ಸಂಪುಟ

ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟ (ಸಿಡಿಆರ್‌ಐ) ವನ್ನು 'ಅಂತರರಾಷ್ಟ್ರೀಯ ಸಂಸ್ಥೆ' ಎಂದು ವರ್ಗೀಕರಿಸಲು ಮತ್ತು ವಿಶ್ವಸಂಸ್ಥೆಯ (ಸವಲತ್ತುಗಳು ಮತ್ತು ವಿನಾಯಿತಿ) ಕಾಯಿದೆ, 1947 ರ ಅಡಿಯಲ್ಲಿ ಅಗತ್ಯವಿರುವ ವಿನಾಯಿತಿಗಳು ಮತ್ತು ಸವಲತ್ತುಗಳನ್ನು ನೀಡಲು ಸಿಡಿಆರ್‌ಐ ನೊಂದಿಗೆ ಪ್ರಧಾನ ಕಛೇರಿ ಒಪ್ಪಂದಕ್ಕೆ (ಎಚ್‌ಕ್ಯೂಎ) ಸಹಿ ಹಾಕಲು ಕೇಂದ್ರ ಸಚಿವ ಸಂಪುಟದ ಅನುಮೋದನೆ

Posted On: 29 JUN 2022 3:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟವನ್ನು (ಸಿಡಿಆರ್‌ಐ) 'ಅಂತರರಾಷ್ಟ್ರೀಯ ಸಂಸ್ಥೆ' ಎಂದು ವರ್ಗೀಕರಿಸಲು ಮತ್ತು ವಿಶ್ವಸಂಸ್ಥೆ ನೇಷನ್ಸ್ (ಸವಲತ್ತುಗಳು ಮತ್ತು ವಿನಾಯಿತಿಗಳು) ಕಾಯಿದೆ, 1947 ರ ಅಡಿಯಲ್ಲಿ ಪರಿಗಣಿಸಲಾದ ವಿನಾಯತಿ ಮತ್ತು ಸವಲತ್ತುಗಳು ನೀಡಲು (ಸಿಡಿಆರ್‌ಐ ನೊಂದಿಗೆ ಪ್ರಧಾನ ಕಛೇರಿ ಒಪ್ಪಂದಕ್ಕೆ (ಎಚ್‌ಕ್ಯೂಎ) ಸಹಿ ಹಾಕಲು ಅನುಮೋದನೆ ನೀಡಿದೆ.

ಸಿಡಿಆರ್‌ಐ ಅನ್ನು 'ಅಂತರರಾಷ್ಟ್ರೀಯ ಸಂಸ್ಥೆ' ಎಂದು ವರ್ಗೀಕರಿಸುವುದು ಮತ್ತು ವಿಶ್ವಸಂಸ್ಥೆಯ (ಸವಲತ್ತುಗಳು ಮತ್ತು ವಿನಾಯಿತಿ) ಕಾಯಿದೆ, 1947ರ ಸೆಕ್ಷನ್-3 ರ ಅಡಿಯಲ್ಲಿ ಪರಿಗಣಿಸಿದಂತೆ, ವಿನಾಯಿತಿಗಳು ಮತ್ತು ಸವಲತ್ತುಗಳ ಮಂಜೂರಾತಿಗಾಗಿ ಸಿಡಿಆರ್‌ಐನೊಂದಿಗೆ ಎಚ್‌ಕ್ಯೂಎ ಗೆ ಸಹಿ ಹಾಕುವುದರಿಂದ ಸ್ವತಂತ್ರ ಮತ್ತು ಅಂತರರಾಷ್ಟ್ರೀಯ ಕಾನೂನಿನ ಮಾನ್ಯತೆಯನ್ನು ಒದಗಿಸುತ್ತದೆ. ಇದರಿಂದ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕಾರ್ಯಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದು. ಇದು ಸಿಡಿಆರ್‌ಐ ಗೆ ಈ ಕಾರ್ಯಗಳಲ್ಲಿ ಸಹಾಯ ಮಾಡುತ್ತದೆ:

i) ವಿಪತ್ತು ಅಪಾಯಕ್ಕೆ ವಿಶೇಷವಾಗಿ ದುರ್ಬಲವಾಗಿರುವ ಮತ್ತು / ಅಥವಾ ನಂತರದ ವಿಪತ್ತು ಚೇತರಿಕೆಗೆ ಬೆಂಬಲ ಅಗತ್ಯವಿರುವ ಇತರ ದೇಶಗಳಿಗೆ ತಜ್ಞರನ್ನು ನಿಯೋಜಿಸುವುದು ಮತ್ತು ಸದಸ್ಯ ರಾಷ್ಟ್ರಗಳಿಂದ ತಜ್ಞರನ್ನು ಭಾರತಕ್ಕೆ ಇದೇ ಉದ್ದೇಶಗಳಿಗಾಗಿ ಕರೆತರುವುದು;

ii) ಸಿಡಿಆರ್‌ಐ ಚಟುವಟಿಕೆಗಳಿಗಾಗಿ ಜಾಗತಿಕವಾಗಿ ನಿಧಿಗಳನ್ನು ನಿಯೋಜಿಸುವುದು ಮತ್ತು ಸದಸ್ಯ ರಾಷ್ಟ್ರಗಳಿಂದ ಕೊಡುಗೆಗಳನ್ನು ಸ್ವೀಕರಿಸುವುದು;

iii) ತಮ್ಮ ವಿಪತ್ತು ಮತ್ತು ಹವಾಮಾನದ ಅಪಾಯಗಳು ಮತ್ತು ಸಂಪನ್ಮೂಲಗಳಿಗೆ ಅನುಗುಣವಾಗಿ ಚೇತರಿಸಿಕೊಳ್ಳುವ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ದೇಶಗಳಿಗೆ ಸಹಾಯ ಮಾಡಲು ತಾಂತ್ರಿಕ ಪರಿಣತಿಯನ್ನು ಲಭ್ಯವಾಗುವಂತೆ ಮಾಡುವುದು;

iv) ಮೂಲಸೌಕರ್ಯದ ಮರುಸ್ಥಾಪನೆಗಾಗಿ ಸೂಕ್ತವಾದ ಅಪಾಯ ತಪ್ಪಿಸುವ ಆಡಳಿತ ವ್ಯವಸ್ಥೆಗಳು ಮತ್ತು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವಲ್ಲಿ ದೇಶಗಳಿಗೆ ಸಹಾಯವನ್ನು ನೀಡುವುದು;

v) ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಮೂಲಸೌಕರ್ಯಗಳಿಗಾಗುವ ವಿಪತ್ತು ಮತ್ತು ಹವಾಮಾನದ ಅಪಾಯದಿಂದ ಚೇತರಿಕೆಯನ್ನು ಖಚಿತಪಡಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ತಮ್ಮ ವ್ಯವಸ್ಥೆಗಳನ್ನು ನವೀಕರಿಸುವಲ್ಲಿ ಎಲ್ಲಾ ಸಂಭಾವ್ಯ ಬೆಂಬಲವನ್ನು ನೀಡುವುದು, ಸುಸ್ಥಿರ ಅಭಿವೃದ್ಧಿ ಗುರಿಗಳು (ಎಸ್‌ಡಿಜಿ), ಪ್ಯಾರಿಸ್ ಹವಾಮಾನ ಒಪ್ಪಂದ ಮತ್ತು ವಿಪತ್ತು ಅಪಾಯ ಕಡಿತಕ್ಕಾಗಿ ಸೆಂಡೈ ಫ್ರೇಂವರ್ಕ್;

vi) ದೇಶದಲ್ಲಿ ವಿಪತ್ತಿನ ನಂತರ ಮರು ಮೂಲಸೌಕರ್ಯವನ್ನು ಬೆಳೆಸಲು ಅಂತರರಾಷ್ಟ್ರೀಯ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು; ಮತ್ತು,

vii) ಭಾರತೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳು ಮತ್ತು ಮೂಲಸೌಕರ್ಯ ಅಭಿವರ್ಧಕರಿಗೆ ಜಾಗತಿಕ ತಜ್ಞರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸುವುದು. ಇದು ನಮ್ಮ ಸ್ವಂತ ಸಾಮರ್ಥ್ಯಗಳು ಮತ್ತು ಕಾರ್ಯವಿಧಾನಗಳನ್ನು ನಿರ್ಮಿಸಲು ಮತ್ತು ಸಾರ್ವಜನಿಕ ಹಾಗು ಖಾಸಗಿ ವಲಯಗಳಲ್ಲಿ ವಿಪತ್ತು ನಿರೋಧಕ ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ .

ಪ್ರಾರಂಭವಾದಾಗಿನಿಂದ, ಮೂವತ್ತೊಂದು ದೇಶಗಳು, ಆರು (ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಎರಡು ಖಾಸಗಿ ವಲಯದ ಸಂಸ್ಥೆಗಳು ಸಿಡಿಆರ್‌ಐನ ಸದಸ್ಯರಾಗಿ ಸೇರಿಕೊಂಡಿವೆ. ಸಿಡಿಆರ್‌ಐ ಆರ್ಥಿಕವಾಗಿ ಮುಂದುವರಿದ ದೇಶಗಳು, ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಹವಾಮಾನ ಬದಲಾವಣೆ ಮತ್ತು ವಿಪತ್ತುಗಳಿಗೆ ಹೆಚ್ಚು ದುರ್ಬಲವಾಗಿರುವ ದೇಶಗಳನ್ನು ಆಕರ್ಷಿಸುವ ಮೂಲಕ ತನ್ನ ಸದಸ್ಯತ್ವವನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ.

ಕಾಲಾನಂತರದಲ್ಲಿ, ವಿಪತ್ತು ನಿರೋಧಕ ಮೂಲಸೌಕರ್ಯವನ್ನು ಭಾರತದಲ್ಲಿ ಮಾತ್ರವಲ್ಲದೆ ಇತರ ಪಾಲುದಾರ ದೇಶಗಳಲ್ಲಿಯೂ ಅಭಿವೃದ್ಧಿಪಡಿಸಲು ಸಂಸ್ಥೆಗಳು / ಮಧ್ಯಸ್ಥಗಾರರ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಹಿನ್ನೆಲೆ:

ಆಗಸ್ಟ್ 28, 2019 ರಂದು, ಕೇಂದ್ರ ಸಚಿವ ಸಂಪುಟವು ತನ್ನ ಹೊಸ ದೆಹಲಿಯ ಸಚಿವಾಲಯದೊಂದಿಗೆ ಸಿಡಿಆರ್‌ಐ ಅನ್ನು 480 ಕೋಟಿ ರೂಪಾಯಿಗಳ ಬೆಂಬಲದೊಂದಿಗೆ ಸ್ಥಾಪಿಸಲು ಅನುಮೋದನೆ ನೀಡಿತು ಜೊತೆಗೆ ರೂ.. 2019-20 ರಿಂದ 2023-24 ರವರೆಗಿನ 5 ವರ್ಷಗಳ ಅವಧಿಯಲ್ಲಿ ಸಚಿವಾಲಯ ಕಚೇರಿಯನ್ನು ಸ್ಥಾಪಿಸಲು ಮತ್ತು ಮರುಕಳಿಸುವ ವೆಚ್ಚಗಳನ್ನು ಒಳಗೊಂಡಿರುವ, ನಡೆಯುತ್ತಿರುವ ಆಧಾರದ ಮೇಲೆ ತಾಂತ್ರಿಕ ನೆರವು ಮತ್ತು ಸಂಶೋಧನಾ ಯೋಜನೆಗಳಿಗೆ ಧನಸಹಾಯ ನೀಡಲು ಭಾರತ ಸರ್ಕಾರದ ಆರ್ಥಿಕ ಬೆಂಬಲ ಸಿಡಿಆರ್‌ಐ ಗೆ ಮೂಲಧನ (ಕಾರ್ಪಸ್) ವಾಗಿ ಕಾರ್ಯನಿರ್ವಹಿಸುತ್ತದೆ.

2019 ರ ಸೆಪ್ಟೆಂಬರ್ 23 ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು ಸಿಡಿಆರ್‌ಐ ಅನ್ನು ಪ್ರಾರಂಭಿಸಿದರು. ಇದು ಭಾರತ ಸರ್ಕಾರವು ಪ್ರಾರಂಭಿಸಿದ ಎರಡನೇ ಪ್ರಮುಖ ಜಾಗತಿಕ ಉಪಕ್ರಮವಾಗಿದೆ ಮತ್ತು ಜಾಗತಿಕವಾಗಿ ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರೋಧಕದ, ಮೂಲಸೌಕರ್ಯದ ಮರುನಿರ್ಮಾಣದ ವಿಷಯಗಳಲ್ಲಿ ಭಾರತದ ನಾಯಕತ್ವದ ಪಾತ್ರದ ಪ್ರದರ್ಶನವಾಗಿದೆ.

ಸಿಡಿಆರ್‌ಐ ಎನ್ನುವುದು ದೇಶದಸರ್ಕಾರಗಳು, ವಿಶ್ವಸಂಸ್ಥೆಯ ಏಜೆನ್ಸಿಗಳು ಮತ್ತು ಕಾರ್ಯಕ್ರಮಗಳು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಹಣಕಾಸು ಕಾರ್ಯವಿಧಾನಗಳು, ಖಾಸಗಿ ವಲಯ, ಶೈಕ್ಷಣಿಕ ಮತ್ತು ಜ್ಞಾನ ಸಂಸ್ಥೆಗಳ ಜಾಗತಿಕ ಪಾಲುದಾರಿಕೆಯಾಗಿದ್ದು, ಹವಾಮಾನ ಮತ್ತು ವಿಪತ್ತು ಅಪಾಯಗಳ ನಂತ್ರ ಮರು ಮೂಲಸೌಕರ್ಯ ವ್ಯವಸ್ಥೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತದೆ.

******

 

 

 

 

 

 

 

 (Release ID: 1838097) Visitor Counter : 167