ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಪೌಷ್ಟಿಕ ಅಭಿಯಾನ 2022: ದೇಶಾದ್ಯಂತ ಟಿ 3 ಶಿಬಿರಗಳು (ಪರೀಕ್ಷೆ, ಚಿಕಿತ್ಸೆ, ಮಾತುಕತೆ), ಐಎಫ್ಎ ವಿತರಣೆ, ವಿಚಾರಗೋಷ್ಠಿಗಳು, ರಕ್ತಹೀನತೆಗಾಗಿ ಆಯುಷ್, ವೆಬಿನಾರ್ ಗಳು, ರಸಪ್ರಶ್ನೆಗಳಂತಹ ವಿವಿಧ ಚಟುವಟಿಕೆಗಳ ಆಯೋಜನೆ


ಅಡುಗೆ ಸ್ಪರ್ಧೆ, ಸಾಂಪ್ರದಾಯಿಕ ಆಹಾರ ಪದ್ಧತಿಗಳು ಮತ್ತು ಜಾಗೃತಿ ಜಾಥಾಗಳನ್ನು ಸಹ ಆಯೋಜಿಸಲಾಗುತ್ತಿದೆ

ಪೌಷ್ಟಿಕ ಪಖ್ವಾಡಾ, 2022 ರ ವೇಳೆ ಒಟ್ಟು 12.77 ಲಕ್ಷ ಚಟುವಟಿಕೆಗಳನ್ನು ನಡೆಸಲಾಗಿದೆ; ರಕ್ತಹೀನತೆ ತಡೆಗಟ್ಟುವಿಕೆಯ 5,03,411 ಚಟುವಟಿಕೆಗಳು, ಗರ್ಭಧಾರಣೆಯ ಸಮಯದಲ್ಲಿ ರಕ್ತಹೀನತೆಗೆ ಆಯುಷ್ ಪರಿಹಾರ ಕುರಿತು 7,18,149 ಚಟುವಟಿಕೆಗಳು ಮತ್ತು ರಕ್ತಹೀನತೆಯನ್ನು ಪರಿಹರಿಸಲು ಆಯುಷ್ ಪಾತ್ರದ ಬಗ್ಗೆ 56,168 ವೆಬಿನಾರ್ ಆಧಾರಿತ ಚಟುವಟಿಕೆಗಳು ನಡೆದಿವೆ

ರಕ್ತಹೀನತೆಯನ್ನು ನಿಭಾಯಿಸಲು ತನ್ನ ಸಮಗ್ರ ಕಾರ್ಯತಂತ್ರದ ಭಾಗವಾಗಿ ಸರ್ಕಾರವು ಅನೇಕ ರಾಜ್ಯಗಳಲ್ಲಿನ ಯೋಜನೆಗಳು / ಕಾರ್ಯಕ್ರಮಗಳಿಗಾಗಿ ಕೇಂದ್ರ ಸಚಿವಾಲಯಗಳಿಂದ ಪ್ರಧಾನ ಆಹಾರ ಬಲವರ್ಧನೆ ಮಾಡುವುದನ್ನೂ ಒಳಗೊಂಡಿದೆ

Posted On: 27 SEP 2022 1:06PM by PIB Bengaluru

ಪ್ರಸ್ತುತ ನಡೆಯುತ್ತಿರುವ ಪೌಷ್ಟಿಕ ಮಾಸ 2022ರ ವೇಳೆ, ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಾಗಿ, ಹದಿಹರೆಯದ ಬಾಲಕಿಯರು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು, ಟಿ 3 ಶಿಬಿರಗಳು (ಪರೀಕ್ಷೆ, ಚಿಕಿತ್ಸೆ, ಮಾತುಕತೆ), ಐಎಫ್ಎ ವಿತರಣೆ, ವಿಚಾರಸಂಕಿರಣಗಳು, ರಕ್ತಹೀನತೆಗಾಗಿ ಆಯುಷ್ ಪರಿಹಾರ, ವೆಬಿನಾರ್ ಗಳು, ರಸಪ್ರಶ್ನೆ ಮತ್ತು ಅಡುಗೆ ಸ್ಪರ್ಧೆ, ಸಾಂಪ್ರದಾಯಿಕ ಆಹಾರ ರೂಢಿಗಳು, ಜಾಗೃತಿ ಜಾಥಾಗಳಂತಹ ವಿವಿಧ ಚಟುವಟಿಕೆಗಳನ್ನು ದೇಶಾದ್ಯಂತ ನಡೆಸಲಾಗುತ್ತಿದೆ.

ರಕ್ತಹೀನತೆಯು ಕೆಂಪು ರಕ್ತ ಕಣಗಳ (ಆರ್.ಬಿ.ಸಿಗಳು) ಸಂಖ್ಯೆ ಮತ್ತು ತದನಂತರ ಅವುಗಳ ಆಮ್ಲಜನಕವನ್ನು ಸಾಗಿಸುವ ಸಾಮರ್ಥ್ಯವು ದೇಹದ ದೈಹಿಕ ಅವಶ್ಯಕತೆಗಳನ್ನು ಪೂರೈಸಲು ಸಾಕಾಗದ ಸ್ಥಿತಿಯಾಗಿರುತ್ತದೆ.

ಕಬ್ಬಿಣಾಂಶದ ಕೊರತೆ ಮತ್ತು ನಂತರದ ಕಬ್ಬಿಣಾಂಶದ ಕೊರತೆಯಿಂದಾಗುವ ರಕ್ತಹೀನತೆಯ ಬೆಳವಣಿಗೆಯಲ್ಲಿ ಆಹಾರ ಪದ್ಧತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಕಬ್ಬಿಣಾಂಶದ ಕೊರತೆಯ ರಕ್ತಹೀನತೆಯು ಅತ್ಯಂತ ಸಾಮಾನ್ಯ ರೂಪವಾಗಿದೆ ಮತ್ತು ಆಹಾರ ಬದಲಾವಣೆಗಳ ಮೂಲಕ ಚಿಕಿತ್ಸೆ ನೀಡಲು ತುಲನಾತ್ಮಕವಾಗಿ ಸುಲಭವಾಗಿದೆ. ಆಹಾರದ ಮಾರ್ಪಾಡು / ಬಲವರ್ಧನೆ / ವೈವಿಧ್ಯೀಕರಣ ಮತ್ತು ನೈರ್ಮಲ್ಯ ಪರಿಸರವನ್ನು ಒದಗಿಸುವ ಮೂಲಕ ಕಬ್ಬಿಣಾಂಶದ ಸೇವನೆಯನ್ನು ಹೆಚ್ಚಿಸಲು ಆಹಾರ ಆಧಾರಿತ ವಿಧಾನಗಳು ಸಾಮಾನ್ಯ ಜನಸಂಖ್ಯೆಯಲ್ಲಿ ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತಡೆಗಟ್ಟುವ ಪ್ರಮುಖ ಸುಸ್ಥಿರ ಕಾರ್ಯತಂತ್ರಗಳಾಗಿವೆ.

ರಕ್ತಹೀನತೆಯನ್ನು ನಿಭಾಯಿಸುವ ತನ್ನ ಸಮಗ್ರ ಕಾರ್ಯತಂತ್ರದ ಭಾಗವಾಗಿ, ಭಾರತ ಸರ್ಕಾರವು ಅನೇಕ ರಾಜ್ಯಗಳಲ್ಲಿನ ಯೋಜನೆಗಳು / ಕಾರ್ಯಕ್ರಮಗಳಿಗಾಗಿ ಕೇಂದ್ರ ಸಚಿವಾಲಯಗಳಿಂದ ಪ್ರಧಾನ ಆಹಾರ ಬಲವರ್ಧನೆ ಮಾಡುವುದನ್ನೂ ಒಳಗೊಂಡಿದೆ.

ಜನ ಆಂದೋಲನ ಅಡಿಯಲ್ಲಿ ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆ ಸಂವಹನ (ಎಸ್.ಬಿ.ಸಿಸಿ) ಕಾರ್ಯತಂತ್ರದ ಭಾಗವಾಗಿ, ಸುಮಾರು 6,278 ರಕ್ತಹೀನತೆ ಶಿಬಿರಗಳು, ನಗರ ಕೊಳೆಗೇರಿಗಳಲ್ಲಿ 1,853 ಜನ ಸಂಪರ್ಕ ಚಟುವಟಿಕೆಗಳು, ವಿದ್ಯಾರ್ಥಿಗಳಿಗೆ 855 ರಸಪ್ರಶ್ನೆ ಸ್ಪರ್ಧೆಗಳು ಮತ್ತು 2022 ರ ಮಾರ್ಚ್ ನಲ್ಲಿ ಪೌಷ್ಟಿಕ ಪಖ್ವಾಡಾ, 2022ರ ವೇಳೆ ರಕ್ತಹೀನತೆಯ ಬಗ್ಗೆ 1,63,436 ಚಟುವಟಿಕೆಗಳನ್ನು ನಡೆಸಲಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆಯುಷ್ ಸಚಿವಾಲಯದ ಸಹಯೋಗದೊಂದಿಗೆ 2022ರ ಪೌಷ್ಟಿಕ ಪಖ್ವಾಡಾ ಸಮಯದಲ್ಲಿ ಒಟ್ಟು 12.77 ಲಕ್ಷ ಚಟುವಟಿಕೆಗಳನ್ನು ನಡೆಸಿತು, ಇದರಲ್ಲಿ ರಕ್ತಹೀನತೆ ತಡೆಗಟ್ಟುವಿಕೆಯ 5,03,411 ಚಟುವಟಿಕೆಗಳು, ಗರ್ಭಧಾರಣೆಯ ಸಮಯದಲ್ಲಿ ರಕ್ತಹೀನತೆಗಾಗಿ ಆಯುಷ್ ಪರಿಹಾರ ಕುರಿತ 7,18,149 ಚಟುವಟಿಕೆಗಳು ಮತ್ತು ರಕ್ತಹೀನತೆಯನ್ನು ಪರಿಹರಿಸಲು ಆಯುಷ್ ಪಾತ್ರದ ಬಗ್ಗೆ ನಡೆದ 56,168 ವೆಬಿನಾರ್ ಆಧಾರಿತ ಚಟುವಟಿಕೆಗಳು ಸೇರಿವೆ.

ಇದಲ್ಲದೆ, ಪೌಷ್ಟಿಕ ಮಾಸ 2021 ರ ವೇಳೆ, ಗರ್ಭಧಾರಣೆಯ ಸಮಯದಲ್ಲಿ ರಕ್ತಹೀನತೆಗಾಗಿ ಆಯುಷ್ ಪರಿಹಾರದ ಬಗ್ಗೆ 27,55,905 ಚಟುವಟಿಕೆಗಳು ಮತ್ತು 63,013 ರಕ್ತಹೀನತೆ ಶಿಬಿರ ಆಧಾರಿತ ಚಟುವಟಿಕೆಗಳನ್ನು ನಡೆಸಲಾಗಿತ್ತು.

ಪೌಷ್ಟಿಕ ಅಭಿಯಾನವು ಅಪೌಷ್ಟಿಕತೆಯ ಜೀವನ ಚಕ್ರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಒಂದು ಕಾರ್ಯಕ್ರಮಾತ್ಮಕ ವಿಧಾನವಾಗಿದೆ. ರಕ್ತಹೀನತೆಯನ್ನು ತಗ್ಗಿಸುವುದು ಪೌಷ್ಟಿಕ ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ, ಪ್ರಮುಖ ಸಚಿವಾಲಯಗಳು / ಇಲಾಖೆಗಳು, ಮುಖ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಎಚ್ ಮತ್ತು ಎಫ್.ಡಬ್ಲ್ಯೂ) ನೊಂದಿಗೆ ಸಮನ್ವಯ ಸಾಧಿಸುತ್ತದೆ. ವಿವಿಧ ವ್ಯೂಹಾತ್ಮಕ ಕ್ರಮಗಳ ಮೂಲಕ ಅಸ್ತಿತ್ವದಲ್ಲಿರುವ ಆರೋಗ್ಯ ವೇದಿಕೆಗಳಲ್ಲಿ ಪೌಷ್ಟಿಕಾಂಶ ಮಧ್ಯಸ್ಥಿಕೆಗಳ ಏಕೀಕರಣವನ್ನು ಸುಧಾರಿಸಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ.

ಪೌಷ್ಟಿಕ ಅಭಿಯಾನದ ಅಡಿಯಲ್ಲಿ, ಸಮುದಾಯ ತೊಡಗಿಸಿಕೊಳ್ಳುವಿಕೆ, ಫಲಾನುಭವಿಗಳ ಸಬಲೀಕರಣ ಮತ್ತು ಉತ್ತಮ ಪೌಷ್ಟಿಕಾಂಶದ ಕಡೆಗೆ ಸ್ವಭಾವದ ಬದಲಾವಣೆಗಾಗಿ ಪ್ರಕ್ರಿಯೆಗಳನ್ನು ಬಲಪಡಿಸಲು ಪ್ರಯತ್ನಗಳನ್ನು ಸಹ ಮಾಡಲಾಗುತ್ತಿದ್ದು, ಇದಕ್ಕಾಗಿ ಅಭಿಯಾನವು ಅಂಗನವಾಡಿ ಕೇಂದ್ರಗಳಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು (ಸಿಬಿಇ) ಆಯೋಜಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಸಮುದಾಯ ಆಧಾರಿತ ಕಾರ್ಯಕ್ರಮಗಳ ಅಡಿಯಲ್ಲಿ, ಪೌಷ್ಟಿಕಾಂಶದ ಸುಧಾರಣೆ ಮತ್ತು ಅನಾರೋಗ್ಯ ಕಡಿಮೆ ಮಾಡಲು, ರಕ್ತಹೀನತೆಯನ್ನು ತಡೆಗಟ್ಟಲು, ಪೌಷ್ಟಿಕ ಆಹಾರದ ಪ್ರಾಮುಖ್ಯತೆ, ಆಹಾರ ವೈವಿಧ್ಯತೆ ಇತ್ಯಾದಿಗಳಿಗಾಗಿ ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶಗಳನ್ನು ಸಾರಲಾಗುತ್ತಿದೆ. ಕಬ್ಬಿಣಾಂಶದ ಕೊರತೆಯನ್ನು ತಗ್ಗಿಸಲು ದೇಶೀಯವಾದ ಉತ್ತಮ ರೂಢಿಗಳಾದ ಅಡುಗೆಗೆ ಕಬ್ಬಿಣದ ಪಾತ್ರೆಗಳನ್ನು ಬಳಸುವುದು, ಆಯುರ್ವೇದ ಉತ್ಪನ್ನಗಳು ಮತ್ತು ಸೂತ್ರೀಕರಣಗಳನ್ನು ಪೂರಕ ಪೌಷ್ಟಿಕಾಂಶದೊಂದಿಗೆ ಸಂಯೋಜಿಸುವುದು ಮುಂತಾದವುಗಳನ್ನು ಅನೇಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅಭಿವೃದ್ಧಿಪಡಿಸಿವೆ.


              ಪೌಷ್ಟಿಕ ಮಾಸ 2022 ರ ವೇಳೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರಕ್ತಹೀನತೆ ಕುರಿತಂತೆ ನಡೆಸಿದ ಚಟುವಟಿಕೆಗಳ ಕಿರುನೋಟ

https://static.pib.gov.in/WriteReadData/userfiles/image/image001IJQ2.jpg

https://static.pib.gov.in/WriteReadData/userfiles/image/image002JXL5.jpg

https://static.pib.gov.in/WriteReadData/userfiles/image/image003TI1H.jpg

https://static.pib.gov.in/WriteReadData/userfiles/image/image0043OI6.jpg

https://static.pib.gov.in/WriteReadData/userfiles/image/image005A7B2.jpg

https://static.pib.gov.in/WriteReadData/userfiles/image/image006VB8D.jpg

********

 



(Release ID: 1862741) Visitor Counter : 244