ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜುಲೈಯಲ್ಲಿ  6 ಬಿಲಿಯನ್ ಯುಪಿಐ ವಹಿವಾಟುಗಳ ಸಾಧನೆಗೆ  ಪ್ರಧಾನಮಂತ್ರಿ ಶ್ಲಾಘನೆ.

प्रविष्टि तिथि: 02 AUG 2022 10:44AM by PIB Bengaluru

ಜುಲೈ ತಿಂಗಳಲ್ಲಿ  6 ಬಿಲಿಯನ್ ಯುಪಿಐ ವಹಿವಾಟುಗಳನ್ನು ನಡೆಸಿರುವ ಅಸಾಧಾರಣ ಸಾಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ಲಾಘಿಸಿದ್ದಾರೆ, ಇದು 2016 ರ ನಂತರದ ಅತ್ಯಧಿಕ ಸಾಧನೆಯಾಗಿದೆ.

 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಅವರು:

"ಇದೊಂದು ಅಸಾಧಾರಣ ಸಾಧನೆ. ಇದು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮತ್ತು ಆರ್ಥಿಕತೆಯನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ  ಭಾರತದ ಜನತೆಯ ಸಾಮೂಹಿಕ ಸಂಕಲ್ಪವನ್ನು ಸೂಚಿಸುತ್ತದೆ. ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಡಿಜಿಟಲ್ ಪಾವತಿಗಳು ವಿಶೇಷ ಸಹಾಯ ಮಾಡಿದ್ದವು”

ಎಂದು ಹೇಳಿದ್ದಾರೆ.

 

***************


(रिलीज़ आईडी: 1847359) आगंतुक पटल : 242
इस विज्ञप्ति को इन भाषाओं में पढ़ें: Urdu , English , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam