ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಆಗಸ್ಟ್ 24 ರಂದು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ


ಫರಿದಾಬಾದ್ ನಲ್ಲಿ ಅಮೃತಾ ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

ಹೊಸದಾಗಿ ನಿರ್ಮಿಸಲಾದ ಆಸ್ಪತ್ರೆಯ ಮೂಲಕ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳಿಗೆ ಉತ್ತೇಜನ ಸಿಗಲಿದೆ

ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆಯಲ್ಲಿ (ಮೊಹಾಲಿ) ‘ಹೋಮಿ ಭಾಭಾ ಅರ್ಬುದರೋಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ

ಪಂಜಾಬ್ ಮತ್ತು ನೆರೆಯ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳಿಗೆ ಈ ಆಸ್ಪತ್ರೆಯು ವಿಶ್ವ ದರ್ಜೆಯ ಅರ್ಬುದರೋಗ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಲಿದೆ

Posted On: 22 AUG 2022 1:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 24, 2022 ರಂದು ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ, ಹಾಗೂ ಎರಡು ಪ್ರಮುಖ ಆರೋಗ್ಯ ಉಪಕ್ರಮಗಳನ್ನು ಪ್ರಧಾನಮಂತ್ರಿಯವರು ಉದ್ಘಾಟನೆ/ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪ್ರಧಾನಮಂತ್ರಿಯವರು ಹರಿಯಾಣದ ಫರಿದಾಬಾದ್ನಲ್ಲಿ ಅಮೃತ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಅದರ ನಂತರ, ಪ್ರಧಾನಮಂತ್ರಿಯವರು ಮೊಹಾಲಿಗೆ ಪ್ರಯಾಣಿಸಲಿದ್ದಾರೆ. ಅದೇ ದಿನ ಮದ್ಯಾಹ್ನ ಸುಮಾರು 02:15 ಗಂಟೆಗೆ ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆ (ಮೊಹಾಲಿ)ಯ ನ್ಯೂ ಚಂಡೀಗಢದ ಮುಲ್ಲನ್ ಪುರ್ ನಲ್ಲಿ 'ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

 

ಹರಿಯಾಣದಲ್ಲಿ ಪ್ರಧಾನಮಂತ್ರಿ

 

ಫರಿದಾಬಾದ್ ನಲ್ಲಿ ಅಮೃತಾ ಆಸ್ಪತ್ರೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದು, ಇದರಿಂದಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್.ಸಿ.ಆರ್.) ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳ ಲಭ್ಯತೆಗೆ ಹೆಚ್ಚಿನ ಅವಕಾಶ ಸಿಗಲಿದೆ. ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 2600 ಹಾಸಿಗೆಗಳನ್ನು ಹೊಂದಿದೆ. ಸುಮಾರು ರೂ. 6000 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯು  ಫರಿದಾಬಾದ್ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್.ಸಿ.ಆರ್.) ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಿದೆ.

 

ಪಂಜಾಬ್ನಲ್ಲಿ ಪ್ರಧಾನಮಂತ್ರಿ

 

ಪಂಜಾಬ್ ಮತ್ತು ನೆರೆಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳಿಗೆ ವಿಶ್ವ ದರ್ಜೆಯ ಅರ್ಬುದ ರೋಗ ಆರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆಯ (ಮೊಹಾಲಿ) ಹೊಸ ಚಂಡೀಗಢದ ಮುಲ್ಲನ್ಪುರದಲ್ಲಿ ನೂತನವಾಗಿ ನಿರ್ಮಿಸಲಾದ 'ಹೋಮಿ ಭಾಭಾ ಅರ್ಬುದ ರೋಗ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ'ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.  ಭಾರತ ಸರ್ಕಾರದ ಪರಮಾಣು ಇಂಧನ(ಶಕ್ತಿ) ಇಲಾಖೆಯ ಅಡಿಯಲ್ಲಿರುವ ಅನುದಾನಿತ ಸಂಸ್ಥೆಯಾದ ಟಾಟಾ ಸ್ಮಾರಕ ಕೇಂದ್ರದಿಂದ ರೂ. 660 ಕೋಟಿಗೂ ಅಧಿಕ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

 

ಇದು 300 ಹಾಸಿಗೆಯ ಸಾಮರ್ಥ್ಯದ ಮೂರನೇಯ ಕ್ಯಾನ್ಸರ್ ಆರೈಕೆ ಆಸ್ಪತ್ರೆಯಾಗಿದೆ. ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ವೈದ್ಯಕೀಯ ಆಂಕೊಲಾಜಿ - ಕೀಮೋಥೆರಪಿ, ಇಮ್ಯುನೊಥೆರಪಿ ಮತ್ತು ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಅನ್ನು ಬಳಸಿಕೊಂಡು ಎಲ್ಲಾ ರೀತಿಯ ಕ್ಯಾನ್ಸರ್ಗಳಿಗೆ ಚಿಕಿತ್ಸೆ ಮತ್ತು ಆರೈಕೆ ನೀಡಲು ಆಧುನಿಕ ಚಿಕಿತ್ಸಾ ವಿಧಾನ-  ಸೌಲಭ್ಯ-ಸೌಕರ್ಯಗಳನ್ನು ಈ ನೂತನ ಆಸ್ಪತ್ರೆ  ಹೊಂದಿದೆ.

 

ಆಸ್ಪತ್ರೆಯು ಈ ಪ್ರದೇಶದಲ್ಲಿ ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸೆಗಳ 'ಕೇಂದ್ರ (ಹಬ್)' ದಂತೆ ಕಾರ್ಯನಿರ್ವಹಿಸಲಿದೆ. ಸಂಗ್ರೂರ್ನಲ್ಲಿರುವ 100 ಹಾಸಿಗೆಗಳ ಆಸ್ಪತ್ರೆಯು 'ಅತ್ಯುತ್ತಮ' ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

***********



(Release ID: 1853581) Visitor Counter : 158