ಹಣಕಾಸು ಸಚಿವಾಲಯ
azadi ka amrit mahotsav g20-india-2023

'ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾದ' ಸರಕುಗಳ ಮೇಲೆ ಜಿಎಸ್ ಟಿ ಅನ್ವಯ ಕುರಿತು ಪದೇಪದೆ ಕೇಳಲಾದ ಪ್ರಶ್ನೆಗಳಿಗೆ ಸ್ಪಷ್ಟನೆ

Posted On: 18 JUL 2022 9:12AM by PIB Bengaluru

ಜಿಎಸ್ಟಿ ಮಂಡಳಿ ತನ್ನ 47ನೇ ಸಭೆಯಲ್ಲಿ ಮಾಡಿದ ಶಿಫಾರಸುಗಳ ಅನುಸಾರವಾಗಿ ಜಿಎಸ್ಟಿ ತೆರಿಗೆ ದರಕ್ಕೆ ಮಾಡಲಾಗಿರುವ  ಬದಲಾವಣೆಗಳು ಇಂದಿನಿಂದ ಅಂದರೆ 2022  ಜುಲೈ 18ರಿಂದ ಜಾರಿಗೆ ಬಂದಿವೆ. ಆ ರೀತಿಯ ಒಂದು ಬದಲಾವಣೆಯು ನೋಂದಾಯಿತ ಬ್ರ್ಯಾಂಡ್ ಹೊಂದಿರುವ ನಿರ್ದಿಷ್ಟ ಸರಕುಗಳ ಮೇಲೆ ಜಿಎಸ್ಟಿ ಅನ್ವಯವಾಗುತ್ತದೆ. ನ್ಯಾಯಾಲಯದಲ್ಲಿ ಕಾರ್ಯಸಾಧ್ಯವಾದ ಹಕ್ಕು ಅಥವಾ ಜಾರಿಗೊಳಿಸಬಹುದಾದ ಹಕ್ಕು ಲಭ್ಯವಿರುವ ಬ್ರ್ಯಾಂಡ್ ಹೊಂದಿರುವ "ಪೂರ್ವ-ಪ್ಯಾಕೇಜ್ ಮತ್ತು ಲೇಬಲ್" ಮಾಡಿದ ಸರಕುಗಳ ಮೇಲೆ ಜಿಎಸ್ಟಿ ವಿಧಿಸಲಾಗುತ್ತಿದೆ.  

ತೆರಿಗೆ ದರ ಬದಲಾವಣೆ ವ್ಯಾಪ್ತಿಯ ಬಗ್ಗೆ ಸ್ಪಷ್ಟೀಕರಣ ಕೋರಿ ಕೆಲವು ಪ್ರಾತಿನಿಧ್ಯ(ಮನವಿ)ಗಳನ್ನು ಸ್ವೀಕರಿಸಲಾಗಿದೆ. ವಿಶೇಷವಾಗಿ ಆಹಾರ ಉತ್ಪನ್ನಗಳಾದ ಬೇಳೆಕಾಳುಗಳು, ಹಿಟ್ಟು, ಧಾನ್ಯಗಳು, ಇತ್ಯಾದಿ (ಸುಂಕದ 1ರಿಂದ 21ರ ಅಧ್ಯಾಯಗಳ ಅಡಿ ಬರುವ ನಿರ್ದಿಷ್ಟ ವಸ್ತುಗಳು). ಈ ನಿರ್ದಿಷ್ಟ ಉತ್ಪನ್ನಗಳಿಗೆ 2022 ಜುಲೈ 13ರಂದು  ಅಧಿಸೂಚನೆ ಸಂಖ್ಯೆ 6/2022-ಕೇಂದ್ರ ತೆರಿಗೆ (ದರ), ಮತ್ತು ಎಸ್ ಜಿಎಸ್ಟಿ ಮತ್ತು ಐಜಿಎಸ್ಟಿಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಇಂದಿನಿಂದ ಅಂದರೆ 2022 ಜುಲೈ 18ರಿಂದ ಜಾರಿಗೆ ಬಂದ 'ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಿದ' ಸರಕುಗಳ ಮೇಲಿನ ಜಿಎಸ್ಟಿ ತೆರಿಗೆಗೆ ಸಂಬಂಧಿಸಿದಂತೆ ಪದೇಪದೆ ಕೇಳಲಾಗುವ ಪ್ರಶ್ನೆ(ಎಫ್ಎಕ್ಯು)ಗಳಿಗೆ  ಸಂಬಂಧಿಸಿದ ಕೆಲವು ಅನುಮಾನಗಳು, ವಿಚಾರಣೆಗಳಿಗೆ ಇಲ್ಲಿ ಸ್ಪಷ್ಟನೆ ನೀಡಲಾಗಿದೆ. ಇವು ಕೆಳಕಂಡಂತಿವೆ:

 

ಕ್ರಮ ಸಂಖ್ಯೆ

ಪ್ರಶ್ನೆ

ಸ್ಪಷ್ಟೀಕರಣ

1

2022 ಜುಲೈ 18ರಿಂದ ಜಾರಿಗೆ ಬರುವಂತೆ ಪ್ಯಾಕೇಜ್ ಮತ್ತು ಲೇಬಲ್ ಮಾಡಿದ ಸರಕುಗಳಿಗೆ ಸಂಬಂಧಿಸಿದಂತೆ ಯಾವ ಬದಲಾವಣೆಗಳನ್ನು ಮಾಡಲಾಗಿದೆ?

2022 ಜುಲೈ 18ಕ್ಕಿಂತ ಮೊದಲು, ನಿರ್ದಿಷ್ಟಪಡಿಸಿದ ಸರಕುಗಳನ್ನು ಯುನಿಟ್ ಕಂಟೇನರ್‌ನಲ್ಲಿ ಇರಿಸಿದಾಗ ಮತ್ತು ನೋಂದಾಯಿತ ಬ್ರ್ಯಾಂಡ್ ಹೆಸರು ಹೊಂದಿರುವ ಅಥವಾ ಬ್ರಾಂಡ್ ಹೆಸರು ಹೊಂದಿರುವಾಗ ಅವುಗಳ ಮೇಲೆ ಜಿಎಸ್ ಟಿ ಅನ್ವಯಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕ್ರಮಬದ್ಧವಾದ ಹಕ್ಕು ಅಥವಾ ಜಾರಿಗೊಳಿಸಬಹುದಾದ ಹಕ್ಕು ಲಭ್ಯವಿದೆ. ಆದರೆ 2022 ಜುಲೈ 18ರಿಂದ ಜಾರಿಗೆ ಬರುವಂತೆ, ಈ ನಿಬಂಧನೆಯು ಬದಲಾವಣೆಗೆ ಒಳಗಾಗಿದೆ. ನಂತರದ ಪ್ರಶ್ನೆಗಳಲ್ಲಿ ವಿವರಿಸಿದಂತೆ ಕಾನೂನು ಮಾಪನಶಾಸ್ತ್ರ ಕಾಯಿದೆಯ ನಿಬಂಧನೆಗಳನ್ನು ಆಕರ್ಷಿಸುವ "ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾದ" ಸರಕುಗಳ ಪೂರೈಕೆಯ ಮೇಲೆ ಜಿಎಸ್ ಟಿ ಅನ್ವಯವಾಗುತ್ತದೆ. ಉದಾಹರಣೆಗೆ, ಬೇಳೆಕಾಳು, ಅಕ್ಕಿ, ಗೋಧಿ ಮತ್ತು ಹಿಟ್ಟು  ಮುಂತಾದ ಧಾನ್ಯಗಳು ಅಥವಾ ವಸ್ತುಗಳಿಗೆ ಈ ಹಿಂದೆ ಬ್ರಾಂಡ್ ಮತ್ತು ಯುನಿಟ್ ಕಂಟೇನರ್‌ನಲ್ಲಿ ಪ್ಯಾಕ್ ಮಾಡಿದಾಗ (ಮೇಲೆ ತಿಳಿಸಿದಂತೆ) 5% ದರದ ಜಿಎಸ್ ಟಿ ಅನ್ವಯವಾಗುತ್ತಿತ್ತು. ಆದರೆ 18.7.2022ರಿಂದ ಜಾರಿಗೆ ಬರುವಂತೆ, ಈ ವಸ್ತುಗಳು "ಪ್ರಿ-ಪ್ಯಾಕೇಜ್ ಮತ್ತು ಲೇಬಲ್" ಮಾಡಿದಾಗ ಜಿಎಸ್ ಟಿ ಅನ್ವಯವಾಗಲಿದೆ. ಹೆಚ್ಚುವರಿಯಾಗಿ, 2022 ಜುಲೈ 18ರಿಂದ ಜಾರಿಗೆ ಬರುವಂತೆ "ಪ್ರಿಪ್ಯಾಕೇಜ್ ಮತ್ತು ಲೇಬಲ್" ಮಾಡಲಾದ ಮೊಸರು, ಲಸ್ಸಿ, ಮಂಡಕ್ಕಿ(ಪಫ್ಡ್ ರೈಸ್) ಮುಂತಾದ ಕೆಲವು ವಸ್ತುಗಳಿಗೆ 5% ದರದ ಜಿಎಸ್ ಟಿ ಅನ್ವಯವಾಗುತ್ತದೆ.

 

ಮೂಲಭೂತವಾಗಿ, ಇದು ನಿರ್ದಿಷ್ಟ ಬ್ರಾಂಡ್ ನ  ಸರಕುಗಳ ಮೇಲೆ "ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾದ" ನಿರ್ದಿಷ್ಟ ಸರಕುಗಳಿಗೆ ಜಿಎಸ್ ಟಿ ವಿಧಿಸುವ ವಿಧಾನಗಳಲ್ಲಿ  ಬದಲಾವಣೆ ಮಾಡಲಾಗಿದೆ.

[ದಯವಿಟ್ಟು ಅಧಿಸೂಚನೆ ಸಂಖ್ಯೆ. 6/2022-ಕೇಂದ್ರ ತೆರಿಗೆ (ದರ) ಮತ್ತು ಸಂಬಂಧಿತ ಎಸ್ ಜಿಎಸ್ ಟಿ, ಐಜಿಎಸ್ ಟಿ ಕಾಯಿದೆ ಅಡಿಯ ಅಧಿಸೂಚನೆ ಉಲ್ಲೇಖಿಸಿ]

2

'ಪೂರ್ವ-ಪ್ಯಾಕ್ ಮತ್ತು ಲೇಬಲ್' ಮಾಡಲಾದ ಆಹಾರ ಪದಾರ್ಥಗಳಾದ ಬೇಳೆಕಾಳುಗಳು, ಧಾನ್ಯಗಳು ಮತ್ತು ಹಿಟ್ಟುಗಳಂತಹ ಉತ್ಪನ್ನಗಳ ಮೇಲೆ ಜಿಎಸ್‌ಟಿ ತೆರಿಗೆ ಉದ್ದೇಶದ ವ್ಯಾಪ್ತಿ ಏನು?

 

ಜಿಎಸ್ ಟಿ ಉದ್ದೇಶಗಳಿಗಾಗಿ, 2009ರ ಕಾನೂನು ಮಾಪನಶಾಸ್ತ್ರ ಕಾಯಿದೆಯ ವಿಭಾಗ 2ರ ಷರತ್ತು (1) ರಲ್ಲಿ ವ್ಯಾಖ್ಯಾನಿಸಲಾದ 'ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾದ' ಎಂಬ ಅಭಿವ್ಯಕ್ತಿಯು 'ಪೂರ್ವ-ಪ್ಯಾಕೇಜ್ ಮಾಡಲಾದ ಸರಕು' ಎಂದರ್ಥ. ಅಲ್ಲಿ ಸರಕು ಮುಂಚಿತವಾಗಿ ಇರುವ ಪ್ಯಾಕೇಜ್ - ಕಾನೂನು ಮಾಪನಶಾಸ್ತ್ರ ಕಾಯಿದೆ ಮತ್ತು ಅದರ ಅಡಿ ಮಾಡಲಾದ ನಿಯಮ ನಿಬಂಧನೆಗಳ ಅಡಿ ಪ್ಯಾಕ್ ಮಾಡಲಾದ ಅಥವಾ ಸುರಕ್ಷಿತವಾಗಿ ಅಂಟಿಸಲಾದ ಲೇಬಲ್ ಅಗತ್ಯವಿದೆ ಎಂಬ  ಘೋಷಣೆ ಅಗತ್ಯವಿದೆ.

ಕಾನೂನು ಮಾಪನಶಾಸ್ತ್ರ ಕಾಯಿದೆಯ ವಿಭಾಗ 2ರ ಷರತ್ತು (1) ಈ ಕೆಳಗಿನಂತೆ ಇದೆ.

(1) "ಪೂರ್ವ-ಪ್ಯಾಕೇಜ್ ಮಾಡಲಾದ ಸರಕು" ಎಂದರೆ, ಯಾವುದೇ ಸ್ವರೂಪದ ಪ್ಯಾಕೇಜ್‌ನಲ್ಲಿ ಸರಕನ್ನು ಇರಿಸಲಾಗುತ್ತದೆ, ಸೀಲ್ ಮಾಡಿರಲಿ ಅಥವಾ ಇಲ್ಲದಿರಲಿ, ಅದರಲ್ಲಿರುವ ಉತ್ಪನ್ನವು ಪೂರ್ವ-ನಿರ್ಧರಿತ ಪ್ರಮಾಣ ಹೊಂದಿರುತ್ತದೆ.

ಹೀಗಾಗಿ, ಈ ಕೆಳಗಿನ 2 ಗುಣಲಕ್ಷಣಗಳನ್ನು ಹೊಂದಿರುವ ಅಂತಹ ನಿರ್ದಿಷ್ಟ ಸರಕುಗಳ ಪೂರೈಕೆಗೆ ಜಿಎಸ್ ಟಿ ಅನ್ವಯವಾಗುತ್ತದೆ:

(i) ಇದು ಪೂರ್ವ-ಪ್ಯಾಕೇಜ್ ಆಗಿದೆ.

(ii) 2009ರ ಕಾನೂನು ಮಾಪನಶಾಸ್ತ್ರ ಕಾಯಿದೆ (2010ರ ಕಾಯಿದೆಯ 1) ಮತ್ತು ಅದರ ಅಡಿ ಮಾಡಲಾದ ನಿಯಮಗಳ ಅನ್ವಯ ಘೋಷಣೆ ಮಾಡಬೇಕಾಗುತ್ತದೆ.

ಆದಾಗ್ಯೂ, 2009ರ ಕಾನೂನು ಮಾಪನಶಾಸ್ತ್ರ ಕಾಯಿದೆ,(2010ರ ಕಾಯಿದೆ 1) ಅಡಿ ಘೋಷಣೆಗಳು, ಅನುಸರಣೆಗಳು ಅಗತ್ಯವಿಲ್ಲದ ಪ್ಯಾಕೇಜ್‌ನಲ್ಲಿ ಅಂತಹ ನಿರ್ದಿಷ್ಟ ಸರಕುಗಳನ್ನು ಒದಗಿಸಿದರೆ ಮತ್ತು ಅದರ ಅಡಿ ರಚಿಸಲಾದ ನಿಯಮಗಳು ಎಂದು ಪರಿಗಣಿಸಲಾಗುವುದಿಲ್ಲ ಜಿಎಸ್ ಟಿ ತೆರಿಗೆ ಉದ್ದೇಶಗಳಿಗಾಗಿ ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾಗಿದೆ ಎಂದರ್ಥ.

ಆಹಾರ ಪದಾರ್ಥಗಳ ವಿಷಯದಲ್ಲಿ (ಬೇಳೆಕಾಳುಗಳು, ಅಕ್ಕಿ, ಗೋಧಿ, ಹಿಟ್ಟು ಇತ್ಯಾದಿ) ಪೂರ್ವ-ಪ್ಯಾಕೇಜ್ ಮಾಡಿದ ನಿರ್ದಿಷ್ಟ ಆಹಾರ ಪದಾರ್ಥಗಳ ಪೂರೈಕೆಯು ಕಾನೂನು ಮಾಪನಶಾಸ್ತ್ರ ಕಾಯಿದೆಯ ಅಡಿ 'ಪೂರ್ವ-ಪ್ಯಾಕೇಜ್ ಮಾಡಿದ ಸರಕು' ವ್ಯಾಖ್ಯಾನದ ವ್ಯಾಪ್ತಿಯಲ್ಲಿ ಬರುತ್ತದೆ.  2009 ಮತ್ತು ಅದರ ಅಡಿ ಮಾಡಲಾದ ನಿಯಮಗಳು, ಅಂತಹ ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾದ ಪ್ಯಾಕೇಜ್‌ಗಳು 25 ಕಿಲೋ ಗ್ರಾಂಗಳಷ್ಟು [ಅಥವಾ 25 ಲೀಟರ್] ವರೆಗಿನ ಪ್ರಮಾಣ ಹೊಂದಿದ್ದರೆ, 2011ರ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ ಮಾಡಲಾದ ಸರಕುಗಳು) ನಿಯಮ 3(ಎ)ಗೆ ಒಳಪಟ್ಟಿರುತ್ತದೆ. ಇವು ಕಾಯಿದೆಯಲ್ಲಿ ಒದಗಿಸಲಾದ ವಿನಾಯಿತಿಗಳು ಮತ್ತು ಅದರ ಅಡಿ ಮಾಡಿದ ನಿಯಮಗಳಾಗಿವೆ.

 

3

ಕಾನೂನು ಮಾಪನಶಾಸ್ತ್ರ ಕಾಯಿದೆಯ ಅಡಿ ವಿವಿಧ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವುದು ಮತ್ತು ಅದರ ಅಡಿ ರಚಿಸಲಾದ ನಿಯಮಗಳ ವ್ಯಾಪ್ತಿಗೆ ಕೆಲಸವು ವಸ್ತುಗಳನ್ನು ಒಳಪಡಿಸುವ ನಿರ್ಧಾರದ ವ್ಯಾಪ್ತಿ  ಏನು?

ಅಂತಹ ಸರಕುಗಳಿಗೆ (ಆಹಾರ ಪದಾರ್ಥಗಳು- ಬೇಳೆಕಾಳುಗಳು, ಧಾನ್ಯಗಳು, ಹಿಟ್ಟು, ಇತ್ಯಾದಿ 2011ರ  ಕಾನೂನು ಮಾಪನಶಾಸ್ತ್ರದ (ಪ್ಯಾಕೇಜ್ ಮಾಡಲಾದ ಸರಕುಗಳು) ನಿಯಮಗಳ  ಅಧ್ಯಾಯ-2ರ ನಿಯಮ 3(ಎ) ಪ್ರಕಾರ, 25 ಕೆಜಿಗಿಂತ ಹೆಚ್ಚಿನ ಪ್ರಮಾಣ ಹೊಂದಿರುವ ಸರಕುಗಳ ಪ್ಯಾಕೇಜ್ ಅಥವಾ 25 ಲೀಟರ್‌ಗೆ ನಿಯಮ 6ರ ಅಡಿ ಘೋಷಣೆ ಮಾಡುವ ಅಗತ್ಯವಿಲ್ಲ. ಅಂತೆಯೇ, 25 ಕಿಲೋಗ್ರಾಂಗಿಂತ ಕಡಿಮೆ ಅಥವಾ ಸಮಾನವಾದ ಪ್ಯಾಕೇಜ್‌ಗಳಲ್ಲಿ ಪೂರ್ವ-ಪ್ಯಾಕೇಜ್ ಮಾಡಲಾದ ಸರಕುಗಳನ್ನು ಪೂರೈಸುವ ನಿರ್ದಿಷ್ಟ ಸರಕುಗಳ ಮೇಲೆ ಜಿಎಸ್ ಟಿ  ಅನ್ವಯವಾಗುತ್ತದೆ.

ವಿವರಣೆ: ಗ್ರಾಹಕರಿಗೆ ಚಿಲ್ಲರೆ ಮಾರಾಟಕ್ಕಾಗಿ ಪೂರೈಸಿದ 25 ಕೆಜಿಯ ಪೂರ್ವ-ಪ್ಯಾಕ್ ಮಾಡಲಾದ ಹಿಟ್ಟು ಅಂತಿಮವಾಗಿ ಜಿಎಸ್ ಟಿಗೆ ಒಶಪಡುತ್ತದೆ. ಆದಾಗ್ಯೂ, ಅಂತಹ 30 ಕೆ.ಜಿ ಪ್ಯಾಕ್‌ನ ಪೂರೈಕೆಯು ಜಿಎಸ್‌ಟಿ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ.

 

 

ಹೀಗಾಗಿ, 25 ಕೆಜಿ ಅಥವಾ 25 ಲೀಟರ್‌ಗಿಂತ ಹೆಚ್ಚಿನ ಪ್ರಮಾಣ  ಹೊಂದಿರುವ ಈ ವಸ್ತುಗಳ [ಧಾನ್ಯಗಳು, ಬೇಳೆಕಾಳುಗಳು, ಹಿಟ್ಟು ಇತ್ಯಾದಿ] ಒಂದೇ ಪ್ಯಾಕೇಜ್ ಜಿಎಸ್ ಟಿ ಉದ್ದೇಶಗಳಿಗಾಗಿ ಪೂರ್ವ-ಪ್ಯಾಕ್ ಮತ್ತು ಲೇಬಲ್ ಮಾಡಿದ ಸರಕುಗಳ ವರ್ಗಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಅವು ಜಿಎಸ್ಟಿಯನ್ನು ಆಕರ್ಷಿಸುವುದಿಲ್ಲ.

  1.  

ಹಲವು ಚಿಲ್ಲರೆ ಪ್ಯಾಕೇಜ್‌ಗಳನ್ನು ಒಳಗೊಂಡಿರುವ ಒಂದು ಪ್ಯಾಕೇಜ್‌ಗೆ ಜಿಎಸ್ ಟಿ ಅನ್ವಯಿಸುತ್ತದೆಯೇ. ಉದಾಹರಣೆಗೆ, ಪ್ರತಿ 10 ಕೆಜಿ ಹಿಟ್ಟಿನ 10 ಚಿಲ್ಲರೆ ಪ್ಯಾಕ್‌ಗಳನ್ನು ಹೊಂದಿರುವ ಪ್ಯಾಕೇಜ್?

ಹೌದು, ಗ್ರಾಹಕರಿಗೆ ಚಿಲ್ಲರೆ ಮಾರಾಟಕ್ಕಾಗಿ ಸಿದ್ಧಪಡಿಸಿರುವ ಹಲವಾರು ಪ್ಯಾಕೇಜ್‌ಗಳು, ಪ್ರತಿ 10 ಕೆಜಿಯ 10 ಪ್ಯಾಕೇಜ್‌ಗಳನ್ನು ದೊಡ್ಡ ಪ್ಯಾಕ್‌ನಲ್ಲಿ ಮಾರಾಟ ಮಾಡಿದರೆ, ಅಂತಹ ಪೂರೈಕೆಗೆ ಜಿಎಸ್ ಟಿ ಅನ್ವಯಿಸುತ್ತದೆ. ಅಂತಹ ಪ್ಯಾಕೇಜ್ ಅನ್ನು ತಯಾರಕರು ವಿತರಕರ ಮೂಲಕ ಮಾರಾಟ ಮಾಡಬಹುದು. ಪ್ರತಿ 10 ಕೆಜಿಯ ಈ ವೈಯಕ್ತಿಕ ಪ್ಯಾಕ್‌ಗಳು ಅಂತಿಮವಾಗಿ ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಆದಾಗ್ಯೂ, 50 ಕೆಜಿ (ಒಂದು ಪ್ರತ್ಯೇಕ ಪ್ಯಾಕೇಜ್‌ನಲ್ಲಿ) ಹೊಂದಿರುವ ಅಕ್ಕಿಯ ಪ್ಯಾಕೇಜ್ ಅನ್ನು ಜಿಎಸ್‌ಟಿ ತೆರಿಗೆಯ ಉದ್ದೇಶಗಳಿಗಾಗಿ ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಮಾಡಲಾದ ಸರಕು ಎಂದು ಪರಿಗಣಿಸಲಾಗುವುದಿಲ್ಲ. 2011ರ ಮಾಪನಶಾಸ್ತ್ರ (ಪ್ಯಾಕೇಜ್ ಮಾಡಿದ ಸರಕುಗಳು) ಕಾಯಿದೆಯ ನಿಯಮ 24 ಕಡ್ಡಾಯವಾಗಿದ್ದರೂ ಸಹ ಅಂತಹ ಸಗಟು ಪ್ಯಾಕೇಜ್‌ನಲ್ಲಿ ಕೆಲವು ಘೋಷಣೆಗಳನ್ನು ಮಾಡಬೇಕು.

5

ಅಂತಹ ಉತ್ಪನ್ನಗಳ ಮೇಲೆ ಯಾವ ಹಂತದಲ್ಲಿ ಜಿಎಸ್ ಟಿ ಅನ್ವಯಿಸುತ್ತದೆ, ಅಂದರೆ, ತಯಾರಕರು/ಉತ್ಪಾದಕರು ಸಗಟು ವಿತರಕರಿಗೆ ನಂತರ ಚಿಲ್ಲರೆ ವ್ಯಾಪಾರಿಗೆ ಮಾರಾಟ ಮಾಡುವ  ನಿರ್ದಿಷ್ಟ ಸರಕುಗಳ ಮೇಲೆ ಜಿಎಸ್ ಟಿ  ಅನ್ವಯಿಸುತ್ತದೆಯೇ?

ಯಾವುದೇ ವ್ಯಕ್ತಿ ಅಂತಹ ಸರಕುಗಳ ಪೂರೈಕೆ ಮಾಡಿದಾಗ ಜಿಎಸ್ ಟಿ ಅನ್ವಯಿಸುತ್ತದೆ, ಅಂದರೆ ತಯಾರಕ ವಿತರಕರಿಗೆ ಸರಬರಾಜು ಮಾಡುವ, ಅಥವಾ ವಿತರಕ/ಡೀಲರ್ ಚಿಲ್ಲರೆ ವ್ಯಾಪಾರಿಗೆ ಸರಬರಾಜು ಮಾಡುವ ಅಥವಾ ಚಿಲ್ಲರೆ ವ್ಯಾಪಾರಿ ವೈಯಕ್ತಿಕ ಗ್ರಾಹಕರಿಗೆ ಸರಬರಾಜು ಮಾಡುವ ಉತ್ಪನ್ನಕ್ಕೆ ತೆರಿಗೆ ಅನ್ವಯವಾಗುತ್ತದೆ. ಇದಲ್ಲದೆ, ತಯಾರಕರು/ಸಗಟು ವ್ಯಾಪಾರಿ/ಚಿಲ್ಲರೆ ವ್ಯಾಪಾರಿಗಳು ಜಿಎಸ್‌ಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ನಿಬಂಧನೆಗಳಿಗೆ ಅನುಸಾರವಾಗಿ, ಅವರ ಪೂರೈಕೆದಾರ ವಿಧಿಸುವ ಜಿಎಸ್‌ಟಿಯ ಮೇಲಿನ ಇನ್‌ಪುಟ್ ತೆರಿಗೆ ಕ್ರೆಡಿಟ್‌ಗೆ ಅರ್ಹರಾಗಿರುತ್ತಾರೆ.

 

ಸಂದರ್ಭಾನುಸಾರ, ಸಾಮಾನ್ಯ ರೀತಿಯಲ್ಲಿ ಮಿತಿ ವಿನಾಯಿತಿ ಅಥವಾ ಸಂಯೋಜನೆಯ ಯೋಜನೆ ಪಡೆಯುವ ಪೂರೈಕೆದಾರರು ವಿನಾಯಿತಿ ಅಥವಾ ಸಂಯೋಜನೆ ದರಕ್ಕೆ ಅರ್ಹರಾಗಿರುತ್ತಾರೆ,

6

ಚಿಲ್ಲರೆ ವ್ಯಾಪಾರಿಯು ಅಂತಹ ಸರಕುಗಳನ್ನು 25 ಕೆಜಿ/ 25 ಲೀಟರ್‌ ಪ್ಯಾಕೇಜ್‌ಗಳಲ್ಲಿ ಖರೀದಿಸಿ, ತನ್ನ ಅಂಗಡಿಯಲ್ಲಿ ಅದನ್ನು ಬಿಡಿ ಮಾರಾಟ  ಮಾಡಿದರೆ ತೆರಿಗೆ ಪಾವತಿಸಬೇಕೇ?

ಅಂತಹ ಸರಕುಗಳನ್ನು ಪೂರ್ವ ಪ್ಯಾಕೇಜ್ ಮತ್ತು ಲೇಬಲ್ ಪ್ಯಾಕ್‌ಗಳಲ್ಲಿ ಮಾರಾಟ ಮಾಡಿದಾಗ ಜಿಎಸ್ಟಿ ಅನ್ವಯಿಸುತ್ತದೆ. ಆದ್ದರಿಂದ, ಪ್ರಿಪ್ಯಾಕೇಜ್ ಮಾಡಿದ ಮತ್ತು ಲೇಬಲ್ ಮಾಡಿದ ಪ್ಯಾಕೇಜ್ ಅನ್ನು ವಿತರಕರು, ತಯಾರಕರು ಅಂತಹ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿದಾಗ ಜಿಎಸ್ಟಿ ಅನ್ವಯಿಸುತ್ತದೆ. ಆದಾಗ್ಯೂ, ಯಾವುದೋ ಕಾರಣಕ್ಕಾಗಿ, ಚಿಲ್ಲರೆ ವ್ಯಾಪಾರಿಯು ಅಂತಹ ಪ್ಯಾಕೇಜ್‌ನಿಂದ ಬಿಡಿ ಮಾರಾಚದಲ್ಲಿ ಪೂರೈಸಿದರೆ, ಅದಕ್ಕೆ ತೆರಿಗೆ ಅನ್ವಯವಾಗುವುದಿಲ್ಲ..

7

ಪ್ಯಾಕೇಜ್ ಮಾಡಲಾದ ಸರಕುಗಳನ್ನು ಕೈಗಾರಿಕಾ ಗ್ರಾಹಕರು ಅಥವಾ ಸಾಂಸ್ಥಿಕ ಗ್ರಾಹಕರ ಬಳಕೆಗಾಗಿ ಪೂರೈಕೆ ಮಾಡಿದರೆ ತೆರಿಗೆ ಪಾವತಿಸಬೇಕೇ?

ಕೈಗಾರಿಕಾ ಗ್ರಾಹಕರು ಅಥವಾ ಸಾಂಸ್ಥಿಕ ಗ್ರಾಹಕರ ಬಳಕೆಗಾಗಿ ಪ್ಯಾಕೇಜ್ ಮಾಡಲಾದ ಸರಕುಗಳ ಪೂರೈಕೆಯನ್ನು 2011ರ ಕಾನೂನು ಮಾಪನಶಾಸ್ತ್ರ ಕಾಯಿದೆಯ (ಪ್ಯಾಕೇಜ್ ಮಾಡಲಾದ ಸರಕುಗಳು) ನಿಯಮಗಳು, ಅಧ್ಯಾಯ-II ಅಧ್ಯಾಯ 3(ಸಿ) ಪರಿಧಿಯಿಂದ ಹೊರಗಿಡಲಾಗಿದೆ. ಆದ್ದರಿಂದ, ನಿಯಮ 3(ಸಿ) ಅಡಿ  ಇದನ್ನು ಪೂರ್ವ-ಪ್ಯಾಕೇಜ್ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಜಿಎಸ್ಟಿ ತೆರಿಗೆ ಉದ್ದೇಶಗಳಿಗಾಗಿ ಲೇಬಲ್ ಮಾಡಲಾಗುವುದಿಲ್ಲ.

8

X' ಹೆಸರಿನ ಅಕ್ಕಿ ಗಿರಣಿದಾರ 20 ಕೆಜಿ ಅಕ್ಕಿ ಹೊಂದಿರುವ ಪ್ಯಾಕೇಜ್‌ಗಳನ್ನು ಮಾರಾಟ ಮಾಡುತ್ತಾನೆ. ಆದರೆ ಕಾನೂನು ಮಾಪನಶಾಸ್ತ್ರ ಕಾಯಿದೆ ಮತ್ತು ಅದರ ಅಡಿ ಮಾಡಲಾದ ನಿಯಮಗಳ ಅಡಿ, ಅಗತ್ಯ ಘೋಷಣೆ  ಮಾಡುತ್ತಿಲ್ಲ(ಆದರೂ ಕಾಯಿದೆ ಮತ್ತು ನಿಯಮಗಳ ಪ್ರಕಾರ, ಅವನು/ಅವಳು ಘೋಷಣೆ ಮಾಡಬೇಕಾಗಿದ್ದರೂ). ಆದರೂ ಇದು ಪೂರ್ವ-ಪ್ಯಾಕೇಜ್ ಮತ್ತು ಲೇಬಲ್ ಎಂದು ಪರಿಗಣಿತವಾಗುತ್ತದೆಯೇ ಮತ್ತು ಜಿಎಸ್ಟಿ ಅನ್ವಯವಾಗುತ್ತದೆಯೇ?

 

 

ಹೌದು, ಅಂತಹ ಪ್ಯಾಕೇಜುಗಳನ್ನು ಜಿಎಸ್ಟಿ  ಉದ್ದೇಶಗಳಿಗಾಗಿ ಪೂರ್ವ-ಪ್ಯಾಕೇಜ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸರಕು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು 2011ರ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ ಮಾಡಲಾದ ಸರಕುಗಳು) ನಿಯಮಗಳ (ಅದರ ನಿಯಮ 6) ಅಡಿ, ಘೋಷಣೆ ಮಾಡುವ ಅಗತ್ಯವಿದೆ. ಆದ್ದರಿಂದ, 'X' ಹೆಸರಿನ ಅಕ್ಕಿ ಗಿರಣಿದಾರ ಅಂತಹ ಪ್ಯಾಕೇಜ್ ಗಳ ಪೂರೈಕೆ ಮೇಲೆ ಜಿಎಸ್ಟಿ ಪಾವತಿಸಬೇಕಾಗುತ್ತದೆ.

 

9

ಬೇರೆ ಇತರೆ ಸಂಬಂಧಿತ ಸಮಸ್ಯೆ?

2011ರ ಕಾನೂನು ಮಾಪನಶಾಸ್ತ್ರ (ಪ್ಯಾಕೇಜ್ ಮಾಡಲಾದ ಸರಕುಗಳು) ಕಾಯಿದೆ ನಿಯಮ 26ರ ಅಡಿ ರೂಪಿಸಿರುವ ಕಾನೂನು ಮಾಪನಶಾಸ್ತ್ರ ಕಾಯಿದೆ ಮತ್ತು ನಿಯಮಗಳ ಅಡಿ, ಕೆಲವು ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಮತ್ತು ಕೆಲವು ವಿನಾಯಿತಿಗಳನ್ನು ಒದಗಿಸುವ  (ಮೇಲೆ ಹೇಳಿದಂತೆ) ಮಾನದಂಡಗಳನ್ನು ಸೂಚಿಸುತ್ತವೆ ಆದ್ದರಿಂದ, ಆ ರೀತಿ  ಸರಬರಾಜು ಮಾಡಿ ವಿನಾಯಿತಿ ಪಡೆಯಲು, ಜಿಎಸ್ಟಿ ತೆರಿಗೆಯ  ಉದ್ದೇಶಗಳಿಗಾಗಿ ಪೂರ್ವ-ಪ್ಯಾಕೇಡ್ ಸರಕುಗಳಾಗಿ ಪರಿಗಣಿಸಲಾಗುವುದಿಲ್ಲ.

 

 

 

 

*******

 (Release ID: 1842369) Visitor Counter : 142