ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ ಜಿನಿವಾದಲ್ಲಿ 75ನೇ ವಿಶ್ವ ಆರೋಗ್ಯ ಮಹಾಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ


“ಭಾರತದ ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿರುವಂತೆ, ಲಸಿಕೆಗಳು ಮತ್ತು ಔಷಧಗಳು ಸಮಾನ ಲಭ್ಯತೆಯನ್ನು ಖಾತ್ರಿಪಡಿಸಲು ಸ್ಥಿತಿಸ್ಥಾಪಕತ್ವ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಾಣ ಮಾಡುವ ಅಗತ್ಯವಿದೆ, ಲಸಿಕೆಗಳು ಮತ್ತು ಚಿಕಿತ್ಸೆಗಳಿಗೆ ಡಬ್ಲ್ಯೂಎಚ್ಒ ಅನುಮೋದನೆ ಸರಳಗೊಳಿಸಬೇಕು ಮತ್ತು ಹೆಚ್ಚು ಸ್ಥಿತಿಸ್ಥಾಪಕತ್ವದ ಜಾಗತಿಕ ಆರೋಗ್ಯ ಭದ್ರತಾ ವಿನ್ಯಾಸವನ್ನು ನಿರ್ಮಿಸಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಬಲವರ್ಧನೆಗೊಳಿಸಬೇಕು’’

ಭಾರತದ ಶಾಸನಬದ್ಧ ಪ್ರಾಧಿಕಾರವು ಪ್ರಕಟಿಸಿದ ದೇಶದ ಅಧಿಕೃತ ನಿರ್ದಿಷ್ಠ ದತ್ತಾಂಶವನ್ನು ಕಡೆಗಣಿಸಿದ, ಎಲ್ಲ ಕಾರಣಗಳಿಂದ ಆಗಿರುವ ಸಾವು ಸೇರಿ ಇತ್ತೀಚೆಗೆ ಡಬ್ಲ್ಯೂಎಚ್ಒ ಪ್ರಕಟಣೆಯ ಬಗ್ಗೆ ಭಾರತ ತನ್ನ ನಿರಾಶೆ ಮತ್ತು ಕಳವಳವನ್ನು ಹೊರಹಾಕಿತು

ಭಾರತ ದೇಶದ ಎಲ್ಲ ರಾಜ್ಯಗಳ ಆರೋಗ್ಯ ಸಚಿವರನ್ನು ಒಳಗೊಂಡ ಪ್ರಾತಿನಿಧಿಕ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರೀಯ ಮಂಡಳಿಯು ಸರ್ವಸಮ್ಮತವಾಗಿ ನಿರ್ಣಯವನ್ನು ಅಂಗೀಕರಿಸಿ ತನ್ನ ಸಾಮೂಹಿಕ ನಿರಾಶೆಯ ಸಂದೇಶ ರವಾನಿಸಿದೆ

ಶಾಂತಿ ಮತ್ತು ಆರೋಗ್ಯವನ್ನು ಸಂಯೋಜಿಸುವ ಈ ವರ್ಷದ ಘೋಷವಾಕ್ಯವನ್ನು ಭಾರತ ನಂಬುತ್ತದೆ, ಏಕೆಂದರೆ ಶಾಂತಿಯಿಲ್ಲದೆ ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವತ್ರಿಕ ಆರೋಗ್ಯ ಮತ್ತು ಯೋಗಕ್ಷೇಮ ಸಾಧ್ಯವಿಲ್ಲ: ಡಾ. ಮಾಂಡವೀಯ

Posted On: 23 MAY 2022 9:33PM by PIB Bengaluru

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಎಚ್ ಒ)ಯ ಕೇಂದ್ರ ಕಚೇರಿ ಜಿನೀವಾದಲ್ಲಿ ವಿಶ್ವ ಆರೋಗ್ಯ ಅಸೆಂಬ್ಲಿಯ 75 ನೇ ಅಧಿವೇಶನದಲ್ಲಿ ಐತಿಹಾಸಿಕ ಭಾಷಣ ಮಾಡಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಡಾ.ಮನ್ಸುಖ್ ಮಾಂಡವೀಯ, ಸ್ಥಿತಿಸ್ಥಾಪಕತ್ವ ಜಾಗತಿಕ ಆರೋಗ್ಯ ಭದ್ರತಾ ವಿನ್ಯಾಸವನ್ನು ಅಭಿವೃದ್ಧಿಪಡಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. 

ವಿಶ್ವ ಆರೋಗ್ಯ ಸಂಸ್ಥೆಯನ್ನು ಬಲವರ್ಧನೆಗೊಳಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಕೇಂದ್ರ ಸಚಿವರು, "ಭಾರತದ ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿರುವಂತೆ, ಲಸಿಕೆಗಳು ಮತ್ತು ಔಷಧಿಗಳಿಗೆ ಸಮಾನವಾದ ಲಭ್ಯತೆಯನ್ನು ಖಾತ್ರಿಪಡಿಸಲು ಸ್ಥಿತಿಸ್ಥಾಪಕತ್ವ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವ ಅವಶ್ಯಕತೆಯಿದೆ, ಲಸಿಕೆಗಳು ಮತ್ತು ಚಿಕಿತ್ಸಕಗಳಿಗಾಗಿ ಡಬ್ಲೂಎಚ್ ಒ ದ ಅನುಮೋದನೆ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಹೆಚ್ಚು ಸ್ಥಿತಿಸ್ಥಾಪಕತ್ವ ಜಾಗತಿಕ ಆರೋಗ್ಯ ಭದ್ರತಾ ವಾಸ್ತುಶಿಲ್ಪವನ್ನು ನಿರ್ಮಿಸಲು ಡಬ್ಲೂಎಚ್ ಒ ಬಲವರ್ಧನೆಗೊಳಿಸಬೇಕು" ಎಂದರು. ಜಾಗತಿಕ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ, ಭಾರತವು ಈ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

“ಶಾಂತಿ ಸ್ಥಾಪನೆಯೊಂದಿಗೆ ಆರೋಗ್ಯವನ್ನು ಜೋಡಿಸುವ ಈ ವರ್ಷದ ಘೋಷವಾಕ್ಯ ಸಮಯೋಚಿತ ಮತ್ತು ಪ್ರಸ್ತುತವಾಗಿದೆ ಎಂದು ಭಾರತ ನಂಬುತ್ತದೆ, ಏಕೆಂದರೆ ಶಾಂತಿಯಿಲ್ಲದೆ ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವತ್ರಿಕ ಆರೋಗ್ಯ ಮತ್ತು ಯೋಗಕ್ಷೇಮ ಸಾಧ್ಯವಿಲ್ಲ" ಎಂದು ಕೇಂದ್ರ ಸಚಿವರು ಉಲ್ಲೇಖಿಸಿದರು.

ಆದಾಗ್ಯೂ ಅಧಿವೇಶನದಲ್ಲಿ, ಶಾಸನಬದ್ಧ ಪ್ರಾಧಿಕಾರವು ಪ್ರಕಟಿಸಿದ ದೇಶದ ನಿರ್ದಿಷ್ಟ ಅಧಿಕೃತ ದತ್ತಾಂಶವನ್ನು ಪರಿಗಣಿಸದೆ ಎಲ್ಲಾ ಕಾರಣಗಳಿಂದಾಗುವ ಅಧಿಕ ಸಾವುಗಳ ಬಗ್ಗೆ ಡಬ್ಲೂಎಚ್ ಒ ದ ಇತ್ತೀಚಿನ ಹೇಳಿಕೆಯ ಬಗ್ಗೆ ಭಾರತವು ನಿರಾಶೆ ಮತ್ತು ಕಳವಳವನ್ನು ವ್ಯಕ್ತಪಡಿಸಿತು.

ಆ ನಿಟ್ಟಿನಲ್ಲಿ, ಕೇಂದ್ರ ಆರೋಗ್ಯ ಸಚಿವರು ಹೆಚ್ಚಿನ ಮರಣದ ಬಗ್ಗೆ ಡಬ್ಲೂಎಚ್ ಒದ  ವಿಧಾನದ ಬಗ್ಗೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದರಿಂದ ಭಾರತದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಪ್ರಾತಿನಿಧಿಕ ಸಂಸ್ಥೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಕೇಂದ್ರೀಯ ಮಂಡಳಿಯ ಸಾಮೂಹಿಕ ನಿರಾಶೆಯ ಸಂದೇಶವನ್ನು ರವಾನಿಸಿದರು.

ಕೇಂದ್ರ ಆರೋಗ್ಯ ಸಚಿವರ ಸಂಪೂರ್ಣ ಭಾಷಣದ ಪಠ್ಯ ಈ ಕೆಳಗಿನಂತಿದೆ.

ಶಾಂತಿ ಮತ್ತು ಆರೋಗ್ಯವನ್ನು ಸಂಪರ್ಕಿಸುವ ಈ ವರ್ಷದ ಘೋಷವಾಕ್ಯ ಸಮಯೋಚಿತ ಮತ್ತು ಪ್ರಸ್ತುತವಾಗಿದೆ ಎಂದು ಭಾರತ ನಂಬುತ್ತದೆ, ಏಕೆಂದರೆ ಶಾಂತಿಯಿಲ್ಲದೆ ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವತ್ರಿಕ ಆರೋಗ್ಯ ಮತ್ತು ಯೋಗಕ್ಷೇಮ ಸಾಧ್ಯವಿಲ್ಲ.

ವಸ್ತುನಿಷ್ಠವಾಗಿ ಮತ್ತು ಫಲಿತಾಂಶ ಆಧರಿತ ರೀತಿಯಲ್ಲಿ ಸರ್ವರಿಗೂ ಆರೋಗ್ಯದ ಗುರಿಯನ್ನು ಸಾಧಿಸುವಲ್ಲಿ ಡಬ್ಲೂಎಚ್ ಒ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಭಾರತ ದೃಢವಾಗಿ ನಂಬುತ್ತದೆ. ಸಮಕಾಲೀನ ವಾಸ್ತವಗಳೊಂದಿಗೆ ವ್ಯವಹರಿಸುವ ಉದ್ದೇಶಕ್ಕಾಗಿ ಡಬ್ಲೂಎಚ್ ಒ ಸರಿಹೊಂದುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ಸಾಮೂಹಿಕ ಪ್ರಯತ್ನ ನಡೆಸಬೇಕು. ಭಾರತವು ಸದಾ ಡಬ್ಲೂಎಚ್ ಒ ಸದಸ್ಯ ರಾಷ್ಟ್ರಗಳ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ರಚನಾತ್ಮಕ ಕೊಡುಗೆ ನೀಡಿದೆ ಮತ್ತು ಅದರ ಪ್ರಕ್ರಿಯೆಗಳನ್ನು ಸದಸ್ಯ ರಾಷ್ಟ್ರಗಳು ಮುನ್ನಡೆಸಿಕೊಂಡು ಹೋಗಬೇಕು.

ಆ ಹಿನ್ನೆಲೆಯಲ್ಲಿ, ಶಾಸನಬದ್ಧ ಪ್ರಾಧಿಕಾರವು ಪ್ರಕಟಿಸಿದ ದೇಶದ ನಿರ್ದಿಷ್ಟ ಅಧಿಕೃತ ದತ್ತಾಂಶವನ್ನು ಪರಿಗಣಿಸದೆ ಎಲ್ಲಾ ಕಾರಣಗಳಿಂದಾಗುವ ಅಧಿಕ ಸಾವುಗಳ ಬಗ್ಗೆ ಡಬ್ಲೂಎಚ್ ಒ ದ ಇತ್ತೀಚಿನ ಹೇಳಿಕೆಯ ಬಗ್ಗೆ ಭಾರತವು ನಿರಾಶೆ ಮತ್ತು ಕಳವಳವನ್ನು ವ್ಯಕ್ತಪಡಿಸುತ್ತದೆ. 

ಅದರ ಪರಿಣಾಮವಾಗಿ, ಭಾರತದ ಸಂವಿಧಾನದ 263 ನೇ ವಿಧಿಯಡಿಯಲ್ಲಿ ರಚಿಸಿರುವ ಭಾರತದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರುಗಳ ಪ್ರಾತಿನಿಧಿಕ ಸಂಸ್ಥೆಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಮಂಡಳಿಯು, ಡಬ್ಲ್ಯೂಎಚ್ ಒ ವಿಧಾನದ ಬಗ್ಗೆ ಅವರ ಸಾಮೂಹಿಕ ನಿರಾಶೆ ಮತ್ತು ಕಳವಳವನ್ನು ತಿಳಿಸಲು ತನ್ನ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ.

ಜಾಗತಿಕ ರಚನಾ ಹಂದರದಲ್ಲಿ ಡಬ್ಲ್ಯೂಎಚ್ಒಗೆ ಕೇಂದ್ರೀಯ ಸ್ಥಾನವನ್ನು ಖಚಿತ ಪಡಿಸಿಕೊಳ್ಳುವ ಅಗತ್ಯವಿದೆ ಮತ್ತು ಹಂತ ಹಂತವಾಗಿ ಡಬ್ಲ್ಯೂಎಚ್ಒದ ಕೊಡುಗೆಯನ್ನು ಹೆಚ್ಚಿಸಬೇಕಿದೆ. ಆದರೆ ಅದನ್ನು ಉತ್ತರದಾಯಿತ್ವ ಚೌಕಟ್ಟು, ಹಣಕ್ಕೆ ಮೌಲ್ಯ ನೀಡುವ ಮನೋಭಾವ ಮತ್ತು ಸದಸ್ಯ ದೇಶಗಳ ನಡುವೆ ಸಕ್ರಿಯ ಪಾಲ್ಗೊಳ್ಳುವಿಕೆಯ ಜೊತೆ ಸಂಯೋಜಿಸಬೇಕು.

 ಬೌದ್ಧಿಕ ಹಕ್ಕು ಸ್ವಾಮ್ಯಕ್ಕೆ ಸಂಬಂಧಿಸಿದ ಅಂಶಗಳು, ವೆಚ್ಚ ಪರಿಣಾಮಕಾರಿ ಸಂಶೋಧನೆ ಅವಶ್ಯಕತೆ, ತಂತ್ರಜ್ಞಾನ ವರ್ಗಾವಣೆ ಮತ್ತು ಪ್ರಾದೇಶಿಕ ಉತ್ಪಾದನಾ ಸಾಮರ್ಥ್ಯಗಳು ಸೇರಿದಂತೆ ವೈದ್ಯಕೀಯ ಪ್ರತಿತಂತ್ರಗಳಿಗೆ ಸಮಾನವಾದ ಲಭ್ಯತೆಯ ಜೊತೆಗೆ ಪ್ರಮುಖ ಕೇಂದ್ರೀಕೃತ ಕ್ಷೇತ್ರವಾಗಿ ಉಳಿಯಬೇಕು ಎಂದು ಭಾರತವು ಪ್ರಮುಖವಾಗಿ ಪ್ರಸ್ತಾಪಿಸಲು ಬಯಸುತ್ತದೆ.

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಅವರು, ಲಸಿಕೆ ಮತ್ತು ಔಷಧಗಳ ಸಮಾನ ಲಭ್ಯತೆಗೆ ಸ್ಥಿತಿ ಸ್ಥಾಪಕತ್ವ ಜಾಗತಿಕ ಪೂರೈಕೆ ಸರಣಿ ನಿರ್ಮಾಣ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಲಸಿಕೆ ಮತ್ತು ಚಿಕಿತ್ಸೆಗಳಿಗೆ ಡಬ್ಲ್ಯೂಎಚ್ಒದ ಅನುಮೋದನೆ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವ ಅಗತ್ಯವಿದೆ ಮತ್ತು ಹೆಚ್ಚಿನ ಸ್ಥಿತಿ ಸ್ಥಾಪಕತ್ವದ ಜಾಗತಿಕ ಆರೋಗ್ಯ ಭದ್ರತಾ ವಿನ್ಯಾಸ ನಿರ್ಮಾಣಕ್ಕೆ ಡಬ್ಲ್ಯೂಎಚ್ಒದ ಬಲವರ್ಧನೆಗಾಗಿ ಸುಧಾರಣೆಗಳು ಅಗತ್ಯ ಎಂದು ಹೇಳಿದ್ದರು. ಅದರಂತೆ ಜಾಗತಿಕ ಸಮುದಾಯದ ಓರ್ವ ಜವಾಬ್ದಾರಿಯುತ ಸದಸ್ಯ ರಾಷ್ಟ್ರವಾಗಿ, ಭಾರತ ಈ ಎಲ್ಲ ಪ್ರಯತ್ನಗಳಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲು ಸಿದ್ಧವಿದೆ.

 

******

 



(Release ID: 1827850) Visitor Counter : 199