ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಬೈಕ್ ಸವಾರರಿಗೆ ನೆಮ್ಮದಿಯ ಬದಲಾವಣೆ ಗಾಳಿ
Posted On:
22 AUG 2022 4:18PM by PIB Bengaluru
ದೆಹಲಿ ಮೂಲದ ನವೋದ್ಯಮವೊಂದು ಅಭಿವೃದ್ಧಿಪಡಿಸಿದ ಮಾಲಿನ್ಯ ತಡೆಯ ಹೆಲ್ಮೆಟ್ ದ್ವಿಚಕ್ರ ವಾಹನ ಸವಾರರು ಶುದ್ಧ ಗಾಳಿಯನ್ನು ಉಸಿರಾಡಲು ಸಹಾಯ ಮಾಡುತ್ತದೆ. ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಹೆಲ್ಮೆಟ್ ಬ್ಲೂಟೂತ್-ಸಕ್ರಿಯಗೊಳಿಸಿದ ಅಪ್ಲಿಕೇಶನ್ ಅನ್ನು ಹೊಂದಿದ್ದು ಅದು ಹೆಲ್ಮೆಟ್ ಅನ್ನು ಸ್ವಚ್ಛಗೊಳಿಸುವ ಅಗತ್ಯವಿರುವಾಗ ಸವಾರನಿಗೆ ತಿಳಿಸುತ್ತದೆ.
ನವೋದ್ಯಮವು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ (ಡಿಎಸ್‌ಟಿ) ಆರಂಭಿಕ ಆರ್ಥಿಕ ನೆರವು ಪಡೆದುಕೊಂಡಿತು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಿ ಪಾರ್ಕ್ (ಜೆಎಸ್‌ಎಸ್‌ಎಟಿಇ-ಎಸ್‌ಟಿಎಪಿ) ನೋಯ್ಡಾದಲ್ಲಿ ಅಭಿವೃದ್ದಿ ಪಡಿಸಲಾಯಿತು.
ನವೋದ್ಯಮ ಸಂಸ್ಥೆಯು ಹೆಲ್ಮೆಟ್‌ಗಾಗಿ ಪ್ರಮುಖ ಮೂಲ ಸಲಕರಣೆ ತಯಾರಕರೊಂದಿಗೆ (ಒಇಎಮ್ ಗಳು) ವಾಣಿಜ್ಯೀಕರಣದ ಒಪ್ಪಂದಗಳಿಗೆ ಸಹಿ ಹಾಕಿದ್ದವು. ತಂತ್ರಜ್ಞಾನ ಸಿದ್ಧವಿರುವ ಮಟ್ಟದ (ಟಿಆರ್‌ಎಲ್) ಹಂತ 9 ರಲ್ಲಿ ಉತ್ಪನ್ನವನ್ನು ಉಪಯುಕ್ತತೆಯ ಪೇಟೆಂಟ್ ನೀಡಲಾಗಿದೆ ಮತ್ತು ಬೆಲೆ ರೂ. 4500/-ಕ್ಕೆ ಈಗ ದೇಶದ ಎಲ್ಲಾ ಭಾಗಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಉತ್ಪನ್ನದ ಬಳಕೆದಾರರು ಭಾರತದಾದ್ಯಂತ ವೈಯಕ್ತಿಕ ಬೈಕ್ ಸವಾರರನ್ನು ಒಳಗೊಂಡಿರುತ್ತಾರೆ ಮತ್ತು ಮುಂದಿನ ಆವೃತ್ತಿಗಾಗಿ, ಉತ್ಪನ್ನವನ್ನು ವಾಣಿಜ್ಯಗೊಳಿಸಲು ಶೆಲ್ಲಿಯೋಸ್ ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್ಸ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದಾರೆ.
ಚಳಿಗಾಲದಲ್ಲಿ ದೆಹಲಿ ಎದುರಿಸುತ್ತಿರುವ ವಾಯು ಗುಣಮಟ್ಟದ ಬಿಕ್ಕಟ್ಟಿನ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಎದುರಿಸುತ್ತಿರುವ ಸವಾಲುಗಳನ್ನು ಅರಿತು ಶೆಲ್ಲಿಯೋಸ್ ಟೆಕ್ನೋಲ್ಯಾಬ್ಸ್ ಸಂಸ್ಥೆಯ ಸಂಸ್ಥಾಪಕರು ಈ ಹೆಲ್ಮೆಟ್ ಬಗ್ಗೆ ಆಲೋಚಿಸಿದ್ದಾರೆ.
"ರಸ್ತೆಯನ್ನು ಉಪಯೋಗಿಸುವ ಜನರ ಮೇಲೆ ಗಾಳಿಯ ಗುಣಮಟ್ಟದ ಪರಿಸ್ಥಿತಿಯಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳಿಂದ ನಾವು ವಿಚಲಿತರಾಗಿದ್ದೇವೆ, ವಿಶೇಷವಾಗಿ ಲಕ್ಷಾಂತರ ದ್ವಿಚಕ್ರ ವಾಹನ ಸವಾರರು ದಿನನಿತ್ಯ ಇದಕ್ಕೆ ಒಳಗಾಗುತ್ತಿದ್ದಾರೆ, ಅದು ಕೂಡ ಗಾಳಿಯಲ್ಲಿನ ಕಣಗಳು ಮತ್ತು ವಾಹನಗಳ ಮಾಲಿನ್ಯ ಹೊರಸೂಸುವಿಕೆ ಎರಡನ್ನೂ ಅವರು ಉಸಿರಾಡುತ್ತಾರೆ” ಎಂದು ಸಂಸ್ಥಾಪಕರಲ್ಲಿ ಒಬ್ಬರಾದ ಅಮಿತ್ ಪಾಠಕ್ ಹೇಳಿದರು.
ಪ್ಯೂರೋಸ್ (PUROS) ಎಂದು ಹೆಸರಿಸಲ್ಪಟ್ಟ ಹೆಲ್ಮೆಟ್ ಅನ್ನು ಗಾಳಿಯನ್ನು ಶುದ್ಧೀಕರಿಸುವ ಬಿಡಿಭಾಗಗಳೊಂದಿಗೆ ಸಂಯೋಜಿಸಲಾಗಿದೆ, ಇದರಲ್ಲಿ ಸ್ಟಾರ್ಟ್‌ಅಪ್‌ನ ಪೇಟೆಂಟ್ ಈ ಆವಿಷ್ಕಾರಗಳು ಸೇರಿವೆ -- ಬ್ರಷ್‌ಲೆಸ್ ಡಿಸಿ (ಬಿಎಲ್‌ಡಿಸಿ) ಬ್ಲೋವರ್ ಫ್ಯಾನ್, ಹೈ-ಎಫಿಶಿಯೆನ್ಸಿ ಪಾರ್ಟಿಕ್ಯುಲೇಟ್ ಏರ್ (ಎಚ್ ಇ ಪಿ ಎ) ಫಿಲ್ಟರ್ ಮೆಂಬರೇನ್, ಎಲೆಕ್ಟ್ರಾನಿಕ್ ಸರ್ಕ್ಯೂಟ್ ಮತ್ತು ಮೈಕ್ರೋಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ಹೆಲ್ಮೆಟ್ ಒಳಗೆ ಸಂಯೋಜಿಸಲಾಗಿದೆ. ಹೆಲ್ಮೆಟ್‌ನ ಹಿಂಭಾಗದಲ್ಲಿ ಸ್ಥಾಪಿಸಲಾದ ಶುದ್ಧೀಕರಣ ವ್ಯವಸ್ಥೆಯು ಹೊರಗಿನಿಂದ ಬರುವ ಎಲ್ಲಾ ಕಣಗಳನ್ನು ಹಿಡಿದುಕೊಳ್ಳುತ್ತದೆ ಮತ್ತು ಸವಾರನನ್ನು ತಲುಪುವ ಮೊದಲು ಗಾಳಿಯನ್ನು ಸ್ವಚ್ಛಗೊಳಿಸುತ್ತದೆ.
ಸರ್ಕಾರವು ನಿಗದಿಪಡಿಸಿದ ಎಲ್ಲಾ ಕಡ್ಡಾಯ ಮಾನದಂಡಗಳನ್ನು ಅನುಸರಿಸಿ, 1.5 ಕೆಜಿ ಹೆಲ್ಮೆಟ್ ನಿಯಂತ್ರಿತ ಪರಿಸರವನ್ನು ಬಳಸಿಕೊಂಡು ಮಾಪನ ಮಾಡಿದಾಗ ಶೇ.80ಕ್ಕಿಂತ ಹೆಚ್ಚು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದನ್ನು ಖಾತ್ರಿಗೊಳಿಸಿದೆ.
*********
(Release ID: 1853700)
Visitor Counter : 224