ಪ್ರಧಾನ ಮಂತ್ರಿಯವರ ಕಛೇರಿ
ಆಗಸ್ಟ್ 25 ರಂದು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಮಂತ್ರಿ
75 ಕೇಂದ್ರಗಳಿಂದ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ
2900 ಕ್ಕೂ ಅಧಿಕ ಶಾಲೆಗಳು ಮತ್ತು 2200 ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಅಂತಿಮ ಹಂತದಲ್ಲಿ 53 ಕೇಂದ್ರ ಸಚಿವಾಲಯಗಳ 476 ಸಮಸ್ಯಾ ಹೇಳಿಕೆಗಳನ್ನು ನಿಭಾಯಿಸಲಿದ್ದಾರೆ
ಯುವಜನರಲ್ಲಿ ಉತ್ಪನ್ನ ಆವಿಷ್ಕಾರ, ಸಮಸ್ಯೆ-ಪರಿಹಾರ ಮತ್ತು ಚೌಕಟ್ಟಿನಿಂದಾಚೆಯ ಚಿಂತನಾ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಗಳು ಪ್ರಮುಖ ಪಾತ್ರ ವಹಿಸಿವೆ
प्रविष्टि तिथि:
23 AUG 2022 4:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 25 ರಂದು ರಾತ್ರಿ 8 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2022 ರ ಗ್ರ್ಯಾಂಡ್ ಫಿನಾಲೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ನಾವಿನ್ಯತೆಯ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ದೃಷ್ಟಿಕೋನವನ್ನು, ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (ಎಸ್ಐಎಚ್) ಅನ್ನು 2017 ರಲ್ಲಿ ಪ್ರಾರಂಭಿಸಲಾಯಿತು. ಎಸ್ ಐಎಚ್ ಎಂಬುದು ಸಮಾಜದ, ಸಂಸ್ಥೆಗಳ ಮತ್ತು ಸರ್ಕಾರದ ತುರ್ತು ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ಒಂದು ವೇದಿಕೆಯನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮವಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಉತ್ಪನ್ನ ಆವಿಷ್ಕಾರ, ಸಮಸ್ಯೆ-ಪರಿಹಾರ ಮತ್ತು ಚೌಕಟ್ಟಿನಾಚೆಗಿನ ಚಿಂತನಾ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಎಸ್ ಐಎಚ್ ಗಾಗಿ ನೋಂದಾಯಿಸಿದ ತಂಡಗಳ ಸಂಖ್ಯೆಯು ಮೊದಲ ಆವೃತ್ತಿಯಲ್ಲಿ ಸುಮಾರು 7500ರಷ್ಟಿತ್ತು ಮತ್ತು ಈಗ ನಡೆಯುತ್ತಿರುವ ಐದನೇ ಆವೃತ್ತಿಯಲ್ಲಿ ಸುಮಾರು 29,600 ತಂಡಗಳು ಭಾಗವಹಿಸುತ್ತಿದ್ದು, ಇದು ನಾಲ್ಕು ಪಟ್ಟು ಬೆಳವಣಿಗೆಯನ್ನು ದಾಖಲಿಸಿದೆ. ಈ ಅಂಶವು ಎಸ್ ಐಎಚ್ ನ ಹೆಚ್ಚುತ್ತಿರುವ ಜನಪ್ರಿಯತೆಗೊಂದು ಅಳತೆಗೋಲಾಗಿದೆ. ಈ ವರ್ಷ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ಎಸ್ಐಎಚ್ 2022 ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು 75 ನೋಡಲ್ ಕೇಂದ್ರಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. 2900 ಕ್ಕೂ ಹೆಚ್ಚು ಶಾಲೆಗಳು ಮತ್ತು 2200 ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ದೇವಾಲಯದ ಶಾಸನಗಳ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ಮತ್ತು ದೇವನಾಗರಿ ಲಿಪಿಗಳಲ್ಲಿನ ಭಾಷಾಂತರಗಳು, ಬೇಗ ಹಾಳಾಗುವ ಆಹಾರ ಪದಾರ್ಥಗಳಿಗಾಗಿ ಕೋಲ್ಡ್ ಸಪ್ಲೈ ಚೈನ್ ನಲ್ಲಿ ಐಒಟಿ-ಅಳವಡಿಸಿದ ಸಂಭಾವ್ಯ ಅಪಾಯ ಮೇಲ್ವಿಚಾರಣಾ ವ್ಯವಸ್ಥೆ, ವಿಪತ್ತು ಪೀಡಿತ ಪ್ರದೇಶಗಳಲ್ಲಿಯ ಭೌಗೋಳಿಕ ಸ್ಥಿತಿಯ ಉನ್ನತ ರೆಸಲ್ಯೂಶನ್ 3ಡಿ ಮಾದರಿ, ಮೂಲಸೌಕರ್ಯ ಮತ್ತು ರಸ್ತೆಗಳ ಪರಿಸ್ಥಿತಿಗಳು ಸೇರಿದಂತೆ 53 ಕೇಂದ್ರ ಸಚಿವಾಲಯಗಳ 476 ಸಮಸ್ಯಾ ಹೇಳಿಕೆಗಳನ್ನು ಈ ಅಂತಿಮ ಹಂತದಲ್ಲಿ ನಿಭಾಯಿಸಲಿದ್ದಾರೆ.
ಈ ವರ್ಷ, ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - ಜೂನಿಯರ್ ಅನ್ನು ಶಾಲಾ ವಿದ್ಯಾರ್ಥಿಗಳಿಗಾಗಿ ನಾವೀನ್ಯತೆಯ ಸಂಸ್ಕೃತಿಯನ್ನು ರೂಪಿಸಲು ಮತ್ತು ಶಾಲಾ ಮಟ್ಟದಲ್ಲಿ ಸಮಸ್ಯೆ-ಪರಿಹರಿಸುವ ಮನೋಭಾವವನ್ನು ಬೆಳೆಸಲು ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ.
******
(रिलीज़ आईडी: 1853970)
आगंतुक पटल : 228
इस विज्ञप्ति को इन भाषाओं में पढ़ें:
Bengali
,
Malayalam
,
English
,
Urdu
,
हिन्दी
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu