ಪ್ರಧಾನ ಮಂತ್ರಿಯವರ ಕಛೇರಿ

ಜಿ-7ಶೃಂಗಸಭೆಯ ನೇಪಥ್ಯದಲ್ಲಿ ಐರೋಪ್ಯ ಒಕ್ಕೂಟದ ಅಧ್ಯಕ್ಷರನ್ನು ಭೇಟಿ ಮಾಡಿದ ಪ್ರಧಾನಿ.

Posted On: 28 JUN 2022 8:01AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಜರ್ಮನಿಯ ಸ್ಕ್ಲೋಸ್ ಎಲ್ಮಾವ್ ನಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ 2022ರ ಜೂನ್ 27ರಂದು ಐರೋಪ್ಯ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಉರ್ಸಾಲಾ ವೋನ್ ಡೆರ್ ಲೈನ್ ಅವರನ್ನು ಭೇಟಿ ಮಾಡಿದ್ದರು.

ಪ್ರಧಾನಮಂತ್ರಿ ಅವರು 2022ರ ಏಪ್ರಿಲ್ ನಲ್ಲಿ ರೈಸಿನಾ ಮಾತುಕತೆ ವೇಳೆ ಅಧ್ಯಕ್ಷೆ ವೊನ್ ಡೆರ್ ಲೈನ್ ಅವರು ದೆಹಲಿಗೆ ಫಲಪ್ರದ ಭೇಟಿ ನೀಡಿದ್ದನ್ನು ಸ್ಮರಿಸಿದರು. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ವ್ಯಾಪಾರ, ಬಂಡವಾಳ ಹೂಡಿಕೆ ಮತ್ತು ಜಿಐ ಒಪ್ಪಂದಗಳ ಕುರಿತು ಮಾತುಕತೆ ಪುನಾರಂಭವಾಗಿರುವುದಕ್ಕೆ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು. ಅವರು ಡಿಜಿಟಲ್ ಸಹಕಾರ, ಹವಾಮಾನ ವೈಪರೀತ್ಯ ಮತ್ತು ತಂತ್ರಜ್ಞಾನ ಹಾಗೂ ಆವಿಷ್ಕಾರ ಸೇರಿದಂತೆ ನಾನಾ ವಲಯಗಳಲ್ಲಿ ಭಾರತ-ಐರೋಪ್ಯ ಒಕ್ಕೂಟದ ಸಹಕಾರವನ್ನು ಅವರು ಪರಾಮರ್ಶಿಸಿದರು.

ಉಭಯ ನಾಯಕರು ಸಮಕಾಲೀನ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. 

******



(Release ID: 1837622) Visitor Counter : 113