ಪ್ರಧಾನ ಮಂತ್ರಿಯವರ ಕಛೇರಿ

ಬೆಂಗಳೂರಿನಲ್ಲಿ 27,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ


ಬೆಂಗಳೂರು ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ, ಬೆಂಗಳೂರು ಕಂಟೋನ್ಮೆಂಟ್‌ನ ಪುನರಾಭಿವೃದ್ಧಿ ಮತ್ತು ಯಶವಂತಪುರ ಜಂಕ್ಷನ್‌ ರೈಲು ನಿಲ್ದಾಣ, ಬೆಂಗಳೂರು ವರ್ತುಲ ರಸ್ತೆ ಯೋಜನೆಯ ಎರಡು ವಿಭಾಗಗಳು, ಬಹು ರಸ್ತೆ ಉನ್ನತೀಕರಣ ಯೋಜನೆಗಳು ಮತ್ತು ಬೆಂಗಳೂರಿನ ಮಲ್ಟಿಮೋಡಲ್‌ ಲಾಜಿಸ್ಟಿಕ್ಸ್‌ ಪಾರ್ಕ್‌ ಅನ್ನು ಶಂಕುಸ್ಥಾಪನೆ ಮಾಡಲಾಯಿತು.

ಭಾರತದ ಮೊಟ್ಟಮೊದಲ ಹವಾನಿಯಂತ್ರಿತ ರೈಲು ನಿಲ್ದಾಣ, ಕೊಂಕಣ ರೈಲ್ವೆ ಮಾರ್ಗದ ಶೇ.100ರಷ್ಟು ವಿದ್ಯುದ್ದೀಕರಣ ಮತ್ತು ಇತರ ರೈಲ್ವೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

‘‘ಬೆಂಗಳೂರು ದೇಶದ ಲಕ್ಷಾಂತರ ಯುವಕರ ಕನಸಿನ ನಗರವಾಗಿದೆ, ನಗರವು ಏಕ್‌ ಭಾರತ್‌ ಶ್ರೇಷ್ಠತೆಯ ಸ್ಫೂರ್ತಿ ಪ್ರತಿಬಿಂಬವಾಗಿದೆ’’

‘‘ಡಬಲ್‌ ಇಂಜಿನ್‌’ ಸರ್ಕಾರವು ಬೆಂಗಳೂರಿನ ಜನರ ಸುಗಮ ಜೀವನವನ್ನು ಹೆಚ್ಚಿಸಲು ಸಾಧ್ಯವಿರುವ ಎಲ್ಲಮಾರ್ಗಗಳ ಮೇಲೆ ಕೆಲಸ ಮಾಡುತ್ತಿದೆ’’

‘‘ಕಳೆದ 8 ವರ್ಷಗಳಲ್ಲಿಸರ್ಕಾರವು ರೈಲು ಸಂಪರ್ಕದ ಸಂಪೂರ್ಣ ಪರಿವರ್ತನೆಗೆ ಕೆಲಸ ಮಾಡಿದೆ’’

‘‘ಕಳೆದ 40 ವರ್ಷಗಳಿಂದ ಬಾಕಿ ಉಳಿದಿರುವ ಬೆಂಗಳೂರಿನ ಜನರ ಕನಸುಗಳನ್ನು ಮುಂದಿನ 40 ತಿಂಗಳಲ್ಲಿಈಡೇರಿಸಲು ಶ್ರಮಿಸುತ್ತೇನೆ’’

‘‘ಭಾರತೀಯ ರೈಲ್ವೆ ವೇಗವಾಗಿ, ಸ್ವಚ್ಛವಾಗಿ, ಆಧುನಿಕವಾಗಿ, ಸುರಕ್ಷಿತವಾಗಿ ಮತ್ತು ನಾಗರಿಕ ಸ್ನೇಹಿಯಾಗುತ್ತಿದೆ’’

‘‘ಭಾರತೀಯ ರೈಲ್ವೆ ಈಗ ಎಲ್ಲಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಮತ್ತು ಒಂದು ಕಾಲದಲ್ಲಿ ವಿಮಾನ ನಿಲ್ದಾಣಗಳು ಮತ್ತು ವಿಮಾನ ಪ್ರಯಾಣದಲ್ಲಿಮಾತ್ರ ಇಂತಹ ವಾತಾವರಣ ಕಂಡು ಬರುತ್ತಿತ್ತು’’

‘‘ಸರ್ಕಾರವು ಸೌಲಭ್ಯಗಳನ್ನು ಒದಗಿಸಿದರೆ ಮತ್ತು ನಾಗರಿಕರ ಜೀವನದಲ್ಲಿ ಹಸ್ತಕ್ಷೇಪವನ್ನು ಕಡಿಮೆ ಮಾಡಿದರೆ ಭಾರತೀಯ ಯುವಕರು ಏನು ಮಾಡಬಹುದು ಎಂಬುದನ್ನು ಬೆಂಗಳೂರು ತೋರಿಸಿಕೊಟ್ಟಿದೆ’’

‘‘ಈ ಉದ್ಯಮವು ಸರ್ಕಾರಿ ಅಥವಾ ಖಾಸಗಿಯಾಗಿರಲಿ, ಎರಡೂ ದೇಶದ ಆಸ್ತಿಗಳಾಗಿವೆ, ಆದ್ದರಿಂದ ಎಲ್ಲರಿಗೂ ಸಮಾನವಾಗಿ ಸಮಾನ ವೇದಿಕೆ ನೀಡಬೇಕು ಎಂದು ನಾನು ನಂಬುತ್ತೇನೆ’’

Posted On: 20 JUN 2022 4:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿನಲ್ಲಿ27,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಹು ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿ ಅವರು ಮೆದುಳಿನ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ, ಬೆಂಗಳೂರಿನ ಐಐಎಸ್ಸಿಯಲ್ಲಿ ಬಾಗ್ಚಿ ಪಾರ್ಥಸಾರಥಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು ಡಾ.ಆ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ (ಬೇಸ್‌) ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಅನ್ನು ಉದ್ಘಾಟಿಸಿದರು ಮತ್ತು ಅವರ ಕ್ಯಾಂಪಸ್‌ನಲ್ಲಿ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಅವರು 150 ಐಟಿಐಗಳನ್ನು ತಂತ್ರಜ್ಞಾನ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಅವರು ದೇಶಕ್ಕೆ ಸಮರ್ಪಿಸಿದರು.

ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಶ್ರೀ ಪ್ರಲ್ಹಾದ್‌ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು,  ಕರ್ನಾಟಕದಲ್ಲಿ5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, 7 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಮತ್ತು ಕೊಂಕಣ ರೈಲ್ವೆಯ ಶೇ.100ರಷ್ಟು ವಿದ್ಯುದ್ದೀಕರಣದ ಮಹತ್ವದ ಮೈಲಿಗಲ್ಲಿಗೆ ಇಂದು ಸಾಕ್ಷಿಯಾಗಿದೆ ಎಂದರು. ಈ ಎಲ್ಲಾ ಯೋಜನೆಗಳು ಕರ್ನಾಟಕದ ಯುವಕರು, ಮಧ್ಯಮ ವರ್ಗ, ರೈತರು, ಕಾರ್ಮಿಕರು ಮತ್ತು ಉದ್ಯಮಿಗಳಿಗೆ ಹೊಸ ಸೌಲಭ್ಯಗಳು, ಹೊಸ ಅವಕಾಶಗಳನ್ನು ಒದಗಿಸುತ್ತವೆ.

ಬೆಂಗಳೂರು ದೇಶದ ಲಕ್ಷಾಂತರ ಯುವಕರ ಕನಸಿನ ನಗರವಾಗಿದ್ದು, ಈ ನಗರವು ಏಕ ಭಾರತ ಶ್ರೇಷ್ಠತೆಯ ಸ್ಫೂರ್ತಿಯ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ಹೇಳಿದರು. ‘‘ಬೆಂಗಳೂರಿನ ಅಭಿವೃದ್ಧಿ ಲಕ್ಷಾಂತರ ಕನಸುಗಳನ್ನು ಪೋಷಿಸುತ್ತಿದೆ. ಅದಕ್ಕಾಗಿಯೇ ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಬೆಂಗಳೂರಿನ ಸಾಮರ್ಥ್ಯ‌ವನ್ನು ಹೆಚ್ಚಿಸಲು ಶ್ರಮಿಸುತ್ತಿದೆ,’’ ಎಂದು ಹೇಳಿದರು.

ಬೆಂಗಳೂರನ್ನು ಟ್ರಾಫಿಕ್‌ ಜಾಮ್‌ನಿಂದ ಮುಕ್ತಗೊಳಿಸಲು ರೈಲು, ರಸ್ತೆ, ಮೆಟ್ರೋ, ಅಂಡರ್ ಪಾಸ್‌, ಫ್ಲೈಓವರ್‌ನಂತಹ ಮೂಲಸೌಕರ್ಯಗಳನ್ನು ಬಲಪಡಿಸುವಂತಹ ಸಾಧ್ಯವಿರುವ ಎಲ್ಲಮಾರ್ಗಗಳ ಬಗ್ಗೆ ‘ಡಬಲ್‌ ಎಂಜಿನ್‌’ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಬೆಂಗಳೂರಿನ ಉಪನಗರ ಪ್ರದೇಶಗಳನ್ನು ಉತ್ತಮ ಸಂಪರ್ಕದೊಂದಿಗೆ ಸಂಪರ್ಕಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ಕಳೆದ ನಾಲ್ಕು ದಶಕಗಳಿಂದ ಈ ಎಲ್ಲಾ ಕ್ರಮಗಳ ಬಗ್ಗೆ ಮಾತುಕತೆ ನಡೆಯುತ್ತಿದೆ ಮತ್ತು ಈಗ ‘ಡಬಲ್‌ ಇಂಜಿನ್‌’ ಸರ್ಕಾರದೊಂದಿಗೆ, ಜನರು ಈ ಯೋಜನೆಗಳನ್ನು ಪ್ರಸ್ತುತ ಸರ್ಕಾರಕ್ಕೆ ಪೂರ್ಣಗೊಳಿಸುವ ಅವಕಾಶವನ್ನು ನೀಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯನ್ನು ಸಕಾಲದಲ್ಲಿತಲುಪಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು, ಕಳೆದ 40 ವರ್ಷಗಳಿಂದ ಬಾಕಿ ಉಳಿದಿದ್ದ ಮುಂದಿನ 40 ತಿಂಗಳಲ್ಲಿ ಬೆಂಗಳೂರಿನ ಜನರ ಕನಸುಗಳನ್ನು ನನಸು ಮಾಡಲು ಶ್ರಮಿಸುವುದಾಗಿ ಹೇಳಿದರು.

ಬೆಂಗಳೂರು ಉಪನಗರ ರೈಲು ಯೋಜನೆಯ ಸಂಪರ್ಕವು ಬೆಂಗಳೂರು ನಗರವನ್ನು ಅದರ ಉಪನಗರಗಳು ಮತ್ತು ಉಪಗ್ರಹ ಟೌನ್‌ಶಿಪ್‌ ಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಅದು ಗುಣಾಕಾರದ ಪರಿಣಾಮವನ್ನು ಬೀರಲಿದೆ ಎಂದು ಪ್ರಧಾನಿ ವಿವರಿಸಿದರು. ಅದೇ ರೀತಿ, ಬೆಂಗಳೂರು ವರ್ತುಲ ರಸ್ತೆ ಯೋಜನೆಯು ನಗರದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಕಳೆದ 8 ವರ್ಷಗಳಲ್ಲಿಸರ್ಕಾರವು ರೈಲು ಸಂಪರ್ಕದ ಸಂಪೂರ್ಣ ಪರಿವರ್ತನೆಗೆ ಶ್ರಮಿಸಿದೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಭಾರತೀಯ ರೈಲ್ವೆಯು ವೇಗವಾಗಿ, ಸ್ವಚ್ಛವಾಗುತ್ತಿದ್ದು, ಅದು ಆಧುನಿಕ, ಸುರಕ್ಷಿತ ಮತ್ತು ನಾಗರಿಕ ಸ್ನೇಹಿಯಾಗುತ್ತಿದೆ ಎಂದು ಅವರು ಹೇಳಿದರು. ನಾವು ದೇಶದ ಆ ಭಾಗಗಳಿಗೆ ರೈಲನ್ನು ತೆಗೆದುಕೊಂಡು ಹೋಗಿದ್ದೇವೆ, ಅಲ್ಲಿ ಅದರ ಬಗ್ಗೆ ಯೋಚಿಸಲು ಸಹ ಕಷ್ಟವಾಗಿತ್ತು. ಭಾರತೀಯ ರೈಲ್ವೆ ಈಗ ಆ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದೆ ಮತ್ತು ಒಂದು ಕಾಲದಲ್ಲಿ ವಿಮಾನ ನಿಲ್ದಾಣಗಳು ಮತ್ತು ವಿಮಾನ ಪ್ರಯಾಣದಲ್ಲಿ ಮಾತ್ರ ಕಂಡುಬರುವ ವಾತಾವರಣವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಬೆಂಗಳೂರಿನ ಆಧುನಿಕ ರೈಲು ನಿಲ್ದಾಣಕ್ಕೆ ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಹೆಸರಿಟ್ಟಿರುವುದು ಇದಕ್ಕೆ ನೇರ ಸಾಕ್ಷಿಯಾಗಿದೆ ಎಂದರು. ಪ್ರಧಾನಮಂತ್ರಿ ಅವರು ಸಮಗ್ರ ಬಹು ಮಾದರಿ ಸಂಪರ್ಕದ ಮಹತ್ವವನ್ನು ಒತ್ತಿ ಹೇಳಿದರು. ಈ ಬಹು ಮಾದರಿ ಸಂಪರ್ಕವು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್‌ ಪ್ಲ್ಯಾನ್‌ನಿಂದ ಹೊಸ ಪ್ರಚೋದನೆಯನ್ನು ಪಡೆಯುತ್ತಿದೆ ಎಂದು ಅವರು ಉಲ್ಲೇಖಿಸಿದರು. ಮುಂಬರುವ ಮಲ್ಟಿ ಮೋಡಲ್‌ ಲಾಜಿಸ್ಟಿಕ್ಸ್‌ ಭಾಗವು ಈ ದೃಷ್ಟಿಕೋನದ ಭಾಗವಾಗಿದೆ ಎಂದು ಅವರು ಹೇಳಿದರು. ಗತಿಶಕ್ತಿಯ ಸ್ಫೂರ್ತಿಯಿಂದ ಕೈಗೊಳ್ಳಲಾಗುತ್ತಿರುವ ಇಂತಹ ಯೋಜನೆಗಳು ಯುವಕರಿಗೆ ಉದ್ಯೋಗವನ್ನು ನೀಡುತ್ತವೆ ಮತ್ತು ಆತ್ಮನಿರ್ಭರ ಭಾರತ ಅಭಿಯಾನವನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಬೆಂಗಳೂರಿನ ಯಶೋಗಾಥೆಯು 21ನೇ ಶತಮಾನದ ಭಾರತವನ್ನು ಆತ್ಮನಿರ್ಭರವಾಗಲು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರವು ಸೌಲಭ್ಯಗಳನ್ನು ಒದಗಿಸಿದರೆ ಮತ್ತು ನಾಗರಿಕರ ಜೀವನದಲ್ಲಿ ಹಸ್ತಕ್ಷೇಪವನ್ನು ಕಡಿಮೆ ಮಾಡಿದರೆ ಭಾರತೀಯ ಯುವಕರು ಏನು ಮಾಡಬಹುದು ಎಂಬುದನ್ನು ಬೆಂಗಳೂರು ತೋರಿಸಿದೆ. ಬೆಂಗಳೂರು ದೇಶದ ಯುವಕರ ಕನಸಿನ ನಗರವಾಗಿದೆ ಮತ್ತು ಅದರ ಹಿಂದೆ ಉದ್ಯಮಶೀಲತೆ, ನಾವೀನ್ಯತೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಸರಿಯಾದ ಉಪಯುಕ್ತತೆ ಇದೆ. ಭಾರತದ ಖಾಸಗಿ ಉದ್ಯಮದ ಮನೋಭಾವವನ್ನು ಇನ್ನೂ ಅಗೌರವಿಸುವವರಿಗೆ ಬೆಂಗಳೂರು ಒಂದು ಪಾಠವಾಗಿದೆ ಎಂದು ಅವರು ಹೇಳಿದರು. 21ನೇ ಶತಮಾನದ ಭಾರತವು ಸಂಪತ್ತಿನ ಸೃಷ್ಟಿಕರ್ತರು, ಉದ್ಯೋಗ ಸೃಷ್ಟಿಕರ್ತರು ಮತ್ತು ಆವಿಷ್ಕಾರಕರ ಭಾರತವಾಗಿದೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ವಿಶ್ವದ ಅತ್ಯಂತ ಕಿರಿಯ ರಾಷ್ಟ್ರವಾಗಿ, ಇದು ಭಾರತದ ಸಂಪತ್ತು ಮತ್ತು ಶಕ್ತಿಯಾಗಿದೆ ಎಂದು ಅವರು ಹೇಳಿದರು.

ಎಂ.ಎಸ್‌.ಎಂ.ಇ.ಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಎಸ್‌.ಎಂ.ಇ.ಯ ವ್ಯಾಖ್ಯಾನದಲ್ಲಿನ ಬದಲಾವಣೆಯೊಂದಿಗೆ, ಅವುಗಳ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯಲಾಗಿದೆ ಎಂದರು. ಆತ್ಮನಿರ್ಭರ ಭಾರತದ ಮೇಲಿನ ವಿಶ್ವಾಸದ ಸಂಕೇತವಾಗಿ, ಭಾರತವು 200 ಕೋಟಿ ರೂ.ಗಳವರೆಗಿನ ಒಪ್ಪಂದಗಳಲ್ಲಿ ವಿದೇಶಿ ಭಾಗವಹಿಸುವಿಕೆಯನ್ನು ತೆಗೆದುಹಾಕಿದೆ. ಎಂ.ಎಸ್‌.ಎಂ.ಇ.ಯಿಂದ ಶೇ.25 ರವರೆಗೆ ಖರೀದಿ ಮಾಡುವಂತೆ ಕೇಂದ್ರ ಸರ್ಕಾರದ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಜಿಇಎಂ ಪೋರ್ಟಲ್‌, ಎಂಎಸ್‌ಎಂಇ ವಿಭಾಗಕ್ಕೆ ಉತ್ತಮ ಸಕ್ರಿಯಗೊಳಿಸುತ್ತದೆ ಎಂದು ಸಾಬೀತುಪಡಿಸುತ್ತಿದೆ ಎಂದು ಅವರು ಹೇಳಿದರು.

ಸ್ಟಾರ್ಟ್‌ಅಪ್‌  ವಲಯದಲ್ಲಿನ ಭಾರಿ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಿ, ಹಿಂದಿನ ದಶಕಗಳಲ್ಲಿ ಎಷ್ಟು ಶತಕೋಟಿ ಡಾಲರ್‌ ಕಂಪನಿಗಳನ್ನು ರಚಿಸಲಾಗಿದೆ ಎಂದು ಬೆರಳುಗಳ ಮೇಲೆ ಎಣಿಸಬಹುದು ಎಂದು ಹೇಳಿದರು. ಆದರೆ ಕಳೆದ 8 ವರ್ಷಗಳಲ್ಲಿ, 100 ಕ್ಕೂ ಹೆಚ್ಚು, ಶತಕೋಟಿ ಡಾಲರ್‌ ಕಂಪನಿಗಳನ್ನು ರಚಿಸಲಾಗಿದೆ ಮತ್ತು ಪ್ರತಿ ತಿಂಗಳು ಹೊಸ ಕಂಪನಿಗಳನ್ನು ಸೇರಿಸಲಾಗುತ್ತಿದೆ. ಮೊದಲ 10,000 ಸ್ಟಾರ್ಟ್‌ಅಪ್‌ಗಳು 2014 ರ ನಂತರ 800 ದಿನಗಳನ್ನು ತೆಗೆದುಕೊಂಡಿವೆ ಆದರೆ ಈಗ ಈ ಅನೇಕ ಸ್ಟಾರ್ಟ್‌ಅಪ್‌ ಗಳನ್ನು 200 ದಿನಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಕಳೆದ 8 ವರ್ಷಗಳಲ್ಲಿರಚಿಸಲಾದ ಯುನಿಕಾರ್ನ್‌ಗಳ ಮೌಲ್ಯ ಸುಮಾರು 12 ಲಕ್ಷ  ಕೋಟಿ ರೂಪಾಯಿಗಳು ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.

ಈ ಉದ್ಯಮವು ಸರ್ಕಾರಿಯೋ ಅಥವಾ ಖಾಸಗಿಯೋ, ಎರಡೂ ದೇಶದ ಸ್ವತ್ತುಗಳು. ಆದ್ದರಿಂದ ಎಲ್ಲರಿಗೂ ಸಮಾನವಾಗಿ ಸಮಾನ ವೇದಿಕೆ ನೀಡಬೇಕು ಎಂದು ತಾವು ಸ್ಪಷ್ಟವಾಗಿ ನಂಬಿರುವುದಾಗಿ ಪ್ರಧಾನಿ ಹೇಳಿದರು. ಸರ್ಕಾರವು ಒದಗಿಸುತ್ತಿರುವ ವಿಶ್ವದರ್ಜೆಯ ಸೌಲಭ್ಯಗಳ ಬಗ್ಗೆ ತಮ್ಮ ದೃಷ್ಟಿಕೋನ ಮತ್ತು ಆಲೋಚನೆಗಳನ್ನು ಪರೀಕ್ಷಿಸಲು ಪ್ರಧಾನಮಂತ್ರಿ ಅವರು ದೇಶದ ಯುವಕರಿಗೆ ಆಹ್ವಾನ ನೀಡಿದರು. ಕಷ್ಟಪಟ್ಟು ದುಡಿಯುತ್ತಿರುವ ಯುವಕರಿಗೆ ಸರ್ಕಾರ ವೇದಿಕೆ ಒದಗಿಸುತ್ತಿದೆ ಎಂದು ಅವರು ಹೇಳಿದರು. ಸರ್ಕಾರಿ ಕಂಪನಿಗಳು ಸಹ ಸಮನಾದ ವೇದಿಕೆಯಲ್ಲಿ ಸ್ಪರ್ಧಿಸುತ್ತವೆ ಎಂದು ಅವರು ಮುಕ್ತಾಯಗೊಳಿಸಿದರು.

ಯೋಜನೆಗಳ ವಿವರಗಳು:

ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಬೆಂಗಳೂರು ನಗರವನ್ನು ಅದರ ಉಪನಗರಗಳು ಮತ್ತು ಸ್ಯಾಟಲೈಟ್‌ ಟೌನ್‌ಶಿಪ್‌ಗಳೊಂದಿಗೆ ಸಂಪರ್ಕಿಸುತ್ತದೆ. 15,700 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಯೋಜನೆಯು 148 ಕಿ.ಮೀ.ಗಿಂತ ಹೆಚ್ಚು ಉದ್ದದ 4 ಕಾರಿಡಾರ್‌ಗಳನ್ನು ಒಳಗೊಂಡಿದೆ. ಪ್ರಧಾನಮಂತ್ರಿ ಅವರು ಬೆಂಗಳೂರು ಕಂಟೋನ್ಮೆಂಟ್‌ನ ಪುನರಾಭಿವೃದ್ಧಿಗೂ ಶಂಕುಸ್ಥಾಪನೆ ನೆರವೇರಿಸಿದರು. ಮತ್ತು ಯಶವಂತಪುರ ಜಂಕ್ಷನ್‌ ರೈಲು ನಿಲ್ದಾಣವನ್ನು ಅನುಕ್ರಮವಾಗಿ ಸುಮಾರು 500 ಕೋಟಿ ಮತ್ತು 375 ಕೋಟಿ ರೂ.ಗಳ ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗುವುದು.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಸುಮಾರು 315 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿಆಧುನಿಕ ವಿಮಾನ ನಿಲ್ದಾಣದ ಮಾದರಿಯಲ್ಲಿಅಭಿವೃದ್ಧಿಪಡಿಸಲಾದ ಬೈಯಪ್ಪನಹಳ್ಳಿಯಲ್ಲಿರುವ ಭಾರತದ ಮೊಟ್ಟಮೊದಲ ಹವಾನಿಯಂತ್ರಿತ ರೈಲು ನಿಲ್ದಾಣವಾದ ಸರ್‌.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣವನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ರೋಹಾ (ಮಹಾರಾಷ್ಟ್ರ) ದಿಂದ ತೋಕೂರು (ಕರ್ನಾಟಕ) ವರೆಗಿನ ಕೊಂಕಣ ರೈಲು ಮಾರ್ಗದ (ಸುಮಾರು 740 ಕಿ.ಮೀ)100 ಪ್ರತಿಶತ ವಿದ್ಯುದ್ದೀಕರಣವನ್ನು ಉಡುಪಿ, ಮಡಗಾಂವ್‌ ಮತ್ತು ರತ್ನಗಿರಿಯಿಂದ ಎಲೆಕ್ಟ್ರಿಕ್‌ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಕೊಂಕಣ ರೈಲ್ವೆ ಮಾರ್ಗದ ವಿದ್ಯುದ್ದೀಕರಣವನ್ನು 1280 ಕೋಟಿಗೂ ಹೆಚ್ಚು ವೆಚ್ಚದಲ್ಲಿಮಾಡಲಾಗಿದೆ. ಪ್ರಯಾಣಿಕರ ರೈಲುಗಳು ಮತ್ತು ಮೆಮು ಸೇವೆಗೆ ಅನುಕ್ರಮವಾಗಿ ಹಸಿರು ನಿಶಾನೆ ತೋರುವ ಮೂಲಕ ಅರಸೀಕೆರೆಯಿಂದ ತುಮಕೂರು (ಸುಮಾರು 96 ಕಿ.ಮೀ) ಮತ್ತು ಯಲಹಂಕದಿಂದ ಪೆನುಕೊಂಡ (ಸುಮಾರು 120 ಕಿ.ಮೀ) ವರೆಗಿನ ಎರಡು ರೈಲ್ವೆ ಮಾರ್ಗ ಡಬ್ಲಿಂಗ್‌ ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು. ಎರಡು ರೈಲ್ವೆ ಮಾರ್ಗ ದ್ವಿಗುಣಗೊಳಿಸುವ ಯೋಜನೆಗಳನ್ನು ಕ್ರಮವಾಗಿ 750 ಕೋಟಿ ಮತ್ತು 1100 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಬೆಂಗಳೂರು ವರ್ತುಲ ರಸ್ತೆ ಯೋಜನೆಯ ಎರಡು ವಿಭಾಗಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. 2280 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವ ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿ 48ರ ನೆಲಮಂಗಲ-ತುಮಕೂರು ವಿಭಾಗದ ಆರು ಪಥಗಳ ನಿರ್ಮಾಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಹೆದ್ದಾರಿ 73ರ ಪುಂಜಾಲಕಟ್ಟೆ-ಚಾರ್ಮಾಡಿ ವಿಭಾಗದ ಅಗಲೀಕರಣ; ರಾಷ್ಟ್ರೀಯ ಹೆದ್ದಾರಿ-69ರ ಒಂದು ಭಾಗದ ಪುನರ್ವಸತಿ ಮತ್ತು ಉನ್ನತೀಕರಣ, ಈ ಯೋಜನೆಗಳನ್ನು ಒಟ್ಟು ವೆಚ್ಚ ಸುಮಾರು 3150 ಕೋಟಿ ರೂಪಾಯಿಗಳಲ್ಲಿ ಹಾಗೂ ಬೆಂಗಳೂರಿನಿಂದ ಸುಮಾರು 1800 ಕೋಟಿ ರೂ.ಗಳ ವೆಚ್ಚದಲ್ಲಿಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮುದ್ದಲಿಂಗನಹಳ್ಳಿಯಲ್ಲಿಅಭಿವೃದ್ಧಿಪಡಿಸಲಾಗುತ್ತಿರುವ ಬಹು ಮಾದರಿ ಲಾಜಿಸ್ಟಿಕ್ಸ್‌ ಪಾರ್ಕ್‌ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ಇದು ಸಾರಿಗೆ, ನಿರ್ವಹಣೆ ಮತ್ತು ದ್ವಿತೀಯಕ ಸರಕು ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

 

******



(Release ID: 1835579) Visitor Counter : 250