ರೈಲ್ವೇ ಸಚಿವಾಲಯ

2022ರ ಜುಲೈ 23ರಂದು ’ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್ಸ್ ' ಆಚರಣೆಗಳು ಸಮಾರೋಪ


ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ

ಎಲ್ಲಾ ರೈಲ್ವೆ ವಲಯಗಳು ಭಾಗವಹಿಸಲಿವೆ

Posted On: 21 JUL 2022 1:09PM by PIB Bengaluru

'ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಶನ್ಸ್' ಐಕಾನಿಕ್ ಸಪ್ತಾಹ ಆಚರಣೆಯ ಸಮಾರೋಪ ಸಮಾರಂಭವನ್ನು ಭಾರತೀಯ ರೈಲ್ವೆಯು 2022 ರ ಜುಲೈ 23 ರಂದು ಆಯೋಜಿಸಿದೆ. ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಅವರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

 

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಭಾರತೀಯ ರೈಲ್ವೆಯು ಜುಲೈ 18 ರಿಂದ ಜುಲೈ 23 ರವರೆಗೆ 'ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಶನ್ಸ್' ಎಂಬ ಒಂದು ವಾರದ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ, ಗುರುತಿಸಲಾದ 75 ನಿಲ್ದಾಣಗಳು / 27 ರೈಲುಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಹಿಸಿದ ಪ್ರಾಮುಖ್ಯತೆಯನ್ನು ಸಾದರ ಪಡಿಸಲಾಗುತ್ತದೆ.

 

ಎಲ್ಲಾ ವಲಯಗಳು / ವಿಭಾಗಗಳನ್ನು ಅವುಗಳ ನಾಮನಿರ್ದೇಶಿತ ನಿಲ್ದಾಣಗಳ ಮೂಲಕ (ಎಲ್ಲಾ 75 ಸ್ವಾತಂತ್ರ್ಯ ನಿಲ್ದಾಣಗಳು) ಸಮಾರೋಪ ಸಮಾರಂಭದಲ್ಲಿ ವಿಸಿ ಮೂಲಕ ಸಂಪರ್ಕಿಸಲಾಗುತ್ತದೆ. ಜನರಲ್ ಮ್ಯಾನೇಜರ್ ಗಳು ವಿಸಿ ಮೂಲಕ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಈ ನಿಟ್ಟಿನಲ್ಲಿ, ರೈಲ್ವೆ ಮಂಡಳಿ ಈಗಾಗಲೇ ಎಲ್ಲಾ ವಲಯ ರೈಲ್ವೆಗಳ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದೆ.

 

ಈ ಕಾರ್ಯಕ್ರಮವನ್ನು ಎಲ್ಲಾ ವಲಯಗಳು / ವಿಭಾಗಗಳಲ್ಲಿ ಅವುಗಳ ನಾಮನಿರ್ದೇಶಿತ ನಿಲ್ದಾಣಗಳ (ಎಲ್ಲಾ 75 ಸ್ವಾತಂತ್ರ್ಯ ನಿಲ್ದಾಣಗಳು) ಮೂಲಕ ದ್ವಿಮುಖ ಸಂವಹನ ಸಂಪರ್ಕದೊಂದಿಗೆ ನೇರಪ್ರಸಾರ ಮಾಡಲಾಗುತ್ತದೆ.

 

***********



(Release ID: 1843448) Visitor Counter : 154