ಪ್ರಧಾನ ಮಂತ್ರಿಯವರ ಕಛೇರಿ

ಚೆನ್ನೈ ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಪಠ್ಯ

Posted On: 29 JUL 2022 12:37PM by PIB Bengaluru

ಗೌರವಾನ್ವಿತ ತಮಿಳುನಾಡಿನ ರಾಜ್ಯಪಾಲರಾದ ಶ್ರೀ ಆರ್‌.ಎನ್‌. ರವಿ ಜೀ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ. ಸ್ಟಾಲಿನ್‌ ಜೀ, ಕೇಂದ್ರ ಸಚಿವ ಶ್ರೀ ಎಲ್‌. ಮುರುಗನ್‌ ಜೀ, ಇತರ ಸಚಿವರು ಮತ್ತು ಗಣ್ಯರು, ಅಣ್ಣಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್‌. ವೇಲ್ರಾಜ್‌ ಜೀ, ನನ್ನ ಯುವ ಸ್ನೇಹಿತರು, ಅವರ ಪೋಷಕರೇ ಮತ್ತು ಶಿಕ್ಷಕರೇ..ಅನೈವರುಕ್ಕುಂ ವಣಕ್ಕುಂ.

 

ಮೊದಲನೆಯದಾಗಿ, ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿಇಂದು ಪದವಿ ಪಡೆಯುತ್ತಿರುವ ಎಲ್ಲರಿಗೂ ಅಭಿನಂದನೆಗಳು. ನೀವು ಈಗಾಗಲೇ ನಿಮ್ಮ ಮನಸ್ಸಿನಲ್ಲಿ ನಿಮಗಾಗಿ ಒಂದು ಭವಿಷ್ಯವನ್ನು ನಿರ್ಮಿಸಿಕೊಂಡಿರುತ್ತೀರಿ. ಆದ್ದರಿಂದ, ಇಂದು ಕೇವಲ ಸಾಧನೆಗಳ ದಿನ ಮಾತ್ರವಲ್ಲ, ಆಕಾಂಕ್ಷೆಗಳ ದಿನವೂ ಆಗಿದೆ. ನಮ್ಮ ಯುವಕರ ಎಲ್ಲಾ ಕನಸುಗಳು ನನಸಾಗಲಿ ಎಂದು ನಾನು ಬಯಸುತ್ತೇನೆ.ಅಣ್ಣಾ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಹಾಯಕ ಸಿಬ್ಬಂದಿಗೆ ಇದು ವಿಶೇಷ ಸಮಯವಾಗಿದೆ. ನೀವು ನಾಳಿನ ನಾಯಕರನ್ನು ಸೃಷ್ಟಿಸುತ್ತಿರುವ ರಾಷ್ಟ್ರ ನಿರ್ಮಾತೃಗಳು. ನೀವು ಅನೇಕ ಬ್ಯಾಚ್‌ಗಳು ಬಂದು ಹೋಗುವುದನ್ನು ನೋಡಿರಬಹುದು ಆದರೆ ಪ್ರತಿ ಬ್ಯಾಚ್‌ ಅನನ್ಯವಾಗಿದೆ. ಅವರು ತಮ್ಮದೇ ಆದ ನೆನಪುಗಳ ಗುಂಪನ್ನು ಬಿಡುತ್ತಾರೆ. ಇಂದು ಪದವಿ ಪಡೆಯುತ್ತಿರುವವರ ಪೋಷಕರಿಗೆ ನಾನು ವಿಶೇಷವಾಗಿ ಶುಭ ಕೋರುತ್ತೇನೆ. ನಿಮ್ಮ ಮಗುವಿನ ಸಾಧನೆಗೆ ನಿಮ್ಮ ತ್ಯಾಗಗಳು ನಿರ್ಣಾಯಕವಾಗಿವೆ.

 

ಇಂದು, ರೋಮಾಂಚಕ ನಗರವಾದ ಚೆನ್ನೈನಲ್ಲಿ ನಮ್ಮ ಯುವಕರ ಸಾಧನೆಗಳನ್ನು ಆಚರಿಸಲು ನಾವು ಇಲ್ಲಿಗೆ ಬಂದಿದ್ದೇವೆ. 125 ವರ್ಷಗಳ ಹಿಂದೆ 1897ರ ಫೆಬ್ರವರಿಯಲ್ಲಿ ಸ್ವಾಮಿ ವಿವೇಕಾನಂದರು ಮದ್ರಾಸ್‌ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದರು. ಭಾರತದ ಭವಿಷ್ಯಕ್ಕಾಗಿ ಅವರ ಯೋಜನೆಯ ಬಗ್ಗೆ ಅವರನ್ನು ಕೇಳಲಾಯಿತು. ಅವರು ಹೇಳಿದ್ದು: ‘‘ನನ್ನ ನಂಬಿಕೆ ಯುವ ಪೀಳಿಗೆಯ ಮೇಲಿದೆ, ಆಧುನಿಕ ಪೀಳಿಗೆ, ಅವರಿಂದ ನನ್ನ ಕೆಲಸಗಾರರು ಬರುತ್ತಾರೆ. ಅವರು ಸಿಂಹಗಳಂತೆ ಇಡೀ ಸಮಸ್ಯೆಯನ್ನು ಪರಿಹರಿಸುತ್ತಾರೆ,’’ ಎಂಬ ಆ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. ಆದರೆ ಈ ಬಾರಿ, ಭಾರತವು ಮಾತ್ರ ತನ್ನ ಯುವಕರ ಕಡೆಗೆ ನೋಡುತ್ತಿಲ್ಲ. ಇಡೀ ವಿಶ್ವವು ಭಾರತದ ಯುವಕರನ್ನು ಭರವಸೆಯಿಂದ

ನೋಡುತ್ತಿದೆ. ಏಕೆಂದರೆ ನೀವು ದೇಶದ ಬೆಳವಣಿಗೆಯ ಎಂಜಿನ್‌ಗಳು, ಮತ್ತು ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್‌ ಆಗಿದೆ. ಇದೊಂದು ದೊಡ್ಡ ಗೌರವ. ಇದು ಒಂದು ದೊಡ್ಡ ಜವಾಬ್ದಾರಿಯೂ ಆಗಿದೆ, ಇದರಲ್ಲಿನೀವು ಉತ್ಕೃಷ್ಟರಾಗುತ್ತೀರಿ ಎಂದು ನನಗೆ ಖಾತ್ರಿಯಿದೆ.

 

ಸ್ನೇಹಿತರೇ,

 

ನಮ್ಮ ಯುವಕರ ಮೇಲಿನ ನಂಬಿಕೆಯ ಬಗ್ಗೆ ಮಾತನಾಡುವಾಗ, ನಾವು ಭಾರತ ರತ್ನವನ್ನು, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರನ್ನು ಹೇಗೆ ಮರೆಯಲು ಸಾಧ್ಯ? ಡಾ. ಕಲಾಂ ಅವರು ಈ ವಿಶ್ವವಿದ್ಯಾಲಯದೊಂದಿಗೆ ನಿಕಟ ಸಂಬಂಧ ಹೊಂದಿರುವುದು ಅಣ್ಣಾ ವಿಶ್ವವಿದ್ಯಾಲಯದ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ನನಗೆ ಖಾತ್ರಿಯಿದೆ. ಅವರು ತಂಗಿದ್ದ ಕೋಣೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದೆ ಎಂದು ನಾನು ಕೇಳಿದ್ದೇನೆ. ಅವರ ಚಿಂತನೆಗಳು ಮತ್ತು ಮೌಲ್ಯಗಳು ನಮ್ಮ ಯುವಕರಿಗೆ ಸ್ಫೂರ್ತಿ ನೀಡಲಿ.

 

ಸ್ನೇಹಿತರೇ,

 

ನೀವು ವಿಶಿಷ್ಟ ಸಮಯಗಳಲ್ಲಿ ಪದವಿ ಪಡೆಯುತ್ತಿದ್ದೀರಿ. ಕೆಲವರು ಇದನ್ನು ಜಾಗತಿಕ ಅನಿಶ್ಚಿತತೆಯ ಸಮಯ ಎಂದು ಕರೆಯುತ್ತಾರೆ. ಆದರೆ ನಾನು ಅದನ್ನು ಉತ್ತಮ ಅವಕಾಶಗಳ ಸಮಯ ಎಂದು ಕರೆಯುತ್ತೇನೆ. ಕೋವಿಡ್‌ -19 ಸಾಂಕ್ರಾಮಿಕವು ಅಭೂತ ಪೂರ್ವ ಘಟನೆಯಾಗಿದೆ. ಇದು ಶತಮಾನದ ಒಂದು ಬಾರಿ ಬಿಕ್ಕಟ್ಟಾಗಿದ್ದು, ಇದಕ್ಕಾಗಿ ಯಾರ ಬಳಿಯೂ ಬಳಕೆದಾರರ ಕೈಪಿಡಿ ಇರಲಿಲ್ಲ. ಇದು ಪ್ರತಿಯೊಂದು ದೇಶವನ್ನು ಪರೀಕ್ಷಿಸಿತು. ನಿಮಗೆ ತಿಳಿದಿರುವಂತೆ, ಪ್ರತಿಕೂಲತೆಗಳು ನಾವು ಯಾವುದರಿಂದ ಮಾಡಲ್ಪಟ್ಟಿದ್ದೇವೆ ಎಂಬುದನ್ನು ಬಹಿರಂಗಪಡಿಸುತ್ತವೆ. ತಮ್ಮ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು, ವೃತ್ತಿಪರರು ಮತ್ತು ಸಾಮಾನ್ಯ ಜನರಿಗೆ ಧನ್ಯವಾದಗಳು, ಭಾರತವು ಅಜ್ಞಾತವನ್ನು ಆತ್ಮವಿಶ್ವಾಸದಿಂದ ಎದುರಿಸಿತು. ಇದರ ಪರಿಣಾಮವಾಗಿ, ಇಂದು, ಭಾರತದ ಪ್ರತಿಯೊಂದು ವಲಯವು ಹೊಸ ಜೀವನದಿಂದ ಸಿಡಿಯುತ್ತಿದೆ. ಅದು ಉದ್ಯಮ, ನಾವೀನ್ಯತೆ, ಹೂಡಿಕೆ ಅಥವಾ ಅಂತಾರಾಷ್ಟ್ರೀಯ ವ್ಯಾಪಾರವಾಗಿರಲಿ, ಭಾರತವು ಮುಂಚೂಣಿಯಲ್ಲಿದೆ. ನಮ್ಮ ಉದ್ಯಮವು ಸಂದರ್ಭಕ್ಕೆ ತಕ್ಕಂತೆ ಬೆಳೆದಿದೆ. ಉದಾಹರಣೆಗೆ, ಎಲೆಕ್ಟ್ರಾನಿಕ್ಸ್‌ ತಯಾರಿಕೆ. ಕಳೆದ ವರ್ಷ, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್‌ ಫೋನ್‌ ತಯಾರಕ ರಾಷ್ಟ್ರವಾಗಿತ್ತು. ನಾವೀನ್ಯತೆಯು ಒಂದು ಜೀವನ ವಿಧಾನವಾಗಿ ಮಾರ್ಪಡುತ್ತಿದೆ. ಕಳೆದ 6 ವರ್ಷಗಳಲ್ಲಿ, ಮಾನ್ಯತೆ ಪಡೆದ ನವೋದ್ಯಮಗಳ ಸಂಖ್ಯೆ ಹದಿನೈದು ಸಾವಿರ ಪ್ರತಿಶತದಷ್ಟು ಹೆಚ್ಚಾಗಿದೆ! ಹೌದು, ನೀವು ಅದನ್ನು ಸರಿಯಾಗಿ ಕೇಳಿದ್ದೀರಿ - ಹದಿನೈದು ಸಾವಿರ ಪ್ರತಿಶತ. 2016 ರಲ್ಲಿಕೇವಲ 470 ಇದ್ದ ಇದು ಈಗ ಸುಮಾರು ಎಪ್ಪತ್ತಮೂರು ಸಾವಿರದಷ್ಟಿದೆ! ಉದ್ಯಮ ಮತ್ತು ನಾವೀನ್ಯತೆ ಉತ್ತಮವಾಗಿ ಕಾರ್ಯನಿರ್ವಹಿಸಿದಾಗ, ಹೂಡಿಕೆಗಳು ಅನುಸರಿಸುತ್ತವೆ. ಕಳೆದ ವರ್ಷ, ಭಾರತವು ದಾಖಲೆಯ 83 ಶತಕೋಟಿ ಡಾಲರ್‌ ಎಫ್‌ಡಿಐ ಅನ್ನು ಸ್ವೀಕರಿಸಿದೆ. ನಮ್ಮ ನವೋದ್ಯಮಗಳು ಸಹ ಸಾಂಕ್ರಾಮಿಕ ರೋಗದ ನಂತರ ದಾಖಲೆಯ ಧನಸಹಾಯವನ್ನು ಪಡೆದಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಅಂತಾರಾಷ್ಟ್ರೀಯ ವ್ಯಾಪಾರ ಚಲನಶೀಲತೆಯಲ್ಲಿಭಾರತದ ಸ್ಥಾನವು ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ನಮ್ಮ ದೇಶವು ಸರಕು ಮತ್ತು ಸೇವೆಗಳ ಅತ್ಯಧಿಕ ರಫ್ತನ್ನು ದಾಖಲಿಸಿದೆ. ನಾವು ಜಗತ್ತಿಗೆ ನಿರ್ಣಾಯಕ ಸಮಯದಲ್ಲಿಆಹಾರ ಧಾನ್ಯವನ್ನು ರಫ್ತು ಮಾಡಿದ್ದೇವೆ. ನಾವು ಇತ್ತೀಚೆಗೆ ಯು.ಎ.ಇ. ಯೊಂದಿಗೆ ನಮ್ಮ ಪಶ್ಚಿಮಕ್ಕೆ ಮತ್ತು ನಮ್ಮ ಪೂರ್ವಕ್ಕೆ ಆಸ್ಪ್ರೇಲಿಯಾದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಭಾರತವು ಪ್ರಮುಖ ಕೊಂಡಿಯಾಗುತ್ತಿದೆ. ಭಾರತವು ಅಡೆತಡೆಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತಿರುವುದರಿಂದ, ಈಗ ನಾವು ಹೆಚ್ಚಿನ ಪರಿಣಾಮ ಬೀರುವ ಅವಕಾಶವನ್ನು ಹೊಂದಿದ್ದೇವೆ.

 

ಸ್ನೇಹಿತರೇ,

ನಿಮ್ಮಲ್ಲಿ ಹೆಚ್ಚಿನವರು ಎಂಜಿನಿಯರಿಂಗ್‌ ಅಥವಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ಟ್ರೀಮ್‌ಗಳಲ್ಲಿ ಅಧ್ಯಯನ ಮಾಡಿದ್ದೀರಿ. ತಂತ್ರಜ್ಞಾನ ಆಧಾರಿತ ಅಡಚಣೆಗಳ ಈ ಯುಗದಲ್ಲಿ, ನಿಮ್ಮ ಪರವಾಗಿ ಮೂರು ಪ್ರಮುಖ ಅಂಶಗಳಿವೆ. ಮೊದಲ ಅಂಶವೆಂದರೆ ತಂತ್ರಜ್ಞಾನದ ಅಭಿರುಚಿ ಇದೆ. ತಂತ್ರಜ್ಞಾನದ ಬಳಕೆಯಿಂದ ಆರಾಮದ ಪ್ರಜ್ಞೆ ಹೆಚ್ಚುತ್ತಿದೆ. ಕಡುಬಡವರು ಸಹ ಇದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಮಾರುಕಟ್ಟೆಗಳು, ಹವಾಮಾನ ಮತ್ತು ಬೆಲೆಗಳ ಬಗ್ಗೆ ಮಾಹಿತಿ ಪಡೆಯಲು ರೈತರು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಗೃಹಿಣಿಯರು ತಮ್ಮ ಜೀವನವನ್ನು ಸುಲಭಗೊಳಿಸಲು ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಮಕ್ಕಳು ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಯುತ್ತಿದ್ದಾರೆ. ಸಣ್ಣ ಮಾರಾಟಗಾರರು ಡಿಜಿಟಲ್‌ ಪಾವತಿಗಳನ್ನು ಬಳಸುತ್ತಿದ್ದಾರೆ. ನೀವು ಅವರಿಗೆ ನಗದು ನೀಡಿದರೆ, ಅವರಲ್ಲಿಕೆಲವರು ನಿಜವಾಗಿಯೂ ಅವರು ಡಿಜಿಟಲ್‌ ಅನ್ನು ಬಯಸುತ್ತಾರೆ ಎಂದು ನಿಮಗೆ ಹೇಳುತ್ತಾರೆ. ಡಿಜಿಟಲ್‌ ಪಾವತಿ ಮತ್ತು ಫಿನ್ಟೆಕ್ಟ್ನಲ್ಲಿ ಭಾರತವು ವಿಶ್ವ ನಾಯಕನಾಗಿದೆ. ತಾಂತ್ರಿಕ ಆವಿಷ್ಕಾರಗಳಿಗೆ ಒಂದು ದೊಡ್ಡ ಮಾರುಕಟ್ಟೆಯು ನಿಮ್ಮ ಮ್ಯಾಜಿಕ್‌ ಮಾಡಲು ಕಾಯುತ್ತಿದೆ.

 

ಎರಡನೆಯ ಅಂಶವೆಂದರೆ ಅಪಾಯವನ್ನು ತೆಗೆದುಕೊಳ್ಳುವವರಲ್ಲಿ ನಂಬಿಕೆ ಇದೆ. ಈ ಹಿಂದೆ, ಸಾಮಾಜಿಕ ಸಂದರ್ಭಗಳಲ್ಲಿ, ಒಬ್ಬ ಯುವಕನಿಗೆ ಅವನು ಅಥವಾ ಅವಳು ಉದ್ಯಮಿ ಎಂದು ಹೇಳುವುದು ಕಷ್ಟಕರವಾಗಿತ್ತು. ಜನರು ಅವರಿಗೆ ‘ನೆಲೆಸಿ’ ಎಂದು ಹೇಳುತ್ತಿದ್ದರು, ಅಂದರೆ, ಸಂಬಳದ ಕೆಲಸವನ್ನು ಪಡೆಯಿರಿ. ಈಗ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ನೀವು ನಿಮ್ಮಷ್ಟಕ್ಕೆ ಏನನ್ನಾದರೂ ಪ್ರಾರಂಭಿಸಲು ಪ್ರಯತ್ನಿಸಿದ್ದೀರಾ ಎಂದು ಜನರು ಕೇಳುತ್ತಾರೆ! ಒಬ್ಬರು ಉದ್ಯೋಗದಲ್ಲಿಕೆಲಸ ಮಾಡುತ್ತಿದ್ದರೂ ಸಹ, ನವೋದ್ಯಮಗಳಿಗೆ ಕೆಲಸ ಮಾಡಲು ಅದನ್ನು ತಂಪಾಗಿ ನೋಡಲಾಗುತ್ತದೆ. ರಿಸ್ಕ್‌ ತೆಗೆದುಕೊಳ್ಳುವವರ ಹೆಚ್ಚಳವು ನಿಮಗೆ ಎರಡು ವಿಷಯಗಳನ್ನು ಅರ್ಥೈಸುತ್ತದೆ. ನೀವು ಸ್ವತಃ ಅಪಾಯಗಳನ್ನು ತೆಗೆದುಕೊಳ್ಳಬಹುದು. ಅಥವಾ ಇತರರು ಸೃಷ್ಟಿಸಿದ ಅವಕಾಶಗಳ ಮೇಲೆ ನೀವು ನಿರ್ಮಿಸಬಹುದು.

 

ಮೂರನೆಯ ಅಂಶವೆಂದರೆ ಸುಧಾರಣೆಯ ಮನೋಧರ್ಮವಿದೆ. ಈ ಹಿಂದೆ, ಬಲವಾದ ಸರ್ಕಾರ ಎಂದರೆ ಅದು ಎಲ್ಲವನ್ನೂ ಮತ್ತು ಎಲ್ಲರನ್ನೂ ನಿಯಂತ್ರಿಸಬೇಕು ಎಂಬ ಕಲ್ಪನೆ ಇತ್ತು. ಆದರೆ ನಾವು ಇದನ್ನು ಬದಲಾಯಿಸಿದ್ದೇವೆ. ಬಲವಾದ ಸರ್ಕಾರವು ಎಲ್ಲವನ್ನೂ ಅಥವಾ ಎಲ್ಲರನ್ನೂ ನಿಯಂತ್ರಿಸುವುದಿಲ್ಲ. ಇದು ಮಧ್ಯಪ್ರವೇಶಿಸುವ ವ್ಯವಸ್ಥೆಯ ಪ್ರಚೋದನೆಯನ್ನು ನಿಯಂತ್ರಿಸುತ್ತದೆ. ಬಲವಾದ ಸರ್ಕಾರವು ನಿರ್ಬಂಧಿತವಲ್ಲಆದರೆ ಸ್ಪಂದಿಸುತ್ತದೆ. ಬಲವಾದ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂಚಲಿಸುವುದಿಲ್ಲ. ಇದು ತನ್ನನ್ನು ಸೀಮಿತಗೊಳಿಸುತ್ತದೆ ಮತ್ತು ಜನರ ಪ್ರತಿಭೆಗಳಿಗೆ ಸ್ಥಳಾವಕಾಶವನ್ನು ನೀಡುತ್ತದೆ. ಬಲವಾದ ಸರ್ಕಾರದ ಬಲವು ತನಗೆ ಎಲ್ಲವನ್ನೂ ತಿಳಿಯಲು ಅಥವಾ ಮಾಡಲು ಸಾಧ್ಯವಿಲ್ಲಎಂದು ಒಪ್ಪಿಕೊಳ್ಳುವ ಅದರ ವಿನಮ್ರತೆಯಲ್ಲಿಅಡಗಿದೆ. ಇದಕ್ಕಾಗಿಯೇ ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳನ್ನು ನೋಡುತ್ತೀರಿ, ಅದು ಜನರಿಗೆ ಮತ್ತು ಅವರ ಸ್ವಾತಂತ್ರ್ಯಕ್ಕೆ ಹೆಚ್ಚಿನ ಸ್ಥಳಾವಕಾಶವನ್ನು ನೀಡುತ್ತದೆ.

 

ಹೊಸ ರಾಷ್ಟ್ರೀಯ ಶಿಕ್ಷ ಣ ನೀತಿಯು ವಿಕಸನಗೊಳ್ಳುತ್ತಿರುವ ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಯುವಕರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಸುಮಾರು 25,000 ಅಂಗೀಕಾರದ ನಿಯಮಗಳನ್ನು ರದ್ದುಗೊಳಿಸಲಾಗಿದೆ. ಹಾಗೆಯೆ ಜೀವನವನ್ನು ಸುಲಭ ಮಾಡುತ್ತಿದೆ. ಏಂಜಲ್‌ ತೆರಿಗೆಯನ್ನು ತೆಗೆದುಹಾಕುವುದು, ಪೂರ್ವಾನ್ವಯ ತೆರಿಗೆಯನ್ನು ತೆಗೆದುಹಾಕುವುದು ಮತ್ತು ಕಾರ್ಪೊರೇಟ್‌ ತೆರಿಗೆಯನ್ನು ಕಡಿಮೆ ಮಾಡುವುದು - ಹೂಡಿಕೆಗಳು ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುತ್ತಿವೆ. ಡ್ರೋನ್‌ಗಳು, ಬಾಹ್ಯಾಕಾಶ ಮತ್ತು ಭೌಗೋಳಿಕ ವಲಯಗಳಲ್ಲಿನ ಸುಧಾರಣೆಗಳು ಹೊಸ ಮಾರ್ಗಗಳನ್ನು ತೆರೆಯುತ್ತಿವೆ. ಪಿಎಂ ಗತಿ ಶಕ್ತಿ ಮಾಸ್ಟರ್‌ ಪ್ಲಾನ್‌ ಮೂಲಕ ಮೂಲಸೌಕರ್ಯ ಕ್ಷೇತ್ರದಲ್ಲಿನ ಸುಧಾರಣೆಗಳು ವೇಗ ಮತ್ತು ಪ್ರಮಾಣದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಸೃಷ್ಟಿಸುತ್ತಿವೆ. ತಂತ್ರಜ್ಞಾನದ ಅಭಿರುಚಿ, ರಿಸ್ಕ್‌ ತೆಗೆದುಕೊಳ್ಳುವವರಲ್ಲಿ ನಂಬಿಕೆ ಮತ್ತು ಸುಧಾರಣೆಯ ಮನೋಧರ್ಮವಿದೆ. ಈ ಎಲ್ಲಾ ಅಂಶಗಳು ನಿಮಗೆ ಅವಕಾಶಗಳನ್ನು ಸೃಷ್ಟಿಸುವ, ಸುಸ್ಥಿರವಾಗಿ ಮತ್ತು ಬೆಳೆಸುವ ವೇದಿಕೆಯನ್ನು ಸೃಷ್ಟಿಸುತ್ತಿವೆ.

 

ಸ್ನೇಹಿತರೇ,

 

ಮುಂದಿನ 25 ವರ್ಷಗಳು ನಿಮಗೆ ಮತ್ತು ಭಾರತಕ್ಕೆ ನಿರ್ಣಾಯಕವಾಗಿವೆ. ಇದು ಅಮೃತ್‌ ಕಾಲ್‌ ಆಗಿದ್ದು, ಸ್ವಾತಂತ್ರ್ಯದ 100ನೇ ವರ್ಷದವರೆಗೆ ಮುಂದುವರಿಯುತ್ತದೆ. ನಿಮ್ಮಂತಹ ಅನೇಕ ಯುವಕರು ತಮ್ಮದೇ ಆದ ಭವಿಷ್ಯವನ್ನು ಮತ್ತು ಭಾರತದ ಭವಿಷ್ಯವನ್ನು ನಿರ್ಮಿಸಿಕೊಳ್ಳುವುದು ನಮ್ಮ ಅದೃಷ್ಟ. ಆದ್ದರಿಂದ, ನಿಮ್ಮ ಬೆಳವಣಿಗೆಯು ಭಾರತದ ಬೆಳವಣಿಗೆಯಾಗಿದೆ. ನಿಮ್ಮ ಕಲಿಕೆಗಳು ಭಾರತದ ಕಲಿಕೆಗಳಾಗಿವೆ. ನಿಮ್ಮ ಗೆಲುವು ಭಾರತದ ಗೆಲುವು. ಆದ್ದರಿಂದ, ನೀವು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ನಿಮ್ಮ ಯೋಜನೆಗಳನ್ನು ರೂಪಿಸಿದಾಗ ನೀವು ಸ್ವಯಂಚಾಲಿತವಾಗಿ ಭಾರತಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದ್ದೀರಿ ಎಂಬುದನ್ನು ನೆನಪಿಡಿ. ಇದು ನಿಮ್ಮ ಪೀಳಿಗೆಗೆ ಮಾತ್ರ ಇರುವ ಐತಿಹಾಸಿಕ ಅವಕಾಶವಾಗಿದೆ. ಅದನ್ನು ತೆಗೆದುಕೊಳ್ಳಿ ಮತ್ತು ಅದರಿಂದ ಅತ್ಯುತ್ತಮವಾದದ್ದನ್ನು ಮಾಡಿ ! ಮತ್ತೊಮ್ಮೆ, ಅಭಿನಂದನೆಗಳು ಮತ್ತು ಆಲ್‌ ದಿ ಬೆಸ್ಟ್‌!.

 

********



(Release ID: 1846249) Visitor Counter : 138