ಪ್ರಧಾನ ಮಂತ್ರಿಯವರ ಕಛೇರಿ
ಜುಲೈ 31 ರಂದು ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್‌ನ ಜುಲೈ ಆವೃತ್ತಿ ಆಲಿಸುವಂತೆ ಪ್ರಧಾನಮಂತ್ರಿ ಅವರು ನಾಗರಿಕರಿಗೆ ಆಹ್ವಾನ ನೀಡಿದರು
Posted On:
30 JUL 2022 6:27PM by PIB Bengaluru
ಮನ್ ಕಿ ಬಾತ್ ಕಿರುಹೊತ್ತಿಗೆಯ ಜೂನ್ ಆವೃತ್ತಿಯನ್ನು ಹಂಚಿಕೊಂಡ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 31ರಂದು ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್‌ನ ಜುಲೈ ಆವೃತ್ತಿ ಆಲಿಸುವಂತೆ ಎಲ್ಲನಾಗರಿಕರಿಗೆ ಆಹ್ವಾನ ನೀಡಿದ್ದಾರೆ.
ಬಾಹ್ಯಾಕಾಶದಲ್ಲಿ ಭಾರತದ ದಾಪುಗಾಲು, ಕ್ರೀಡಾ ಕ್ಷೇತ್ರದಲ್ಲಿನ ವೈಭವ, ರಥಯಾತ್ರೆ ಮತ್ತು ಇನ್ನೂ ಹೆಚ್ಚಿನ ವಿಷಯಗಳನ್ನು ಒಳಗೊಂಡ ಮನ್ ಕಿ ಬಾತ್ ಕಿರುಹೊತ್ತಿಗೆಯ ಜೂನ್ ಆವೃತ್ತಿಯನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ;
‘‘ನಾಳೆ, ಜುಲೈ 31 ರಂದು ಬೆಳಗ್ಗೆ 11 ಗಂಟೆಗೆ ಈ ತಿಂಗಳ #MannKiBaat ಆಲಿಸಲು ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.
ಬಾಹ್ಯಾಕಾಶದಲ್ಲಿ ಭಾರತದ ದಾಪುಗಾಲು, ಕ್ರೀಡಾ ಕ್ಷೇತ್ರದಲ್ಲಿನ ವೈಭವ, ರಥಯಾತ್ರೆ ಮತ್ತು ಇನ್ನೂ ಹೆಚ್ಚಿನವುಗಳಂತಹ ಕಳೆದ ತಿಂಗಳ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡ ಕಿರುಹೊತ್ತಿಗೆಯನ್ನು ಸಹ ಹಂಚಿಕೊಳ್ಳಿ,’’ ಎಂದಿದ್ದಾರೆ.
*********
(Release ID: 1846643)
Visitor Counter : 126
Read this release in:
Assamese
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam