ಸಂಪುಟ

ಸಹಕಾರಿ ಸಂಸ್ಥೆಗಳಿಗೆ ಖರೀದಿಯ ಅವಕಾಶ ನೀಡಲು ಸರ್ಕಾರದ ಇ ಮಾರುಕಟ್ಟೆ ಸ್ಥಳ - ವಿಶೇಷ ಉದ್ದೇಶದ ವಾಹಕ (ಜಿಇಎಂ- ಎಸ್ಪಿವಿ) ದ ಆದೇಶ ವಿಸ್ತರಣೆಗೆ ಸಂಪುಟದ ಅನುಮೋದನೆ


ಈ ಕ್ರಮವು ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯಲು ಸಹಕಾರಿ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ

Posted On: 01 JUN 2022 4:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಸಹಕಾರಿ ಸಂಸ್ಥೆಗಳು ಜಿಇಎಂನಲ್ಲಿ ಖರೀದಿದಾರರಾಗಲು ಅನುಮತಿಗೆ ಜಿಇಎಂನ ಆದೇಶವನ್ನು ವಿಸ್ತರಿಸಲು ಅನುಮೋದನೆಯನ್ನು ನೀಡಿದೆ.


 
ಸರ್ಕಾರಿ ಖರೀದಿದಾರರಿಗೆ ಮುಕ್ತ ಮತ್ತು ಪಾರದರ್ಶಕ ಸಂಗ್ರಹಣೆ ವೇದಿಕೆಯನ್ನು ಸೃಷ್ಟಿಸಲು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಆಗಸ್ಟ್ 9, 2016 ರಂದು ಸರ್ಕಾರಿ ಇ ಮಾರುಕಟ್ಟೆ ಸ್ಥಳವನ್ನು (ಜಿಇಎಂ) ಪ್ರಾರಂಭಿಸಿತು. 2017 ರ ಏಪ್ರಿಲ್ 12 ರಂದು ಕೇಂದ್ರ ಸಚಿವ ಸಂಪುಟ ನೀಡಿದ ಅನುಮೋದನೆಯ ಅನುಸಾರವಾಗಿ 17 ಮೇ 2017 ರಂದು ರಾಷ್ಟ್ರೀಯ ಸಾರ್ವಜನಿಕ ಖರೀದಿ ಪೋರ್ಟಲ್ ಆಗಿ ಸರ್ಕಾರಿ ಇ-ಮಾರುಕಟ್ಟೆ (ಜಿಇಎಂ ಎಸ್ಪಿವಿ) ಹೆಸರಿನ ವಿಶೇಷ ಉದ್ದೇಶದ ವಾಹಕವನ್ನು (ಎಸ್ ಪಿ ವಿ) ಸ್ಥಾಪಿಸಲಾಯಿತು. ಪ್ರಸ್ತುತ, ಈ ವೇದಿಕೆಯು ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಇತ್ಯಾದಿ ಎಲ್ಲಾ ಸರ್ಕಾರಿ ಖರೀದಿದಾರರಿಗೆ ಮುಕ್ತವಾಗಿದೆ. ಅಸ್ತಿತ್ವದಲ್ಲಿರುವ ಆದೇಶದ ಪ್ರಕಾರ, ಖಾಸಗಿ ವಲಯದ ಖರೀದಿದಾರರು ಜಿಇಎಂ ಬಳಸಲು ಆಗುವುದಿಲ್ಲ. ಪೂರೈಕೆದಾರರು (ಮಾರಾಟಗಾರರು) ಸರ್ಕಾರಿ ಅಥವಾ ಖಾಸಗಿಯವರಾಗಿರಬಹುದು. 

 


 
ಫಲಾನುಭವಿಗಳ ಸಂಖ್ಯೆ:
8.54 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸಹಕಾರಿ ಸಂಸ್ಥೆಗಳು ಮತ್ತು ಅವರ 27 ಕೋಟಿ ಸದಸ್ಯರು ಈ ಉಪಕ್ರಮದಿಂದ ಪ್ರಯೋಜನ ಪಡೆಯುತ್ತಾರೆ. ದೇಶಾದ್ಯಂತ ಎಲ್ಲಾ ಖರೀದಿದಾರರು ಮತ್ತು ಮಾರಾಟಗಾರರಿಗೆ ಜಿಇಎಂ ಪೋರ್ಟಲ್ ತೆರೆದಿರುತ್ತದೆ.
ವಿವರಗಳು:
1.     ಸಾಮಾನ್ಯ ಬಳಕೆಯ ಸರಕು ಮತ್ತು ಸೇವೆಗಳ ಆನ್ಲೈನ್ ಖರೀದಿಗೆ ಅನುಕೂಲವಾಗುವಂತೆ ಜಿಇಎಂ ಅನ್ನು ಈಗಾಗಲೇ ಒಂದು ನಿಲುಗಡೆ ಪೋರ್ಟಲ್ನಂತೆ ಸಮರ್ಪಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಪಾರದರ್ಶಕ, ಪರಿಣಾಮಕಾರಿ,ಆರ್ಥಿಕ ಪ್ರಮಾಣವನ್ನು ಹೊಂದಿದೆ ಮತ್ತು ಖರೀದಿಯಲ್ಲಿ ವೇಗವಾಗಿದೆ. ಸಹಕಾರಿ ಸಂಘಗಳು ಈಗ ಜಿಇಎಂನಿಂದ ಸರಕು ಮತ್ತು ಸೇವೆಗಳನ್ನು ಪಡೆಯಲು ಅನುಮತಿಸಲಾಗುವುದು.
2.     ಸಹಕಾರಿ ಸಂಘಗಳಿಗೆ ಜಿಇಎಂನಲ್ಲಿ ಖರೀದಿದಾರರಾಗಿ ನೋಂದಾಯಿಸಲು ಅವಕಾಶ ನೀಡುವುದರಿಂದ ಮುಕ್ತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯುವಲ್ಲಿ ಸಹಕಾರಿಗಳಿಗೆ ಸಹಾಯವಾಗುತ್ತದೆ. 
3.     ಜಿಇಎಂನಲ್ಲಿ ಸೇರಿಸಬೇಕಾದ ಸಹಕಾರಿ ಸಂಸ್ಥೆಗಳ ಮಾನ್ಯತೆಯ ಪಟ್ಟಿಯನ್ನು - ಪೈಲಟ್ ಮತ್ತು ನಂತರದ ಸ್ಕೇಲ್ ಅಪ್ಗಾಗಿ - ಜಿಇಎಂ ಎಸ್ಪಿವಿ ಜೊತೆ ಸಮಾಲೋಚಿಸಿ ಸಹಕಾರ ಸಚಿವಾಲಯವು ನಿರ್ಧರಿಸುತ್ತದೆ. ಜಿಇಎಮ್ನಲ್ಲಿ ಖರೀದಿದಾರರಾಗಿ ಸಹಕಾರಿ ಸಂಸ್ಥೆಯ ಸೇರ್ಪಡೆಯನ್ನು ನಿರ್ಧರಿಸುವಾಗ ಜಿಇಎಂ ವ್ಯವಸ್ಥೆಯ ತಾಂತ್ರಿಕ ಸಾಮರ್ಥ್ಯ ಮತ್ತು ಲಾಜಿಸ್ಟಿಕ್ಸ್ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 
4.     ಜಿಇಎಂ ಸಹಕಾರಿಗಳಿಗೆ ಮೀಸಲಾದ ಆನ್ಬೋರ್ಡಿಂಗ್ ಪ್ರಕ್ರಿಯೆಯನ್ನು ಒದಗಿಸುತ್ತದೆ, ಅಸ್ತಿತ್ವದಲ್ಲಿರುವ ಪೋರ್ಟಲ್ನಲ್ಲಿ ಹೆಚ್ಚುವರಿ ಬಳಕೆದಾರರನ್ನು ಬೆಂಬಲಿಸಲು ತಾಂತ್ರಿಕ ಮೂಲಸೌಕರ್ಯವನ್ನು ಒದಗಿಸುತ್ತದೆ, ಹಾಗೆಯೇ ಲಭ್ಯವಿರುವ ಸಂಪರ್ಕ ಕೇಂದ್ರಗಳು, ತರಬೇತಿ ಮತ್ತು ಇತರ ಬೆಂಬಲ ಸೇವೆಗಳ ಮೂಲಕ ಆನ್ಬೋರ್ಡಿಂಗ್ ಮತ್ತು ವಹಿವಾಟುಗಳಿಗೆ  ಸಹಕಾರಿಗಳಿಗೆ ನೆರವು ನೀಡುತ್ತದೆ .
5.     ಸಹಕಾರ ಸಚಿವಾಲಯವು ಹೆಚ್ಚಿನ ಪಾರದರ್ಶಕತೆ, ದಕ್ಷತೆ ಮತ್ತು ಸ್ಪರ್ಧಾತ್ಮಕ ಬೆಲೆಗಳಿಂದ ಪ್ರಯೋಜನ ಪಡೆಯುವ ಸಲುವಾಗಿ ಸರಕು ಮತ್ತು ಸೇವೆಗಳ ಸಂಗ್ರಹಣೆಗಾಗಿ ಜಿಇಎಂ ವೇದಿಕೆಯನ್ನು ಬಳಸಲು ಸಹಕಾರಿ ಸಂಘಗಳನ್ನು ಉತ್ತೇಜಿಸಲು ಅಗತ್ಯ ಸಲಹೆಗಳನ್ನು ನೀಡುತ್ತದೆ.
6.     ಜಿಇಎಂನಲ್ಲಿ ವಿಶಾಲವಾದ ಮಾರಾಟಗಾರರ ಸಮುದಾಯದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಸಮಯೋಚಿತ ಪಾವತಿಗಳನ್ನು ಖಚಿತಪಡಿಸಿಕೊಳ್ಳಲು, ಪಾವತಿ ವ್ಯವಸ್ಥೆಗಳ ವಿಧಾನಗಳನ್ನು ಸಹಕಾರ ಸಚಿವಾಲಯದೊಂದಿಗೆ ಸಮಾಲೋಚಿಸಿ ಜಿಇಎಂ ನಿರ್ಧರಿಸುತ್ತದೆ.
ಅನುಷ್ಠಾನ ತಂತ್ರ ಮತ್ತು ಗುರಿಗಳು:
ಜಿಇಎಂ ಪೋರ್ಟಲ್ನಲ್ಲಿ ಅಗತ್ಯ ವೈಶಿಷ್ಟ್ಯಗಳು ಮತ್ತು ಕಾರ್ಯಚಟುವಟಿಕೆಗಳ ರಚನೆ, ಮೂಲಸೌಕರ್ಯಗಳ ಉನ್ನತೀಕರಣ, ಸಹಾಯಕೇಂದ್ರ ಮತ್ತು ತರಬೇತಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಸಹಕಾರಿಗಳ ಆನ್ಬೋರ್ಡಿಂಗ್ ಗೆ ಸಂಬಂಧಿಸಿದಂತೆ ಜಿಇಎಂ ಸೂಕ್ತ ಕ್ರಮಗಳನ್ನು ಪ್ರಾರಂಭಿಸುತ್ತದೆ. ಇದರ ಆರಂಭದ ಒಟ್ಟಾರೆ ವೇಗ ಮತ್ತು ಕಾರ್ಯವಿಧಾನವನ್ನು ಸಹಕಾರ ಸಚಿವಾಲಯವು ನಿರ್ಧರಿಸುತ್ತದೆ. ಮೈಲಿಗಲ್ಲುಗಳು ಮತ್ತು ಗುರಿ ದಿನಾಂಕಗಳನ್ನು ಸಹಕಾರ ಸಚಿವಾಲಯ ಮತ್ತು ಜಿಇಎಂ (ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ) ನಡುವೆ ಪರಸ್ಪರ ಸಮನ್ವಯ ಗೊಳಿಸಲಾಗುತ್ತದೆ.


 
ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪರಿಣಾಮ:
ಸಹಕಾರ ಸಚಿವಾಲಯವು ಜಿಇಎಂನಿಂದ ಸರಕುಗಳು ಮತ್ತು ಸೇವೆಗಳನ್ನು ಪಡೆಯಲು ಸಹಕಾರಿ ಸಂಘಗಳಿಗೆ ಅವಕಾಶ ನೀಡಬೇಕೆಂದು ಬಯಸಿದೆ. ಏಕೆಂದರೆ ಇದು ಈಗಾಗಲೇ ಸಾಮಾನ್ಯ ಬಳಕೆಯ ಸರಕು ಮತ್ತು ಸೇವೆಗಳ ಆನ್ಲೈನ್ ಖರೀದಿಗೆ ಅನುಕೂಲವಾಗುವಂತೆ ಒಂದು ನಿಲುಗಡೆಯ ಪೋರ್ಟಲ್ ನಂತೆ ಸಮರ್ಪಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಪಾರದರ್ಶಕ, ಪರಿಣಾಮಕಾರಿ, ಆರ್ಥಿಕ ಪ್ರಮಾಣವನ್ನು ಹೊಂದಿದೆ ಮತ್ತು ಖರೀದಿಯಲ್ಲಿ ವೇಗವಾಗಿದೆ. ಇಂತಹ ಸನ್ನಿವೇಶದಲ್ಲಿ, ಸಹಕಾರಿ ಸಂಘಗಳು ಅವರಿಗೆ ಅಗತ್ಯವಿರುವ ಸರಕು ಮತ್ತು ಸೇವೆಗಳ ಖರೀದಿದಾರರಾಗಿ ಜಿಇಎಂನಲ್ಲಿ ನೋಂದಾಯಿಸಲು ಅನುಮತಿಸುವುದು ಮುಕ್ತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯಲು ಸಹಕಾರಿಗಳಿಗೆ ಸಹಾಯ ಮಾಡುತ್ತದೆ. ಇದಲ್ಲದೆ, ಸಂಘಗಳು 27 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವುದರಿಂದ, ಜಿಇಎಂ ಮೂಲಕ ಖರೀದಿಯು ಸಾಮಾನ್ಯ ಜನರಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ, ಅಲ್ಲದೆ, ಇದು ಸಹಕಾರಿಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.


 
ಕ್ರಿಯಾತ್ಮಕ ಅಗತ್ಯಗಳು, ತಾಂತ್ರಿಕ ಮೂಲಸೌಕರ್ಯವನ್ನು ನಿರ್ವಹಿಸುವುದು ಮತ್ತು ಬಹು ಪಾಲುದಾರರೊಂದಿಗೆ ವ್ಯವಹರಿಸುವುದು ಸೇರಿದಂತೆ ಸುಧಾರಿತ ಖರೀದಿ ಪೋರ್ಟಲ್ ಅನ್ನು ನಡೆಸುವುದರ ಬಗ್ಗೆ ಜಿಇಎಂ ಸಮೃದ್ಧ ಅನುಭವ ಪಡೆದಿದೆ. ದೇಶದಲ್ಲಿ ಖರೀದಿ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ಗಳಿಸಿದ ಶ್ರೀಮಂತ ಅನುಭವವನ್ನು ಸಹಕಾರಿ ಸಂಸ್ಥೆಗಳಿಗೆ ಖರೀದಿ ಪ್ರಕ್ರಿಯೆಗಳಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು ಗಮನಾರ್ಹವಾಗಿ ಬಳಸಿಕೊಳ್ಳಬಹುದು ಎಂದು ಭಾವಿಸಲಾಗಿದೆ. ಇದು ಸಹಕಾರಿ ಸಂಸ್ಥೆಗಳಿಗೆ ಒಟ್ಟಾರೆ "ಸುಲಭ ವ್ಯವಹಾರ" ವನ್ನು ಹೆಚ್ಚಿಸುವ ನಿರೀಕ್ಷೆಯಿದೆ, ಹಾಗೆಯೇ ಜಿಇಎಂ ನೋಂದಾಯಿತ ಮಾರಾಟಗಾರರಿಗೆ ದೊಡ್ಡ ಖರೀದಿದಾರರನ್ನು ಒದಗಿಸುತ್ತದೆ.
ಖರ್ಚು:
ಪ್ರಸ್ತಾವಿತ ವಿಸ್ತರಿತ ಆದೇಶವನ್ನು ಬೆಂಬಲಿಸಲು ಅಸ್ತಿತ್ವದಲ್ಲಿರುವ ಪ್ಲಾಟ್ಫಾರ್ಮ್ ಮತ್ತು ಸಂಸ್ಥೆಯನ್ನು ಜಿಇಎಂ -ಎಸ್ಪಿವಿ ಬಳಸುವುದನ್ನು ಮುಂದುವರಿಸುತ್ತದೆ, ಇದಕ್ಕೆ ಹೆಚ್ಚುವರಿ ತಂತ್ರಜ್ಞಾನ ಮೂಲಸೌಕರ್ಯ ಮತ್ತು ಹೆಚ್ಚುವರಿ ತರಬೇತಿ ಮತ್ತು ಬೆಂಬಲ ಸಂಪನ್ಮೂಲಗಳಲ್ಲಿ ಕೆಲವು ಹೂಡಿಕೆಗಳು ಬೇಕಾಗಬಹುದು. ಈ ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು, ಸಹಕಾರ ಸಚಿವಾಲಯದೊಂದಿಗೆ ಪರಸ್ಪರ ಸಮಾಲೋಚನೆಯಲ್ಲಿ ನಿರ್ಧರಿಸಲು ಸಹಕಾರಿ ಸಂಸ್ಥೆಗಳಿಗೆ ಸೂಕ್ತವಾದ ವಹಿವಾಟು ಶುಲ್ಕವನ್ನು ಜಿಇಎಂ ವಿಧಿಸಬಹುದು. ಅಂತಹ ಶುಲ್ಕಗಳು ಇತರ ಸರ್ಕಾರಿ ಖರೀದಿದಾರರಿಗೆ ಜಿಇಎಂ ವಿಧಿಸುವ ಶುಲ್ಕಗಳಿಗಿಂತ ಹೆಚ್ಚಿರಬಾರದು. ಜಿಇಎಂ ಕಾರ್ಯಾಚರಣೆಗಳ ಸ್ವಯಂ-ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಯೋಜಿಸಲಾಗುವುದು ಮತ್ತು ಆದ್ದರಿಂದ ಸರ್ಕಾರಕ್ಕೆ ಯಾವುದೇ ಪ್ರಮುಖ ಹಣಕಾಸಿನ ವೆಚ್ಚಗಳಾಗುವುದಿಲ್ಲ. 


 
ಹಿನ್ನೆಲೆ:
ಜಿಇಎಂ -ಎಸ್ಪಿವಿ ತನ್ನ ಆರಂಭದಿಂದಲೂ ಗಮನಾರ್ಹ ದಾಪುಗಾಲುಗಳನ್ನು ಇಟ್ಟಿದೆ. 2018-19 ನೇ ಆರ್ದಥಿಕ ವರ್ಷದಿಂದ 2021-22 ವರೆಗೆ ಶೇ.84.5 ಕ್ಕಿಂತ ಹೆಚ್ಚಿನ ಜಿಎಜಿಆರ್ ನೊಂದಿಗೆ ಒಟ್ಟು ವ್ಯಾಪಾರದ ಮೌಲ್ಯವು (ಜಿಎಂವಿ) ಬೆಳೆದಿದೆ. ಪೋರ್ಟಲ್ 2021-22 ರಲ್ಲಿ ಜಿಎಂವಿಯಲ್ಲಿ ಶೇ.178 ರಷ್ಟು ಬೆಳವಣಿಗೆಯನ್ನು ತಲುಪಿದೆ ಮತ್ತು  2021-22 ರಲ್ಲಿ 1 ಲಕ್ಷ ಕೋಟಿ ರೂ. ದಾಟಿದೆ, ಇದು 2020-21 ರವರೆಗಿನ ಸಂಚಿತ ಜಿಎಂವಿಗಿಂತ ಹೆಚ್ಚಾಗಿದೆ.

Financial Year

 

Annual GMV (INR)

 

Growth over previous year

 

 

 

 

 

 

 

FY 2018-19

 

16,972 Crore

 

 

 

FY 2019-20

 

22,580 Crore

 

33%

 

FY 2020-21

 

38,280 Crore

 

70%

 

FY 2021-22

 

106760 Crore

 

178%

 

 

 

ಜಿಇಎಂನ ಮೂರು ಸ್ತಂಭಗಳಾದ ಸೇರ್ಪಡೆ, ಪಾರದರ್ಶಕತೆ ಮತ್ತು ದಕ್ಷತೆ ಪ್ರತಿಯೊಂದೂ ಗಮನಾರ್ಹ ಪ್ರಗತಿಯನ್ನು ಕಂಡಿವೆ. ಸಂಚಿತ ವಹಿವಾಟು ಮೌಲ್ಯಕ್ಕೆ ಎಂ ಎಸ್ ಎಂ ಇ ಗಳ ಕೊಡುಗೆಯು ಸುಮಾರು ಶೇ.58 ಆಗಿದೆ. ವಿಶ್ವ ಬ್ಯಾಂಕ್ ಮತ್ತು ರಾಷ್ಟ್ರೀಯ ಆರ್ಥಿಕ ಸಮೀಕ್ಷೆ 2021 ಸೇರಿದಂತೆ ವಿವಿಧ ಸ್ವತಂತ್ರ ಅಧ್ಯಯನಗಳು, ಹೆಚ್ಚಿನ ಭಾಗವಹಿಸುವಿಕೆ ಮತ್ತು ವೆಚ್ಚ ಪರಿಣಾಮಕಾರಿ ಆಯ್ಕೆಗಳನ್ನು ಒದಗಿಸುವ ಜಿಇಎಂನ ಸಾಮರ್ಥ್ಯದಿಂದಾಗಿ ಗಣನೀಯ ಉಳಿತಾಯವಾಗಿರುವುದನ್ನು ಹೇಳಿವೆ.
ಭಾರತದಲ್ಲಿ ಸಹಕಾರಿ ಚಳುವಳಿಯು ಗಮನಾರ್ಹವಾಗಿ ಬೆಳೆದಿದೆ, ಇದು ಭಾರತದಲ್ಲಿ ವಿಶೇಷವಾಗಿ ಕೃಷಿ, ಬ್ಯಾಂಕಿಂಗ್ ಮತ್ತು ವಸತಿ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಅಗತ್ಯಗಳನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ 8.54 ಲಕ್ಷ ನೋಂದಾಯಿತ ಸಹಕಾರಿ ಸಂಘಗಳಿವೆ. ಈ ಸಹಕಾರಿ ಸಂಘಗಳು ಸಾಮೂಹಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಮಾರಾಟ ಮಾಡುತ್ತವೆ. ಪ್ರಸ್ತುತ, "ಖರೀದಿದಾರರು" ಎಂದು ಸಹಕಾರಿಗಳ ನೋಂದಣಿಯು ಜಿಇಎಂನ ಅಸ್ತಿತ್ವದಲ್ಲಿರುವ ಆದೇಶದಲ್ಲಿ ಇರಲಿಲ್ಲ.

*****



(Release ID: 1830294) Visitor Counter : 262