ಪ್ರಧಾನ ಮಂತ್ರಿಯವರ ಕಛೇರಿ
ಕುಸ್ತಿಪಟು ಪೂಜಾ ಗೆಹ್ಲೋಟ್ ಗೆ ಮುಂದೆ ಉತ್ತಮ ಭವಿಷ್ಯವಿದೆ ಎಂದು ಉತ್ತೇಜಿಸಿದ ಪ್ರಧಾನಿ
“ಪೂಜಾ ನಿಮ್ಮ ಪದಕಕ್ಕೆ ಸಂಭ್ರಮ ಪಡಬೇಕು, ಕ್ಷಮೆಯಲ್ಲ’’
Posted On:
07 AUG 2022 8:48AM by PIB Bengaluru
ಕುಸ್ತಿಪಟು ಪೂಜಾ ಗೆಹ್ಲೋಟ್ ಅವರು ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಭಾವನಾತ್ಮಕ ಪೋಸ್ಟ್ ಅನ್ನು ಎಎನ್‌ಐ ಹಂಚಿಕೊಂಡ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿ, ಪೂಜಾ ಗೆಹ್ಲೋಟ್ ಅವರಿಗೆ ಮುಂದೆ ಉಜ್ವಲ ಭವಿಷ್ಯವಿದೆ ಎಂದು ಉತ್ತೇಜಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಪೂಜಾ, ನಿಮ್ಮ ಪದಕಕ್ಕೆ ಸಂಭ್ರಮಾಚರಣೆ ಅಗತ್ಯವಿದೆ, ಕ್ಷಮೆಯಲ್ಲ. ನಿಮ್ಮ ಜೀವನ ಪಯಣವು ನಮಗೆ ಉತ್ತೇಜನ ನೀಡುತ್ತದೆ, ನಿಮ್ಮ ಯಶಸ್ಸು ನಮ್ಮನ್ನು ಸಂತೋಷಪಡಿಸುತ್ತದೆ. ನೀವು ಮುಂದೆ ಮಹತ್ವದ ಗುರಿಗಳನ್ನು ಸಾಧಿಸುತ್ತೀರಿ- ಸದಾ ಪ್ರಕಾಶಿಸುತ್ತಿರಿ..!’."
*****
(Release ID: 1849495)
Visitor Counter : 117
Read this release in:
Telugu
,
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam