ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ

ಭಾರತದಾದ್ಯಂತ 200 ಸ್ಥಳಗಳಲ್ಲಿ ಪ್ರಧಾನಮಂತ್ರಿ ಅಪ್ರೆಂಟಿಶಿಪ್ ಮೇಳ


ಅಪ್ರೆಂಟಿಶಿಪ್ ಮೇಳದ ಮೂಲಕ ಈವರೆಗೆ 67,035 ಶಿಶಿಕ್ಷು ತರಬೇತುದಾರರಿಗೆ ಕೊಡುಗೆ ನೀಡಲಾಗಿದೆ

ಉದ್ಯೋಗಾವಕಾಶ ಉತ್ತೇಜಿಸಲು 36ಕ್ಕೂ ಹೆಚ್ಚು ಕೈಗಾರಿಕೆಗಳು, 500 ಕ್ಕೂ ಹೆಚ್ಚು ವ್ಯಾಪಾರ ವಲಯ ಮತ್ತು 1000 ಕ್ಕೂ ಹೆಚ್ಚು ವ್ಯವಹಾರ ಕ್ಷೇತ್ರವನ್ನು ಮೇಳ ಒಳಗೊಂಡಿದೆ

Posted On: 10 JUL 2022 1:28PM by PIB Bengaluru

ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ 2022, ಜುಲೈ 11 ರಂದು ಪ್ರಧಾನಮಂತ್ರಿ ಕೌಶಲ್ಯ ಭಾರತ ಅಭಿಯಾನದಡಿ ವೃತ್ತಿ ಅವಕಾಶಗಳು ಮತ್ತು ಪ್ರಾಯೋಗಿಕ ತರಬೇತಿಯನ್ನು ಉತ್ತೇಜಿಸಲು ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ ಆಯೋಜಿಸಿದೆ. ಅಪ್ರೆಂಟಿಶಿಪ್ ಮೇಳಗಳಲ್ಲಿ ಈವರೆಗೆ 1,88,410 ಅರ್ಜಿದಾರರು ಭಾಗವಹಿಸಿದ್ದಾರೆ ಮತ್ತು 67,035 ಅಪ್ರೆಂಟಿಶಿಪ್ ದಾರರಿಗೆ ತರಬೇತಿ ಮೂಲಕ ವೇದಿಕೆ ಕಲ್ಪಿಸಲಾಗಿದೆ. ಒಂದು ದಿನದ ಕಾರ್ಯಕ್ರಮದಲ್ಲಿ 36 ಕ್ಕೂ ಹೆಚ್ಚು ವಲಯ ಮತ್ತು 1000 ಕ್ಕೂ ಹೆಚ್ಚು ಕಂಪೆನಿಗಳು ಹಾಗೂ 500 ಕ್ಕೂ ಹೆಚ್ಚು ವಿಭಿನ್ನ ವ್ಯಾಪಾರ ವಲಯಗಳು ಪಾಲ್ಗೊಳ್ಳುತ್ತಿವೆ. ಎಂ.ಎಸ್.ಡಿ.ಇ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೇಳ ಆಯೋಜಿಸುತ್ತಿದ್ದು, ಅರ್ಜಿದಾರರಿಗೆ ಶಿಶಿಕ್ಷು ತರಬೇತಿ ಮೂಲಕ ವೃತ್ತಿಗೆ ಸೇರಲು ಸ್ಪಷ್ಟ ತರಬೇತಿ ನೀಡಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಜ್ಜುಗೊಳಿಸಲಿದೆ.

 

ಅಭ್ಯರ್ಥಿಗಳು 5 ರಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಪ್ರಮಾಣ ಪತ್ರ, ಕೌಶಲ್ಯ ತರಬೇತಿ ಪ್ರಮಾಣ ಪತ್ರ, ಐಟಿಐ ಡಿಪ್ಲೊಮಾ ಅಥವಾ ಪದವಿಧರರು ಪದವಿ ಪ್ರಮಾಣ ಪತ್ರದೊಂದಿಗೆ ಮೇಳದಲ್ಲಿ ಪಾಲ್ಗೊಳ್ಳಬಹುದು. ಮುಂದುವರೆದಂತೆ ಯುವ ಮತ್ತು ಕೆಲಸ ಮಾಡಲು ನಿರೀಕ್ಷೆಯಲ್ಲಿರುವವರಿಗೆ ವೆಲ್ಡಿಂಗ್, ಎಲೆಕ್ಟ್ರಿಕ್ ಕೆಲಸ, ಮನೆಗೆಲಸ, ಪ್ರಸಾದನ ವಲಯ, ಮೆಕ್ಯಾನಿಕ್ ಕೆಲಸ ಹಾಗೂ ಇತರೆ 500ಕ್ಕೂ ಹೆಚ್ಚು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ರಾಷ್ಟ್ರೀಯ ವೃತ್ತಿ ಶಿಕ್ಷಣ ಮತ್ತು ತರಬೇತಿ ಮಂಡಳಿ [ಎನ್.ಸಿ.ವಿ.ಇ.ಟಿ]ಯ ಮಾನ್ಯತೆ ಪಡೆದ ಪ್ರಮಾಣ ಪತ್ರ ಪಡೆಯಲಿದ್ದು, ತರಬೇತಿ ನಂತರ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳಲು ಇದರಿಂದ ಸಹಕಾರಿಯಾಗಲಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ಹೆಚ್ಚಿನ ಪ್ರಮಾಣದಲ್ಲಿ ತರಬೇತುದಾರರನ್ನು ನೇಮಿಸಿಕೊಳ್ಳಲು ಕಂಪೆನಿಗಳನ್ನು ಉತ್ತೇಜಿಸುವುದು, ತರಬೇತಿ ಮತ್ತು ಪ್ರಾಯೋಗಿಕ ಕೌಶಲ್ಯಗಳ ಮೂಲಕ ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದ್ದು, ಇದರಿಂದ ಉದ್ಯೋಗದಾತರಿಗೂ ನೆರವಾಗುವ ಉದ್ದೇಶ ಹೊಂದಲಾಗಿದೆ.

 

ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಅಗರ್ವಾಲ್, “ಶಿಶಿಕ್ಷು ಮೇಳ ದೇಶಾದ್ಯಂತ ಪ್ರತಿಭೆಗಳಿಗೆ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಒದಗಿಸುವ ವಿಶ್ವಾಸವಿದೆ. ಹೆಚ್ಚಿನ ಪ್ರಮಾಣದಲ್ಲಿ ಶಿಶಿಕ್ಷು ತರಬೇತಿದಾರರನ್ನು ನೇಮಿಸಿಕೊಳ್ಳುವುದು ಈ ಕಾರ್ಯಕ್ರಮದ ಪ್ರಾಥಮಿಕ ಉದ್ದೇಶವಾಗಿದೆ. ಇಂತಹ ತರಬೇತಿ ಮೇಳ ಅಭ್ಯರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಲು ಅತ್ಯಂತ ಪ್ರಮುಖವಾಗಿದ್ದು, ಅದಕ್ಕಾಗಿ ಈ ಪ್ರಯತ್ನ ಸಾಗಿದೆ. ದೇಶಾದ್ಯಂತ ಅಪ್ರೆಂಟಿಶಿಪ್ ಗಳ ಸಂಖ್ಯೆ ಹೆಚ್ಚಾಗಿದ್ದು, ಇವುಗಳ ಯಶಸ್ವಿ ಕಾರ್ಯನಿರ್ವಹಣೆಯಿಂದ ಈ ಕಾರ್ಯಕ್ರಮ ಗಮನಾರ್ಹ ಪರಿಣಾಮ ಬೀರಿದೆ” ಎಂದು ಹೇಳಿದರು.

 

ಕೌಶಲ್ಯಾಭಿವೃದ್ಧಿಯಲ್ಲಿ ಶಿಶಿಕ್ಷು ತರಬೇತಿ ಪ್ರಮುಖ ಸುಸ್ಥಿರ ಮಾದರಿಯಾಗಿದೆ ಮತ್ತು ಕೌಶಲ್ಯ ಭಾರತದಡಿ ಅತಿ ದೊಡ್ಡ ಉತ್ತೇಜನ ನೀಡುತ್ತದೆ. ಇತ್ತೀಚೆಗೆ ರಾಷ್ಟ್ರೀಯ ಶಿಶಿಕ್ಷು ತರಬೇತಿ ಉತ್ತೇಜನ ಕಾರ್ಯಕ್ರಮ [ಎನ್.ಎ.ಪಿ.ಎಸ್] ದಡಿ ಮೊದಲ ಹಂತದಲ್ಲಿ ಶಿಶಿಕ್ಷು ತರಬೇತಿ ಪಡೆದವರ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ [ಡಿಬಿಟಿ] ಯಡಿ ಶಿಷ್ಯ ವೇತನವನ್ನು ವರ್ಗಾಯಿಸಲಾಗಿದೆ.

 

ಪಿಎಂ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳಿಗೆ ಒಂದೇ ವೇದಿಕೆಯಲ್ಲಿ ಸಂಭವನೀಯ ಶಿಶಿಕ್ಷು ತರಬೇತಿ ನೀಡುವವರನ್ನು ಮತ್ತು ಸ್ಥಳದಲ್ಲೇ ಅರ್ಜಿದಾರರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಣ್ಣ ಉದ್ಯಮ ವಲಯದ ಒಂದು ಉದ್ಯಮ ಕನಿಷ್ಠ ನಾಲ್ವರನ್ನು ಆಯ್ಕೆಮಾಡಿಕೊಳ್ಳಲು ಅವಕಾಶಕೊಡಲಾಗಿದೆ. ಭವಿಷ್ಯದ ಶೈಕ್ಷಣಿಕ ಕೋರ್ಸ್ ಗಳನ್ನು ಕಲಿಯುವವರಿಗಾಗಿ ಬ್ಯಾಂಕ್ ಮೂಲಕ ಸೌಲ ಸೌಲಭ್ಯ ಪಡೆಯುವ ವ್ಯವಸ್ಥೆಯನ್ನು ಸಹ ಶೀಘ್ರದಲ್ಲೇ ಕಲ್ಪಿಸಲಾಗುವುದು.

 

ಪ್ರತಿತಿಂಗಳು ಶಿಶಿಕ್ಷು ತರಬೇತಿ ಮೇಳಗಳನ್ನು ಆಯೋಜಿಸಲಿದ್ದು, ಇದರಲ್ಲಿ ಆಯ್ಕೆಯಾದ ತರಬೇತುದಾರರಿಗೆ ಹೊಸ ಕೌಶಲ್ಯಗಳನ್ನು ಪಡೆಯಲು ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿ ಮಾಸಿಕ ಶಿಷ್ಯ ವೇತನ ನೀಡಲಾಗುವುದು. ಇವರು ಕಲಿಕೆಯೊಂದಿಗೆ ಗಳಿಕೆ ಮಾಡಲಿದ್ದಾರೆ. ತರಬೇತುದಾರರಿಗೆ ಶಿಷ್ಯ ವೇತನವನ್ನು ಆನ್ಲೈನ್ ಮೂಲಕ ಪಾವತಿಸಲಾಗುವುದು.

 

ಮೇಳದಲ್ಲಿ ನೋಂದಣಿ ಮಾಡಿಕೊಳ್ಳಲು ಬಯಸುವ ವ್ಯಕ್ತಿಗಳು ಈ ಕೆಳಕಂಡ ಜಾಲತಾಣಗಳಿಗೆ ಭೇಟಿ ನೀಡಬಹುದು.

https://dgt.gov.in/appmela2022/ ಅಥವಾ https://www.apprenticeshipindia.gov.in/ ಮತ್ತು ಮೇಳ ನಡೆಯತ್ತಿರುವ ಸಮೀಪದ ಸ್ಥಳವನ್ನು ಆಯ್ಕೆಮಾಡಿಕೊಳ್ಳಿ

 

********



(Release ID: 1840640) Visitor Counter : 172