ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ಆರ್ಥಿಕತೆ, ಸಮಾಜ ಮತ್ತು ಪರಿಸರವನ್ನು ಒಳಗೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಧಾನಮಂತ್ರಿ ಅವರು ತಮ್ಮ ಜನ್ಮದಿನವನ್ನು ಕಳೆದರು
ಹಾರೈಕೆಗಳು ಮತ್ತು ವಾತ್ಸಲ್ಯಕ್ಕಾಗಿ ಎಲ್ಲರಿಗೂ ಧನ್ಯವಾದಗಳು
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯರ ಶುಭಾಶಯಗಳಿಗಾಗಿ ಧನ್ಯವಾದಗಳು
Posted On:
17 SEP 2022 9:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವನ್ನು ಆರ್ಥಿಕತೆ, ಸಮಾಜ ಮತ್ತು ಪರಿಸರವನ್ನು ಒಳಗೊಳ್ಳುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರೊಂದಿಗೆ ಕಳೆದರು. ಅವರು ತಮ್ಮ ಹಾರೈಕೆಗಳು ಮತ್ತು ವಾತ್ಸಲ್ಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ:
" ನಾನು ಪಡೆದ ವಾತ್ಸಲ್ಯದಿಂದ ವಿನಮ್ರನಾಗಿದ್ದೇನೆ. ನನ್ನ ಜನ್ಮದಿನದಂದು ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಆಶಯಗಳು ನನಗೆ ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿಯನ್ನು ನೀಡುತ್ತವೆ. ಈ ದಿನವನ್ನು ವಿವಿಧ ಸಮುದಾಯ ಸೇವಾ ಉಪಕ್ರಮಗಳಿಗೆ ಮುಡಿಪಾಗಿಟ್ಟ ಎಲ್ಲಾ ಜನರನ್ನು ನಾನು ಶ್ಲಾಘಿಸುತ್ತೇನೆ. ಅವರ ಸಂಕಲ್ಪ ಶ್ಲಾಘನೀಯ,'' ಎಂದರು.
" ನಮ್ಮ ಆರ್ಥಿಕತೆ, ಸಮಾಜ ಮತ್ತು ಪರಿಸರವನ್ನು ಒಳಗೊಳ್ಳುವ ಕಾರ್ಯಕ್ರಮಗಳಲ್ಲಿ ನಾನು ದಿನವನ್ನು ಕಳೆದಿದ್ದೇನೆ. ನಾವು ಈ ಕ್ಷೇತ್ರಗಳಲ್ಲಿ ಸಾಮೂಹಿಕವಾಗಿ ಕೆಲಸ ಮಾಡಿದಾಗ, ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿಯ ನಮ್ಮ ಗುರಿಯನ್ನು ನಾವು ಪೂರೈಸುತ್ತೇವೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಮುಂದಿನ ದಿನಗಳಲ್ಲಿ ನಾವು ಕಠಿಣವಾಗಿ ಮತ್ತೂ ಕಠಿಣವಾಗಿ ಕೆಲಸ ಮಾಡುವುದನ್ನು ಮುಂದುವರಿಸೋಣ," ಎಂದು ಅವರು ಹೇಳಿದರು.
ಅನೇಕ ಅಂತಾರಾಷ್ಟ್ರೀಯ ನಾಯಕರು ಪ್ರಧಾನಮಂತ್ರಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
ಕಾಮನ್ ವೆಲ್ತ್ ಆಫ್ ಡೊಮಿನಿಕಾದ ಪ್ರಧಾನಮಂತ್ರಿ ರೂಸ್ ವೆಲ್ಟ್ ಸ್ಕೆರ್ರಿಟ್ ಅವರಿಗೆ ಪ್ರಧಾನಮಂತ್ರಿ ಅವರು ಪ್ರತಿಕ್ರಿಯಿಸಿದರು.
"ಪ್ರಧಾನಮಂತ್ರಿ @SkerritR ಅವರಿಗೆ ಜನ್ಮದಿನದ ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದಗಳು." ಎಂದಿದ್ದಾರೆ.
ನೇಪಾಳದ ಪ್ರಧಾನಮಂತ್ರಿ ಘನತೆವೆತ್ತ ಶೇರ್ ಬಹದ್ದೂರ್ ದೇವುಬಾ ಅವರಿಗೆ ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. " ಪ್ರಧಾನಮಂತ್ರಿಯವರೇ @SherBDeuba
ಜನ್ಮದಿನದ ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ಇದರಿಂದ ನಾನು ಗಾಢವಾಗಿ ಭಾವಪರವಶನಾಗಿದ್ದೇನೆ." ಎಂದು ಹೇಳಿದ್ದಾರೆ.
ಮಾರಿಷಸ್ ಪ್ರಧಾನಮಂತ್ರಿ ಗೌರವಾನ್ವಿತ ಪ್ರವಿಂದ್ ಕುಮಾರ್ ಜುಗ್ನೌತ್ ಅವರೂ ಸಹ ಪ್ರಧಾನಮಂತ್ರಿ ಅವರಿಗೆ ಶುಭ ಕೋರಿದರು ಮತ್ತು ಶ್ರೀ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
" ನನ್ನ ಪ್ರೀತಿಯ ಸ್ನೇಹಿತ ಪ್ರಧಾನಿ @KumarJugnauth ಶುಭಾಶಯಗಳಿಗಾಗಿ ಧನ್ಯವಾದಗಳು.
ಭೂತಾನ್ ಪ್ರಧಾನಮಂತ್ರಿಯವರ ಆಶಯಗಳಿಗೆ ಪ್ರಧಾನಮಂತ್ರಿಯವರು ಉತ್ತರಿಸಿದರು.
"ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ @PMBhutan ಧನ್ಯವಾದಗಳು. ಭೂತಾನ್ ನಲ್ಲಿರುವ ನನ್ನ ಸ್ನೇಹಿತರಿಂದ ನಾನು ಯಾವಾಗಲೂ ಪಡೆದ ಅಪಾರ ಪ್ರೀತಿ ಮತ್ತು ಗೌರವವನ್ನು ನಾನು ನಿಜವಾಗಿಯೂ ಗೌರವಿಸುತ್ತೇನೆ,'' ಎಂದಿದ್ದಾರೆ.
ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಗಣ್ಯರಿಗೂ ಅವರ ಶುಭಾಶಯಗಳಿಗಾಗಿ ಪ್ರತಿಕ್ರಿಯಿಸಿ ಧನ್ಯವಾದ ಅರ್ಪಿಸಿದರು.
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಶುಭಾಶಯಗಳಿಗೆ ಪ್ರಧಾನಮಂತ್ರಿ ಅವರು ಧನ್ಯವಾದ ಸಲ್ಲಿಸಿದರು.
"ಗೌರವಾನ್ವಿತ ರಾಷ್ಟ್ರಪತಿಯವರೇ, ಶುಭ ಹಾರೈಕೆಗಳಿಗಾಗಿ ನಿಮಗೆ ತುಂಬಾ ಧನ್ಯವಾದಗಳು. @rashtrapatibhvn" ಎಂದಿದ್ದಾರೆ.
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರಿಗೂ ಪ್ರಧಾನಮಂತ್ರಿ ಅವರು ಪ್ರತಿಕ್ರಿಯಿಸಿದ್ದಾರೆ. " ಉಪರಾಷ್ಟ್ರಪತಿ ಜಗದೀಪ್ ಧನಕರ್ ಜೀ ಅವರ ಶುಭಾಶಯಗಳು ಮತ್ತು ದಯಾಪರ ಮಾತುಗಳಿಗಾಗಿ ಅವರಿಗೆ ಧನ್ಯವಾದಗಳು. @VPSecretariat" ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರೂ ಸಹ ಪ್ರಧಾನಮಂತ್ರಿಯವರಿಗೆ ಶುಭ ಕೋರಿದರು. ಇದಕ್ಕೆ ಪ್ರಧಾನಮಂತ್ರಿಯವರು ಪ್ರತಿಕ್ರಿಯಿಸಿ, "ಗೌರವಾನ್ವಿತ @ramnathkovind ಜೀ, ನನ್ನ ಹೃದಯಾಂತರಾಳದಿಂದ ಧನ್ಯವಾದಗಳು," ಎಂದು ಹೇಳಿದ್ದಾರೆ.
ಮಾಜಿ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರ ಶುಭಾಶಯಗಳಿಗೆ ಪ್ರಧಾನಮಂತ್ರಿ ಅವರು ಪ್ರತಿಕ್ರಿಯಿಸಿದರು. "ವೆಂಕಯ್ಯ ಗಾರು, ನಿಮ್ಮ ಹಾರೈಕೆ ಮನಮುಟ್ಟಿದೆ. @MVenkaiahNaidu" ಎಂದಿದ್ದಾರೆ.
*****
(Release ID: 1860447)
Visitor Counter : 112
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam