅಗ್ರಶ್ರೇಣಿಯ ಮೊದಲ ಮೂವರಿಗೆ ಪ್ರತಿಯೊಂದು ವಿಭಾಗದಲ್ಲಿ ವಿಷಯಾಧಾರಿತವಾಗಿ ರಾಷ್ಟ್ರಮಟ್ಟದಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ ಮತ್ತು ಐಐಟಿ ಗಾಂಧಿನಗರದಲ್ಲಿ ಸೃಜನಶೀಲ ಕಲಿಕಾ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ಗೆಲುವು ಸಾಧಿಸುವ ನವೋದ್ಯಮಗಳು/ವ್ಯಕ್ತಿಗಳಿಗೆ ಐಐಟಿ ಕಾನ್ಪುರದಲ್ಲಿ ಇನ್ಕ್ಯೂಬೇಶನ್ ಗೆ ವ್ಯವಸ್ಥೆ ಮಾಡುವ ಜೊತೆಗೆ ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಪ್ರಶಸ್ತಿ ಪಡೆದ ಆಟದ ವಿನ್ಯಾಸಗಳನ್ನು ಜಾರಿಗೊಳಿಸಲು ಮತ್ತು ಪ್ರಶಸ್ತಿ ಪಡೆದ ವಿನ್ಯಾಸಗಳನ್ನು ಉತ್ತೇಜಿಸಲು ಮತ್ತು ಅಟಿಕೆ ಉದ್ಯಮದೊಂದಿಗೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.  


 

ಹೆಚ್ಚಿನ ವಿವರಗಳಿಗಾಗಿ ಭೇಟಿ ಕೊಡಿ: https://innovateindia.mygov.in/swachh-toycathon/

*******
 


(Release ID: 1863651) Visitor Counter : 129