ಸಂಪುಟ

ನ್ಯಾಯಾಂಗ ಸಹಕಾರ ಕ್ಷೇತ್ರದಲ್ಲಿ ತಿಳಿವಳಿಕೆ ಪತ್ರ, ಮಾಲ್ಡೀವ್ಸ್‌ ನ್ಯಾಯಾಂಗ ಸೇವಾ ಆಯೋಗದ ಜತೆ ಸಹಿ ಹಾಕಲು ಕೇಂದ್ರ ಸಂಪುಟ ಅನುಮೋದನೆ

Posted On: 20 JUL 2022 2:32PM by PIB Bengaluru

ಭಾರತ ಮತ್ತು ಮಾಲ್ಡೀವ್ಸ್ ಗಣರಾಜ್ಯದ ನಡುವೆ ನ್ಯಾಯಾಂಗ ಕ್ಷೇತ್ರದಲ್ಲಿ ಸಹಕಾರ ಹೊಂದುವ ತಿಳಿವಳಿಕೆ ಒಪ್ಪಂದ(ಎಂಒಯು) ಏರ್ಪಟ್ಟಿದ್ದು, ಮಾಲ್ಡೀವ್ಸ್ ನ ನ್ಯಾಯಾಂಗ ಸೇವಾ ಆಯೋಗದ ಜತೆ ಸಹಿ ಹಾಕಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಹಕಾರ ಹೊಂದುವ ಭಾರತ ಮತ್ತು ಇತರ ದೇಶಗಳ ನಡುವಿನ 8ನೇ ಒಪ್ಪಂದ ಇದಾಗಿದೆ.
ನ್ಯಾಯಾಲಯಗಳ ಡಿಜಿಟಲೀಕರಣಕ್ಕಾಗಿ ಮಾಹಿತಿ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆಯಲು ಈ ಒಪ್ಪಂದವು ವೇದಿಕೆ ಕಲ್ಪಿಸಲಿದೆ. ಎರಡೂ ರಾಷ್ಟ್ರಗಳ ಐಟಿ ಕಂಪನಿಗಳು ಮತ್ತು ಸ್ಟಾರ್ಟಪ್‌ಗಳಿಗೆ ಇದು ಸಂಭಾವ್ಯ ಬೆಳವಣಿಗೆಯ ಕ್ಷೇತ್ರವಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ಭಾರತ ಮತ್ತು ಮಾಲ್ಡೀವ್ಸ್ ನಡುವಿನ ನಿಕಟ ಸಂಬಂಧವು ಬಹು ಆಯಾಮಗಳಲ್ಲಿ ತೀವ್ರಗೊಂಡಿದೆ. ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರದಲ್ಲಿ ಸಹಕಾರ ಕುರಿತ ಈ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯ ಮತ್ತಷ್ಟು ಉತ್ತೇಜನ ಪಡೆಯಲಿದೆ. ಇದು 2 ದೇಶಗಳ ನಡುವಿನ ನ್ಯಾಯಾಂಗ ಮತ್ತು ಇತರ ಕಾನೂನು ಕ್ಷೇತ್ರಗಳಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ. ಎತ್ತಕ್ಕಿಂತ ವಿಶೇಷವಾಗಿ, "ನೆರೆಹೊರೆಯ ರಾಷ್ಟ್ರಗಳಿಗೆ ಮೊದಲ ಆದ್ಯತೆ" ನೀತಿಯ ಉದ್ದೇಶಗಳನ್ನು ಮತ್ತಷ್ಟು ವ್ಯಾಪಕಗೊಳಿಸಲಿದೆ.

    
********



(Release ID: 1843107) Visitor Counter : 131