ಸಂಪುಟ
azadi ka amrit mahotsav

ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಮತ್ತು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐಆರ್‌ಇಎನ್‌ಎ) ನಡುವಿನ ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 29 JUN 2022 3:48PM by PIB Bengaluru

  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷ ತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್‌.ಆರ್‌.ಇ.) ಮತ್ತು ಅಂತಾರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐ.ಆರ್‌.ಇ.ಎನ್‌.ಎ.) ನಡುವೆ ಅಂಕಿತ ಹಾಕಲಾದ ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ಒಪ್ಪಂದಕ್ಕೆ 2022ರ ಜನವರಿಯಲ್ಲಿಅಂಕಿತ ಹಾಕಲಾಗಿತ್ತು.

 

  ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಆಧಾರದ ಮೇಲೆ ಹಸಿರು ಇಂಧನ ಸ್ಥಿತ್ಯಂತರಗಳ ಬಗ್ಗೆ ಮಹತ್ವಾಕಾಂಕ್ಷೆ, ನಾಯಕತ್ವ ಮತ್ತು ಜ್ಞಾನವನ್ನು ಉತ್ತೇಜಿಸುವುದು ಈ ಒಪ್ಪಂದದ ಉದ್ದೇಶವಾಗಿದೆ. ಈ ಒಪ್ಪಂದವು ಭಾರತದ ಇಂಧನ ಪರಿವರ್ತನೆ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ವಿಶ್ವಕ್ಕೆ ಸಹಾಯ ಮಾಡುತ್ತದೆ.

 

  ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದದಲ್ಲಿ ಕಲ್ಪಿಸಲಾಗಿರುವ ಸಹಕಾರ ಕ್ಷೇತ್ರಗಳು 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ವಿದ್ಯುತ್‌ ಸಾಮರ್ಥ್ಯ‌ದ 500 ಗಿಗಾವ್ಯಾಟ್‌ ಸಾಮರ್ಥ್ಯ‌ದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಭಾರತವನ್ನು ಬೆಂಬಲಿಸಲಿವೆ. ಇದು ಆತ್ಮ ನಿರ್ಭರ ಭಾರತವನ್ನು ಉತ್ತೇಜಿಸುತ್ತದೆ.

ಈ ಒಪ್ಪಂದದ ಪ್ರಮುಖ ಲಕ್ಷ ಣಗಳಲ್ಲಿಈ ಕೆಳಗಿನ ಕ್ಷೇತ್ರಗಳಲ್ಲಿವರ್ಧಿತ ಸಹಕಾರವೂ ಸೇರಿದೆ:

 

1. ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಇಂಧನ ತಂತ್ರಜ್ಞಾನಗಳ ಸ್ಕೇಲಿಂಗ್‌ ಅಪ್‌ ಬಗ್ಗೆ ಭಾರತದಿಂದ ಜ್ಞಾನ ಹಂಚಿಕೆಗೆ ಅನುವು ಮಾಡಿಕೊಡುವುದು

2. ದೀರ್ಘಕಾಲೀನ ಇಂಧನ ಯೋಜನೆಯಲ್ಲಿಭಾರತದ ಪ್ರಯತ್ನಗಳನ್ನು ಬೆಂಬಲಿಸುವುದು

3. ಭಾರತದಲ್ಲಿನಾವೀನ್ಯತೆ ವಾತಾವರಣವನ್ನು ಬಲಪಡಿಸಲು ಸಹಯೋಗ

4. ಹಸಿರು ಜಲಜನಕದ ವೇಗವರ್ಧಕ ಅಭಿವೃದ್ಧಿ ಮತ್ತು ನಿಯೋಜನೆಯ ಮೂಲಕ ವೆಚ್ಚ-ಪರಿಣಾಮಕಾರಿ ಡಿಕಾರ್ಬನೈಸೇಶನ್‌ ಕಡೆಗೆ ಚಲಿಸುವುದು.

 

ಹೀಗಾಗಿ, ವ್ಯೂಹಾತ್ಮಕ ಪಾಲುದಾರಿಕೆ ಒಪ್ಪಂದವು ಭಾರತದ ಇಂಧನ ಪರಿವರ್ತನೆಯ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ವಿಶ್ವಕ್ಕೆ ಸಹಾಯ ಮಾಡುತ್ತದೆ.

******


(Release ID: 1838083) Visitor Counter : 517