ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆಡೆಟ್ [17 ವಯೋಮಿತಿಯೊಳಗಿನ] ವಿಶ್ವ ಕುಸ್ತಿ ಚಾಂಪಿನ್ ಶಿಪ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತೀಯ ಕುಸ್ತಿ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 01 AUG 2022 6:44PM by PIB Bengaluru

ಇಟಲಿಯ ರೋಮ್ ನಲ್ಲಿ  ನಡೆದ ಕೆಡೆಟ್ [17 ವಯೋಮಿತಿಯೊಳಗಿನ] ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಕುಸ್ತಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

 

ತಮ್ಮ ಟ್ವೀಟ್ ಸಂದೇಶಲ್ಲಿ ಪ್ರಧಾನಮಂತ್ರಿ ಅವರು:

" ಗ್ರೀಕೋ ರೋಮನ್ ನಲ್ಲಿ 32 ವರ್ಷಗಳ ನಂತರ ಕೆಡೆಟ್ [ 17 ವಯೋಮಿತಿಯೊಳಗಿನ] ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿತಂಡ 7 ಚಿನ್ನ ಸೇರಿ 14 ಪದಕಗಳೊಂದಿಗೆ [ ಈ ಪೈಕಿ 5 ಪದಕಗಳು ಮಹಿಳಾ ಅಥ್ಲೀಟ್ ಗಳು ಗೆದ್ದಿದ್ದಾರೆ] ಹಿಂದೆಂದೂ ಕಂಡರಿಯದ ಪ್ರದರ್ಶನ ತೋರಿದೆ.  ಪದಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ. ನಮ್ಮ ತಂಡಕ್ಕೆ ಅಭಿನಂದನೆಗಳು.” ಎಂದು ಹೇಳಿದ್ದಾರೆ.

 

*********


(रिलीज़ आईडी: 1847271) आगंतुक पटल : 133
इस विज्ञप्ति को इन भाषाओं में पढ़ें: Tamil , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Telugu , Malayalam