ಸಂಪುಟ

ಪ್ರಧಾನ ಮಂತ್ರಿ ಗತಿ ಶಕ್ತಿ ಚೌಕಟ್ಟನ್ನು (ಸರಕು ಸಂಬಂಧಿತ ಚಟುವಟಿಕೆಗಳು, ಸಾರ್ವಜನಿಕ ಸೌಲಭ್ಯಗಳು ಮತ್ತು ರೈಲ್ವೆಯ ವಿಶೇಷ ಬಳಕೆ) ಅನುಷ್ಠಾನಗೊಳಿಸಲು ರೈಲ್ವೆ ಭೂಮಿಯನ್ನು ದೀರ್ಘಾವಧಿಗೆ ಗುತ್ತಿಗೆ ನೀಡುವ ನೀತಿಗೆ ಸಂಪುಟದ ಅನುಮೋದನೆ


ಇದರಿಂದ ರೈಲ್ವೆಗೆ ಹೆಚ್ಚಿನ ಆದಾಯ ಮತ್ತು ಸುಮಾರು 1.2 ಲಕ್ಷ ಉದ್ಯೋಗಗಳ ಉದ್ಯೋಗ ಸೃಷ್ಟಿಯ ಸಾಮರ್ಥ್ಯ

300 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು

Posted On: 07 SEP 2022 3:58PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ಗತಿ ಶಕ್ತಿ ಚೌಕಟ್ಟನ್ನು (ಸರಕು ಸಂಬಂಧಿತ ಚಟುವಟಿಕೆಗಳು, ಸಾರ್ವಜನಿಕ ಸೌಲಭ್ಯಗಳು ಮತ್ತು ರೈಲ್ವೆಯ ವಿಶೇಷ ಬಳಕೆ) ಅನುಷ್ಠಾನಗೊಳಿಸಲು ರೈಲ್ವೆಯ ಭೂ ನೀತಿಯನ್ನು ಪರಿಷ್ಕರಿಸುವ ರೈಲ್ವೆ ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಪರಿಣಾಮ: 

i.ಇದು ರೈಲ್ವೆಯ ಸರಕು ಸಾಗಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಸರಕು ಸಾಗಣೆಯಲ್ಲಿ ರೈಲ್ವೇಯ ಮಾದರಿ ಪಾಲನ್ನು ಹೆಚ್ಚಿಸುತ್ತದೆ ಮತ್ತು ಉದ್ಯಮದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ. 
ii.ಇದರಿಂದ ರೈಲ್ವೆಗೆ ಹೆಚ್ಚಿನ ಆದಾಯ ಬರಲಿದೆ. 
iii.ಇದು ಪಿಎಂ ಗತಿ ಶಕ್ತಿ ಕಾರ್ಯಕ್ರಮದಲ್ಲಿ ಹೇಳಿರುವಂತೆ ಸೌಲಭ್ಯಗಳಿಗೆ ಅನುಮೋದನೆಗಳನ್ನು ಸರಳಗೊಳಿಸುತ್ತದೆ. ಇದು ವಿದ್ಯುತ್, ಅನಿಲ, ನೀರು ಸರಬರಾಜು, ಟೆಲಿಕಾಂ ಕೇಬಲ್, ಒಳಚರಂಡಿ ವಿಲೇವಾರಿ, ಡ್ರೈನ್‌ಗಳು, ಆಪ್ಟಿಕಲ್ ಫೈಬರ್ ಕೇಬಲ್‌ಗಳು (ಒಎಫ್‌ಸಿ), ಪೈಪ್‌ಲೈನ್‌ಗಳು, ರಸ್ತೆಗಳು, ಫ್ಲೈಓವರ್‌ಗಳು, ಟರ್ಮಿನಲ್‌ಗಳು, ಪ್ರಾದೇಶಿಕ ರೈಲು ಸಾರಿಗೆ, ನಗರ ಸಾರಿಗೆ ಮುಂತಾದ ಸಾರ್ವಜನಿಕ ಉಪಯುಕ್ತತೆಗಳ ಅಭಿವೃದ್ಧಿಗೆ ಸಂಯೋಜಿತ ರೀತಿಯಲ್ಲಿ ಸಹಾಯ ಮಾಡುತ್ತದೆ. 
iv.ಈ ನೀತಿ ತಿದ್ದುಪಡಿಯು ಸುಮಾರು 1.2 ಲಕ್ಷ ಉದ್ಯೋಗಗಳ ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ಹೊಂದಿದೆ.


ಹಣಕಾಸಿನ ಪರಿಣಾಮಗಳು: 


ಯಾವುದೇ ಹೆಚ್ಚುವರಿ ವೆಚ್ಚಗಳಿರುವುದಿಲ್ಲ. ಭೂ ಗುತ್ತಿಗೆ ನೀತಿಯನ್ನು ಉದಾರಗೊಳಿಸುವುದರಿಂದ ಎಲ್ಲಾ ಪಾಲುದಾರರು / ಸೇವಾ ಪೂರೈಕೆದಾರರು / ನಿರ್ವಾಹಕರು ಹೆಚ್ಚಿನ ಸರಕು ಸಂಬಂಧಿತ ಸೌಲಭ್ಯಗಳನ್ನು ಸ್ಥಾಪಿಸಲು ಮತ್ತು ರೈಲ್ವೆಗೆ ಹೆಚ್ಚುವರಿ ಸರಕು ದಟ್ಟಣೆ ಮತ್ತು ಸರಕು ಸಾಗಣೆ ಆದಾಯದ ಉತ್ಪಾದನೆಯಲ್ಲಿ ಅವರ ಭಾಗವಹಿಸುವಿಕೆಯ ಮಾರ್ಗಗಳನ್ನು ಮುಕ್ತಗೊಳಿಸುತ್ತದೆ.


ಪ್ರಯೋಜನಗಳು: 


ಈ ನೀತಿ ತಿದ್ದುಪಡಿಯು ಸುಮಾರು 1.2 ಲಕ್ಷ ಉದ್ಯೋಗಗಳ ಉದ್ಯೋಗ ಸೃಷ್ಟಿ ಸಾಮರ್ಥ್ಯವನ್ನು ಸಕ್ರಿಯಗೊಳಿಸುತ್ತದೆ. 
 

ವಿವರಗಳು:

i.ಪರಿಷ್ಕೃತ ರೈಲ್ವೆ ಭೂ ನೀತಿಯು ಮೂಲಸೌಕರ್ಯಗಳ ಸಮಗ್ರ ಅಭಿವೃದ್ಧಿ ಮತ್ತು ಹೆಚ್ಚಿನ ಕಾರ್ಗೋ           ಟರ್ಮಿನಲ್‌ಗಳನ್ನು ಸಕ್ರಿಯಗೊಳಿಸುತ್ತದೆ. 
ii.ಇದು ಕಾರ್ಗೋ ಸಂಬಂಧಿತ ಚಟುವಟಿಕೆಗಳಿಗಾಗಿ ರೈಲ್ವೇ ಭೂಮಿಯನ್ನು 35 ವರ್ಷಗಳವರೆಗೆ ವಾರ್ಷಿಕ ಭೂಮಿಯ             ಮಾರುಕಟ್ಟೆ ಮೌಲ್ಯದ ಶೇ. 1.5 ದರದಲ್ಲಿ ದೀರ್ಘಾವಧಿಯ ಗುತ್ತಿಗೆಗೆ ಒದಗಿಸುತ್ತದೆ 
iii.ಕಾರ್ಗೋ ಟರ್ಮಿನಲ್‌ಗಳಿಗಾಗಿ ರೈಲ್ವೆ ಭೂಮಿಯನ್ನು ಬಳಸುವ ಅಸ್ತಿತ್ವದಲ್ಲಿರುವ ಘಟಕಗಳು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ನಂತರ ಹೊಸ ನೀತಿ ಆಡಳಿತಕ್ಕೆ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತದೆ. 
iv.300 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಸುಮಾರು 1.2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. 
v.ಇದು ಸರಕು ಸಾಗಣೆಯಲ್ಲಿ ರೈಲಿನ ಮಾದರಿ ಪಾಲನ್ನು ಹೆಚ್ಚಿಸುತ್ತದೆ ಮತ್ತು ದೇಶದಲ್ಲಿ ಒಟ್ಟಾರೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ. 
vi.ಈ ನೀತಿಯು ರೈಲ್ವೆ ಭೂಮಿಯನ್ನು ವಾರ್ಷಿಕವಾಗಿ ಭೂಮಿಯ ಮಾರುಕಟ್ಟೆ ಮೌಲ್ಯದ ಶೇ.1.5 ರಷ್ಟು ದರದಲ್ಲಿ ಒದಗಿಸುವ ಮೂಲಕ ವಿದ್ಯುತ್, ಅನಿಲ, ನೀರು ಸರಬರಾಜು, ಒಳಚರಂಡಿ ವಿಲೇವಾರಿ, ನಗರ ಸಾರಿಗೆ ಮುಂತಾದ ಸಾರ್ವಜನಿಕ ಸೇವಾ ಸೌಲಭ್ಯಗಳ ಸಮಗ್ರ ಅಭಿವೃದ್ಧಿಗಾಗಿ ರೈಲ್ವೆಯ ಭೂ ಬಳಕೆ ಮತ್ತು ರೈಟ್ ಆಫ್ ವೇ (ROW) ಅನ್ನು ಸರಳಗೊಳಿಸುತ್ತದೆ. 
vii.ಆಪ್ಟಿಕಲ್ ಫೈಬರ್ ಕೇಬಲ್‌ಗಳು (ಒಎಎಫ್‌ಸಿ) ಮತ್ತು ಇತರ ಸಣ್ಣ ವ್ಯಾಸದ ಭೂಮಿಯೊಳಗಿನ ಸೌಲಭ್ಯಳಿಗಾಗಿ, ರೈಲ್ವೆ  ಹಳಿ ದಾಟಲು ಒಂದು ಬಾರಿ ರೂ. 1000 ಶುಲ್ಕ ವಿಧಿಸಲಾಗುತ್ತದೆ.
viii.ರೈಲ್ವೆ ಭೂಮಿಯಲ್ಲಿ ಸೌರ ಸ್ಥಾವರಗಳನ್ನು ಸ್ಥಾಪಿಸಲು ರೈಲ್ವೆ ಭೂಮಿಯನ್ನು ಅತ್ಯಲ್ಪ ವೆಚ್ಚದಲ್ಲಿ ಬಳಸಲು ನೀತಿಯು ಅವಕಾಶ ಒದಗಿಸುತ್ತದೆ. 
ix.ಈ ನೀತಿಯು ರೈಲ್ವೆ ಭೂಮಿಯಲ್ಲಿ ಸಾಮಾಜಿಕ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸಲು (ಉದಾಹರಣೆಗೆ ಪಿಪಿಪಿ ಮೂಲಕ ಆಸ್ಪತ್ರೆಗಳು ಮತ್ತು ಶಾಲೆಗಳು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಮೂಲಕ) ವರ್ಷಕ್ಕೆ ಪ್ರತಿ ಚದರ ಮೀಟರ್‌ಗೆ 1 ರೂಪಾಯಿಯ ನಾಮಮಾತ್ರ ವಾರ್ಷಿಕ ಶುಲ್ಕದಲ್ಲಿ ನೀಡಲಾಗುತ್ತದೆ.

ಅನುಷ್ಠಾನ ತಂತ್ರ ಮತ್ತು ಗುರಿ: 

i.ಸಂಪುಟ ಅನುಮೋದನೆಯ 90 ದಿನಗಳಲ್ಲಿ ಸಮಗ್ರ ನೀತಿ ದಾಖಲೆಯನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. 
ii.ಪ್ರಧಾನಮಂತ್ರಿ ಗತಿ ಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ಹೇಳಲಾದ ಸೌಲಭ್ಯಗಳನ್ನು ಸ್ಥಾಪಿಸಲು ಅನುಮೋದನೆಗಳನ್ನು ಸರಳಗೊಳಿಸಲಾಗುವುದು. 
iii .300 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳನ್ನು ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು .

 

ಹಿನ್ನೆಲೆ:

ರೈಲ್ವೆಯ ಸಂಘಟನೆ ಮತ್ತು ನೆಟ್‌ವರ್ಕ್ ಇಡೀ ದೇಶವನ್ನು ವ್ಯಾಪಿಸಿದೆ. ಆದಾಗ್ಯೂ, ರೈಲ್ವೆ ತನ್ನ ಅಸ್ತಿತ್ವದಲ್ಲಿರುವ ಭೂ ನೀತಿಗಳೊಂದಿಗೆ ಇತರ ಮೂಲಸೌಕರ್ಯ ವಿಧಾನಗಳೊಂದಿಗೆ ಉತ್ತಮವಾಗಿ ಸಂಯೋಜಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಪ್ರಧಾನಮಂತ್ರಿ ಗತಿ ಶಕ್ತಿ ಚೌಕಟ್ಟಿನ ಅಡಿಯಲ್ಲಿ ದೇಶಾದ್ಯಂತ ವೇಗವಾಗಿ ಸಮಗ್ರ ಯೋಜನೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ರೈಲ್ವೆಯ ಭೂ ಗುತ್ತಿಗೆ ನೀತಿಯನ್ನು ಸರಳಗೊಳಿಸುವ ಅಗತ್ಯವಿತ್ತು.


ಅಸ್ತಿತ್ವದಲ್ಲಿರುವ ನೀತಿಯು ಯಾವುದೇ ರೈಲ್ವೆ ಸಂಬಂಧಿತ ಚಟುವಟಿಕೆಗಾಗಿ ಐದು ವರ್ಷಗಳವರೆಗೆ ಅಲ್ಪಾವಧಿಗೆ ರೈಲ್ವೆ ಭೂಮಿಗೆ ಪರವಾನಗಿಯನ್ನು ನೀಡುತ್ತದೆ. ಅಂತಹ ಅಲ್ಪಾವಧಿಯ ಪರವಾನಗಿ ಅವಧಿಯು ಬಹು-ಮಾದರಿ ಕಾರ್ಗೋ ಹಬ್‌ಗಳನ್ನು ರಚಿಸಲು ಯಾವುದೇ ಹೂಡಿಕೆದಾರರನ್ನು ಆಕರ್ಷಿಸುವುದಿಲ್ಲ. ಸರ್ಕಾರಿ ಭೂಮಿಯನ್ನು ಮುಖ್ಯವಾಗಿ ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ಗುತ್ತಿಗೆ ನೀಡಲು 35 ವರ್ಷಗಳವರೆಗೆ ರೈಲ್ವೆ ಭೂಮಿಯನ್ನು ದೀರ್ಘಾವಧಿಯ ಗುತ್ತಿಗೆಗೆ ಅನುಮತಿಸಲಾಗಿದೆ, ಇದರಿಂದಾಗಿ ಕಾರ್ಗೋ ಟರ್ಮಿನಲ್‌ಗಳಲ್ಲಿನ ಹೂಡಿಕೆಯ ವ್ಯಾಪ್ತಿಯನ್ನು ಸೀಮಿತಗೊಳಿಸಿದೆ. ರೈಲು ಒಂದು ಪರಿಣಾಮಕಾರಿ ಸಾರಿಗೆ ವಿಧಾನವಾಗಿರುವುದರಿಂದ ಉದ್ಯಮದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ರೈಲಿನ ಮೂಲಕ ಹೆಚ್ಚು ಸರಕು ಸಾಗಣೆ ಅತ್ಯಗತ್ಯ. ಸರಕು ಸಾಗಣೆಯಲ್ಲಿ ರೈಲಿನ ಮಾದರಿ ಪಾಲನ್ನು ಹೆಚ್ಚಿಸಲು ಹೆಚ್ಚಿನ ಕಾರ್ಗೋ ಟರ್ಮಿನಲ್‌ಗಳ ಅಭಿವೃದ್ಧಿಯನ್ನು ಉತ್ತೇಜಿಸಲು ಭೂ ಗುತ್ತಿಗೆ ನೀತಿಯನ್ನು ಮಾರ್ಪಡಿಸುವ ಅಗತ್ಯವಿದೆ ಎಂದು ಭಾವಿಸಲಾಗಿದೆ.

*****



(Release ID: 1857650) Visitor Counter : 165