ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟ-2022 ಕಂಚಿನ ಪದಕ ಗೆದ್ದ ಸೌರವ್ ಘೋಸಲ್ ಅವರಿಗೆ ಪ್ರಧಾನಿ ಅಭಿನಂದನೆ

ಪ್ರಕಟಣಾ ದಿನಾಂಕ: 03 AUG 2022 11:30PM by PIB Bengaluru

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಕ್ರೀಡಾಕೂಟ-2022ರಲ್ಲಿ ಕಂಚಿನ ಪದಕ ಗೆದ್ದಿರುವ ಸ್ಕ್ವಾಷ್ ಆಟಗಾರ ಸೌರವ್ ಘೋಸಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

"ಸೌರವ್ ಘೋಸಲ್ ಅವರು ಯಶಸ್ಸಿನ ಹೊಸ ಎತ್ತರ ಏರುತ್ತಿರುವುದನ್ನು ನೋಡಲು ಸಂತಸವಾಗಿದೆ. ಅವರು ಬರ್ಮಿಂಗ್ ಹ್ಯಾಮ್ ನಲ್ಲಿ ಗೆದ್ದಿರುವ ಕಂಚಿನ ಪದಕವು ಬಹಳ ವಿಶೇಷವಾದದ್ದು, ಅವರಿಗೆ ಅಭಿನಂದನೆಗಳು. ಅವರ ಸಾಧನೆಗಳು ಭಾರತದ ಯುವಜನರಲ್ಲಿ ಸ್ಕ್ವ್ಯಾಷ್‌ನ ಜನಪ್ರಿಯತೆ ಹೆಚ್ಚಿಸಲು ಸಹಾಯ ಮಾಡಲಿ" ಎಂದು ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದಾರೆ.

 

 

********


(ಪ್ರಕಟಣೆ ಐ.ಡಿ.: 1848378) ವಿಸಿಟರ್ ಕೌಂಟರ್ : 140
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam