ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸ್ಸಾಮಿ ನಿಘಂಟಿನ ‘ಹೆಮ್ಕೋಷ್‌’ ನ ಬ್ರೈಲ್‌ ಆವೃತ್ತಿಯ ಪ್ರತಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿ

प्रविष्टि तिथि: 21 SEP 2022 7:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಸ್ಸಾಮಿ ನಿಘಂಟಿನ ‘ಹೆಮ್ಕೋಷ್‌’ ನ ಬ್ರೈಲ್‌ ಆವೃತ್ತಿಯ ಪ್ರತಿಯನ್ನು ಶ್ರೀ ಜಯಂತ ಬರುವಾ ಅವರಿಂದ ಸ್ವೀಕರಿಸಿದ್ದಾರೆ. 19 ನೇ ಶತಮಾನದ ಹಿಂದಿನ ಆರಂಭಿಕ ಅಸ್ಸಾಮಿ ನಿಘಂಟುಗಳಲ್ಲಿ ಹೆಮ್ಕೋಷ್‌ ಕೂಡ ಒಂದಾಗಿದೆ. ಬ್ರೈಲ್‌ ಲಿಪಿಯ ಆವೃತ್ತಿಯನ್ನು ಪ್ರಕಟಿಸಲು ಕಾರಣವಾದ ಶ್ರೀ ಜಯಂತ ಬರುವಾ ಮತ್ತು ಅವರ ತಂಡವನ್ನು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ,

‘‘ 19 ನೇ ಶತಮಾನದ ಆರಂಭಿಕ ಅಸ್ಸಾಮಿ ನಿಘಂಟುಗಳಲ್ಲಿಒಂದಾದ ‘ಹೆಮ್ಕೋಷ್‌’ ನ ಬ್ರೈಲ್‌ ಆವೃತ್ತಿಯ ಪ್ರತಿಯನ್ನು ಪಡೆದಿರುವುದಕ್ಕೆ ಸಂತೋಷವಾಗಿದೆ. ಬ್ರೈಲ್‌ ಲಿಪಿಯ ಆವೃತ್ತಿಯನ್ನು ಪ್ರಕಟಿಸಲು ಕಾರಣವಾದ ಶ್ರೀ ಜಯಂತ ಬರುವಾ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ,’’ ಎಂದು ಹೇಳಿದ್ದಾರೆ.

******


(रिलीज़ आईडी: 1861349) आगंतुक पटल : 164
इस विज्ञप्ति को इन भाषाओं में पढ़ें: Tamil , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Telugu , Malayalam