ಪ್ರಧಾನ ಮಂತ್ರಿಯವರ ಕಛೇರಿ
ಹೈದರಾಬಾದ್‌ನ ಐಎಸ್‌ಬಿಯಲ್ಲಿ 2022ರ ಪಿಜಿಪಿ ತರಗತಿಯ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಮಾತನಾಡಿದರು
ದೇಶದ ಆರ್ಥಿಕ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಐಎಸ್‌ಬಿ ವಿದ್ಯಾರ್ಥಿಗಳ ಪಾತ್ರವನ್ನು ಶ್ಲಾಘಿಸಿದರು
"ಭಾರತ ಎಂದರೆ ವ್ಯವಹಾರ ಎಂಬುದನ್ನು ಇಂದು ಜಗತ್ತು ಅರಿತುಕೊಳ್ಳುತ್ತಿದೆ"
"ವೈಯಕ್ತಿಕ ಗುರಿಗಳನ್ನು ದೇಶದ ಗುರಿಗಳೊಂದಿಗೆ ಜೋಡಿಸುವಂತೆ ನಿಮಗೆ ಕೇಳಿಕೊಳ್ಳುತ್ತೇನೆ"
"ಕಳೆದ ಮೂರು ದಶಕಗಳಲ್ಲಿ ನಿರಂತರ ರಾಜಕೀಯ ಅಸ್ಥಿರತೆಯಿಂದಾಗಿ, ದೇಶವು ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಕಂಡಿತ್ತು ಮತ್ತು ಸುಧಾರಣೆಗಳು ಮತ್ತು ದೊಡ್ಡ ನಿರ್ಧಾರಗಳಿಂದ ದೂರ ಉಳಿದಿತ್ತು"
"ಈಗ ವ್ಯವಸ್ಥೆಯಲ್ಲಿ ಸರ್ಕಾರ ಸುಧಾರಣೆಗಳನ್ನು ತರುತ್ತಿದೆ, ಅಧಿಕಾರಶಾಹಿ ಕೆಲಸ ಮಾಡುತ್ತಿದೆ ಮತ್ತು ಜನರ ಭಾಗವಹಿಸುವಿಕೆಯು ಪರಿವರ್ತನೆಗೆ ಕಾರಣವಾಗಿದೆ"
“ಭಾರತವನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು, ಭಾರತವು ಸ್ವಾವಲಂಬಿಯಾಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಎಲ್ಲಾ ವ್ಯವಹಾರ ವೃತ್ತಿಪರರು ಇದರಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತಾರೆ"
Posted On:
26 MAY 2022 3:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 20 ವರ್ಷಗಳನ್ನು ಪೂರೈಸಿದ ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ) ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು ಮತ್ತು 2022 ರ ಪಿಜಿಪಿ ತರಗತಿಯ ಪದವಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಧಾನಮಂತ್ರಿಯವರು ತಮ್ಮ ಭಾಷಣದ ಆರಂಭದಲ್ಲಿ, ಸಂಸ್ಥೆಯ ಅಭ್ಯುದಯಕ್ಕೆ ಕೊಡುಗೆ ನೀಡಿದವರಿಗೆ ಗೌರವ ಸಲ್ಲಿಸಿದರು. 2001ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸಿದ್ದರು ಎಂದು ಅವರು ಸ್ಮರಿಸಿದರು. ಅಂದಿನಿಂದ 50 ಸಾವಿರಕ್ಕೂ ಹೆಚ್ಚು ವೃತ್ತಿಪರರು ಐಎಸ್‌ಬಿಯಿಂದ ಹೊರಹೊಮ್ಮಿದ್ದಾರೆ. ಇಂದು ಐಎಸ್‌ಬಿ ಏಷ್ಯಾದ ಉನ್ನತ ವ್ಯವಹಾರ ಶಾಲೆಗಳಲ್ಲಿ ಒಂದಾಗಿದೆ. ಐಎಸ್‌ಬಿಯಿಂದ ಹೊರಬಿದ್ದ ವೃತ್ತಿಪರರು ಉನ್ನತ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ ಮತ್ತು ದೇಶದ ವ್ಯವಹಾರಕ್ಕೆ ವೇಗವನ್ನು ನೀಡುತ್ತಿದ್ದಾರೆ. ಇಲ್ಲಿಂದ ಬಂದ ವಿದ್ಯಾರ್ಥಿಗಳು ನೂರಾರು ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಿದ್ದಾರೆ ಮತ್ತು ಯುನಿಕಾರ್ನ್‌ಗಳನ್ನು ಸೃಷ್ಟಿಸುವಲ್ಲಿ ಪಾತ್ರ ವಹಿಸಿದ್ದಾರೆ. ಇದು ಐಎಸ್‌ಬಿಯ ಸಾಧನೆಯಾಗಿದೆ ಮತ್ತು ಇಡೀ ದೇಶದ ಹೆಮ್ಮೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.
ಇಂದು ಭಾರತವು ಜಿ20 ರಾಷ್ಟ್ರಗಳ ಗುಂಪಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಹೇಳಿದರು. ಸ್ಮಾರ್ಟ್‌ಫೋನ್ ಡೇಟಾ ಗ್ರಾಹಕರ ವಿಷಯದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಇಂಟರ್ ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಜಾಗತಿಕ ಚಿಲ್ಲರೆ ಸೂಚ್ಯಂಕದಲ್ಲೂ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದರು. ವಿಶ್ವದ ಮೂರನೇ ಅತಿ ದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಭಾರತದಲ್ಲಿದೆ. ವಿಶ್ವದ ಮೂರನೇ ಅತಿದೊಡ್ಡ ಗ್ರಾಹಕ ಮಾರುಕಟ್ಟೆ ಭಾರತದಲ್ಲಿದೆ. ಭಾರತ ಇಂದು ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಕಳೆದ ವರ್ಷ, ಅತಿ ಹೆಚ್ಚು ವಿದೇಶಿ ನೇರ ಹೂಡಿಕೆ ಭಾರತಕ್ಕೆ ಬಂದಿತ್ತು. ಭಾರತ ಎಂದರೆ ವ್ಯವಹಾರ ಎಂಬುದನ್ನು ಇಂದು ಜಗತ್ತು ಅರಿತುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಪದೇಪದೇ ಭಾರತೀಯ ಪರಿಹಾರಗಳು ಜಾಗತಿಕವಾಗಿ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ಪ್ರಧಾನಿ ಗಮನಸೆಳೆದರು. ಆದ್ದರಿಂದ, ಇಂದು ಈ ಮಹತ್ವದ ದಿನದಂದು, ನಿಮ್ಮ ವೈಯಕ್ತಿಕ ಗುರಿಗಳನ್ನು ದೇಶದ ಗುರಿಗಳೊಂದಿಗೆ ಜೋಡಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತೇನೆ ಎಂದರು.
ದೇಶದಲ್ಲಿ ಸುಧಾರಣೆಯ ಅಗತ್ಯ ಯಾವಾಗಲೂ ಇತ್ತು. ಆದರೆ ಅಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು ಎಂದು ಪ್ರಧಾನಿ ಹೇಳಿದರು. ಕಳೆದ ಮೂರು ದಶಕಗಳಲ್ಲಿ ನಿರಂತರ ರಾಜಕೀಯ ಅಸ್ಥಿರತೆಯಿಂದಾಗಿ ದೇಶವು ಬಹುಕಾಲದಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಕಂಡಿತು. ಇದರಿಂದಾಗಿ ದೇಶವು ಸುಧಾರಣೆಗಳಿಂದ ಮತ್ತು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. 2014 ರಿಂದ, ನಮ್ಮ ದೇಶವು ರಾಜಕೀಯ ಇಚ್ಛಾಶಕ್ತಿಯನ್ನು ಮತ್ತು ನಿರಂತರವಾದ ಸುಧಾರಣೆಗಳನ್ನು ನೋಡುತ್ತಿದೆ. ಸಂಕಲ್ಪ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಸುಧಾರಣೆಗಳನ್ನು ಕೈಗೊಂಡಾಗ ಸಾರ್ವಜನಿಕ ಬೆಂಬಲ ಮತ್ತು ಜನಬೆಂಬಲ ಖಚಿತ ಎಂದು ಅವರು ಹೇಳಿದರು. ಜನರಲ್ಲಿ ಡಿಜಿಟಲ್ ಪಾವತಿಯ ಅಳವಡಿಕೆಯ ಉದಾಹರಣೆಯನ್ನು ಅವರು ನೀಡಿದರು.
ಸಾಂಕ್ರಾಮಿಕದ ಸಮಯದಲ್ಲಿ ಆರೋಗ್ಯ ಕ್ಷೇತ್ರದ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯು ಸಾಬೀತಾಗಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್ ಲಸಿಕೆಗಳಿಗೆ ಸಂಬಂಧಿಸಿದಂತೆ, ವಿದೇಶಿ ಲಸಿಕೆಗಳು ದೊರೆಯತ್ತವೆಯೇ ಅಥವಾ ಇಲ್ಲವೇ ಎಂಬ ಆತಂಕವನ್ನು ಇಲ್ಲಿ ಎತ್ತಲಾಯಿತು. ಆದರೆ ಭಾರತ ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸಿತು. ಭಾರತದಲ್ಲಿ ಸಾಕಷ್ಟು ಲಸಿಕೆಗಳನ್ನು ತಯಾರಿಸಲಾಗಿದೆ ಮತ್ತು 190 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಭಾರತವು ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳನ್ನು ಕಳುಹಿಸಿದೆ ಎಂದರು. ವೈದ್ಯಕೀಯ ಶಿಕ್ಷಣ ಕ್ಷೇತ್ರದ ವಿಸ್ತರಣೆ ಬಗ್ಗೆಯೂ ಪ್ರಧಾನಿ ಮಾತನಾಡಿದರು.
ಸುಧಾರಣಾ ಪ್ರಕ್ರಿಯೆಯಲ್ಲಿ ಅಧಿಕಾರಶಾಹಿ ಕೂಡ ದೃಢವಾದ ಕೊಡುಗೆಗಳನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರದ ಈ ಯೋಜನೆಗಳ ಯಶಸ್ವಿಗೆ ಜನರ ಸಹಭಾಗಿತ್ವವೂ ಸಲ್ಲುತ್ತದೆ ಎಂದರು. ಜನರು ಸಹಕಾರ ನೀಡಿದಾಗ ತ್ವರಿತ ಹಾಗೂ ಉತ್ತಮ ಫಲಿತಾಂಶ ದೊರೆಯುವುದು ಖಚಿತ ಎಂದರು. ಈಗ ವ್ಯವಸ್ಥೆಯಲ್ಲಿ, ಸರ್ಕಾರವು ಸುಧಾರಣೆಗಳನ್ನು ತರುತ್ತಿದೆ, ಅಧಿಕಾರಶಾಹಿ ಕೆಲಸಮಾಡುತ್ತಿದೆ ಮತ್ತು ಜನರ ಭಾಗವಹಿಸುವಿಕೆಯು ಪರಿವರ್ತನೆಗೆ ಕಾರಣವಾಗಿದೆ. ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ ಈ ಕಾರ್ಯವಿಧಾನವನ್ನು ಅಧ್ಯಯನ ಮಾಡಲು ಅವರು ಐಎಸ್‌ಬಿ ವಿದ್ಯಾರ್ಥಿಗಳಿಗೆ ಕೇಳಿದರು.
2014ರ ನಂತರ ನಾವು ಪ್ರತಿಯೊಂದು ಕ್ರೀಡೆಯಲ್ಲೂ ಅದ್ಬುತ ಪ್ರದರ್ಶನ ಕಾಣುತ್ತಿರುವುದಕ್ಕೆ ನಮ್ಮ ಅಥ್ಲೀಟ್‌ಗಳ ಆತ್ಮವಿಶ್ವಾಸವೇ ಕಾರಣ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸರಿಯಾದ ಪ್ರತಿಭೆಯನ್ನು ಪತ್ತೆಮಾಡಿದಾಗ, ಆ ಪ್ರತಿಭೆಗೆ ಬೆಂಬಲ ದೊರೆತಾಗ, ಪಾರದರ್ಶಕ ಆಯ್ಕೆ ಮತ್ತು ತರಬೇತಿ ದೊರೆತಾಗ, ಸ್ಪರ್ಧೆಗೆ ಉತ್ತಮ ಮೂಲಸೌಕರ್ಯ ಲಭ್ಯವಾದಾಗ ಆತ್ಮವಿಶ್ವಾಸ ಬರುತ್ತದೆ ಎಂದರು. ಖೇಲೋ ಇಂಡಿಯಾ ಮತ್ತು ಟಾಪ್ಸ್ ಯೋಜನೆಯಂತಹ ಸುಧಾರಣೆಗಳಿಂದಾಗಿ ನಾವು ಕ್ರೀಡೆಯಲ್ಲಿ ಪರಿವರ್ತನೆಯನ್ನು ನೋಡುತ್ತಿದೇವೆ ಎಂದು ಅವರು ಹೇಳಿದರು. ಹಾಗೆಯೇ, ಸಾರ್ವಜನಿಕ ನೀತಿ ಕ್ಷೇತ್ರದಲ್ಲಿ ಕಾರ್ಯಕ್ಷಮತೆ, ಮೌಲ್ಯವರ್ಧನೆ, ಉತ್ಪಾದಕತೆ ಮತ್ತು ಸ್ಫೂರ್ತಿಗೆ ಪ್ರಧಾನಿಯವರು ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮವನ್ನು ಉತ್ತಮ ಉದಾಹರಣೆಯಾಗಿ ಉಲ್ಲೇಖಿಸಿದರು.
ಔಪಚಾರಿಕ, ಅನೌಪಚಾರಿಕ, ಸಣ್ಣ ಮತ್ತು ದೊಡ್ಡ ವ್ಯವಹಾರಗಳು ತಮ್ಮ ಪರಿಧಿಯನ್ನು ವಿಸ್ತರಿಸುತ್ತಿರುವ ಮತ್ತು ಕೋಟ್ಯಂತರ ಜನರಿಗೆ ಉದ್ಯೋಗವನ್ನು ನೀಡುತ್ತಿರುವ ಬದಲಾಗುತ್ತಿರುವ ವ್ಯವಹಾರ ವಲಯದ ಬಗ್ಗೆ ಪ್ರಧಾನಿ ಮಾತನಾಡಿದರು. ಸಣ್ಣ ಉದ್ದಿಮೆಗಳನ್ನು ಬೆಳೆಸಲು ಹೆಚ್ಚಿನ ಅವಕಾಶಗಳನ್ನು ನೀಡುವ ಮತ್ತು ಹೊಸ ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಸಹಾಯ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅವುಗಳ ಅಪಾರ ಸಾಮರ್ಥ್ಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಭಾರತವನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು, ಭಾರತವು ಸ್ವಾವಲಂಬಿಯಾಗುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದರು. ಐಎಸ್‌ಬಿಯಂತಹ ಸಂಸ್ಥೆಗಳ ವಿದ್ಯಾರ್ಥಿಗಳು ಇದರಲ್ಲಿ ಉತ್ತಮ ಪಾತ್ರ ವಹಿಸಬೇಕು ಎಂದರು. ಎಲ್ಲಾ ವ್ಯವಹಾರ ವೃತ್ತಿಪರರು ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದೀರಿ ಮತ್ತು ಇದು ದೇಶ ಸೇವೆಗೆ ನಿಗೆ ಉತ್ತಮ ಅವಕಾಶವಾಗಿದೆ ಎಂದು ಪ್ರಧಾನಿಯವರು ಹೇಳಿದರು.
***
(Release ID: 1828543)
Visitor Counter : 231
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam