ಸಂಪುಟ
azadi ka amrit mahotsav g20-india-2023

ರಾಷ್ಟ್ರೀಯ ಪರಿಸರ ಅಧ್ಯಯನ ಸಂಸ್ಥೆ ಜಪಾನ್‌ ಹಾಗೂ ಆರ್ಯಭಟ ಸಂಶೋಧನಾ ಮತ್ತು ಗಮನ ವಿಜ್ಞಾನಗಳ ಸಂಸ್ಥೆಯ ನಡುವೆ ಒಪ್ಪಂದಕ್ಕೆ ಭಾರತ ಸರ್ಕಾರವು ಸಹಿ ಹಾಕಿದೆ. ಹವಾಮಾನ ಬದಲಾವಣೆ ಹಾಗೂ ಗುಣಮಟ್ಟದ ಗಾಳಿಯ ಕುರಿತು ಜಂಟಿ ಅಧ್ಯಯನ ಮಾಡಲು ವೃತ್ತಿರನಿರತರ ಸಮಿತಿ ರಚನೆಗೆ ಈ ಒಪ್ಪಂದ ಏರ್ಪಟ್ಟಿದೆ

Posted On: 08 JUN 2022 4:49PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಸಚಿವ ಸಂಪುಟವು ಜಪಾನ್‌ ಜೊತೆಗೆ  ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಜಪಾನ್‌ನ ರಾಷ್ಟ್ರೀಯ ಪರಿಸರ ಅಧ್ಯಯನ ಮತ್ತು ಭಾರತದ ಆರ್ಯಭಟ್ಟ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹವಾಮಾನ ಬದಲಾವಣೆ ಮತ್ತು ಗುಣಮಟ್ಟದ ಗಾಳಿಯ ಕುರಿತು ಜಂಟಿಯಾಗಿ ಸಂಶೋಧನೆ ನಡೆಸಲು ಸಹಕಾರಿ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸುತ್ತದೆ. ಈ ನಿಟ್ಟಿನಲ್ಲಿ ಇನ್ನು ಮುಂದೆ ಕೈಗೊಳ್ಳುವ ಎಲ್ಲ ಸಂಶೋಧನೆಗಳೂ ಜಂಟಿಯಾಗಿ ಕೈಗೊಳ್ಳಲಾಗುತ್ತದೆ. ಈ ಹಿಂದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ನೈನಿತಾಲ್‌ನ ಆರ್ಯಭಟ್ಟ ಸಂಸ್ಥೆಯು ಯಾವುದೇ ವಿದೇಶಿ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಒಳಪಟ್ಟಿಲ್ಲ.

 ಈ ಸಂಸ್ಥೆಗಳು ಈ ಕೆಳಗಿನ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಲಿವೆ
* ವೈಜ್ಞಾನಿಕ ಉಪಕರಣಗಳ ಜಂಟಿ ಬಳಕೆ ಮತ್ತು ಕಾರ್ಯಾಚರಣೆ
* ಸಂಶೋಧನೆಯ ವಿಧಾನಗಳಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನ ಮಾಹಿತಿಯ ವಿನಿಮಯ

* ಅವಲೋಕಿಸಿದ, ಅಧ್ಯಯಿಸಿದ ವಿಷಯಗಳ ಜಂಟಿ ವಿಶ್ಲೇಷಣೆ ಮತ್ತು ವೈಜ್ಞಾನಿಕ ವರದಿಗಳ ತಯಾರಿಕೆ
* ಜಂಟಿಯಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳು

* ಸಂಶೋಧನೆಗಾಗಿ ಪಿಎಚ್‌ಡಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರ ವಿನಿಮಯ ಕಾರ್ಯಕ್ರಮ
* ಜಂಟಿ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು

  

ಆರ್ಯಭಟ್ಟ ಸಂಶೋಧನಾ ಸಂಸ್ಥೆ: ಇದೊಂದು ಸ್ವಾಯತ್ತ ಸಂಶೋಧನಾ ಸಂಸ್ಥೆಯಾಗಿದ್ದು, ಭಾರತೀಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇದನ್ನು ಸ್ಥಾಪಿಸಿದೆ. ಖಗೋಳ ವಿಜ್ಞಾನ, ಖಗೋಳ ಭೌತಶಾಸ್ತ್ರ ಹಾಗೂ ವಾಯುಮಂಡಲ ವಿಜ್ಞಾನಗಳನ್ನು ಅಧ್ಯಿಸುವ ಸಂಸ್ಥೆಯಾಗಿದೆ. ವಾಯು ಮಾಲಿನ್ಯ ಹಾಗೂ ಹವಾಮಾನ ಬದಲಾವಣೆಗಳ ಕುರಿತು ಸಂಶೋಧನೆಗಳನ್ನು ಕೈಗೊಳ್ಳುತ್ತದೆ. ಸೂರ್ಯ, ತಾರೆಗಳು ಹಾಗೂ ಗ್ಯಾಲಕ್ಸಿಗಳ ವಿಕಾಸವಾದವನ್ನೂ ಅಧ್ಯಯನ ಮಾಡುತ್ತದೆ. ಈ ಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಗಳು, ಸಂಶೋಧಕರು, ಪಿಎಚ್‌ಡಿವ ಇದ್ಯಾರರ್ಥಿಗಳು, ಅತಿಥಿ ಸಂಶೋಧಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯ ಸಂಶೋಧಕರು ಸೂಕ್ಷ್ಮವಾದ ವೈಜ್ಞಾನಿಕ ಉಪಕರಣಗಳ ವಿನ್ಯಾಸ ಮತ್ತು ಸಿದ್ಧಪಡಿಸುವುದರಲ್ಲಿ, ಅಭಿವೃದ್ಧಿ ಪಡಿಸುವುದರಲ್ಲಿ ನಿರತರಾಗಿರುತ್ತಾರೆ. ಇದಕ್ಕಾಗಿ ತಂತ್ರಜ್ಞಾನಿಗಳ, ಎಂಜಿನಿಯರ್‌ಗಳ ತಂಡ ಸಹಕರಿಸುತ್ತದೆ. ಮನೋರಾ ಮತ್ತು ದೇವಸ್ಥಳದಲ್ಲಿರುವ ಕೇಂದ್ರಗಳಲ್ಲಿ ವೈಜ್ಞಾನಿಕ ಉಪಕರಣಗಳ ಅಭಿವೃದ್ಧಿಪಡಿಸಲಾಗುತ್ತದೆ. 

 ರಾಷ್ಟ್ರೀಯ ಪರಿಸರ ಅಧ್ಯಯನ ಸಂಸ್ಥೆ ಜಪಾನ್‌ ಕುರಿತು:

ಪರಿಸರ ವಿಜ್ಞಾನಗಳ ಕುರಿತು ಸಮಗ್ರವಾಗಿ ಹಾಗೂ ಸ್ಥೂಲವಾಗಿ ಅಧ್ಯಯನ ಮಾಡುವ ಏಕೈಕ ಸಂಸ್ಥೆಯಾಗಿದೆ. ಪರಿಸರ ಸಂರಕ್ಷೆಗೆ ವೈಜ್ಞಾನಿಕ ಪರಿಹಾರಗಳನ್ನು ಈ ಸಂಸ್ಥೆಯು ಸೂಚಿಸುತ್ತದೆ.  ದತ್ತಾಂಶ ಮಾಹಿತಿ ಸಂಗ್ರಹ, ವಿಶ್ಲೇಷಣೆ, ವೈಜ್ಞಾನಿಕವಾಗಿ ಪರಿಸರ ಮಾದರಿಗಳ ಸಂಗ್ರಹ ಮಾಡುತ್ತದೆ. ಸಂಶ್ಲೇಶಣೆ, ಸಮಗ್ರ, ವಿಕಾಸ ಹಾಗೂ ನೆಟ್ ವರ್ಕ್‌ ಎಂಬ ನಾಲ್ಕು ಮೂಲ ಅಂಶಗಳನ್ನಿರಿಸಿಕೊಂಡು ತನ್ನ ಧ್ಯೇಯೋದ್ದೇಶಗಳಿಗಾಗಿ ಶ್ರಮಿಸುತ್ತಿದೆ. ಪರಿಸರ ಸಂಶೋಧನೆಗೆ ಇವೇ ಮೂಲ ಆಕರಗಳಾಗಿವೆ. ಜಪಾನಿನ ಸಂಸ್ಥೆಯ ಸಮಗ್ರ ಮತ್ತು ಗರಿಷ್ಠ ಸಂಶೋಧನೆ ಹಾಗೂ ಅಭಿವೃದ್ಧಿಯ ವರದಿಗಳನ್ನು ನೀಡಿದೆ. ವೈಜ್ಞಾನಿಕ ಸಮುದಾಯ ಹಾಗೂ ಸಮಾಜಗಳ ನಡುವೆ ಒಂದು ಬಲವಾದ ಸೇತುಬಂಧ ಕಲ್ಪಿಸುವ ಗುರುತರ ಕಾರ್ಯವನ್ನೂ ಈ ಸಂಸ್ಥೆ ನೆರವೇರಿಸುತ್ತಿದೆ.  ಜಪಾನ್‌ಗಾಗಿ ಹಾಗೂ ಇತರ ರಾಷ್ಟ್ರಗಳಿಗಾಗಿ ಪರಿಸರ ಸಂಬಂಧಿ ನೀತಿ ನಿಯಮಗಳನ್ನು ರೂಪಿಸುವಲ್ಲಿಯೂ ಶ್ರಮವಹಿಸುತ್ತಿದೆ.

*****(Release ID: 1832359) Visitor Counter : 199