ಪ್ರಧಾನ ಮಂತ್ರಿಯವರ ಕಛೇರಿ

'ನನ್ನ ಗೆಳೆಯ, ಅಬೆ ಸನ್ ' - ಪ್ರಧಾನಮಂತ್ರಿಯವರು ಶಿಂಜೊ ಅಬೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರೆದಿರುವುದನ್ನು ಹಂಚಿಕೊಂಡಿದ್ದಾರೆ

Posted On: 08 JUL 2022 9:33PM by PIB Bengaluru

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿರುವರು:

 

"ಶ್ರೀ. ಅಬೆ ಅವರ ನಿಧನದಿಂದಾಗಿ, ಜಪಾನ್ ಮತ್ತು ಜಗತ್ತು ಒಬ್ಬ ಮಹಾನ್ ದಾರ್ಶನಿಕನನ್ನು ಕಳೆದುಕೊಂಡಿದೆ ಮತ್ತು ನಾನು ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ.

 

ನನ್ನ ಗೆಳೆತ ಅಬೆ ಸನ್‌ಗೆ ಶ್ರದ್ಧಾಂಜಲಿ..."

"ನಾನು ಮೊದಲ ಬಾರಿಗೆ 2007 ರಲ್ಲಿ ಅಬೆ ಸನ್ ಅವರನ್ನು ಭೇಟಿಯಾದೆ ಮತ್ತು ಅಂದಿನಿಂದ, ನಾವು ಅನೇಕ ಸ್ಮರಣೀಯ ಸಂವಹನಗಳನ್ನು ಹೊಂದಿದ್ದೇವೆ. ನಾನು ಪ್ರತಿಯೊಂದನ್ನೂ ಹೃದಯದಲ್ಲಿಟ್ಟುಕೊಂಡಿದ್ದೇನೆ. ಅಬೆ ಸನ್ ಭಾರತ-ಜಪಾನ್ ಸಂಬಂಧಕ್ಕೆ ಶಕ್ತಿ ತುಂಬಿದರು. ನವ ಭಾರತವು ಅದರ ಬೆಳವಣಿಗೆಯ ವೇಗವನ್ನು ಹೆಚ್ಚಿಸುತ್ತಿದ್ದಂತೆ ಜಪಾನ್ ಜೊತೆಯಾಗಿರುವುದನ್ನು ಅವರು ಖಚಿತಪಡಿಸಿದರು. "

 

"ಜಾಗತಿಕ ನಾಯಕತ್ವಕ್ಕೆ ಸಂಬಂಧಿಸಿದಂತೆ, ಅಬೆ ಸನ್ ಅವರ ಸಮಯಕ್ಕಿಂತ ಮುಂದಿದ್ದರು. ಕ್ವಾಡ್, ಆಸಿಯಾನ್-ನೇತೃತ್ವದ ವೇದಿಕೆಗಳು, ಇಂಡೋ ಪೆಸಿಫಿಕ್ ಓಷನ್ಸ್ ಇನಿಶಿಯೇಟಿವ್, ಏಷ್ಯಾ-ಆಫ್ರಿಕಾ ಗ್ರೋತ್ ಕಾರಿಡಾರ್ ಮತ್ತು ವಿಪತ್ತು ನಿರೋಧಕ ಮೂಲಸೌಕರ್ಯಕ್ಕಾಗಿ ಒಕ್ಕೂಟ ಎಲ್ಲವೂ ಅವರ ಕೊಡುಗೆಗಳಿಂದ ಪ್ರಯೋಜನ ಪಡೆದಿವೆ. ."

 

 

***********



(Release ID: 1840476) Visitor Counter : 102