ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಭಾರತವು ದಿನಕ್ಕೆ ಸರಾಸರಿ 9 ದಶಲಕ್ಷ  ಡಿಬಿಟಿ ಪಾವತಿಗಳನ್ನು ವರ್ಗಾಯಿಸಿದೆ (ಹಣಕಾಸು ವರ್ಷ 2021-22ರಲ್ಲಿ)


ಒಂದು ದಿನದಲ್ಲಿ284 ದಶಲಕ್ಷ  ಡಿಜಿಟಲ್‌ ವಹಿವಾಟುಗಳು ನಡೆಯುತ್ತಿವೆ

Posted On: 01 SEP 2022 7:31PM by PIB Bengaluru

‘‘ಭಾರತವು ಇಂದು ವಿಶೇಷವಾಗಿ ಡಿಜಿಟಲ್‌ ಪಾವತಿಗಳಲ್ಲಿ ಜಗತ್ತನ್ನು ಮುನ್ನಡೆಸುತ್ತಿದೆ ಮತ್ತು ನಾಗರಿಕರ ಜೀವನ ಮತ್ತು ಆಡಳಿತವನ್ನು ಸುಧಾರಿಸಲು ತಂತ್ರಜ್ಞಾನದ ಬಳಕೆಯಲ್ಲಿಅಗ್ರಗಣ್ಯ ದೇಶವಾಗುತ್ತಿದೆ - ಇಂಡಿಯಾ ಸ್ಟಾಕ್‌ ಮತ್ತು ಸರ್ಕಾರದ ಇತರ ವಿವಿಧ ಡಿಜಿಟಲ್‌  ಪರಿಹಾರಗಳು ಈಗ ವಿಶ್ವದ ರಾಷ್ಟ್ರಗಳು ಅಸೂಯೆ ಪಡುವಂತೆ ಮಾಡುತ್ತಿವೆ - ಪಿಎಂ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತವು ಡಿಜಿಟಲ್‌ ಅನ್ನು ಮುನ್ನಡೆಸುತ್ತದೆ ಮತ್ತು ಡಿಜಿಟಲ್‌  ಭಾರತವನ್ನು ಮುನ್ನಡೆಸುತ್ತದೆ,’’ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್‌ ಚಂದ್ರಶೇಖರ್‌ ಅವರು ಡಿಜಿಟಲ್‌ ಪಾವತಿಗಳು ಮತ್ತು ನೇರ ಲಾಭ ವರ್ಗಾವಣೆ (ಡಿಬಿಟಿ)ಯ ಯಶಸ್ವಿ ಮಾದರಿಯ ಬಗ್ಗೆ ಮಾತನಾಡುತ್ತಾ ಹೇಳಿದರು. ಜತೆಗೆ ಇದು ಲಕ್ಷಾಂತರ ಭಾರತೀಯ ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ ಎಂದರು.


2013 ರಿಂದ ಡಿಬಿಟಿ  ಮೂಲಕ  24.8 ಲಕ್ಷ  ಕೋಟಿಗೂ ಹೆಚ್ಚು, 2021-22ನೇ ಹಣಕಾಸು ವರ್ಷದಲ್ಲಿ 6.3 ಲಕ್ಷ  ಕೋಟಿಗೂ ಹೆಚ್ಚು ವರ್ಗಾವಣೆಯಾಗಿದೆ. ಹಣಕಾಸು ವರ್ಷ 2021-22 ರಲ್ಲಿ ಪ್ರತಿದಿನ ಸರಾಸರಿ 90 ಲಕ್ಷ  ಡಿಬಿಟಿ ಪಾವತಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ 11 ನೇ ಕಂತಿನ ಅಡಿಯಲ್ಲಿ, ಸುಮಾರು 20,000 ಕೋಟಿ ರೂ.ಗಳನ್ನು 10 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ( ಗುಂಡಿಯನ್ನು ಕ್ಲಿಕ್‌ ಮಾಡುವ ಮೂಲಕ‌ಒಂದೇ ದಿನದಲ್ಲಿ 10 ಕೋಟಿಗೂ ಹೆಚ್ಚು ವಹಿವಾಟುಗಳು ಆಗಿದೆ).
ಡಿಜಿಟಲ್‌ ಪಾವತಿಗಳಿಗೆ ಸಂಬಂಧಿಸಿದಂತೆ, 2021-22 ರಲ್ಲಿ 8,840 ಕೋಟಿಗೂ ಹೆಚ್ಚು ಡಿಜಿಟಲ್‌ ಪಾವತಿ ವಹಿವಾಟುಗಳು ಮತ್ತು 2022-23 ರ ಹಣಕಾಸು ವರ್ಷದಲ್ಲಿ(2022ರ ಜುಲೈ 24ರ ವರೆಗೆ) ಸುಮಾರು 3,300 ಕೋಟಿಗೂ ಹೆಚ್ಚು ಡಿಜಿಟಲ್‌ ಪಾವತಿ ವಹಿವಾಟುಗಳು ನಡೆದಿವೆ; ಒಂದು ದಿನದಲ್ಲಿ ಸರಾಸರಿ 28.4 ಕೋಟಿ ಡಿಜಿಟಲ್‌ ವಹಿವಾಟುಗಳು ನಡೆಯುತ್ತವೆ.                                                                                                                                                                     
ಡಿಜಿಟಲ್‌ ಸ್ವತ್ತುಗಳ (ಡಿಬಿಟಿ, ಜೆಎಎಂ ಟ್ರಿನಿಟಿ, ಎನ್‌ಪಿಸಿಐ ಇತ್ಯಾದಿ) ಸೃಷ್ಟಿಯಲ್ಲಿ ಭಾರತದ ಈ ಯಶೋಗಾಥೆಯು ‘ಅಭಿವೃದ್ಧಿಶೀಲ’ ಮಾತ್ರವಲ್ಲದೆ ‘ಅಭಿವೃದ್ಧಿ ಹೊಂದಿದ’ ದೇಶಗಳು ಸಹ ಕಲಿಯಬಹುದಾದ ಒಂದು ಉದಾಹರಣೆಯಾಗಿದೆ.

*****



(Release ID: 1856169) Visitor Counter : 126